ತಾತ ಆದ ನಟ ಶಶಿಕುಮಾರ್, ಮೊಮ್ಮಗಳು ಹೇಗಿದ್ದಾಳೆ ಮೊದಲ ಬಾರಿಗೆ ನೋಡಿ

ಕನ್ನಡ ಚಿತ್ರರಂಗ ಕಂಡ ಅತ್ಯಂತ ಯಶಸ್ವಿ ನಟ ಶಶಿಕುಮಾರ್ ರವರು ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಮುಂತಾದ ಭಾಷೆಗಳಲ್ಲೂ ಕೂಡ ನಟಿಸಿ ಯಶಸ್ವಿ ನಟ ಎಂದೆನಿಸಿಕೊಂಡಿದ್ದಾರೆ. ರಜನಿಕಾಂತ್ ಅಭಿನಯದ “ಭಾಷಾ” ಚಿತ್ರದಲ್ಲೂ ಕೂಡ ಶಶಿಕುಮಾರ್ ರವರು ನಟಿಸಿದ್ದಾರೆ. ನಟ ಶಶಿಕುಮಾರ್ ಸುಪ್ರೀಂ ಹೀರೋ ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ. ಇದೀಗ ನಟ ಶಶಿಕುಮಾರ್ ಗೆ 55 ವರ್ಷ ವಯಸ್ಸು ಇವರ ಪತ್ನಿಯ ಹೆಸರು ಸರಸ್ವತಿ ಎಂಬುದಾಗಿದ್ದು 1993ರಲ್ಲಿ ನಟ ಶಶಿಕುಮಾರ್ ರವರು ಸರಸ್ವತಿ ಎಂಬುವರನ್ನು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

 

 

1988ರಲ್ಲಿ ತೆರೆಕಂಡ ಚಿರಂಜೀವಿ ಸುಧಾಕರ್ ರವರ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಶಶಿಕುಮಾರ್ ರವರು ಅದ್ಭುತವಾಗಿ ನಟಿಸಿದ್ದಾರೆ. ಯುದ್ದಕಾಂಡ, ಇಂದ್ರಜಿತ್, ಸಿಬಿಐ ಶಂಕರ್ ,ಚಾಲೆಂಜ್ ಗೋಪಾಲಕೃಷ್ಣ, ಬಾರೆ ನನ್ನ ಮುದ್ದಿನ ರಾಣಿ ಯಜಮಾನ ಮುಂತಾದ ಅನೇಕ ಚಿತ್ರಗಳಲ್ಲಿ ನಟಿಸಿ ಯಶಸ್ವಿ ನಟ ಎಂದೆನಿಸಿಕೊಂಡಿದ್ದಾರೆ. ಇಲ್ಲಿಯವರೆಗೂ ನಟ ಶಶಿಕುಮಾರ್ ರವರು ಸುಮಾರು 100 ಚಿತ್ರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡ ಜನತೆಯಿಂದ ಸೈ ಅನ್ನಿಸಿಕೊಂಡಿದ್ದಾರೆ. ಇವರು ಕೊನೆಯದಾಗಿ ನಟಿಸಿದ ಚಿತ್ರವೆಂದರೆ, 2019ರಲ್ಲಿ ತೆರೆಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರದಲ್ಲಿ ನಟಿಸಿದ್ದರು. ನಟನೆಯನ್ನು ಹೊರತುಪಡಿಸಿ ಶಶಿಕುಮಾರ್ ರವರು ಡ್ಯಾನ್ಸ್ ನಲ್ಲೂ ಕೂಡ ತುಂಬಾ ಪ್ರವೀಣರು.

 

 

ನಟ ಶಶಿಕುಮಾರ್ ಅತ್ಯುತ್ತಮ ಡ್ಯಾನ್ಸರ್ ಎಂದು ಕೂಡ ಕರೆಸಿಕೊಂಡಿದ್ದಾರೆ. ನಟ ಶಶಿಕುಮಾರ್ ತಮ್ಮನ್ನು ತಾವು ರಾಜಕೀಯದಲ್ಲಿ ತೊಡಗಿಸಿಕೊಂಡು ಕೇವಲ ಚಲನಚಿತ್ರ ಮಾತ್ರವಲ್ಲದೆ ರಾಜಕೀಯದಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಯಜಮಾನ, ಹಬ್ಬ, ಸ್ನೇಹಲೋಕ, ಕನಸುಗಾರ ,ಯಾರಿಗೆ ಸಾಲುತ್ತೆ ಈ ಸಂಬಳ ಇವೆಲ್ಲ ಚಿತ್ರಗಳು ಶಶಿಕುಮಾರ್ ರವರು ಕನ್ನಡ ಚಿತ್ರರಂಗಕ್ಕೆ ನೀಡಿದ ಸಾಲು ಸಾಲು ಕೊಡುಗೆಗಳು ಈ ಎಲ್ಲಾ ಚಿತ್ರಗಳನ್ನು ಇವರ ಅಭಿಮಾನಿಗಳು ಎಂದಿಗೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ.

 

 

ಇದೀಗ ನಟ ಶಶಿಕುಮಾರ್, ತಮ್ಮ ಮೊಮ್ಮಗಳ ಜೊತೆ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ತಮ್ಮ ಮೊಮ್ಮಗಳ ಲಾಲನೆ ಪಾಲನೆಯಲ್ಲಿ ಬಿಸಿಯಾಗಿರುವ ನಟ ಶಶಿಕುಮಾರ್ ಕುರುಕ್ಷೇತ್ರ ಚಿತ್ರದ ನಂತರ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಅವರು ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಬೇಕೆಂಬುದು ಅವರ ಅಭಿಮಾನಿಗಳ ಆಶಯವಾಗಿದೆ.

Be the first to comment

Leave a Reply

Your email address will not be published.


*