ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಕಾಮಿಡಿ ಶೋ ಗಿಚ್ಚಿ ಗಿಲಿಗಿಲಿ ಗ್ರ್ಯಾಂಡ್ ಫಿನಾಲೆ ಸೆಪ್ಟೆಂಬರ್ 17 ಮತ್ತು 18ರಂದು ನಡೆದಿದೆ. ಫಿನಾಲೆಯಲ್ಲಿ ಒಟ್ಟು ನಾಲ್ವರು ಪ್ರಶಸ್ತಿ ಗೆದಿದ್ದಾರೆ. ಎರಡು ಆಕ್ಟರ್ ವಿಭಾಗದಲ್ಲಿ ಎರಡು ನಾನ್ ಆಕ್ಟರ್ ವಿಭಾಗದಲ್ಲಿ.

 

 

ಸೃಜನ್ ಲೋಕೇಶ್ ಶ್ರುತಿ ಮತ್ತು ಸಾಧು ಕೋಕಿಲ್ ತೀರ್ಪುಗಾರಿಕೆಯಲ್ಲಿ, ನಿರಂಜನ್ ದೇಶಪಾಂಡೆ ನಿರೂಪಣೆಯಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮ ಆರಂಭದಿಂದಲ್ಲೂ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಫಿನಾಲೆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಸ್ಯಾಂಡಲ್‌ವುಡ್‌ ಕನಸಿನ ರಾಣಿ ಮಾಲಾಶ್ರೀ ಆಗಮಿಸಿದ್ದರು.

 

 

ಗಿಚ್ಚಿ ಗಿಲಿಗಿಲಿ ಸೀಸನ್ ರನ್ನರ್ ಆಗಿ ನಾನ ಅಕ್ಬರ್ – ನಿವೇದಿತಾ ಗೌಡ ಗೆದ್ದು ಬೀಗಿದ್ದಾರೆ. ಮೊದಲ ಸ್ಥಾನ ಪಡೆದವರಿಗೆ ವಿನ್ನರ್ ಟ್ರೋಫಿ ಮತ್ತು 5 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ. ಎರಡನೇ ಸ್ಥಾನ ಪಡೆದವರಿಗೆ ಟ್ರೋಫಿ ಮತ್ತು 3 ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ.

 

 

‘ಸಿಕ್ಕಾಪಟ್ಟೆ ಖುಷಿಯಾಗುತ್ತಿದೆ. ಸತ್ಯವಾಗಲೂ ಇದು ನನ್ನ ಗೆಲುವು ಮಾತ್ರವಲ್ಲ ಇಲ್ಲಿ ಇರುವ 20 ಜನರಿಗೂ ಸೇರಬೇಕು. ಡೈರೆಕ್ಟರ್‌ಗಳು, ಸ್ಕ್ರಿಪ್ಟ್‌ ರೈಟರ್‌ಗಳಿಗೆ ಧನ್ಯವಾದಗಳು. ತೀರ್ಪುಗಾರರಿಗೂ ಧನ್ಯವಾದಗಳು’ ಎಂದು ಶಿವು ತಿಳಿಸಿದ್ದಾರೆ.

 

 

ಇನ್ನು ವಂಶಿಕಾ ‘ನನಗೆ ಗಿಚ್ಚಿ ಗಿಲಿಗಿಲಿ ಅಂದ್ರೆ ಬಹಳ ಇಷ್ಟ ನನಗೆ ಇಲ್ಲಿ ತುಂಬಾ ಫ್ರೆಂಡ್ಸ್ ಸಿಕ್ಕಿದ್ದಾರೆ. ಅಮ್ಮ ಐ ಲವ್ ಯು, ಅಪ್ಪ ಐ ಲವ್ ಯು, ಸೃಜನ್ ಮಾಮ ಲವ್ ಯು 7 ಮತ್ತು ಅಣ್ಣಯ್ಯ ಲವ್ ಯು 100’ ಎಂದಿದ್ದಾರೆ. ಇಬ್ಬರು ವಿನ್ನರ್‌ಗಳು ಟ್ರೋಫಿ ಹಿದಿದುಕೊಂಡು ವಾಕ್ ಮಾಡಿ ಆನಂತರ ಅಪಟ್ಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿ ಆಗಿರುವ ಕಾರಣ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಹಾಡನ್ನು ಒಟ್ಟಿಗೆ ಹಾಡಿದ್ದಾರೆ.

Leave a comment

Your email address will not be published.