ಪ್ರೀತಿ ಒಂದು ಭ್ರಮೆ. ಆ ಭ್ರಮೆಯಿಲ್ಲದೆ ಜೀವನವಿಲ್ಲ. ಜೀವನ ಸುಂದರವಾಗಬೇಕಾದರೆ ಪ್ರೀತಿಯ ಮಾಂತ್ರಿಕತೆ ನಮ್ಮನ್ನು ಸುತ್ತುವರೆದಿರಬೇಕು. ನಿಜ, ಮನುಷ್ಯ ಪ್ರೀತಿಗಾಗಿ ಹಾತೊರೆಯುತ್ತಾನೆ. ನಮಗೊಂದು ಜೀವನವಿದೆ ಎಂದು ನಂಬಿ, ನಮ್ಮೆಲ್ಲ ಅಗತ್ಯಗಳಿಗೆ ಆದ್ಯತೆ ನೀಡಿ ರಕ್ಷಣೆಯ ಭಾವವನ್ನು ನೀಡುವುದೇ ಬದುಕಿನ ಬೆಳಕು. ಪ್ರೀತಿಯ ಬೆಳಕು ಜೀವನದಲ್ಲಿ ದೀಪವಾಗಿ ಉಳಿದರೆ, ನಾವು ಯಾವಾಗಲೂ ಶಾಂತಿಯುತ ಜೀವನವನ್ನು ಕಂಡುಕೊಳ್ಳುತ್ತೇವೆ.
ಪ್ರೀತಿ ಧರ್ಮ, ಭಾಷೆ, ಜಾತಿ ಮತ್ತು ವಯಸ್ಸನ್ನು ಮೀರಿದೆ. ದೊಡ್ಡ ವಯಸ್ಸಿನ ವ್ಯತ್ಯಾಸದ ಜೋಡಿಗಳ ಮದುವೆಗಳನ್ನು ನಾವು ಅನೇಕ ಬಾರಿ ನೋಡಿದ್ದೇವೆ. ಸಮಾಜವು ಅಂತಹ ಮದುವೆಯನ್ನು ವಿಭಿನ್ನವಾಗಿ ನೋಡುತ್ತದೆಯಾದರೂ, ಅದು ಅಂತಿಮವಾಗಿ ಅವರ ಇಚ್ಛೆಯ ಮೇಲೆ ಅವಲಂಬಿತವಾಗಿರುತ್ತದೆ. ಇಲ್ಲಿ ಇಬ್ಬರ ಮದುವೆ ನಿರ್ಧಾರವೇ ಅಂತಿಮ. ಆದರೆ ಅಂತಹ ಮದುವೆಗಳು ಟ್ರೋಲ್ ಆಗುತ್ತವೆ
ಇದೀಗ ಇಂತಹದ್ದೇ ಒಂದು ಮದುವೆಗೆ ಸಂಬಂಧಿಸಿದ ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಯಸ್ಸಿನಲ್ಲಿ ತಂದೆ ಮತ್ತು ಮಗಳು ಸಮಾನರಾಗಿರುವವರು ಮದುವೆಯಾಗಿದ್ದು, ವಿಡಿಯೋ ವೈರಲ್ ಆಗಿದೆ
ವಿಡಿಯೋದಲ್ಲಿ ವೃದ್ಧ ಹಾಗೂ ಯುವತಿ ಕ್ಯಾಮರಾಗೆ ಪೋಸ್ ನೀಡುತ್ತಿರುವ ದೃಶ್ಯವಿದೆ. ವಿಡಿಯೋದಲ್ಲಿ ಇಬ್ಬರು ಪರಸ್ಪರ ಕೊರಳಿಗೆ ಹಾರ ಹಾಕಿಕೊಂಡು ಮಾತನಾಡುತ್ತಿದ್ದಾರೆ.ಈ ಮದುವೆ ಎಲ್ಲಿ ನೆಡೆಯಿತು ? ಏನಾಯಿತು ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ವ್ಯಕ್ತಿಯೊಬ್ಬರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದು ̤ ಈ ವಿಡಿಯೋ ಈಗ ವೈರಲ್ ಆಗಿದೆ.
View this post on Instagram
ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಕಾಮೆಂಟ್‌ಗಳ ಸುರಿಮಳೆ ಮಾಡುತ್ತಿದ್ದಾರೆ. ಬಿಯರ್ ಜೊತೆಗೆ ಕಬಾಬ್ ಗೆ ವಿಷ ಬೆರೆಸಿ ಕೊಡಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ ̧ ಎಎಲ್ಲ ಹುಡುಗಿಯರು ಸರಕಾರಿ ಕೆಲಸಕ್ಕೆ ಇಷ್ಟ ಪಟ್ಟರೆ ಇಲ್ಲೊಬ್ಬಳು ಪಿಂಚಣಿಗೆ ಅಸೆ ಪಟ್ಟಿದ್ದಾಳೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಹಣದ ಪ್ರಭಾವ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ ̤