Categories: Entertainment

ಮಾಲ್ಡೀವ್ಸ್ ಪ್ರವಾಸದಲ್ಲಿ ಎಂಜಾಯ್ ಮಾಡುತ್ತಿರುವ ಹಿರಿಯ ಚಿತ್ರ ನಟಿ ಶೃತಿ ಹಾಗೂ ಮಗಳು ಗೌರಿ..!!!

ಸಮುದ್ರ ಪ್ರಿಯರಿಗೆ ಮಾಲ್ಡಿವ್ಸ್ ಹೇಳಿ ಮಾಡಿಸಿದ ಸ್ಥಳ. ತುಂಬಾ ಜನ ಮಾಲ್ಡಿವ್ಸ್ ಭೇಟಿ ನೀಡಲು ಪ್ರಮುಖ ಕಾರಣ ಅಲ್ಲಿನ ಹವಾಮಾನ. ಅದರಲ್ಲೂ ನವೆಂಬರ್ ನಿಂದ ಏಪ್ರಿಲ್ ವರೆಗೆ ಈ ದ್ವೀಪ ದೇಶಕ್ಕೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ. ಈ ವೇಳೆ ಅಲ್ಲಿನ ತಾಪಮಾನ ಸರಾಸರಿ 29 ಡಿಗ್ರಿ ಸೆಲ್ಸಿಯಸ್‍ನಿಂದ 31 ಡಿಗ್ರಿ ಸೆಲ್ಸಿಯಸ್‍ವರೆಗೆ ಇರುತ್ತದೆ. ಈ ಸಮಯದಲ್ಲಿ ಮಳೆ ಹಾಗೂ ಬಿಸಿಲು ತುಂಬಾ ಕಡಿಮೆ ಹೀಗಾಗಿ ಹೆಚ್ಚು ಜನ ಭೇಟಿ ನೀಡುತ್ತಾರೆ.

 

 

ಮಾಲ್ಡಿವ್ಸ್ ದ್ವೀಪಗಳ ಸಮೂಹವಾಗಿದ್ದು, ಬರೋಬ್ಬರಿ 1,190ಕ್ಕೂ ಹೆಚ್ಚು ಹವಳ ದ್ವೀಪಗಳನ್ನು ಹೊಂದಿದೆ. ಇನ್ನೂ ವಿಶೇಷ ಎಂಬಂತೆ ಈ ದೇಶಕ್ಕೆ ಪ್ರಯಾಣಿಸುವವರಿಗಾಗಿ ನೈಸರ್ಗಿಕ ಪ್ರತ್ಯೇಕತೆಯನ್ನು ನೀಡಲಾಗುತ್ತದೆ. ಇಲ್ಲಿನ ರೆಸಾರ್ಟ್ ಹಾಗೂ ಪ್ರವಾಸೋದ್ಯಮ ಸಂಸ್ಥೆಗಳು ಪ್ರವಾಸೋದ್ಯಮ ಸಚಿವಾಲಯದ ಮಾರ್ಗಸೂಚಿಗಳನ್ನು ಚಾಚೂತಪ್ಪದೇ ಪಾಲಿಸುತ್ತವೆ. ಇದರಿಂದಾಗಿ ಸುರಕ್ಷತೆ ಹಾಗೂ ನೈರ್ಮಲ್ಯದ ಗುಣಮಟ್ಟವನ್ನು ಕಾಪಾಡಿಕೊಳ್ಳುತ್ತವೆ.

 

 

ಇಲ್ಲಿ ‘ಒಂದು ದ್ವೀಪ ಒಂದು ರೆಸಾರ್ಟ್’ ಪರಿಕಲ್ಪನೆಯನ್ನು ಅನುಸರಿಸಲಾಗುತ್ತದೆ. ಇದರಿಂದ ಮಾಲ್ಡಿವ್ಸ್ ಗೆ ಭೇಟಿ ನೀಡುವ ಪ್ರಯಾಣಿಕರು ತಾವು ಉಳಿದುಕೊಂಡ ರೆಸಾರ್ಟ್‍ಗೆ ಸೀಮಿತವಾಗುತ್ತಾರೆ. ಹೀಗಾಗಿ ಇತರ ಸ್ಥಳಗಳಿಗೆ ಹೋಲಿಸಿದರೆ ಇದು ಸುರಕ್ಷಿತ ಎನ್ನಿಸುತ್ತದೆ. ಅಲ್ಲದೆ ಮಾಲ್ಡಿವ್ಸ್ ಗೆ ಭೇಟಿ ನೀಡದ ಬಳಿಕ ಕ್ವಾರಂಟೈನ್ ಆಗುವ ಅಗತ್ಯವಿಲ್ಲ. ಮಾತ್ರವಲ್ಲದೆ ಪಾಸ್‍ಪೋರ್ಟ್ ಹೊಂದಿದ ಭಾರತೀಯರಿಗೆ 30 ದಿನಗಳ ಉಚಿತ ವೀಸಾವನ್ನು ಸಹ ನೀಡಲಾಗುತ್ತದೆ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲದೆ ಆರಾಮವಾಗಿ ಮಾಲ್ಡಿವ್ಸ್ ಗೆ ಭೇಟಿ ನೀಡಬಹುದಾಗಿದೆ.

 

 

ಮಾಲ್ಡಿವ್ಸ್ ನಲ್ಲಿ ಪ್ರತಿ ದ್ವೀಪಕ್ಕೊಂದು ರೆಸಾರ್ಟ್ ಇದ್ದು, ಸಾವಿರಕ್ಕೂ ಅಧಿಕ ರೆಸಾರ್ಟ್‍ಗಳಿವೆ. ಸಾವಿರದಿಂದ ಲಕ್ಷಾಂತರ ರೂ. ದರದ ರೆಸಾರ್ಟ್‍ಗಳಿದ್ದು, ಸಾಮರ್ಥ್ಯಕ್ಕನುಸಾರ ಬುಕ್ ಮಾಡಿಕೊಳ್ಳಬಹುದು. ಅಲ್ಲದೆ ಟ್ರಾವೆಲ್ ಏಜೆನ್ಸಿಗಳ ಮೂಲಕ ಸಹ ತೆರಳಬಹುದಾಗಿದೆ. ಸದ್ಯ ಟಾಲಿವುಡ್ ನಟಿ ಸಮಂತಾ ಅವರು ತಂಗಿರುವ ಜೋಲಿ ಮಾಲ್ಡಿವ್ಸ್ ರೆಸಾರ್ಟ್ ನಲ್ಲಿ ಒಂದು ದಿನಕ್ಕೆ ರೂಂ ಬಾಡಿಗೆ ಬರೋಬ್ಬರಿ 1.5 ಲಕ್ಷ ರೂ.ಗಳಾಗಿವೆ. ರೆಸಾರ್ಟ್‍ಗಳಲ್ಲಿ ಪ್ರೈವೆಸಿ ಹಾಗೂ ಉತ್ತಮ ವಾತಾವರಣ, ಯಾವುದೇ ಕಿರಿಕಿರಿ ಇಲ್ಲದ್ದರಿಂದ ಬಹುತೇಕ ನಟ, ನಟಿಯರು ಮಾಲ್ಡಿವ್ಸ್ ಗೆ ತೆರಳಲು ಇಷ್ಟಪಡುತ್ತಾರೆ.

 

 

ಸ್ಯಾಂಡಲ್ವುಡ್ ನ ಖ್ಯಾತ ನಟಿ ಹಿರಿಯ ನಟಿಯೂ ಆಗಿರುವ ಶೃತಿ ಅವರು ರಂಗಭೂಮಿ ಇಂದ ತಮ್ಮ ಕಲಾಸೇವೆಯನ್ನು ಆರಂಭಿಸಿ ಸಿನಿಮಾಗಳಲ್ಲಿ ದೊಡ್ಡ ಹೆಸರು ಮಾಡಿದರು.. ಅಷ್ಟಕ್ಕೇ ಸೀಮಿತವಾಗದ ಶೃತಿ ಅವರು ಕಿರುತೆರೆ ಶೋಗಳು ಜೊತೆಗೆ ರಾಜಕೀಯಕ್ಕೂ ಎಂಟ್ರಿ ಕೊಟ್ಟರು.. ಆದರೀಗ ನಟಿ ಶೃತಿ ಅವರಿಗೆ ಶಾಕಿಂಗ್ ವಿಚಾರವೊಂದು ಎದುರಾಗಿದೆ.. ಹೌದು ಶೃತಿ ಎಂದರೆ ಸಾಕು ಈಗಲೂ ತೊಂಭತ್ತರ ದಶಕದ ಮಕ್ಕಳ ತಾಯಂದಿರು ಅಕ್ಕಂದಿರು ಅಜ್ಜಿಯಂದಿರು ಎಲ್ಲರಿಗೂ ಒಂದು ರೀತಿ ಅಚ್ಚುಮೆಚ್ಚು.. ಈಗಲೂ ಅವರ ಸಿನಿಮಾಗಳನ್ನು ನೋಡಿದರೆ ಕಣ್ಣೀರು ಹಾಕೋದು ಸಹ ಉಂಟು.. ಸಿನಿಮಾದಲ್ಲಿ‌ ಕಣ್ಣೀರು ತರಿಸುವ ನಟಿಯೆಂದೇ ಜನಪ್ರಿಯರಾಗಿದ್ದ ಶೃತಿ ಅವರು ಒಂದು ಕಾಲದಲ್ಲಿ‌ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದ ಕಲಾವಿದೆ.

 

 

ಸ್ಟಾರ್ ನಟಿಯಾಗಿದ್ದ ಸಮಯದಲ್ಲಿಯೇ ಶೃತಿ ಅವರು ನಿರ್ದೇಶಕ ಮಹೇಂದರ್ ಅವರನ್ನು ಮದುವೆಯಾದರು.. ಮುದ್ದಾದ ಮಗು‌ವೂ ಆಯಿತು.. ಆದರೆ ಕೆಲ ವರ್ಷಗಳ ಬಳಿಕ ವ್ಯಯಕ್ತಿಕ ಕಾರಣಗಳಿಂದ ಇಬ್ಬರೂ ದೂರಾಗಿ ಮಗಳು ಗೌರಿ ಅವರ ಜವಾಬ್ದಾರಿಯನ್ನು ಶೃತಿ ಅವರೇ ತೆಗೆದುಕೊಂಡು ಜೀವನ ಸಾಗಿಸುತ್ತಿದ್ದರು.. ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಶೃತಿ ಅವರು ಆಗಾಗ ಸುದ್ದಿ ಆಗೋದು ಉಂಟು.. ಹೌದು ಕೆಲ ವರ್ಷಗಳ ಹಿಂದೆ ಈಗಿನ ಬಿಗ್ ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ ಅವರನ್ನು ಎರಡನೇ ವಿವಾಹವಾಗಿದ್ದ ಶೃತಿ ಅವರು ಕೆಲವೇ ದಿನಗಳಲ್ಲಿ ನ್ಯಾಯಾಲಯದಲ್ಲಿ ಇಬ್ಬರ ಸಮ್ಮತಿ ಮೇರೆಗೆ ಮದುವೆಯನ್ನು ಅಸಿಂಧು ಮಾಡಿಸಿಕೊಂಡಿದ್ದರು.

 

 

ಆ ಬಳಿಕ ಶೃತಿ ಅವರು ತಾವಾಯ್ತು ತಮ್ಮ ಮಗಳಾಯ್ತು ತಮ್ಮ ಕುಟುಂಬವಾಯ್ತು ಅಂತ ಜೀವನ ಮುನ್ನಡೆಸುತ್ತಿದ್ದಾರೆ.. ಈ ನಡುವೆ ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದ ಶೃತಿ ಅವರು ಗೆಲುವಿನ ಕಿರೀಟವನ್ನೂ ಸಹ ಮುಡಿಗೇರಿಸಿಕೊಂಡಿದ್ದರು.. ಇನ್ನು ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡ ಶೃತಿ ಅವರು ಹೆಚ್ಚಾಗಿ ರಾಜಕೀಯದಲ್ಲಿ ತೊಡಗಿಕೊಂಡರು. ಇದೀಗ ಬಿಡುವಿನ ವೇಳೆಯಲ್ಲಿ ಮಗಳು ಗೌರಿ ಜೊತೆ ಮಾಲ್ಡೀವ್ಸ್ ದ್ವೀಪದ ಪ್ರವಾಸದಲ್ಲಿದ್ದಾರೆ. ಮಗಳೊಂದಿಗೆ ಸಕತ್ ಎಂಜಾಯ್ ಮಾಡುತ್ತಿರುವ ಶೃತಿ ಅಲ್ಲಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

karnataka

Recent Posts

ಸ್ಕೂಲ್ ನಲ್ಲಿ ಇಲ್ಲ ಕಾಲೇಜಿನಲ್ಲಿ ಇದ್ದ – ಬಾಯ್ ಫ್ರೆಂಡ್ ಗುಟ್ಟು ಬಿಚ್ಚಿಟ್ಟ ಕಮಲಿ ಖ್ಯಾತಿಯ ಅಮೂಲ್ಯ ಗೌಡ..!!!

ಕಿರುತೆರೆ ಲೋಕದ ಬಹು ನಿರೀಕ್ಷಿತ ಶೋ ಬಿಗ್ ಬಾಸ್. ಹೌದು ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ ಒಂಬತ್ತು ಆರಂಭಗೊಂಡಿದೆ.…

7 hours ago

೧೦೦ ಕೋಟಿ ಕ್ಲಬ್ ಸೇರುವ ಮುನ್ನವೇ, ೫ ನೇ ದಿನಕ್ಕೆ ಕಾಂತಾರ ಚಿತ್ರದ ರಿಷಬ್ ಗೆ ಭಾರೀ ಆಘಾತ..!!

ಸ್ನೇಹಿತರ ಕಾಂತಾರ ಚಿತ್ರಕ್ಕೆ ಆರಂಭದಿಂದ ದೊಡ್ಡ ಮಟ್ಟದ ಸ್ಪಂದನೆ ಸಿಗುತ್ತಿದ್ದು, ಅದು ಅತ್ಯಧಿಕ ಪರದೆಗಳಲ್ಲಿ ಚಿತ್ರ ಪ್ರದರ್ಶನಗಳುಗೊಳ್ಳುವುದು ಅಷ್ಟೇ ಅಲ್ಲದೆ…

8 hours ago

ಮದುವೆಯಾದ ಒಂದೇ ತಿಂಗಳಿಗೆ ಪತ್ನಿಯಿಂದ ದೂರಾಗುತ್ತಿರುವ ರವೀಂದರ್.!! ಕಾರಣವೇನು ಗೊತ್ತಾ

ಕಳೆದ ಒಂದು ತಿಂಗಳಿನಿಂದ ಟ್ರೆಂಡಿಂಗ್‌ನಲ್ಲಿದ್ದ ಸ್ಟಾರ್ ಜೋಡಿ ನಿರೂಪಕಿ ಮಹಾಲಕ್ಷ್ಮಿ ಹಾಗು ನಿರ್ಮಾಪಕ ರವಿತರ ಜೋಡಿಯ ಕುರಿತು ಇದೀಗ ಹೊಸ…

8 hours ago

ಹೊಸ ಮನೆಯಲ್ಲಿ ಮಕ್ಕಳ ಜೊತೆ ಆಯುಧ ಪೂಜೆಯಲ್ಲಿ ನಟ ಶರಣ್

ನಟ ಶರಣ್ ಇವರ ನಟನೆ ನನಗೆ ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತದೆ. ಚಂದನವನದ ಅದ್ಭುತ ನಟರಲ್ಲಿ ಶರಣ್ ಸಹ ಒಬ್ಬರು. ಶರಣ್…

8 hours ago

ತಮ್ಮ ಬೈಸಿಕಲ್ ಜೊತೆ ಯಶ್ ಐಷಾರಾಮಿ ಯಂತ್ರಗಳಿಗೆ ಪೂಜೆ ಸಲ್ಲಿಸಿದ ಮಗ ಯತರ್ವ್ ಯಶ್!

ನಟ ರಾಕಿಂಗ್ ಸ್ಟಾರ್ ತಮ್ಮ ಕಾರುಗಳಿಗೆ ಪೂಜೆ ಸಲ್ಲಿಸಿದ್ದಾರೆ. ನಟ ಯಶ್ ಅವರು ಮನೆಯಲ್ಲಿ ತಮ್ಮ ಎಲ್ಲಾ ಕಾರುಗಳನ್ನು ಸಮಾನವಾಗಿ…

21 hours ago

ಗೀತಾ ಸೀರಿಯಲ್ ನಟಿ ಭವ್ಯ ಗೌಡ, ನಟ ಧನುಷ್ ಗೌಡ ಚಾಮುಂಡೇಶ್ವರಿ ಸನ್ನಿಧಿಯಲ್ಲಿ

ಭವ್ಯಾ ಗೌಡ ಮತ್ತು ಧನುಷ್ ಗೌಡ ನಡುವಿನ ವಯಸ್ಸಿನ ವ್ಯತ್ಯಾಸ ಗಮನಾರ್ಹವಾಗಿದೆ. ಭವ್ಯಾ ಗೌಡಗೆ ಕೇವಲ 23 ವರ್ಷ, ಧನುಷ್…

1 day ago