ಅಂಬರೀಶ್(Ambarish) ಹಾಗೂ ಸುಮಲತಾ(sumalatha) ದಂಪತಿಗಳ ಮುದ್ದು ಮಗ(son marriage) ಅಭಿಷೇಕ್ ಅಂಬರೀಶ್ ರವರ ಮದುವೆ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಲೇ ಇದೆ. ಅಮರ್ ಎನ್ನುವ ಚಿತ್ರದ ಮೂಲಕ ಅಭಿಷೇಕ್ ಅಂಬರೀಶ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಿದ್ದರು. ಇದೀಗ ರಚಿತಾ ರಾಮ್ ರವರ ಜೊತೆಗೆ ಬ್ಯಾಡ್ ಮ್ಯಾನರ್ಸ್ ಎನ್ನುವ ಚಿತ್ರದಲ್ಲೂ ಕೂಡ ನಟಿಸುತ್ತಿದ್ದಾರೆ. ತಾವು ಇದೀಗ ಯಶಸ್ಸಿನ ಉತ್ತುಂಗಕ್ಕೆ ಹೋಗುತ್ತಿರುವ ಸಮಯದಲ್ಲೇ ಅಭಿಷೇಕ್ ಅಂಬರೀಶ್ ತಮ್ಮ ವೈವಾಹಿಕ ಜೀವನದ ಬಗ್ಗೆಯೂ ಕೂಡ ಮುಂದುವರೆಯಲು ಸಜ್ಜಾಗಿ ನಿಂತಿದ್ದಾರೆ. ಅಷ್ಟೇ ಅಲ್ಲದೆ ಅಭಿಷೇಕ್ ಅಂಬರೀಶ್ ಇದಾಗಲೇ ಖ್ಯಾತ ಡಿಸೈನರ್ ಹಿಂದೆ ಬಿದ್ದಿದ್ದಾರೆ ಎಂದು ಕೂಡ ಮಾಹಿತಿ ಬಂದಿದೆ.

 

 

ನಟ ಅಭಿಷೇಕ್ ಅಂಬರೀಶ್ ಸಿನಿಮಾ ರಂಗದಲ್ಲಿ ಇತ್ತೀಚಿಗಷ್ಟೇ ತಮ್ಮ ಚಾಪನ್ನು ಮೂಡಿಸುತ್ತಿದ್ದು ಅವರು ಇನ್ನು ಯಶಸ್ಸಿನ ಉತ್ತುಂಗವನ್ನು ಏರುವುದಕ್ಕೆ ಹಲವಾರು ಸಿನಿಮಾಗಳಲ್ಲಿ ನಟಿಸಬೇಕಾಗಿದೆ. ಇದರ ಬೆನ್ನಲ್ಲೇ ನಟ ಅಭಿಷೇಕ್ ಅಂಬರೀಶ್ ತಮ್ಮ ವೈವಾಹಿಕ ಜೀವನಕ್ಕೆ ಕೂಡ ಕಾಲಿಡುವುದಾಗಿ ತಿಳಿಸಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಟನಾದ ರೆಬಲ್ ಸ್ಟಾರ್ ಅಂಬರೀಶ್ ರವರ ಪುತ್ರ ಅಭಿಷೇಕ ಅಂಬರೀಶ್ ಸ್ಯಾಂಡಲ್ ವುಡ್ ನಲ್ಲಿ ಜೂನಿಯರ್ ರೆಬಲ್ ಸ್ಟಾರ್ ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ.

 

 

 

ಅಂಬರೀಶ್ ಹಾಗೂ ಸುಮಲತಾ ದಂಪತಿಗಳ ಮಗ ಅಭಿಷೇಕ್ ಅಂಬರೀಶ್ ಇದೀಗ ಒಬ್ಬ ಖ್ಯಾತ ಡಿಸೈನರ್ ಹಿಂದೆ ಬಿದ್ದಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. ಫ್ಯಾಷನ್ ಲೋಕದಲ್ಲಿ ಪ್ರಖ್ಯಾತಿಯನ್ನು ಪಡೆದುಕೊಂಡಿರುವ ಪ್ರಸಾದ್ ಬಿದ್ದಪ್ಪ ಎನ್ನುವವರ ಮಗಳಾದ ಅವಿವ ಬಿದ್ದಪ್ಪ ಎನ್ನುವವರನ್ನು ಅಭಿಷೇಕ ಅಂಬರೀಶ್ ವಿವಾಹವಾಗಲಿದ್ದಾರೆ ಎನ್ನುವ ವಿಷಯ ಮೂಲಗಳಿಂದ ತಿಳಿದು ಬಂದಿದೆ.

 

 

ಈ ಹಿಂದೆ ಅಷ್ಟೇ ಅಭಿಷೇಕ್ ರವರ ತಾಯಿ ಸುಮಲತಾ ಅಂಬರೀಶ್ ನಾನು ನನ್ನ ಮಗನಿಗಾಗಿ ಒಂದು ಮುದ್ದಾದ ಹುಡುಗಿಯನ್ನು ಹುಡುಕಿದ್ದೇನೆ ಎಂದು ಕೂಡ ಹೇಳಿದ್ದರು ಆದರೆ ಆ ಹುಡುಗಿ ಯಾರು ಎನ್ನುವುದನ್ನು ಇವರು ರಿವೀಲ್ ಮಾಡಿರಲಿಲ್ಲ. ಆದರೆ ಇಲ್ಲಿಯವರೆಗೂ ಕೂಡ ಅಭಿಷೇಕ್ ಅಂಬರೀಶ್(Abhishek Ambarish marriage) ಆಗಲಿ ಅಥವಾ ಅವರ ತಾಯಿ ಸುಮಲತಾ ಅಂಬರೀಶ್ ಆಗಲಿ ಅವರ ಮದುವೆಯ ವಿಚಾರವಾಗಿ ಯಾವುದೇ ಸುದ್ದಿಯನ್ನು ಕೂಡ ಬಿಟ್ಟು ಕೊಟ್ಟಿರಲಿಲ್ಲ ಇಂದಿಗೂ ಕೂಡ ಅವರು ಅಧಿಕೃತವಾಗಿ ಯಾವುದೇ ವಿಚಾರವನ್ನು ಘೋಷಿಸಿಲ್ಲ.

 

 

ಆದರೆ ಬಲ್ಲ ಮೂಲಗಳಿಂದ ತಿಳಿದು ಬಂದಿರುವುದೇನೆಂದರೆ ಅಭಿಷೇಕ್ ಅಂಬರೀಶ್(Abhishek Ambarish) ಹಾಗೂ ಅವಿವ ಬಿದ್ದಪ್ಪ ರವರ ನಿಶ್ಚಿತಾರ್ಥವು ಡಿಸೆಂಬರ್ ತಿಂಗಳಿನಲ್ಲಿ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ನಲ್ಲಿ ನಡೆಯಲಿದೆ ಎಂಬುವ ವಿಚಾರ ಇದೀಗ ಎಲ್ಲಾ ಕಡೆ ಹರಿದಾಡುತ್ತಿದೆ. ಸದ್ಯಕ್ಕೆ ಎಂಗೇಜ್ಮೆಂಟ್ ಡೇಟ್ ಹಾಗೂ ಎಂಗೇಜ್ಮೆಂಟ್ ನಡೆಯುವ ಸ್ಥಳದ ಮಾಹಿತಿ ಮಾತ್ರ ತಿಳಿದು ಬಂದಿತ್ತು ಮದುವೆಯ ದಿನಾಂಕ ಇನ್ನು ನಿಗದಿಯಾಗಿಲ್ಲ. ಅಭಿಷೇಕ್ ಅಂಬರೀಶ್ ಸಿನಿಮಾ ರಂಗದಲ್ಲಿ ಪ್ರಖ್ಯಾತಿಯನ್ನು ಪಡೆದ ಹಿನ್ನೆಲೆಯಲ್ಲಿ ಇದೀಗ ತಮ್ಮ ವೈವಾಹಿಕ ಜೀವನದ ಕುರಿತು ಅಂಬರೀಶ್ ಅಭಿಮಾನಿಗಳು ಕೂಡ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

 

 

ಇಷ್ಟೇ ಅಲ್ಲದೆ ಇವರಿಬ್ಬರಿಗೂ ಹಲವಾರು ವರ್ಷಗಳಿಂದ ಪರಿಚಯವಿದ್ದು ಇವರಿಬ್ಬರ ನಡುವೆ ಎರಡು ಮೂರು ವರ್ಷ ವಯಸ್ಸಿನ ಅಂತರವಿದೆ. ಇದೀಗಾಗಲೇ ಅಭಿಷೇಕ್ ಅಂಬರೀಶ್ ಅವಿವ ಬಿದ್ದಪ್ಪ ರವರನ್ನು ಮದುವೆಯಾಗಲು ಒಪ್ಪಿಕೊಂಡಿದ್ದು ಡಿಸೆಂಬರ್ ಎರಡನೇ ವಾರದಲ್ಲಿ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ದೂರಿ ಎಂಗೇಜ್ಮೆಂಟ್ ಕಾರ್ಯಕ್ರಮ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಅವಿವಾ ಬಿದ್ದಪ್ಪ ರವರ ಹೆಸರಿನಲ್ಲಿ ಒಟ್ಟಾರೆ 230 ಕೋಟಿ ಹಣವಿದ್ದು ಇವರು ಮಾಡಲಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರನ್ನು ಮಾಡಿದ್ದಾರೆ.

Leave a comment

Your email address will not be published. Required fields are marked *