ಕನ್ನಡ ಚಿತ್ರರಂಗದ ಬೇಡಿಕೆ ಹಾಸ್ಯ ಹಾಗೂ ಸಹ ನಟರಲ್ಲಿ ರವಿಶಂಕರ್ ಗೌಡ ಅವರು ಕೂಡ ಒಬ್ಬರು. ಸಿಲ್ಲಿ ಲಲ್ಲಿ ಎನ್ನುವ ಧಾರಾವಾಹಿಯಲ್ಲಿ ಡಾಕ್ಟರ್ ವಿಠ್ಠಲ್ ರಾವ್ ಎನ್ನುವ ಪಾತ್ರದ ಮೂಲಕ ಮನೆಮಾತಾದವರು. ಕೆಲವರಿಗೆ ರವಿಶಂಕರ್ ಗೌಡ ಎಂದರೆ ತಕ್ಷಣ ಗೊತ್ತಾಗುವುದಿಲ್ಲ ಬದಲಿಗೆ ಸಿಲ್ಲಿ ಲಲ್ಲಿಯ ವಿಠ್ಠಲರಾವ್ ಎಂದರೆ ತಕ್ಷಣ ಇವರನ್ನು ಗುರುತು ಹಿಡಿಯುತ್ತಾರೆ. ಅಷ್ಟರಮಟ್ಟಿಗೆ ಅವರ ಪಾತ್ರ ಅವರಿಗೆ ಹೆಸರನ್ನು ತಂದುಕೊಟ್ಟಿತ್ತು ಅನೇಕ ಜನರು ಅವರ ಪಾತ್ರವನ್ನು ಮೆಚ್ಚಿಕೊಂಡಿದ್ದರು.

 

 

ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿ ಇರುವಂತಹ ನಟ ಇವರು. ಕಿರುತೆರೆಯ ನಂತರ ಸಿನಿಮಾಗಳಲ್ಲಿ ನಟನೆ ಮಾಡುವ ಅವಕಾಶ ಇವರನ್ನು ಹುಡುಕಿಕೊಂಡು ಬರುತ್ತವೆ ಅನೇಕ ಸಿನಿಮಾಗಳಲ್ಲಿ ಇವರು ನಟಿಸುತ್ತಾರೆ. ಇವರು ನಟನೆಯ ಜೊತೆಗೆ ಉತ್ತಮ ಗಾಯಕರು ಕೂಡ ಇವರ ಪತ್ನಿ ಸಂಗೀತ ಕೂಡ ಖ್ಯಾತ ಗಾಯಕಿ ಮಂಜುಳಾ ಗುರುರಾಜ್ ಅವರ ಮಗಳು. ರವಿಶಂಕರ್ ಹಾಗೂ ಸಂಗೀತ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

 

 

ಧಾರಾವಾಹಿಯ ಮೂಲಕ ಮನೆ ಮಾತಾಗಿದ್ದ ರವಿಶಂಕರ್ ಗೌಡ ಅವರು ಎರಡು ಸಾವಿರದ ಎಂಟರಲ್ಲಿ ತೆರೆಕಂಡ ಪಯಣ ಚಿತ್ರದ ಮೂಲಕ ನಾಯಕ ನಟನಾಗಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಎರಡು ಸಾವಿರದ ಹನ್ನೆರಡರಲ್ಲಿ ತೆರೆಕಂಡ ಸ್ನೇಹಿತರು ಸಿನಿಮಾದಲ್ಲಿ ನಟಿಸುತ್ತಾರೆ ನಂತರ ಎರಡು ಸಾವಿರದ ಹದಿನಾರರಲ್ಲಿ ತೆರೆಕಂಡ ‘ಜೈ ಲಲಿತಾ’ ಸಿನಿಮಾದಲ್ಲಿಯು ಕೂಡ ಅಭಿನಯಿಸಿದ್ದರು.

 

 

ನಂತರ ಇನ್ನುಅನೇಕ ಸಿನಿಮಾಗಳಲ್ಲಿ ಸಹನಟನಾಗಿ ನಟನೆ ಮಾಡುತ್ತಾರೆ. ಪುನೀತ್ ರಾಜಕುಮಾರ್ ನಟನೆಯ ಯುವರತ್ನ ಸಿನಿಮಾದಲ್ಲಿಯೂ ಕೂಡ ಕಾಣಿಸಿಕೊಂಡಿದ್ದಾರೆ ಜೊತೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ತ್ರಿಬ್ಬಲ್ ರೈಡಿಂಗ್ ಸಿನಿಮಾದಲ್ಲಿ ಅವರ ಜೊತೆ ಕಾಣಿಸಿ ಕೊಂಡಿದ್ದಾರೆ. ಜೊತೆಗೆ ಗೀತಾ ಗಿಮಿಕ್ 99 ಮನೆ ಮಾರಾಟಕ್ಕಿದೆ ಒಡೆಯ ಇನ್ನು ಕೆಲವು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಮನೆ ಮಾರಾಟಕ್ಕಿದೆ ಸಿನಿಮಾ ಒಳ್ಳೆಯ ರೀತಿಯಲ್ಲಿ ಹೆಸರನ್ನು ಗಳಿಸಿದ್ದು ಇವರಿಗೂ ಕೂಡ ಹೆಸರನ್ನು ತಂದುಕೊಟ್ಟಿತು.

 

 

ಸಿನಿಮಾರಂಗದಲ್ಲಿ ಸದಾ ಸಕ್ರಿಯರಾಗಿರುವಂತಹ ರವಿಶಂಕರ್ ಗೌಡ ಅವರು ಇದೀಗ ತಮ್ಮ ಕನಸಿನ ಮನೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ. ಇತ್ತೀಚೆಗೆ ಆ ಮನೆಯ ಗ್ರಹಪ್ರವೇಶವನ್ನೂ ಕೂಡ ಅದ್ದೂರಿಯಾಗಿ ಮಾಡಿದ್ದಾರೆ. ಅವರ ಕನಸಿನ ಮನೆಯನ್ನು ತುಂಬಾ ಸುಂದರವಾಗಿ ನಿರ್ಮಿಸಿದ್ದು ಅತ್ಯಾಧುನಿಕ ರೀತಿಯಲ್ಲಿ ಮನೆಯನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಸಾಂಪ್ರದಾಯಕವಾಗಿ ಮನೆಯ ಗ್ರಹಪ್ರವೇಶವನ್ನು ಮಾಡಿದ್ದು ಚಿತ್ರರಂಗದ ಅನೇಕ ಗಣ್ಯರು ಇವರ ಮನೆಗೆ ಭೇಟಿ ನೀಡಿ ಅವರಿಗೆ ಶುಭ ಹಾರೈಸಿದ್ದಾರೆ.

 

 

ನವರಸ ನಾಯಕ ಜಗ್ಗೇಶ್ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರ ಕುಟುಂಬ ಶಾಲಿನಿ ಅವರು ಇನ್ನೂ ಅನೇಕರು ಇವರ ಮನೆಗೆ ಭೇಟಿ ನೀಡಿ ಅವರಿಗೆ ಶುಭವನ್ನು ಹಾರೈಸಿದ್ದಾರೆ. ಇವರ ಕುಟುಂಬ ಯಾವಾಗಲೂ ಇದೇ ರೀತಿ ಖುಷಿಯಿಂದ ಸಂತೋಷದಿಂದ ಇರಲಿ ಅವರಿಗೆ ಕನ್ನಡ ಸಿನಿಮಾರಂಗದಲ್ಲಿ ಇನ್ನೂ ಅನೇಕ ಅವಕಾಶಗಳು ಸಿಗಲಿ ಅವರ ವೃತ್ತಿ ಜೀವನ ಮತ್ತು ಸಾಂಸಾರಿಕ ಜೀವನ ಎರಡು ಕೂಡ ಸುಖಕರವಾಗಿರಲಿ ಎಂದು ನಾವೆಲ್ಲರೂ ಶುಭ ಹಾರೈಸೋಣ.

 

Leave a comment

Your email address will not be published.