ಹಲವಾರು ವಾರಗಳು ಕಳೆಯುತ್ತಾ ಬಂದರೂ ಕೂಡ ಡಿ ಬಾಸ್ ದರ್ಶನ್ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳ ಜಟಾಪಟಿ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ ಯಾವಾಗ ಹೊಸಪೇಟೆಯಲ್ಲಿ ಡಿ ಬಾಸ್ ದರ್ಶನ್ ತಮ್ಮ ಕ್ರಾಂತಿ ಸಿನಿಮಾದ ಹಾಡನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು ಅಲ್ಲಿಂದಲೇ ಅಪ್ಪು ಹಾಗೂ ಡಿ ಬಾಸ್ ಅಭಿಮಾನಿಗಳ ಫ್ಯಾನ್ವಾರ್ ಶುರುವಾಗಿದೆ.
ಹೊಸಪೇಟೆಯಲ್ಲಿ ಬೊಂಬೆ ಬೊಂಬೆ ಹಾಡನ್ನು ರಿಲೀಸ್ ಮಾಡುವ ಸಮಯದಲ್ಲಿ ಕಿಡಿಗೇಡಿ ಒಬ್ಬರು ದರ್ಶನ್ ರವರ ಮೇಲೆ ಚಪ್ಪಲಿಯನ್ನು ಎಸೆಯುತ್ತಾರೆ. ಇದರಿಂದ ದರ್ಶನ್ ಅಭಿಮಾನಿಗಳು ಅಪ್ಪು ಅಭಿಮಾನಿಗಳ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಎಲ್ಲದಕ್ಕೂ ಪುನೀತ್ ರಾಜಕುಮಾರ್ ಅಭಿಮಾನಿಗಳೇ ಕಾರಣ ಎಂದು ಸೋಶಿಯಲ್ ಮೀಡಿಯಾದಲ್ಲಿ ಡಿ ಬಾಸ್ ಅಭಿಮಾನಿಗಳು ನೇರವಾಗಿ ಆರೋಪ ಮಾಡುತ್ತಿದ್ದಾರೆ.
ಇದಕ್ಕೆ ವಿರುದ್ಧವಾಗಿ ಪ್ರತಿಕ್ರಿಯೆ ನೀಡುತ್ತಿರುವ ಪುನೀತ್ ಅಭಿಮಾನಿಗಳು ಈ ವಿಚಾರ ಎಲ್ಲಿಯೂ ಸಾಬೀತಾಗಿಲ್ಲ ಅಪ್ಪು ದೇವರಂತ ಮನುಷ್ಯ ಸುಮ್ಮ ಸುಮ್ಮನೆ ರಾಜ ವಂಶದ ಮೇಲೆ ಅಪ್ಪು ಅಭಿಮಾನಿಗಳ ಮೇಲೆ ತಪ್ಪನ್ನು ಹೊರಿಸಬೇಡಿ ತಕ್ಷಣವೇ ಕ್ಷಮೆ ಕೇಳದೆ ಹೋದರೆ ಕ್ರಾಂತಿ ಸಿನಿಮಾವನ್ನು ಬ್ಯಾನ್ ಮಾಡುತ್ತೇವೆ ಎಂದು ದೊಡ್ಡ ಮಟ್ಟದಲ್ಲಿ ಅಪ್ಪು ಅಭಿಮಾನಿಗಳು ಎಚ್ಚರಿಕೆಯನ್ನು ನೀಡಿದ್ದಾರೆ.
ಇದೇ ಕಾರಣಕ್ಕಾಗಿ ಅಪ್ಪು ಅಭಿಮಾನಿಗಳು ಫಿಲಂ ಚೇಂಬರ್ ಬಳಿ ನ್ಯಾಯವನ್ನು ಕೇಳಿಕೊಂಡು ಹೋಗಿದ್ದರು ಡಿ ಬಾಸ್ ಅಭಿಮಾನಿಗಳ ಅಪ್ಪು ಅಭಿಮಾನಿಗಳಿಗೆ ತಕ್ಕ ಉತ್ತರ ನೀಡಬೇಕು ಎಂದು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಮೇಲ್ನೋಟಕ್ಕೆ ಮೊದಲೆಲ್ಲ ಫ್ಯಾನ್ ವಾರ್ ಇಲ್ಲ ಎಂದು ಮೇಲೆ ಮಾತ್ರ ಕಂಡುಬರುತ್ತಿತ್ತು ಇದೀಗ ಆ ವಿಚಾರ ಬಹಿರಂಗವಾಗಿ ಕಾಣುತ್ತಿದೆ.
ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲಿ ಫ್ಯಾನ್ಗಳು ನೇರವಾಗಿ ಮಾತನಾಡುತ್ತಿದ್ದಾರೆ. ಹೊಸಪೇಟೆಗೆ ಬಂದು ಏಕೆ ದರ್ಶನ್ ತನ್ನ ಹಾಡನ್ನು ರಿಲೀಸ್ ಮಾಡಬೇಕಾಗಿತ್ತು ಮಾಧ್ಯಮಗಳು ದರ್ಶನ್ ರವರ ಕ್ರಾಂತಿ ಸಿನಿಮಾವನ್ನು ಬ್ಯಾನ್ ಮಾಡಿರುವುದರಿಂದ ನನ್ನ ಸಿನಿಮಾ ಎಲ್ಲಿ ಸೋಲುತ್ತದೆ ಎಂದು ಈ ರೀತಿ ಎಲ್ಲಾ ಕಡೆ ಹೋಗಿ ತಮ್ಮ ಕ್ರಾಂತಿ ಸಿನಿಮಾ ಒಂದು ಪ್ರಚಾರ ಮಾಡುತ್ತಿದ್ದಾರೆ.
ಪಬ್ಲಿಸಿಟಿಗಾಗಿ ದರ್ಶನ್ ಹೊಸಪೇಟೆಗೆ ಬಂದರು ಎಂದು ಅಪ್ಪು ಅಭಿಮಾನಿಗಳು ಹೇಳುತ್ತಿದ್ದಾರೆ. ಫಿಲಂ ಚೇಂಬರಿಗೆ ಮುತ್ತಿಗೆ ಹಾಕಿ ಕ್ರಾಂತಿ ಸಿನಿಮಾವನ್ನು ಬ್ಯಾನ್ ಮಾಡುವುದಾಗಿ ಹೇಳಿದ್ದಾರೆ. ಇದೆಲ್ಲದಕ್ಕೂ ಟಕ್ಕರ್ ನೀಡುವಂತೆ ಡಿ ಬಾಸ್ ಅಭಿಮಾನಿಗಳು ಎಲ್ಲಿ ದರ್ಶನ್ ರವರಿಗೆ ಅವಮಾನವಾಗಿದೆ ಅದೇ ಜಾಗದಲ್ಲಿ ಡಿ ಬಾಸ್ ದರ್ಶನ್ ರವರ ದೊಡ್ಡ ಪ್ರತಿಮೆ ಒಂದನ್ನು ಮಾಡಿ ನಿರ್ಮಾಣ ಮಾಡುವುದು ಎಂದು ನಿರ್ಧಾರ ತೆಗೆದುಕೊಂಡಿದ್ದಾರೆ.
ಹೊಸಪೇಟೆಯಲ್ಲಿ ಪುನೀತ್ ರಾಜಕುಮಾರ್ ಪ್ರತಿಮೆ ಹೇಗೆ ಅನಾವರಣಗೊಂಡಿದೆ. ಅದಕ್ಕಿಂತ ದೊಡ್ಡ ಮಟ್ಟದ ವಿಗ್ರಹವನ್ನು ಹೊಸಪೇಟೆಯಲ್ಲಿ ನಿರ್ಮಾಣ ಮಾಡಿ ಈಗ ನಾವು ಹೊಸಪೇಟೆಯಲ್ಲಿ ದರ್ಶನ್ ಪ್ರತಿಮೆಯನ್ನು ನಿಲ್ಲಿಸೋಣ ಅದು ಅಪ್ಪುವಿನ ಪ್ರತಿಮೆಗಿಂತ ದೊಡ್ಡದಾಗಿರಬೇಕು ಎಂದು ಹೊಸಪೇಟೆಯಲ್ಲಿ ಅದ್ದೂರಿ ಕಾರ್ಯಕ್ರಮದ ಮೂಲಕ ಪ್ರತಿಮೆ ಅನಾವರಣ ಮಾಡಬೇಕೆಂದು ಹೇಳುತ್ತಿದ್ದಾರೆ.
ಇದಕ್ಕೆ ರಾಜ್ಯದ ಮೂಲೆಗಳಿಂದ ಡಿ ಬಾಸ್ ಅಭಿಮಾನಿಗಳು ಬೆಂಬಲವನ್ನು ಸೂಚಿಸಿದ್ದಾರೆ. ತವರು ಮನೆಯೆಂತೆ ಇರುವ ಹೊಸಪೇಟೆಯಲ್ಲಿ ಪುನೀತ್ ರಾಜಕುಮಾರ್ ಪುತ್ತಳಿ ಇರುವ ಹೊಸಪೇಟೆ ನಾಡಿನಲ್ಲಿ ಪುನೀತ್ ರಾಜಕುಮಾರ್ ಪುತ್ಥಳಿಯ ಪಕ್ಕದಲ್ಲಿ ಡಿ ಬಾಸ್ ದರ್ಶನ್ ರವರ ಪುತ್ತಳಿಯನ್ನು ಹೇಗೆ ಮಾಡಿಸಲು ಸಾಧ್ಯವಾಗುತ್ತದೆ. ಎಂದು ಅಭಿಮಾನಿಗಳು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಿದ್ದಾರೆ.