ಕ್ವೀನ್ ರಮ್ಯಾ ಮದುವೆ ರಾಫೆಲ್ ಜೊತೆ ದುಬೈನಲ್ಲಿ ನಡೆಯಲಿದೆಯೇ? ಹಸೆಮಣೆ ಏರಲು ರೆಡಿಯಾದ್ರು ರಮ್ಯಾ

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾರವರು ಸ್ಯಾಂಡಲ್ವುಡ್ ನ ಪದ್ಮಾವತಿ ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಇವರ ನಿಜವಾದ ಹೆಸರು ದಿವ್ಯ ಸ್ಪಂದನ ಎಂಬುದಾಗಿದ್ದು ಇವರನ್ನು ಇವರ ಹೆಸರನ್ನು ಕೇಳುತ್ತಿದ್ದಂತೆ ಅವರ ಅಭಿಮಾನಿಗಳು ಕಣ್ಣು ಕಿವಿ ಎರಡನ್ನು ನೆಟ್ಟಗೆ ಮಾಡಿಕೊಂಡು ನಿಂತುಬಿಡುತ್ತಾರೆ. ರಮ್ಯಾ ರವರು ಅಂತಹ ಸ್ಫುರದ್ರೂಪಿ ಸುಂದರಿಯಾಗಿದ್ದು ದಶಕಗಳ ಕಾಲ ಸ್ಯಾಂಡಲ್ವುಡ್ ನಲ್ಲಿ ಕ್ವೀನಾಗಿ ಮೆರೆದರು ಇದೀಗ ನಟಿ ರಮ್ಯಾ ರವರ ಮದುವೆ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ ಇವರು ಈ ಬಾರಿ ಮದುವೆ ಆಗುವುದು ಫಿಕ್ಸ್ ಎಂದು ಮೂಲಗಳಿಂದ ತಿಳಿದುಬಂದಿದೆ.

 

 

ಇವರು ರಾಜಕೀಯದ ಕಡೆ ಒಲವನ್ನು ತೋರಿಸಿ ರಾಜಕೀಯದ ಗೀಳನ್ನು ಹಿಡಿಸಿಕೊಂಡ ನಂತರ ಸಿನಿಮಾ ಜಗತ್ತಿಗೆ ಗುಡ್ ಬಾಯ್ ಹೇಳಿದ್ದರು ಇತ್ತೀಚಿಗಷ್ಟೇ ರಾಜಕೀಯದ ಆಟವನ್ನು ಕೂಡ ಕೊನೆಗೊಳಿಸಿ ಟ್ವಿಟ್ಟರ್ ಅಕೌಂಟನ್ನು ಜೀರೋ ಮಾಡಿದ್ದರು. ಇದೆಲ್ಲ ನಡೆದ ನಂತರ ಮೋಹಕ ತಾರೆ ರಮ್ಯಾ ರವರು ಕೆಲವು ವರ್ಷಗಳ ಕಾಲ ಅಜ್ಞಾತವಾಸದಲ್ಲೇ ಇದ್ದರು ಇವರು ಎಲ್ಲಿದ್ದರೂ ಹೇಗಿದ್ದರೂ ಎಂಬುದು ಯಾರಿಗೂ ಕೂಡ ತಿಳಿದಿರಲಿಲ್ಲ. ಇದೀಗ ಮತ್ತೆ ಮದುವೆ ಸುದ್ದಿಯ ಮೂಲಕ ನಟಿ ರಮ್ಯಾ ರವರು ಟಾಕ್ ಆಫ್ ದ ಟೌನ್ ಆಗಿದ್ದಾರೆ.

 

 

ನಟಿ ರಮ್ಯಾ ಅವರು ಚಿತ್ರರಂಗದಲ್ಲಿ ಮೇರು ನಟಿಯಾಗಿ ಇದ್ದಾಗಲೇ ಇವರು ಆ ನಟನನ್ನು ಮದುವೆಯಾಗುತ್ತಾರೆ ಈ ರಾಜಕೀಯ ವ್ಯಕ್ತಿಯನ್ನು ಮದುವೆಯಾಗುತ್ತಾರೆ ಎನ್ನುವ ಸುದ್ದಿಗಳು ಕೇಳಿ ಬರುತ್ತಲೇ ಇದ್ದವು ಇದೀಗ 37 ವರ್ಷದ ಮೋಹಕ ತಾರೆ ರಮ್ಯಾ ರವರು ರಾಜಕೀಯದಲ್ಲಿ ರಾಣಿಯಾಗಿ ಮೆರೆದು ತಮ್ಮ ವೈಯಕ್ತಿಕ ಜೀವನಕ್ಕೂ ಕೂಡ ಸಮಯವನ್ನು ನೀಡುವ ಕಾಲವೊಂದು ಕೂಡಿಬಂದಿದೆ.

 

 

ನಟಿ ರಮ್ಯಾರವರು ಮದುವೆಯಾಗುವ ಸುದ್ದಿ ಇದೀಗ ಎಲ್ಲಾ ಕಡೆ ಹರಿದಾಡುತ್ತಿದೆ. ಸಿನಿಮಾ ಹಾಗೂ ರಾಜಕೀಯದಿಂದ ದೂರವೇ ಇರುವ ರಮ್ಯ ಇದೀಗ ತಮ್ಮ ಬಹುಕಾಲದ ಗೆಳೆಯ ರಾಫೆಲ್ ಜೊತೆ ಮದುವೆಯಾಗಲು ಮನಸ್ಸು ಮಾಡಿದ್ದಾರೆ ಎಂದು ಹಲವು ಮೂಲಗಳಿಂದ ತಿಳಿದು ಬಂದಿದೆ. ಪೋರ್ಚುಗೀಸ್ ಮೂಲದವರಾದ ರಾಫೆಲ್ ಉದ್ಯಮಿಯಾಗಿದ್ದು ಇದೀಗ ದುಬೈನಲ್ಲಿ ಸೆಟಲ್ ಆಗಿದ್ದಾರೆ. ಇದೀಗಾಗಲೇ ರಮ್ಯಾ ರವರ ಮದುವೆಯ ಬರ್ಜರಿ ಸಿದ್ಧತೆ ನಡೆದಿದ್ದು ಇವರು ದುಬೈನಲ್ಲೇ ಪೋರ್ಚುಗೀಸ್ ಮೂಲದ ರಾಫೆಲ್ ರವರ ಜೊತೆ ಹಸೆ ಮಣೆ ಏರಲಿದ್ದಾರೆ ಎನ್ನುವ ಸುದ್ದಿಗಳು ಕೂಡ ಕೇಳಿ ಬರುತ್ತಿವೆ.

 

ಈ ಎಲ್ಲಾ ಸುದ್ದಿಗಳಿಗೂ ಪುಷ್ಟಿ ನೀಡುವಂತೆ ಕಳೆದ ವರ್ಷ ರಮ್ಯಾ ರವರ ತಾಯಿ ರಂಜಿತ ತಮ್ಮ ಮಗಳಿಗೆ ಮುಂದಿನ ವರ್ಷ ಮದುವೆ ಮಾಡುವುದಾಗಿ ತಿಳಿಸಿದರು ನಟಿ ರಮ್ಯಾ ಅವರು ಮದುವೆಯಾದರೆ ಸಿನಿಮಾ ರಂಗ ಹಾಗೂ ರಾಜಕೀಯವನ್ನು ಬಿಟ್ಟಂತೆ ದೇಶವನ್ನು ಕೂಡ ಬಿಟ್ಟು ಹೋಗುತ್ತಾರ ಎಂದು ಅವರ ಅಭಿಮಾನಿಗಳು ಆತಂಕವನ್ನು ವ್ಯಕ್ತಪಡಿಸಿದ್ದಾರೆ.

Be the first to comment

Leave a Reply

Your email address will not be published.


*