ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ದಂಪತಿಗಳ ಪುತ್ರ ಅಭಿಷೇಕ್ ಅಂಬರೀಶ್ ರವರ ನಿಶ್ಚಿತಾರ್ಥವು ಇಂದು ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಹೋಟೆಲಲ್ಲಿ ನಡೆದಿತ್ತು. ಕ್ಯಾತ ಡಿಸೈನರ್ ಪ್ರಸಾದ್ ಬಿದ್ದಪ್ಪ ರವರ ಪುತ್ರಿ ಅವಿವಾರವರ ಜೊತೆ ಅಭಿಷೇಕ್ ಅಂಬರೀಶ್ ತಮ್ಮ ನಿಶ್ಚಿತಾರ್ಥವನ್ನು ಅದ್ದೂರಿಯಾಗಿ ಮಾಡಿಕೊಂಡಿದ್ದಾರೆ.
ಅಭಿಷೇಕ್ ಅಂಬರೀಶ್ ಎಂಗೇಜ್ಮೆಂಟ್ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಅವಿವಾ ಬಿದ್ದಪ್ಪ ರವರ ಜೊತೆ ಅಭಿಷೇಕ್ ಅಂಬರೀಶ್ ಅದ್ದೂರಿಯಾಗಿ ತಮ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಈ ಸಮಾರಂಭದಲ್ಲಿ ಅಭಿಷೇಕ್ ಅಂಬರೀಶ್ ರವರ ತಾಯಿ ಸುಮಲತಾ ನಿರ್ದೇಶಕ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವಿವ ಬಿದ್ದಪ್ಪ ರವರ ತಂದೆ ಹಾಗೂ ತಾಯಿ ಹಾಜರಿದ್ದು ನವಜೋಡಿಗಳಿಗೆ ಶುಭ ಹಾರೈಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ನ ಹಲವಾರು ನಟ ನಟಿಯರು ಕೂಡ ಭಾಗಿಯಾಗಿದ್ದರು ಅಭಿಷೇಕ್ ಅಂಬರೀಶ್ ರವರ ದೊಡ್ಡಣ್ಣ ಆಗಿರುವ ದರ್ಶನ್ ಕೂಡ ತಮ್ಮ ಕ್ರಾಂತಿ ಸಿನಿಮಾದ ಪ್ರಮೋಶನ್ ನಲ್ಲಿ ಬಿಜಿಯಾಗಿದ್ದರು ಸಹಿತ ಎಂಗೇಜ್ಮೆಂಟಿಗೆ ಬಂದು ನವ ಜೋಡಿಗಳಿಗೆ ಶುಭ ಹಾರೈಸಿದ್ದಾರೆ.
ಅಭಿಷೇಕ್ ಅಂಬರೀಶ್ ಸ್ನೇಹಿತರಾದ ಪ್ರಜ್ವಲ್ ದೇವರಾಜ್, ಪನ್ನಾಗಭರಣ, ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗಳು, ನಟಿ ಮೇಘನಾ ರಾಜ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ಅಭಿಷೇಕ್ ಅಂಬರೀಶ ಹಾಗೂ ಅವಿವಾ ರವರಿಗೆ ಶುಭ ಹಾರೈಸಿದ್ದಾರೆ.ನಟಿ ಮೇಘನಾ ರಾಜ್ ಅಭಿಷೇಕ್ ಹಾಗೂ ಅವಿವ ಎಂಗೇಜ್ಮೆಂಟ್ ಕಾರ್ಯಕ್ರಮಕ್ಕೆ ಬಂದು ನವಜೋಡಿಗಳಿಗೆ ದೊಡ್ಡದೊಂದು ಹೂವಿನ ವೆಚ್ಚವನ್ನು ನೀಡಿ ಶುಭ ಹಾರೈಸಿದ್ದಾರೆ.