ನಟ ಶಿವರಾಜ್ ಕುಮಾರ್(Shiva Rajkumar) ಇದೀಗ ತಮ್ಮ 125ನೇ ಚಿತ್ರ(125th movie) “ವೇದ” (Veda)ಚಲನಚಿತ್ರದ ಪ್ರಮೋಷನ್ ನಲ್ಲಿ ಬಿಸಿಯಾಗಿದ್ದು ಮೊನ್ನೆ ಎಷ್ಟೇ ಹೊಸಪೇಟೆಗೆ ಕೂಡ ಸಿನಿಮಾ ಪ್ರಮೋಷನ್ ಗಾಗಿ ಬಂದಿದ್ದರು ಈ ವೇಳೆ ಸುದ್ದಿಗೋಷ್ಠಿಯಲ್ಲಿ ಶಿವರಾಜ್ ಕುಮಾರ್ ಮಾತನಾಡಿ ತಮ್ಮ 125 ಚಿತ್ರವಾದ ವೇದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ವೇದಯನ್ನು ಒಂದು ಹೊಸ ಬ್ಯಾನರ್ ಸಿನಿಮಾ ವಾಗಿದ್ದು ಗೀತಾ ಪಿಕ್ಚರ್ಸ್ ಬ್ಯಾಗರ್(Geeta pictures) ಅಡಿಯಲ್ಲಿ ನಿರ್ಮಿಸುತ್ತಿರುವ ಮೊದಲನೇ ಸಿನಿಮಾ ಆಗಿದೆ.

 

 

ವೇದ ಸಿನಿಮಾವನ್ನು ಯುವಕರನ್ನು ಮನಗಂಡು ಮಾಡಿರುವ ಸಿನಿಮಾ ವಾಗಿದ್ದು ಎಲ್ಲರಿಗೂ ಕೂಡ ಇದು ಇಷ್ಟವಾಗುತ್ತದೆ. ಇಂದು ಓಟಿಪಿಯಲ್ಲಿ ಹಲವಾರು ಚಿತ್ರಗಳು ಬಿಡುಗಡೆಯಾಗುತ್ತಿತ್ತು ಮೊಬೈಲ್ ನಲ್ಲಿ ಸಿನಿಮಾ ನೋಡುವುದಕ್ಕಿಂತ ಥಿಯೇಟರ್ನಲ್ಲಿ ಮಜಾ ಇರುತ್ತದೆ. ವೇದ ಸಿನಿಮಾದಲ್ಲಿ ಸಾಮಾಜಿಕ ಸಂದೇಶ ಕೂಡ ಇದ್ದು ಈ ಚಿತ್ರದಲ್ಲಿ ಅರುಣ್ ಸಾಗರ್ ಮಗಳು ಅದಿತಿ ಸಾಗರ್ (Arun Sagar daughter Aditi Sagar)ಕೂಡ ಅಭಿನಯಿಸುತ್ತಿದ್ದಾರೆ.

 

 

ವೇದ ಸಿನಿಮಾ ಆಕ್ಷನ್ ಸಿನಿಮಾ ವಾಗಿದ್ದು ಇದರಲ್ಲಿ ಹಾಡು ಮನರಂಜನೆ ಎಲ್ಲವೂ ಕೂಡ ಇದೆ. ನನ್ನ ಅಭಿಮಾನಿಗಳಿಗೆ ಈ ಚಿತ್ರ ಇಷ್ಟವಾಗುತ್ತದೆ ಎಂದು ನಾನು ನಂಬಿದ್ದೇನೆ ಎಂದು ತಮ್ಮ ಕ್ಷೇತ್ರದ ಬಗ್ಗೆ ಭರವಸೆಯ ಮಾತುಗಳನ್ನು ಹೇಳಿದ್ದಾರೆ. ಶಿವರಾಜ್ ಕುಮಾರ್ ಚಿತ್ರರಂಗಕ್ಕೆ ಪ್ರವೇಶ ಮಾಡಿ ಇದೀಗಾಗಲೇ 36 ವರ್ಷಗಳಾಗಿದ್ದು ವೇದ ಸಿನಿಮಾ ಶಿವರಾಜ್ ಕುಮಾರ್ ರವರ 125ನೇ ಸಿನಿಮಾವಾಗಿದೆ. ವೇದ ಚಿತ್ರ ಡಿಸೆಂಬರ್ 23ರಂದು ತೆರೆ ಕಾಣಲಿದ್ದು ಚಿತ್ರವನ್ನು ನೋಡಿ ಎಂದು ಶಿವರಾಜ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

 

 

ಈ ವೇಳೆ ಗೀತಾ ಶಿವರಾಜಕುಮಾರ್ (Geeta Shivraj Kumar)ಕೂಡ ಮಾತನಾಡಿ ನಾನು ಇದೀಗ ವೇದ ಚಿತ್ರದ ಪ್ರಮೋಷನ್ ಮಾಡಲು ಹೊಸಪೇಟೆಗೆ ಬಂದಿದ್ದೇನೆ ರಾಜಕೀಯದ ಕುರಿತು ನಾನು ಏನನ್ನು ಕೂಡ ಮಾತನಾಡಲು ಇಷ್ಟಪಡುವುದಿಲ್ಲ ಶಿವರಾಜ್ ಕುಮಾರ್ ಅವರ 100ನೆ ಚಿತ್ರವನ್ನು ನಾನು ನಿರ್ದೇಶಿಸಬೇಕು ಎಂದು ಬಯಸಿದ್ದೆ ಆದರೆ ಅದು ಸಾಧ್ಯವಾಗಿರಲಿಲ್ಲ ಆದರೆ ಇದೀಗ ಶಿವರಾಜ್ ಕುಮಾರ್ ರವರ 125ನೇ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದೇನೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ. ಈ ವೇಳೆ ಜೋಗತಿ ಮಂಜಮ್ಮ(Jogati manjamma) ರವರು ಕೂಡ ಮಾತನಾಡಿ ಹೊಸಪೇಟೆ ರಾಜ್ ಕುಟುಂಬದವರಿಗೆ ತವರು ಮನೆ ಇದ್ದಂತೆ ಎಂದು ಹೇಳಿದ್ದಾರೆ.

 

 

ನಟ ಶಿವರಾಜ್ ಕುಮಾರ್ ಹೊಸಪೇಟೆಯ ಬಗ್ಗೆ ಮಾತನಾಡಿ ಹೊಸಪೇಟೆ ನನಗೇನು ಹೊಸ ಜಾಗವಲ್ಲ ಮೈಲಾರಿ(mylari) ,ಟಗರು(tagaru) ಮುಂತಾದ ಚಿತ್ರಗಳ ಚಿತ್ರೀಕರಣವನ್ನು ಈ ಭಾಗದಲ್ಲಿ ಮಾಡಲಾಗಿದೆ. ಟಗರು ಚಿತ್ರದ ಆಡಿಯೋ ಲಾಂಚ್ ಕೂಡ ಹೊಸಪೇಟೆಯಲ್ಲಿ ಮಾಡಲಾಗಿತ್ತು ಒಮ್ಮೆ ನಾನು ಸಕುಟುಂಬ ಸಮೇತವಾಗಿ ತುಂಗಭದ್ರಾ ಜಲಾಶಯವನ್ನು(tungabhadra dam) ನೋಡಲು ಬಂದಿದ್ದು ಹೊಸಪೇಟೆಯಲ್ಲಿ ತಂಗಿದ್ದೆ ವೇದ ಚಿತ್ರವು ಒಂದು ಪವಿತ್ರ ಗ್ರಂಥದಂತೆ ಇದ್ದು ಇದೊಂದು ವಿಭಿನ್ನವಾದ ಚಿತ್ರ ಇದರಲ್ಲಿ ಮೂರು ಹಾಡುಗಳಿವೆ ಹಾಗೂ ವೇದ ಚಿತ್ರವನ್ನು ಬೆಂಗಳೂರು ಮೈಸೂರು ಕೇರಳ ಮುಂತಾದ ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. “ಜೈ ಭೀಮ್” (Jai Bhim)ರೀತಿಯ ಚಿತ್ರಗಳು ಸಿಕ್ಕರೆ ಖಂಡಿತವಾಗಿಯೂ ನಾನು ಕೂಡ ನಟಿಸುತ್ತೇನೆ ಎಂದು ಶಿವರಾಜ್ ಕುಮಾರ್ ತಮ್ಮ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ತಾನು ರಾಜಕೀಯಕ್ಕೆ ಎಂದಿಗೂ ಕೂಡ ಎಂಟ್ರಿ ಕೊಡುವುದಿಲ್ಲ ಸಿನಿಮಾರಂಗದಲ್ಲಿ ಮುಂದುವರೆಯುತ್ತೇನೆ ಎಂದು ಶಿವಣ್ಣ(shivanna) ಹೇಳಿಕೊಂಡಿದ್ದಾರೆ.

Leave a comment

Your email address will not be published. Required fields are marked *