ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಕನ್ನಡದ ಖ್ಯಾತ ಚಿತ್ರ ನಿರ್ದೇಶಕರೊಬ್ಬರು ಸಿನಿಮಾ ನಟಿಯೊಬ್ಬರಿಗೆ ಬಯ್ಯುತ್ತಿರುವ ವಿಡಿಯೋ ಒಂದು ಸಖತ್ ವೈರಲ್ ಆಗಿದೆ. ಹೀಗೆ ನಟಿಗೆ ಬಯ್ಯುತ್ತಿರುವುದು ಬೇರೆ ಯಾರು ಅಲ್ಲ ಕನ್ನಡದ ಖ್ಯಾತ ಸಿನಿಮಾ ನಿರ್ದೇಶಕ ಓಂ ಪ್ರಕಾಶ್. ಓಂ ಪ್ರಕಾಶ್ ಅವರು ಕನ್ನಡ ಚಿತ್ರ ರಂಗದ ಹೆಸರಾಂತ ನಿರ್ದೇಶಕರು. ಅವರು ಎ.ಕೆ.೪೭, ಸಿ.ಬಿ.ಐ ದುರ್ಗಾ ಸೇರಿದಂತೆ ಹತ್ತು ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ಕನ್ನಡಕ್ಕೆ ನೀಡಿದ್ದಾರೆ.

 

 

ಓಂ ಪ್ರತಾಶ್ ಅವರು ೧೯೯೪ ರಿಂದ ೨೦೧೮ರ ವರೆಗೆ ಸರಿ ಸುಮಾರು ೨೦ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ನಿರ್ದೇಶನ ಅಷ್ಟೇ ಅಲ್ಲದೆ ಹಲವಾರು ಸಿನಿಮಾಗಳಲ್ಲಿ ಹಾಸ್ಯ ಕಲಾವಿದನ ಪಾತ್ರಗಳನ್ನು ಮಾಡಿದ್ದಾರೆ.ಪ್ರತಿಯೊಬ್ಬ ನಿರ್ದೇಶಕರಿಗೆ ಅವರದ್ದೇ ಆದ ಕೆಲಸ ಮಾಡುವ ವೈಖರಿ ಇರುತ್ತದೆ. ಅದೇ ರೀತಿ ಓಂ ಪ್ರಕಾಶ್ ಅವರದ್ದು ಒಂದು ರೀತಿಯ ವೈಖರಿ. ಓಂ ಪ್ರಕಾಶ್ ರಾವ್ ಅವರು ಸಿನಿಮಾ ಸೆಟ್‌ನಲ್ಲಿ ಸಖತ್ ಸ್ಟ್ರಿಕ್ಟ್. ಇವರು ಹೇಳಿದ ಕೆಲಸ ಮಾಡದಿದ್ದರೆ ಬಾಯಿಗೆ ಬಂದ ಹಾಗೆ ಬೈಯುತ್ತಾರೆ. ಒಂದು ಸಿನಿಮಾದ ಚಿತ್ರೀಕರಣದ ವೇಳೆ ಆಗಿದ್ದೇನು ನಿಮಗೆ ಗೊತ್ತಾ? ತಿಳಿದುಕೊಳ್ಳಲು ಕೆಳಗೆ ಸ್ಕ್ರೋಲ್ ಮಾಡಿ…

 

 

ಹೌದು, ಓಂ ಪ್ರಕಾಶ್ ರಾವ್ ಅವರು ತಮ್ಮ ಕಾರ್ಯ ವೈಖರಿಗೆ ಸಾಕ್ಷಿ ಎಂಬಂತೆ ಒಂದು ಸಿನಿಮಾ ಶೂಟಿಂಗ ವೇಳೆ ನಟಿ, ಸ್ಪಾಟ್ ಬಾಯ್, ಲೈಟ್ ಬಾಯ್, ಅಸಿಸ್ಟಂಟ್‌ಗಳಿಗೆ ಬಯ್ಯುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಓಂ ಪ್ರಕಾಶ್‌ರವರು ಫುಲ್ ಟೆನ್ಷನ್‌ನಲ್ಲಿರುವುದನ್ನು ನಾವು ಕಾಣಬಹುದು. ಒಂದು ಸೀನ್‌ನ್ನು ಮರಳಿ ಮರಳಿ ಚಿತ್ರೀಕರಿಸುವುದನ್ನು ನಾವು ಕಾಣಬಹುದು. ಹೀಗೆ ಚಿತ್ರೀಕರಣ ಮಾಡುವಾಗ ತಪ್ಪುಗಳು ಕಂಡು ಬಂದಾಗ ಓಂ ಪ್ರಕಾಶ್ ಕೆಲವು ಅವಾಚ್ಯ ಪದಗಳನ್ನು ಬಳಸಿರುವುದನ್ನು ವಿಡಿಯೋದಲ್ಲಿ ವೀಕ್ಷಿಸಬಹುದು.

 

 

ಯಾರಾದರೂ ನಿರ್ದೇಶಕರು ಬೇಕು ಅಂತ ಬಯ್ಯುವುದು ಅತೀ ವಿರಳ. ಕೆಲಸದಲ್ಲಿನ ಶಾರೀರಿಕ ಒತ್ತಡ, ಮಾನಸಿಕ ಒತ್ತಡ ಅವರನ್ನು ಹಾಗೆ ಮಾಡಿಸುತ್ತದೆ. ಆದ್ದರಿಂದ ಮನುಷ್ಯ ಯಾವಾಗಲೂ ಶಾಂತಿ, ತಾಳ್ಮೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು ಎಂದು ಹಿರಿಯರು ಹೇಳಿದ್ದಾರೆ.

Leave a comment

Your email address will not be published. Required fields are marked *