Categories: Entertainment

ಮಗನ ಸಾವಿನ ನಂತರ ಆತ್ಮಹತ್ಯೆಗೆ ಯತ್ನ ಮಾಡಿದ್ದ ನಟ ಪ್ರಕಾಶ ರೈ…!!! ಡಿಪ್ರೆಶನ್ ನಿಂದ ಹೊರ ಬರಲು ಹರಸಾಹಸ

ಪ್ರಕಾಶ್ ರಾಜ್ ಜನಪ್ರಿಯ ನಟ, ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ನಿರೂಪಕ ಮತ್ತು ರಾಜಕಾರಣಿ. ಇವರನ್ನು ಬಹುಮುಖ ಪ್ರತಿಭೆ ಎಂದೇ ಕರೆಯಲಾಗುತ್ತದೆ. ಪ್ರಕಾಶ್ ರಾಜ್ ಅವರು ಯಾವುದೊ ಒಂದು ಚಿತ್ರರಂಗ ಅಲ್ಲ. ಭಾರತದ ಬಹುತೇಕ ಚಿತ್ರರಂಗಗಳಲ್ಲೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಇವರ ಬಗ್ಗೆ ಹೇಳಲು ಕಾರಣ ಇದೆ.

 

 

ಪ್ರಕಾಶ್ ರಾಜ್ ಅವರು ಸಿನಿಮಾ ಮಾತ್ರ ಅಲ್ಲ, ತಮ್ಮ ವೈಯಕ್ತಿಕ ಜೀವನದಿಂದಲೂ ಸಾಕಷ್ಟು ಸುದ್ದಿ ಆಗಿದ್ದಾರೆ. ರಾಜಕೀಯ ಹೇಳಿಕೆಗಳ ಮೂಲಕ ಆಗಾಗ್ಗೆ ಗಮನ ಸೆಳೆಯುತ್ತಿರುತ್ತಾರೆ. ಈಗ ಪ್ರಕಾಶ್ ರಾಜ್ ಅವರ ಮಾತನಾಡಲು ಕಾರಣ ಅವರು ನೀಡಿರುವ ಹೊಸ ಹೇಳಿಕೆ. ಹೆಸರಾಂತ ನಟ ಪ್ರಕಾಶ್ ರಾಜ್‌ ಈ ಹಿಂದೆ ಆತ್ಮ ಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರಂತೆ. ಈ ಬಗ್ಗೆ ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಇಂತಹ ನಿರ್ಧಾರವನ್ನು ಅವರು ಮಾಡಿದ್ದೇಕೆ.

 

 

ನಟ ಪ್ರಕಾಶ್ ರಾಜ್ ಮತ್ತು ಮೊದಲ ಪತ್ನಿ ಲಲಿತಾ ಕುಮಾರಿ ಅವರಿಗೆ ಮೂರು ಮಂದಿ ಮಕ್ಕಳಿದ್ದರು. ಮೇಘನಾ ಮತ್ತು ಪೂಜಾ ಎಂಬ ಇಬ್ಬರು ಹೆಣ್ಣುಮಕ್ಕಳು ಮತ್ತು ಸಿದ್ದು ಎಂಬ ಒಬ್ಬ ಮಗ ಇದ್ದ. ಅದರೆ ದುರದೃಷ್ಟವಶಾತ್ ಮಗ ಸಿದ್ದು ಚಿಕ್ಕವಯಸ್ಸಿನಲ್ಲಿ ನಿಧನ ಹೊಂದಿದ. ಅದೇ ನೊವಿನಿಂದಲೆ ನಟ ಪ್ರಕಾಶ್ ರಾಜ್ ತಾವು ಕೂಡ ಆತ್ಮ ಹತ್ಯೆ ಮಾಡಿಕೊಳ್ಳ ಬೇಕು ಎಂದು ನಿರ್ಧರಿಸಿ ಬಿಟ್ಟಿದ್ದರಂತೆ. ಈ ವಿಚಾರವನ್ನು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

 

 

ಪ್ರಕಾಶ್ ರಾಜ್ ಮತ್ತು ಲಲಿತಾ ಕುಮಾರಿ ಪುತ್ರ ಸಿದ್ದು 5 ವರ್ಷದವನಿದ್ದಾಗ, ಫಾರ್ಮ್ ಹೌಸ್‌ ಕಟ್ಟಡದಿಂದ ಆಕಸ್ಮಿಕವಾಗಿ ಆಯ ತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ. ಇದು ನಡೆದಿದ್ದು 2004ರಲ್ಲಿ. ಆಗಲೆ ಪ್ರಕಾಶ್ ರಾಜ್ ತಾವು ಕೂಡ ಈ ಲೋಕ ಬಿಟ್ಟು ಹೂಗಬೇಕು ಎಂದು ನಿರ್ಧಾರಿಸಿ ಆತ್ಮ ಹತ್ಯಗೆ ಮುಂದಾಗಿದ್ದರಂತೆ. ಆದರೆ ತಮ್ಮ ನಿರ್ಧಾರವನ್ನು ಬೇರೆ ಕಾರಣಕ್ಕೆ ಬದಲಿಸಿಕೊಂಡರು.

 

 

ಇನ್ನು ನಟ ಪ್ರಕಾಶ್ ರಾಜ್‌ ತಾವು ಆತ್ಮ ಹತ್ಯೆ ಮಾಡುಕೊಳ್ಳುವ ನಿರ್ಧಾರವನ್ನು ಕೈ ಬಿಡಲು ಕಾರಣ ಜನಸೇವೆ ಎಂದು ಹೇಳಿಕೊಂಡಿದ್ದಾರೆ. ಕಷ್ಟದಲ್ಲಿ ಇರುವ ಜನರಿಗೆ ಸಹಾಯ ಮಾಡಲೆಂದು ನಟ ಪ್ರಕಾಶ್ ರಾಜ್ ತಮ್ಮ ಆತ್ಮ ಹತ್ಯೆ ನಿರ್ಧಾರ ಕೈ ಬಿಟ್ಟು, ಗ್ರಾಮಗಳನ್ನು ದತ್ತು ಪಡೆದು ಜನರಿಗೆ ಸಹಾಯ ಹಸ್ತ ಚಾಕಿದ್ದಾರೆ. ಪ್ರಕಾಶ್ ರಾಜ್ ಸಿನಿಮಾ, ರಾಜಕೀಯ ಬಿಟ್ಟು ತಮ್ಮ ಹಲವು ಸಮಾಜಮುಖಿ ಕಾರ್ಯಗಳ ಮೂಲ ಗುರುತಿಸಿಕೊಂಡಿದ್ದಾರೆ.

 

 

ಪ್ರಕಾಶ್ ರಾಜ್ ಅವರು ನಟಿ ಲಲಿತಾ ಕುಮಾರಿ ಅವರನ್ನು 1994 ರಲ್ಲಿ ವಿವಾಹವಾದರು. ನಂತರ ಅವರ ಪುತ್ರ ನಿಧನ ಹೊಂದಿದ ಬಳಿಕಾ 2009 ರಲ್ಲಿ ವಿಚ್ಛೇದನ ಪಡೆದು ಮೊದಲ ಪತ್ನಿಯಿಂದ ದೂರಾಗಿದ್ದಾರೆ. 24 ಆಗಸ್ಟ್ 2010 ರಂದು ಪ್ರಕಾಶ್ ರಾಜ್ ನೃತ್ಯ ಸಂಯೋಜಕಿ ಪೋನಿ ವರ್ಮಾ ಅವರೊಂದಿಗೆ ವಿವಾಹ ಆಗಿದ್ದಾರೆ. ಈ ದಂಪತಿಗೆ 2015ರಲ್ಲಿ ಗಂಡು ಮಗು ಜನಿಸಿದೆ. ಮಗನಿಗೆ ವೇದಾಂತ್ ಎಂದು ನಾಮಕರಣ ಮಾಡಿದ್ದಾರೆ.

karnataka

Recent Posts

ಸ್ಕೂಲ್ ನಲ್ಲಿ ಇಲ್ಲ ಕಾಲೇಜಿನಲ್ಲಿ ಇದ್ದ – ಬಾಯ್ ಫ್ರೆಂಡ್ ಗುಟ್ಟು ಬಿಚ್ಚಿಟ್ಟ ಕಮಲಿ ಖ್ಯಾತಿಯ ಅಮೂಲ್ಯ ಗೌಡ..!!!

ಕಿರುತೆರೆ ಲೋಕದ ಬಹು ನಿರೀಕ್ಷಿತ ಶೋ ಬಿಗ್ ಬಾಸ್. ಹೌದು ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ ಒಂಬತ್ತು ಆರಂಭಗೊಂಡಿದೆ.…

2 hours ago

೧೦೦ ಕೋಟಿ ಕ್ಲಬ್ ಸೇರುವ ಮುನ್ನವೇ, ೫ ನೇ ದಿನಕ್ಕೆ ಕಾಂತಾರ ಚಿತ್ರದ ರಿಷಬ್ ಗೆ ಭಾರೀ ಆಘಾತ..!!

ಸ್ನೇಹಿತರ ಕಾಂತಾರ ಚಿತ್ರಕ್ಕೆ ಆರಂಭದಿಂದ ದೊಡ್ಡ ಮಟ್ಟದ ಸ್ಪಂದನೆ ಸಿಗುತ್ತಿದ್ದು, ಅದು ಅತ್ಯಧಿಕ ಪರದೆಗಳಲ್ಲಿ ಚಿತ್ರ ಪ್ರದರ್ಶನಗಳುಗೊಳ್ಳುವುದು ಅಷ್ಟೇ ಅಲ್ಲದೆ…

3 hours ago

ಮದುವೆಯಾದ ಒಂದೇ ತಿಂಗಳಿಗೆ ಪತ್ನಿಯಿಂದ ದೂರಾಗುತ್ತಿರುವ ರವೀಂದರ್.!! ಕಾರಣವೇನು ಗೊತ್ತಾ

ಕಳೆದ ಒಂದು ತಿಂಗಳಿನಿಂದ ಟ್ರೆಂಡಿಂಗ್‌ನಲ್ಲಿದ್ದ ಸ್ಟಾರ್ ಜೋಡಿ ನಿರೂಪಕಿ ಮಹಾಲಕ್ಷ್ಮಿ ಹಾಗು ನಿರ್ಮಾಪಕ ರವಿತರ ಜೋಡಿಯ ಕುರಿತು ಇದೀಗ ಹೊಸ…

3 hours ago

ಹೊಸ ಮನೆಯಲ್ಲಿ ಮಕ್ಕಳ ಜೊತೆ ಆಯುಧ ಪೂಜೆಯಲ್ಲಿ ನಟ ಶರಣ್

ನಟ ಶರಣ್ ಇವರ ನಟನೆ ನನಗೆ ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತದೆ. ಚಂದನವನದ ಅದ್ಭುತ ನಟರಲ್ಲಿ ಶರಣ್ ಸಹ ಒಬ್ಬರು. ಶರಣ್…

3 hours ago

ತಮ್ಮ ಬೈಸಿಕಲ್ ಜೊತೆ ಯಶ್ ಐಷಾರಾಮಿ ಯಂತ್ರಗಳಿಗೆ ಪೂಜೆ ಸಲ್ಲಿಸಿದ ಮಗ ಯತರ್ವ್ ಯಶ್!

ನಟ ರಾಕಿಂಗ್ ಸ್ಟಾರ್ ತಮ್ಮ ಕಾರುಗಳಿಗೆ ಪೂಜೆ ಸಲ್ಲಿಸಿದ್ದಾರೆ. ನಟ ಯಶ್ ಅವರು ಮನೆಯಲ್ಲಿ ತಮ್ಮ ಎಲ್ಲಾ ಕಾರುಗಳನ್ನು ಸಮಾನವಾಗಿ…

17 hours ago

ಗೀತಾ ಸೀರಿಯಲ್ ನಟಿ ಭವ್ಯ ಗೌಡ, ನಟ ಧನುಷ್ ಗೌಡ ಚಾಮುಂಡೇಶ್ವರಿ ಸನ್ನಿಧಿಯಲ್ಲಿ

ಭವ್ಯಾ ಗೌಡ ಮತ್ತು ಧನುಷ್ ಗೌಡ ನಡುವಿನ ವಯಸ್ಸಿನ ವ್ಯತ್ಯಾಸ ಗಮನಾರ್ಹವಾಗಿದೆ. ಭವ್ಯಾ ಗೌಡಗೆ ಕೇವಲ 23 ವರ್ಷ, ಧನುಷ್…

20 hours ago