Categories: Entertainment

“ಹಾಯ್ ಗಂಡ ಹೇಗಿದೀರ, ಹೇಳು ಹೆಂಡತಿ ನಾನು ಆರಾಮ್ ನೀ ಹೇಗಿದ್ದೀಯಾ”-ನಟಿ ಕೊಟ್ಟ ಸಲುಗೆಯನ್ನು ರವಿಯವರು

‘ಮಗಳು ಜಾನಕಿ’, ‘ಮುಕ್ತ ಮುಕ್ತ’, ‘ಮಿಂಚು’, ‘ಅರ್ಧಾಂಗಿ’ ಮುಂತಾದ ಧಾರಾವಾಹಿಗಳ ನಟ ರವಿ ಪ್ರಸಾದ್ ಮಂಡ್ಯ ( Ravi Prasad Mandya ) ಅವರು ಜಾಂಡೀಸ್ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ. ಸೆಪ್ಟೆಂಬರ್ 14ರಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾದ ರವಿ ಬಗ್ಗೆ ಸಹನಟಿ ಸೃಷ್ಟಿ ಶೃಂಗೇರಿ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.

 

 

ನೆನ್ನೆ ಇದೇ ಸಮಯದಲ್ಲಿ ಫೇಸ್‌ಬುಕ್ ನೋಡೋಕೆ ಕೂತ ನನಗೆ ಕೆಟ್ಟ ಸುದ್ದಿ ಕಾದಿತ್ತು.ತಕ್ಷಣ ಇರೋ ಕಾಂಟ್ಯಾಕ್ಟ್‌ಗೆಲ್ಲಾ ಫೋನ್ ಮಾಡಿ ಆಯ್ತು. ಒಬ್ಬರು ಅಂದ್ರು ಚೇತರಿಸಿಕೊಳ್ತಿದ್ದಾರೆ ಅಂತ. ಅಷ್ಟರಲ್ಲಿ ಇನ್ನೊಬ್ಬರು ಇಲ್ಲ ಮುಗೀತು ಅಂದ್ರು. ಎಲ್ಲಿ,ಏನು, ಹೇಗಾಯ್ತು ಅಂತ ತಿಳಿಯದ ನನಗೆ ಸಹಾಯ ಮಾಡಿದ್ದು ಗಿರಿ. ತಕ್ಷಣ ನಟಿ ನಂದಿನಿ ಗೌಡ ಅವರಿಗೆ ಕಾಲ್ ಮಾಡಿದೆ. ವಿಷಯ ತಿಳಿಯಿತು. ನಿಮ್ಮಿಬರಿಗೂ ತುಂಬಾ ಧನ್ಯವಾದ. ಕೊನೆ ಬಾರಿ ನೋಡು ಅವಕಾಶ ಸಿಕ್ಕಿತು.

 

 

ಮನೆಯಿಂದ ಆಸ್ಪತ್ರೆ ಹೋಗಿ ಬರುವರೆಗೂ ಕಣ್ಣಿರು ಬರುತ್ತಾ ಇತ್ತು.ಈ ಕ್ಷಣದವರೆಗೂ ಮನಸ್ಸು ಸರಿ ಇಲ್ಲ. ಬಂದು ಅಲ್ಲ ಬಳಗ ಅಲ್ಲ ಆದ್ರೂ ಯಾಕೆ ಹೀಗೆ ಗೊತ್ತಿಲ್ಲ. ಫೇಸ್‌ಬುಕ್‌ ನೋಡೋಕೆ ಮನಸಾಗ್ತಿಲ್ಲ . ನಿಮ್ಮದೇ ಫೋಟೋ, ನಿಮ್ಮದೇ ವಿಷಯ. ಮತ್ತೆ ನಿಮ್ಮ ಒಟ್ಟಿಗೆ ನಟಿಸಬೇಕು ಅನ್ನೋ ನಮ್ಮಿಬ್ಬರ ಮಾತು ಮಾತಾಗೇ ಉಳಿತು. ಅವರನ್ನು ಇಷ್ಟ ಪಡುವ ಅನೇಕರಲ್ಲಿ ನಾನು ಒಬ್ಬಳು. ಅವರ ಧಾರಾವಾಹಿ ನೋಡಿ ಬೆಳೆದ ನನಗೆ ಮುಂದೆ ಅವರ ಜೊತೆಗೆ ಅಭಿನಯ ಮಾಡೋ ಅವಕಾಶ ಸಿಗತ್ತೆ ಅಂತ ಅಂದ್ಕೊಂಡಿರ್ಲಿಲ್ಲ. ಅವಕಾಶ ಕೊಟ್ಟ ಹರಿ ಸರ್‌ಗೆ & ವಿನೋದ್ ಧೊಂಡಾಳೆ ಸರ್‌ಗೆ ಧನ್ಯವಾದಗಳು.

 

 

ಗಂಡ ಹೆಂಡತಿ ಪಾತ್ರ ನಮ್ಮದು. ಎಷ್ಟು ಬೈದ್ರು ಬೈಸ್ಕೋಳೊ ಹೆಂಡತಿ ನಾನು. ಇವತ್ತಿಗೂ ನೆನಪಿದೆ ಒಂದು ದೃಶ್ಯದಲ್ಲಿ ಬೈತಿದಾರೆ ಅವರ ಆರ್ಭಟಕ್ಕೆ ಸುಮ್ಮನೆ ಇದೀನಿ ಮುಂದಿನ ನನ್ನ ಸಂಭಾಷಣೆ ಹೇಳದೇನೇ. Cut ಅಂದಿದ್ದೂ ಗೊತ್ತಿಲ್ಲ. ಆಗ ಅವರೇ ನನ್ನ ಮುಟ್ಟಿ ಏನಾಯ್ತು ಅಂದ್ರು. ನಿಮ್ಮ ಅಭಿನಯ ನೋಡಿ ಕಳೆದೋದೆ ಅಂದೆ. ಅ ಕ್ಷಣದವರೆಗೂ ಹುಲಿಯಂತಿದ್ದೋರು ಒಮ್ಮೆ ನಕ್ಕು ಬಿಟ್ರು. ಒಳ್ಳೆ ಹೆಂಡತಿ ಅಂದ್ರು.

 

 

ಅಲ್ಲಿಂದ ನಾವು ಒಬ್ಬರಿಗೊಬ್ಬರು ಹಾಗೆ ಕರೀತಿದ್ವಿ. ನಾನು break ತಗೊಂಡ್ಮೇಲು ಆಗಾಗ ಹಬ್ಬಕ್ಕೆ, birthday ಗೆ wish ಮಾಡ್ಕೋತಿದ್ವಿ. ನಮ್ಮ ಮಾತು ಶುರು ಆಗ್ತಾ ಇದಿದ್ದೇ “hi ಗಂಡ ಹೇಗಿದೀರ, ಹೇಳು ಹೆಂಡತಿ ನಾನು ಆರಾಮ್ ನೀ ಹೇಗಿದ್ದೀಯಾ” ಅಂತ. ಒಂದು ದಿನನೂ ಈ ಸಲುಗೇನ ದುರುಪಯೋಗ ಮಾಡ್ಕೊಂಡು ಮಾತಾಡಿದೋರಲ್ಲ. ಅಭಿನಯಕ್ಕೆ ಮಾತ್ರ ಅಲ್ಲ ವ್ಯಕ್ತಿತ್ವಕ್ಕೂ ಅಭಿಮಾನಿ ನಾನು.

 

 

ಸ್ವಯಂಕೃತ ಅಂದ್ರು, ವಿಧಿ ಅಂದ್ರು,ಆಯಸ್ಸು ಮುಗಿದಿತ್ತು ಅಂದ್ರು.ಕಾರಣ ಏನೇ ಆದ್ರೂ ವಾಸ್ತವ ಸತ್ಯ. ಚಿತ್ರರಂಗ, ಕುಟುಂಬ, ಸ್ನೇಹಿತರು ಎಲ್ಲಾನೂ ಬಿಟ್ಟೋದದ್ದು ಸತ್ಯ. ರಾತ್ರಿ ಮಲಗಿದ್ರೆ ಬೆಳ್ಗೇನ ಎಚ್ಚರ ಆಗೋ ನನಗೆ ನೆನ್ನೆ 3 ಬಾರಿ ಎಚ್ಚರ. ಕಣ್ಣುಬಿಟ್ಟಾಗೆಲ್ಲ ಇವರ ನಗು ಮುಖ, ಹಿಂದೆನೇ ಮನೆಯವರ ಅಳು.ಹೆಂಡತಿ ಮಗೂಗೆ ವಯಸ್ಸಾದ ತಂದೆ ತಾಯಿಗೆ ಇದನ್ನು ಸಹಿಸೊ ಶಕ್ತಿ ದೇವರು ಕೊಡ್ಲಿ ಎಂದಿದ್ದಾರೆ.

karnataka

Recent Posts

ಸ್ಕೂಲ್ ನಲ್ಲಿ ಇಲ್ಲ ಕಾಲೇಜಿನಲ್ಲಿ ಇದ್ದ – ಬಾಯ್ ಫ್ರೆಂಡ್ ಗುಟ್ಟು ಬಿಚ್ಚಿಟ್ಟ ಕಮಲಿ ಖ್ಯಾತಿಯ ಅಮೂಲ್ಯ ಗೌಡ..!!!

ಕಿರುತೆರೆ ಲೋಕದ ಬಹು ನಿರೀಕ್ಷಿತ ಶೋ ಬಿಗ್ ಬಾಸ್. ಹೌದು ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ ಒಂಬತ್ತು ಆರಂಭಗೊಂಡಿದೆ.…

2 hours ago

೧೦೦ ಕೋಟಿ ಕ್ಲಬ್ ಸೇರುವ ಮುನ್ನವೇ, ೫ ನೇ ದಿನಕ್ಕೆ ಕಾಂತಾರ ಚಿತ್ರದ ರಿಷಬ್ ಗೆ ಭಾರೀ ಆಘಾತ..!!

ಸ್ನೇಹಿತರ ಕಾಂತಾರ ಚಿತ್ರಕ್ಕೆ ಆರಂಭದಿಂದ ದೊಡ್ಡ ಮಟ್ಟದ ಸ್ಪಂದನೆ ಸಿಗುತ್ತಿದ್ದು, ಅದು ಅತ್ಯಧಿಕ ಪರದೆಗಳಲ್ಲಿ ಚಿತ್ರ ಪ್ರದರ್ಶನಗಳುಗೊಳ್ಳುವುದು ಅಷ್ಟೇ ಅಲ್ಲದೆ…

3 hours ago

ಮದುವೆಯಾದ ಒಂದೇ ತಿಂಗಳಿಗೆ ಪತ್ನಿಯಿಂದ ದೂರಾಗುತ್ತಿರುವ ರವೀಂದರ್.!! ಕಾರಣವೇನು ಗೊತ್ತಾ

ಕಳೆದ ಒಂದು ತಿಂಗಳಿನಿಂದ ಟ್ರೆಂಡಿಂಗ್‌ನಲ್ಲಿದ್ದ ಸ್ಟಾರ್ ಜೋಡಿ ನಿರೂಪಕಿ ಮಹಾಲಕ್ಷ್ಮಿ ಹಾಗು ನಿರ್ಮಾಪಕ ರವಿತರ ಜೋಡಿಯ ಕುರಿತು ಇದೀಗ ಹೊಸ…

3 hours ago

ಹೊಸ ಮನೆಯಲ್ಲಿ ಮಕ್ಕಳ ಜೊತೆ ಆಯುಧ ಪೂಜೆಯಲ್ಲಿ ನಟ ಶರಣ್

ನಟ ಶರಣ್ ಇವರ ನಟನೆ ನನಗೆ ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತದೆ. ಚಂದನವನದ ಅದ್ಭುತ ನಟರಲ್ಲಿ ಶರಣ್ ಸಹ ಒಬ್ಬರು. ಶರಣ್…

3 hours ago

ತಮ್ಮ ಬೈಸಿಕಲ್ ಜೊತೆ ಯಶ್ ಐಷಾರಾಮಿ ಯಂತ್ರಗಳಿಗೆ ಪೂಜೆ ಸಲ್ಲಿಸಿದ ಮಗ ಯತರ್ವ್ ಯಶ್!

ನಟ ರಾಕಿಂಗ್ ಸ್ಟಾರ್ ತಮ್ಮ ಕಾರುಗಳಿಗೆ ಪೂಜೆ ಸಲ್ಲಿಸಿದ್ದಾರೆ. ನಟ ಯಶ್ ಅವರು ಮನೆಯಲ್ಲಿ ತಮ್ಮ ಎಲ್ಲಾ ಕಾರುಗಳನ್ನು ಸಮಾನವಾಗಿ…

17 hours ago

ಗೀತಾ ಸೀರಿಯಲ್ ನಟಿ ಭವ್ಯ ಗೌಡ, ನಟ ಧನುಷ್ ಗೌಡ ಚಾಮುಂಡೇಶ್ವರಿ ಸನ್ನಿಧಿಯಲ್ಲಿ

ಭವ್ಯಾ ಗೌಡ ಮತ್ತು ಧನುಷ್ ಗೌಡ ನಡುವಿನ ವಯಸ್ಸಿನ ವ್ಯತ್ಯಾಸ ಗಮನಾರ್ಹವಾಗಿದೆ. ಭವ್ಯಾ ಗೌಡಗೆ ಕೇವಲ 23 ವರ್ಷ, ಧನುಷ್…

20 hours ago