ರಾಜಕುಮಾರ್ (Rajkumar)ರವರ ಹಿರಿಯ ಪುತ್ರ ಡಾಕ್ಟರ್ ಶಿವರಾಜಕುಮಾರ್(Shiva Rajkumar) ರವರು 1962 ರಲ್ಲಿ ಚೆನ್ನೈನಲ್ಲಿ ಜನಿಸಿದ್ದು ಇವರು ಕಳೆದ 30 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಶಿವರಾಜ್ ಕುಮಾರ್ ಅವರು ಸುಮಾರು 120ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಶಿವರಾಜ್ ಕುಮಾರ್ ರವರು ನನ್ನ ಅಷ್ಟೇ ರಾಯರ ದರ್ಶನವನ್ನು ಪಡೆಯಲು ಹೋಗಿದ್ದರು ಇದೇ ವೇಳೆ ಶಿವರಾಜ್ ಕುಮಾರ್ ಪತ್ನಿ ಗೀತಾ(Geeta Shiva Rajkumar) ರವರ ಮುಂದೆ ಅವರ ಅಭಿಮಾನಿಯೊಬ್ಬರು ಶಿವರಾಜಕುಮಾರ್ಗೆ ಕಿಸ್ ಮಾಡಿದ್ದಾರೆ.

 

 

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ರವರಿಗೆ ಈಗಾಗಲೇ 60 ವರ್ಷ ವಯಸ್ಸಾಗಿದ್ದರು ಕೂಡ ಅವರಿಗೆ 20ರ ಎನರ್ಜಿ ಇನ್ನೂ ಎದ್ದು ಕಾಣುತ್ತಿದೆ. ಇಂದಿಗೂ ಕೂಡ ಹಲವು ಸಿನಿಮಾಗಳಲ್ಲಿ ಫೈಟಿಂಗ್ ಗಳನ್ನು ಮಾಡುತ್ತಾರೆ. ಆಕ್ಷನ್ ದೃಶ್ಯಗಳನ್ನು ಭಯ ಭೀತಿ ಇಲ್ಲದೆ ಚಿತ್ರೀಕರಿಸುತ್ತಾರೆ. ಇವರ ಅಭಿನಯವನ್ನು ನೋಡಿ ಮನಸೋತ ಅಭಿಮಾನಿಗಳು ಶಿವರಾಜ್ ಕುಮಾರ್ ರವರಿಗೆ ಅಭಿನಯ ಚಕ್ರವರ್ತಿ ಎಂದೇ ಬಿರುದನ್ನು ನೀಡಿದ್ದಾರೆ. ಇವರ ಪತ್ನಿ ಗೀತಾ ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು (Shiva Rajkumar children) ಅವರ ಹೆಸರು ನಿರೂಪಮ ರಾಜ್ ಕುಮಾರ್ (Nirupama Rajkumar)ಹಾಗೂ ನಿವೇದಿತಾ ರಾಜಕುಮಾರ (Nivedita Rajkumar)ಎಂಬುದಾಗಿದೆ.

 

 

ಶಿವರಾಜಕುಮಾರ್ ರವರು ಡಾಕ್ಟರ್ ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಅವರ ಹಿರಿಯ ಮಗನಾಗಿದ್ದು ಶಿವರಾಜ್ ಕುಮಾರ್ ರವರು ಸುಧಾರಾಣಿ(sudharani) ರವರ ಜೊತೆಗೆ ತಮ್ಮ ಮೊದಲ ಸಿನಿಮಾವಾದ “ಆನಂದ್” ಸಿನಿಮಾದಲ್ಲಿ ನಟಿಸಿದ್ದರು. ಇವರ ಮೊದಲ ಮೂರು ಸಿನಿಮಾಗಳಾದ ಆನಂದ್, ರಥಸಪ್ತಮಿ, ಮನ ಮೆಚ್ಚಿದ ಹುಡುಗಿ ಇವೆಲ್ಲವೂ ಕೂಡ ಯಶಸ್ವಿ ಚಿತ್ರಗಳಾಗಿ ಹೊರ ಹೊಮ್ಮಿದವು ಆದ್ದರಿಂದ ಇವರಿಗೆ ಅಭಿಮಾನಿಗಳು ಹ್ಯಾಟ್ರಿಕ್ ಹೀರೋ ಎನ್ನುವ ಬಿರುದನ್ನು ಕೂಡ ನೀಡಿದರು. ಶಿವರಾಜ್ ಕುಮಾರ್ ಅವರು ಕಳೆದ 34 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ಆನಂದ್, ರಥಸಪ್ತಮಿ, ಓಂ ,ಜನುಮದ ಜೋಡಿ, ನಮ್ಮೂರ ಮಂದಾರ ಹೂವೆ ,AK-47, ಶಿವಲಿಂಗ, ಟಗರು ,ಬೈರಾಗಿ ಮುಂತಾದ ಚಿತ್ರಗಳಲ್ಲಿ ನಟಿಸಿ ಬಾಕ್ಸ್ ಆಫೀಸ್ ಅನ್ನು ಕೊಳ್ಳೆ ಹೊಡೆದಿದ್ದಾರೆ.

 

 

ಶಿವರಾಜ್ ಕುಮಾರ್ ಅವರು ನಟಿಸಿದ್ದ ಓಂ ಚಿತ್ರವನ್ನು ಉಪೇಂದ್ರರವರು(real star Upendra) ನಿರ್ದೇಶಸಿದ್ದು ಆ ಚಿತ್ರವು ಇಂದಿಗೂ ಕೂಡ ವಿಭಿನ್ನ ಅಭಿಮಾನಿಗಳ ಜಾನರ್ ಅನ್ನು ಹೊಂದಿದೆ. ಇದು ಹಲವಾರು ಬಾರಿ ಬಿಡುಗಡೆಯಾಗಿರುವ ಹೆಗ್ಗಳಿಕೆಗೂ ಕೂಡ ಪಾತ್ರವಾಗಿದೆ. ಶಿವರಾಜ್ ಕುಮಾರ್ ರವರು ಹಲವಾರು ರಿಯಾಲಿಟಿ ಶೋ ಮೂಲಕ ಕಿರುತೆರೆಯಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ. ಮೊದಲಿಗೆ ನಾನಿರುವುದೇ ನಿಮಗಾಗಿ ಎನ್ನುವ ಟಾಕ್ ಶೋ ಮೂಲಕ ಕಾಣಿಸಿಕೊಂಡಿದ್ದರು ತದನಂತರ ಮಾನಸ ಸರೋವರ ಎನ್ನುವ ಧಾರವಾಹಿಯನ್ನು ಶಿವಣ್ಣ ನಿರ್ಮಿಸಿದರು ಸಹ ನಿರ್ಮಾಪಕರಾಗಿಯೂ ಕೂಡ ಕೆಲಸ ಮಾಡಿದ್ದಾರೆ. ಹಲವು ವೆಬ್ ಸೀರೀಸ್ ಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಶಿವರಾಜ್ ಕುಮಾರ್ ರವರು ಡ್ಯಾನ್ಸಿಂಗ್ ಶೋ ನಲ್ಲಿ ಕೂಡ ಭಾಗವಹಿಸಿ ಕನ್ನಡದ ಜೀ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ನಲ್ಲಿ(dance Karnataka dance) ಸದ್ಯಕ್ಕೆ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಶಿವರಾಜ್ ಕುಮಾರ್ ರವರ ಸಹೋದರರಾದ ಪುನೀತ್ ರಾಜಕುಮಾರ್ (Punit Rajkumar)ಹಾಗೂ ರಾಘವೇಂದ್ರ ರಾಜಕುಮಾರ್(Raghavendra Rajkumar) ಅವರು ಕೂಡ ನಟರಾಗಿದ್ದು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಶಿವರಾಜ್ ಕುಮಾರ್ ರವರು ಚೆನ್ನೈನಲ್ಲಿ ತಮ್ಮ ಪದವಿಯನ್ನು ಮುಗಿಸಿ ತದನಂತರ ನಟನಾ ಶಾಲೆಗೆ ಸೇರಿ ಇಂದು ಹಲವಾರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇವರು ಕುಚುಪುಡಿ ನೃತ್ಯ ಪ್ರಕಾರವನ್ನು ಕೂಡ ಕಲಿತಿದ್ದರು.

 

 

ಶಿವರಾಜ್ ಕುಮಾರ್ ಅವರು ಡಾನ್ ಆಗಿ ಹಾಗೂ ಗ್ಯಾಂಗ್ ಸ್ಟಾರ್ರ್ ಆಗಿ ತಮ್ಮ ಚಲನಚಿತ್ರಗಳಲ್ಲಿ ನಟಿಸಿ ಯಶಸ್ಸನ್ನು ಪಡೆದಿದ್ದಾರೆ. ಇಂದಿಗೂ ಕೂಡ ಅವರ ಓಂ ಚಿತ್ರ ಅದಕ್ಕೆ ಪೂರಕವಾಗಿ ನಿಂತಿದೆ. ಭೂಮಿ ತಾಯಿಯ ಚೋಚ್ಚಲ ಮಗ ಚಿತ್ರವು ಕೂಡ ಹೆಚ್ಚು ಪ್ರಶಂಸೆಗೆ ಒಳಗಾಗಿತ್ತು. ಶಿವರಾಜ್ ಕುಮಾರ್ ರವರ ಚೆಲುವೆಯೇ ನಿನ್ನ ನೋಡಲು ಚಿತ್ರವನ್ನು ವಿಶ್ವದ ಏಳು ಅದ್ಭುತಗಳ ಬಳಿ ಚತ್ರಿಕರಿಸಲಾಗಿತ್ತು. ಅವರ 100ನೇ ಚಿತ್ರವಾದ ಜೋಗಯ್ಯ ಚಿತ್ರವು ಕೂಡ ಗಲ್ಲ ಪೆಟ್ಟಿಗೆಯಲ್ಲಿ ಸದ್ದು ಮಾಡಿದ್ದು ಭಜರಂಗಿ ಚಿತ್ರವು ಕೂಡ ಯಶಸ್ವಿ ಪ್ರದರ್ಶನವನ್ನು ಕಂಡಿದ್ದು ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ನೂರು ದಿನಗಳಿಗಿಂತ ಹೆಚ್ಚು ಕಾಲ ಓಡಿ ಫ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿ ಬಂದಿತ್ತು.

 

 

 

ಶಿವರಾಜ್ ಕುಮಾರ್ ಅವರಿಗೆ ಈಗಾಗಲೇ 60 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದ್ದರು ಕೂಡ ತಾವು ಇಂದಿಗೂ ಡಾನ್ ಪಾತ್ರಗಳನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತಾರೆ. ಇವರಿಗೆ ಗ್ಯಾಂಗ್ಸ್ಟರ್ ಪಾತ್ರಗಳು ತುಂಬಾ ಚೆನ್ನಾಗಿ ಸೂಟ್ ಕೂಡ ಆಗುತ್ತದೆ. ಇವರು ಕನ್ನಡ ಚಿತ್ರರಂಗದಲ್ಲಿ ಮೊದಲು ಲಾಂಗ್ ಹಿಡಿದ ವ್ಯಕ್ತಿಯಾಗಿದ್ದಾರೆ.ತಮ್ಮ ರೌಡಿಸಂ ಚಿತ್ರಗಳ ಮೂಲಕ ಲಾಂಗ್ ಹಿಡಿದು ಶಿವರಾಜ್ ಕುಮಾರ್ ರವರು ತಮ್ಮ ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಂಡಿದ್ದಾರೆ. ಇಂದಿಗೂ ಕೂಡ ಅವರು ಫೈಟ್ ಗಳನ್ನು ಹಾಗೂ ಸಾಹಸ ಪ್ರದರ್ಶನಗಳನ್ನು ಮಾಡುತ್ತಾಲೇ ಇರುತ್ತಾರೆ. ಅವರ ಅಭಿಮಾನಿಗಳೆಲ್ಲರೂ ಎನರ್ಜಿ ಎಂದರೆ ಶಿವಣ್ಣ ಎಂದು ಹೇಳುತ್ತಿರುತ್ತಾರೆ.

 

 

ನಟ ಶಿವರಾಜ್ ಕುಮಾರ್(Shiva Rajkumar) ಹಲವು ಸಿನಿಮಾಗಳಲ್ಲಿ ಬಿಸಿ ಇದ್ದರೂ ಕೂಡ ತಮ್ಮ ಪರಿವಾರಕ್ಕೆಂದು ಸಮಯವನ್ನು ಮಾಡಿಕೊಂಡು ತಮ್ಮ ಪತ್ನಿ ಗೀತಾ ಶಿವರಾಜಕುಮಾರ್(Geeta Shivraj Kumar) ರವರ ಜೊತೆಗೆ ರಾಘವೇಂದ್ರ ಸ್ವಾಮಿಯ ದರ್ಶನವನ್ನು ಪಡೆಯಲು ಮಂತ್ರಾಲಯಕ್ಕೆ(Mantralaya) ತೆರಳಿದ್ದರು ನಟ ಶಿವಣ್ಣ ರಾಯರ ದರ್ಶನವನ್ನು ಮುಗಿಸಿ ದೇವಸ್ಥಾನದಿಂದ ಹೊರಗೆ ಬಂದ ಕೂಡಲೇ ಅವರ ಅಭಿಮಾನಿಗಳ ಗುಂಪೊಂದು ಮುತ್ತಿಗೆ ಹಾಕಿ ಸೆಲ್ಫಿಯನ್ನು ತೆಗೆದುಕೊಂಡರು ಇದೇ ವೇಳೆ ಮಹಿಳಾ ಅಭಿಮಾನಿಯೊಬ್ಬರು ನಟ ಶಿವರಾಜ್ ಕುಮಾರ್ ರವರ ಪತ್ನಿ ಗೀತಾ ರವರ ಎದುರಿಗೆ ಶಿವರಾಜ್ ಕುಮಾರ್ ರವರಿಗೆ ಕಿಸ್ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಶಿವಣ್ಣನ ಮೇಲೆ ಜನರು ಇಷ್ಟೆಲ್ಲ ಪ್ರೀತಿಯನ್ನು ಹೊಂದಿದ್ದಾರೆ ಎಂದು ಖುಷಿ ಪಡುತ್ತಿದ್ದಾರೆ.

Leave a comment

Your email address will not be published. Required fields are marked *