ಡ್ರೋನ್ ಪ್ರತಾಪ್ ಹಾಗೂ ನಾನು ಒಂದೇ ತಾಯಿಯ ಮಕ್ಕಳು, ನಾನು ಹುಣ್ಣಿಮೆಯಲ್ಲಿ ಹುಟ್ಟಿದೆ ಅವನ ಅಣ್ಣ ನಾನು:ಒಳ್ಳೆ ಹುಡುಗ ಪ್ರಥಮ್

ಡ್ರೋನ್ ಪ್ರತಾಪ್ ಹಾಗೂ ನಾನು ಒಂದೇ ತಾಯಿಯ ಮಕ್ಕಳು ನಾನು ಹುಣ್ಣಿಮೆಯಲ್ಲಿ ಹುಟ್ಟಿದೆ ಡ್ರೋನ್ ಪ್ರತಾಪ್ ಹುಟ್ಟಿದಾಗ ಕರೆಂಟ್ ಹೋಗಿತ್ತು ಈ ಮಾತನ್ನು ಸ್ವತಹ ನಟ ಹಾಗೂ ನಿರ್ದೇಶಕ ಒಳ್ಳೆ ಹುಡುಗ ಪ್ರಥಮ್ ಹೇಳಿದ್ದು ಈ ಮಾತು ಭಾರಿ ವೈರಲ್ ಆಗಿದೆ. ಡ್ರೋನ್ ಪ್ರತಾಪ್ ರವರು ಈ ಬಾರಿ ಯಾವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂಬುದನ್ನು ತಿಳಿಸಿಲ್ಲ. ಆದರೆ, ಕೆಟ್ಟ ಜನರು ನಿಮ್ಮ ಜೀವನವನ್ನು ತೊರೆದಾಗ ಸರಿಯಾದ ವಿಷಯಗಳು ನಿಮ್ಮ ಜೀವನದಲ್ಲಿ ನಡೆಯಲು ಪ್ರಾರಂಭಿಸುತ್ತವೆ. ಎಂದು ತಮ್ಮ ಪೋಸ್ಟ್ ಗೆ ಕ್ಯಾಪ್ಷನನ್ನು ಡ್ರೋಣ್ ಪ್ರತಾಪ್ ಹಾಕಿಕೊಂಡಿದ್ದರು.

 

 

ಡ್ರೋನ್ ಪ್ರತಾಪ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸದೊಂದು ಪೋಸ್ಟ್ ಹಾಕಿದ್ದು ತಲೆಗೆ ಹೆಲ್ಮೆಟ್ ಧರಿಸಿ, ಕೈಗೆ ಕೈ ಗವಸು ಧರಿಸಿ ,ಕಣ್ಣಿಗೆ ಸುರಕ್ಷತೆ ಗಾಜನ್ನು ಧರಿಸಿ ,ಪಕ್ಕದಲ್ಲಿ ಲ್ಯಾಪ್ಟಾಪ್ ಇಟ್ಟುಕೊಂಡು ಏನನ್ನೋ ಕಂಡುಹಿಡಿಯುವ ರೀತಿಯಲ್ಲಿ ಮುಗುಳ್ನಗುತ್ತಾ ಪೋಸ್ ಕೊಟ್ಟಿದ್ದಾರೆ. ಡ್ರೋನ್ ಕಂಡುಹಿಡಿದಿದ್ದೆಲ್ಲಾ ಸುಳ್ಳು ಎಂದು ತಿಳಿದ ನಂತರ ಡ್ರೋನ್ ಪ್ರತಾಪ್ ಪೊಲೀಸರ ಕಣ್ಣು ತಪ್ಪಿಸಿ ಇಷ್ಟು ವರ್ಷಗಳ ಕಾಲ ಎಲ್ಲೋ ಹೋಗಿದ್ದರು ಈಗ ತಮ್ಮ instagram ಖಾತೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ.

 

 

ಡ್ರೋನ್ ಪ್ರತಾಪನ ಈ ಹೊಸ ಪೋಸ್ಟನ್ನು ನೋಡಿದ ನೆಟ್ಟಿಗರು ಆತನ ಬಗ್ಗೆ ಹಲವಾರು ಕಾಮೆಂಟ್ಗಳನ್ನು ಹಾಕಿ ಅವನನ್ನು ಕಿಚಾಯಿಸಿದ್ದಾರೆ. ಅಣ್ಣ ಮತ್ತೆ ಕಾಗೆ ಹಾರಿಸಲು ವಾಪಸ್ ಬಂದಿರ ಈ ಬಾರಿ ಯಾವ ಕಾಗೆ ಹಾರಿಸುತ್ತಿರಿ, ಅಣ್ಣ ನನಗೆ ಒಂದು ಬಾಟಲ್ ಬ್ಲಡ್ ಬೇಕು. ನಿಮ್ಮ ಡ್ರೋನ್ ಮೂಲಕ 10 ನಿಮಿಷದಲ್ಲಿ ನಮ್ಮ ಊರಿಗೆ ಕಳಿಸಿಕೊಡಿ, ಅಣ್ಣ ನನ್ನ ಇಯರ್ ಫೋನ್ ನ ಒಂದು ಬದಿ ಕೇಳುತ್ತಿಲ್ಲ ರಿಪೇರಿ ಮಾಡಿಕೊಡಿ , ವೆಲ್ಡಿಂಗ್ ಮಾಡೋದಕ್ಕೆ ಇಷ್ಟೆಲ್ಲ ಪೋಸ್ ಬೇಕಾ? ಹೀಗೆತ್ತು ಹಲವು ಕಮೆಂಟ್ಗಳನ್ನು ಹಾಕಿ ಡ್ರೋನ್ ಪ್ರತಾಪನನ್ನು ಕಿಚಾಯಿಸಿದ್ದಾರೆ.

 

 

ಸಧ್ಯ ಡ್ರೋನ್ ಪ್ರತಾಪನ ಹೊಸ ಅವತಾರ ಎಲ್ಲಾ ಕಡೆ ವೈರಲ್ ಆಗಿದ್ದು ಪೋಸ್ಟ್ ನೋಡಿದ ನೆಟ್ಟಿಗರು ಡ್ರೋನ್ ಪ್ರತಾಪನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವನು ಅಪ್ಲೋಡ್ ಮಾಡಿರುವ ಫೋಟೋಗೆ ಬಗೆ ಬಗೆಯ ಕಮೆಂಟ್ ಗಳನ್ನು ಹಾಕಿ ಡ್ರೋನ್ ಪ್ರತಾಪನ ಕಾಲೆಳಿಯುತ್ತಿದ್ದಾರೆ.ನಟ ಹಾಗೂ ನಿರ್ದೇಶಕ ಒಳ್ಳೆ ಹುಡುಗ ಪ್ರಥಮ್ ಕೂಡ ಡ್ರೋನ್ ಪ್ರತಾಪನ ಪೋಸ್ಟ್ ಗೆ ಕಮೆಂಟ್ ಮಾಡಿದ್ದಾರೆ. ನನ್ನ ತಮ್ಮ ಡ್ರೋನ್ ಪ್ರತಾಪ್ ಹಾಗೂ ನಾನು ಇಬ್ಬರು ಒಂದೇ ತಾಯಿಯ ಮಕ್ಕಳಿದ್ದಂಗೆ ನಾನು ಹುಣ್ಣಿಮೆಯಲ್ಲಿ ಹುಟ್ಟಿದೆ ಆದರೆ ಡ್ರೋನ್ ಪ್ರತಾಪ್ ಹುಟ್ಟಿದಾಗ ಕರೆಂಟ್ ಹೋಗಿತ್ತು ಯಾವತ್ತಿದ್ರೂ ಪ್ರಥಮ , ಡ್ರೋನ್ ಪ್ರತಾಪ್ ನಿರ್ದೇಶಕ ಪ್ರೇಮ್ ತ್ರಿಮೂರ್ತಿಗಳು ನಾವೆಲ್ಲ ಒಂದೇ ಎಂದು ಕಮೆಂಟ್ ಮಾಡುವ ಮೂಲಕ ಡ್ರೋನ್ ಪ್ರತಾಪನ್ನು ಕಿಚಾಯಿಸಿದ್ದಾರೆ.
ನೆಟ್ಟಿಗರು ಪ್ರಥಮ್ ರವರ ಕಮೆಂಟ್ ಗೆ ಪ್ರತಿಕ್ರಿಯೆ ನೀಡಿದ್ದು ಪ್ರತಾಪ್ ಕಾಗೆ ಹಾರಿಸ್ತಾರೆ ನೀವೇನನ್ನು ಹಾರಿಸುತ್ತೀರಿ ಎಂದು ಕಾಮೆಂಟ್ ಮಾಡಿದ್ದಾರೆ.

Be the first to comment

Leave a Reply

Your email address will not be published.


*