ಈ ಯುಗದಲ್ಲಿ ಮಕ್ಕಳ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕಾಗಿದೆ ಏಕೆಂದರೆ ಈ ಕಂಪ್ಯೂಟರ್ ಯುಗದಲ್ಲಿ ಮಕ್ಕಳು ಹೆಚ್ಚು ಆಕ್ಟಿವ್ ಆಗಿರುವುದರಿಂದ ಹಾಗೂ ಮಕ್ಕಳು ಹೆಚ್ಚು ಫಾಸ್ಟ್ ಆಗುತ್ತಿರುವುದರಿಂದ ನಾವು ಮಕ್ಕಳ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು ಅವರನ್ನು ಒಬ್ಬರನ್ನೆ ಬಿಡಬಾರದು.
ಇಂದು ಚಿತ್ರದುರ್ಗದ ಕೆರವಡೆ ಬಡಾವಣೆಯಲ್ಲಿ ಒಂದು ಹೃದಯವಿದ್ರಾವಕ ಘಟನೆ ನಡೆದಿದೆ 12 ವರ್ಷದ ಸಂಜಯ್ ಎಂಬ ಪುಟ್ಟ ಹುಡುಗ ಇಂದು ನೇಣಿಗೆ ಶರಣಾಗಿದ್ದಾನೆ. ಎಸ್ ಎಲ್ ವಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ ಸಂಜಯ್ ತುಂಬಾ ಚುರುಕಾಗಿದ್ದ ತುಂಬಾ ಚೆನ್ನಾಗಿ ಓದು ಓದುತಿದ್ದಂತಹ ಹುಡುಗ.ನಾಳಿನ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಕೊಟ್ಟ ಆಕ್ಟಿವಿಟಿಯನ್ನು ಮಾಡಲು ಹೋಗಿ ಈತ ನೇಣಿಗೆ ಶರಣಾಗಿದ್ದಾನೆ. ಹೌದು ಗೆಳೆಯರೇ ಈ ಪುಟ್ಟ ಹುಡುಗ ತನ್ನ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಸಲುವಾಗಿ ಎಲ್ಲರೂ ಸ್ವಾತಂತ್ರ್ಯ ಹೋರಾಟಗಾರರ ರೀತಿ ನಟನೆ ಮಾಡಬೇಕು ಎಂದು ಹೇಳಿರುತ್ತಾರೆ.
ಸಂಜಯನಿಗು ಕೂಡ ಆಕ್ಟಿಂಗ್ ಎಂದರೆ ಹುಚ್ಚು ಇದ್ದಿದ್ದರಿಂದ ಆತ ಕೂಡ ಅದರಲ್ಲಿ ಭಾಗವಹಿಸಲು ಸಜ್ಜಾಗಿದ್ದ. ಈ ಪುಟ್ಟ ಹುಡುಗ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ನಟನೆ ಮಾಡಿ ತಮ್ಮ ಶಾಲೆಯ ಶಿಕ್ಷಕರನ್ನು ಮೆಚ್ಚಿಸಬೇಕು ಎಂದುಕೊಂಡಿದ್ದ. ಈತನಿಗೆ ಅವರ ಶಾಲೆಯಲ್ಲಿ ಭಗತ್ ಸಿಂಗ್ ಪಾತ್ರವನ್ನು ಕೊಟ್ಟಿದ್ದರು ಭಗತ್ ಸಿಂಗ್ ಪಾತ್ರಕ್ಕೆ ಸಂಬಂಧಿಸಿದಂತೆ ಎಲ್ಲಾ ಡೈಲಾಗ್ ಗಳನ್ನು ಪ್ರಾಕ್ಟೀಸ್ ಮಾಡುತ್ತಿದ್ದ. ಶಾಲೆಯಲ್ಲಿ ಕೂಡ ಈ ನಟನೆಯ ಕುರಿತು ಅಭ್ಯಾಸ ಮಾಡಿಸಿದ್ದರು. ಮನೆಗೆ ಹೋಗಿ ಸ್ವಲ್ಪ ಅಭ್ಯಾಸ ಮಾಡಿ ಎಂದು ಕೂಡ ಹೇಳಿದ್ದರು ನಮಗೆಲ್ಲರಿಗೂ ಗೊತ್ತಿರುವ ಹಾಗೆ ಭಗತ್ ಸಿಂಗ್ ಕೊನೆಯಲ್ಲಿ ಬ್ರಿಟಿಷರಿಂದ ನೇಣಿಗೆ ಶರಣಾಗುತ್ತಾನೆ.
ಈ ಪುಟ್ಟ ಹುಡುಗ ತನ್ನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಭಗತ್ ಸಿಂಗ್ ಜೀವನದಲ್ಲಿ ಏನೇನು ಮಾಡಿದ್ದ ಅದನ್ನೆಲ್ಲವನ್ನು ಮಾಡುತ್ತಾ ಬರುತ್ತಾನೆ ಒಮ್ಮೆ ಈತ ಹೀಗೆ ಪ್ರಾಕ್ಟೀಸ್ ಮಾಡುತ್ತಿರುವಾಗ ತಮ್ಮ ತಂದೆ ತಾಯಿ ಇಬ್ಬರು ಕೆಲಸಕ್ಕೆ ಹೋಗಿರುತ್ತಾರೆ. ಈ ಪುಟ್ಟ ಹುಡುಗ ಮನೆಯಲ್ಲಿ ಚೆನ್ನಾಗಿ ಪ್ರಾಕ್ಟೀಸ್ ಮಾಡೋಣ ಎಂದುಕೊಂಡು ಅದರ ಬಗ್ಗೆ ಎಲ್ಲಾ ಪ್ರಾಕ್ಟೀಸ್ ಮಾಡುತ್ತಾ ಮಾಡುತ್ತಾ ಕೊನೆಗೆ ಫ್ಯಾನ್ ಗೆ ಹಗ್ಗವನ್ನು ಹಾಕಿ ಮುಖಕ್ಕೆ ಕಪ್ಪು ಬಟ್ಟೆಯನ್ನು ಸುತ್ತಿಕೊಂಡು ಮಂಚದ ಮೇಲೆ ಹೋಗಿ ನಿಂತು ಭಗತ್ ಸಿಂಗ್ ನೇಣಿಗೆ ಶರಣಾದ ಹಾಗೆ ಮಾಡಿ ಅವರ ದೇಹ ಹೇಗೆ ತೂಗುತ್ತಿತ್ತೋ ಹಾಗೆ ನನ್ನ ದೇಹವು ತೂಗಬೇಕು ಎಂದು ಹಗ್ಗವನ್ನು ಕುತ್ತಿಗೆಗೆ ಹಾಕಿಕೊಂಡು ಮಂಚದಿಂದ ಜಂಪ್ ಮಾಡುತ್ತಾನೆ ಹಗ್ಗ ತುಂಬಾ ಗಟ್ಟಿ ಇದ್ದಿದ್ದರೆ ಕಾರಣ ಹಾಗೂ ಈತ ಚಿಕ್ಕ ಹುಡುಗನಾಗಿದ್ದ ಕಾರಣ ಹಗ್ಗ ಕೊರಳಿಗೆ ಬಿಗಿಯಾಗಿ ಬಿಗಿದುಕೊಂಡು ಈತ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ.
ಕೆಲಸ ಮುಗಿಸಿಕೊಂಡು ಮನೆಗೆ ಬಂದ ತಂದೆ ತಾಯಿ ಈ ದೃಶ್ಯವನ್ನು ಕಂಡು ದಿಗ್ಭ್ರಮೆಗೆ ಒಳಗಾಗಿದ್ದಾರೆ ನಂತರ ಅವರಿಗೆ ಏನೇನಾಗಿದೆ ಎಂದು ಕೂಲಂಕುಶವಾಗಿ ಗೊತ್ತಾಗುತ್ತದೆ ಏಕೆಂದರೆ, ಅವರ ಮಗ ಭಗತ್ ಸಿಂಗ್ ಬಟ್ಟೆಯನ್ನು ಧರಿಸಿರುತ್ತಾನೆ ಹಾಗೂ ತಲೆಗೆ ಕಪ್ಪು ಬಟ್ಟೆ ಸುತ್ತಿರುತ್ತಾನೆ. ಈ ಮೊದಲು ಕೂಡ ಮನೆಯಲ್ಲಿ ಭಗತ್ ಸಿಂಗ್ ಪಾತ್ರವನ್ನು ಪ್ರಾಕ್ಟೀಸ್ ಮಾಡುತ್ತಿದ್ದ ಹುಡುಗ ಮನೆಯಲ್ಲಿ ಯಾರು ಇಲ್ಲದ ಕಾರಣ ನನ್ನನ್ನು ಯಾರು ಬಯ್ಯುವುದಿಲ್ಲ ಎಂದುಕೊಂಡು ಈ ರೀತಿ ಕೆಲಸ ಮಾಡಿದ್ದಾನೆ. ಅವರ ಪೋಷಕರಿಗೆ ಈ ದೃಶ್ಯ ನೋಡಿ ಏನಾಗಿರಬೇಡ 12 ವರ್ಷ ಕಷ್ಟಪಟ್ಟು ಸಾಕಿರುತ್ತಾರೆ. ಕೈಗೆ ಬಂದ ಮಗ ಹೀಗಾದರೆ ಅವರ ಮನಸ್ಸಿಗೆ ತುಂಬಾ ನೋವಾಗುತ್ತದೆ.
ಮಗನ ಭವಿಷ್ಯದ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿರುತ್ತಾರೆ ಆದರೆ ಈ ಹುಡುಗ ಈ ರೀತಿ ಮಾಡಿಬಿಟ್ಟಿದ್ದಾನೆ. ಈಗಿನ ಕಾಲದ ಮಕ್ಕಳ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು ಮಕ್ಕಳಿಗೆ ಏನು ಗೊತ್ತಾಗುವುದಿಲ್ಲ ಸರಿಯಾಗಿ ಬುದ್ಧಿ ಇರುವುದಿಲ್ಲ ಅವರು ಶಾಲೆಯಲ್ಲಿ ಹೇಳಿದ ವಿಷಯಗಳನ್ನೆಲ್ಲಾ ಸೀರಿಯಸ್ ಆಗಿ ತೆಗೆದುಕೊಂಡು ಅವುಗಳನ್ನು ಅನುಕರಣೆ ಮಾಡಲು ಹೋಗಿ ಹೀಗೆ ಪ್ರಾಣವನ್ನು ಕಳೆದುಕೊಳ್ಳುತ್ತಾರೆ.
ಮಕ್ಕಳಿಗೆ ಪ್ರಾಣದ ಬೆಲೆ ಗೊತ್ತಿರುವುದಿಲ್ಲ ಪ್ರಾಣ ಹೋಗುತ್ತದೆ ಎನ್ನುವುದರ ಬಗ್ಗೆ ಕೂಡ ತಿಳುವಳಿಕೆ ಇರುವುದಿಲ್ಲ ಅವರ ಮನಸ್ಸಿನಲ್ಲಿ ಕೇವಲ ಶಿಕ್ಷಕರನ್ನು ಮೆಚ್ಚಿಸಬೇಕು ಅದಕ್ಕಾಗಿ ನಾನು ಏನು ಬೇಕಾದರೂ ಮಾಡುತ್ತೇನೆ ಎನ್ನುವ ಆಲೋಚನೆಗಳಿರುತ್ತವೆ. ಈತನು ಕೂಡ ಅದೇ ರೀತಿ ಮಾಡಲು ಹೋಗಿ ಅಂತಿಮವಾಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಕುಟುಂಬಸ್ಥರ ಆಕ್ರಂದನವನ್ನು ನೋಡುವುದಕ್ಕೆ ಸಾಧ್ಯವೇ ಇಲ್ಲ
ಈಗ ಟೆಕ್ನಾಲಜಿ ತುಂಬಾ ಮುಂದುವರೆದಿದೆ ಆಗಿನ ಕಾಲದ ಮಕ್ಕಳಿಗೆ 18 ವರ್ಷವಾದರೂ ಸಿಗದಿದ್ದ ಗ್ಯಾಜೆಟ್ ಗಳು ಮೊಬೈಲ್ ಫೋನ್ ಗಳು ಈಗ ಒಂದನೇ ಕ್ಲಾಸಿನಲ್ಲಿರುವ ಮಕ್ಕಳಿಗೆ ಸಿಗುತ್ತವೆ ಹಾಗೂ ಪೋಷಕರು ಕೂಡ ಮಕ್ಕಳು ಕೇಳಿದ್ದನ್ನೆಲ್ಲ ಕೊಡಿಸಿ ಅವರ ಜೀವನಕ್ಕೆ ಆ ವಸ್ತುಗಳೇ ಮುಳುವಾಗವಂತೆ ಮಾಡುತ್ತಾರೆ. ಎಂತಹ ಅನಿವಾರ್ಯ ಸ್ಥಿತಿ ಇದ್ದರೂ ಕೂಡ ಮಕ್ಕಳನ್ನು ಒಬ್ಬರನ್ನೆ ಮನೆಯಲ್ಲಿ ಬಿಟ್ಟು ಹೋಗಬಾರದು ಈಗಿನ ಮಕ್ಕಳು ಹೆಚ್ಚೆಚ್ಚು ಪ್ರಯೋಗಗಳನ್ನು ಮಾಡಲು ಹೋಗುತ್ತಾರೆ ಅದು ಯಾಕೆ ಹೀಗೆ? ಇದು ಯಾಕೆ ಹೀಗೆ ? ಎಂದು ಯೋಚಿಸುತ್ತಿರುತ್ತಾರೆ. ಆದ್ದರಿಂದ ಅವರನ್ನು ತುಂಬಾ ನಾಜೂಕಾಗಿ ನೋಡಿಕೊಳ್ಳಬೇಕಾಗಿದೆ.
ಶಾಲೆಯಲ್ಲಿ ಹೇಳಿ ಕೊಟ್ಟ ಪಾಠಗಳನ್ನೆಲ್ಲ ಮನೆಗೆ ಬಂದು ಪ್ರಯೋಗ ಮಾಡಲು ಈಗಿನ ಕಾಲದ ಮಕ್ಕಳು ಶುರು ಮಾಡಿಬಿಡುತ್ತಾರೆ ಈ ಹುಡುಗನ ಮನಸ್ಸಿನಲ್ಲಿ ಇದ್ದಿದ್ದು ಅದೇ ನಾನು ಶಿಕ್ಷಕರ ಕೈಯಿಂದ ಶಭಾಷ್ ಗಿರಿಯನ್ನು ಪಡೆಯಬೇಕು ನಾಲ್ಕು ಜನರಿಂದ ಚಪ್ಪಾಳೆಯನ್ನು ಗಿಟ್ಟಿಸಿಕೊಳ್ಳಬೇಕು ಎಂದು ಭಗತ್ ಸಿಂಗ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.