ಹೈದರಾಬಾದ್‌ನಲ್ಲಿ ಶ್ರೀಲೀಲಾ ತೆಲುಗು ಸಿನಿಮಾ ಚಿತ್ರೀಕರಣ ಮಾಡುತ್ತಿದ್ದಾರೆ. ಸುಮಾರು 30 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು ಉಳಿದುಕೊಳ್ಳಲು 7 ಸ್ಟಾರ್ ಹೋಟೆಲ್ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 7 ಸ್ಟಾರ್ ಹೋಟೆಲ್‌ನ ರೂಮ್‌ ಬೆಲೆ ದಿನಕ್ಕೆ 22 ಸಾವಿರವಂತೆ. ಟ್ಯಾಕ್ಸ್‌ ಎಲ್ಲವೂ ಸೇರಿದರೆ 30 ದಿನಕ್ಕೆ 6 ಲಕ್ಷಕ್ಕೂ ಹೆಚ್ಚು ಹಣವಾಗುತ್ತದೆ. ಈ ಸಂಪೂರ್ಣ ಚರ್ಚನ್ನು ನಿರ್ಮಾಪಕರೇ ಮಾಡಬೇಕಿರುವ ಕಷ್ಟ ಆಗುತ್ತದೆ ಎನ್ನಲಾಗಿದೆ. ಈಗಷ್ಟೆ ಬೆಳೆಯುತ್ತಿರುವ ನಟಿ ನಿರ್ಮಾಣ ಸಂಸ್ಥೆಗೆ ಇಷ್ಟೊಂದು ನಷ್ಟ ಮಾಡಿದರೆ ಭವಿಷ್ಯ ಹೇಗೆ ಎಂದು ಪ್ರಶ್ನೆ ಮಾಡಲಾಗಿದೆ.

 

 

View this post on Instagram

 

A post shared by Sreeleela (@sreeleela14)

 

ನಿರ್ದೇಶಕ ತ್ರಿವಿಕ್ರಮ್ ಪತ್ನಿ ಸಾಯಿ ಸೌಜನ್ಯ ಮತ್ತು ಮಹೇಶ್ ಬಾಬು ಎಂಟರ್‌ಟೈನ್ಮೆಂಟ್ ಜಂಟಿಯಾಗಿ ಸಿನಿಮಾ ಮಾಡುತ್ತಿರುವ ಸಿನಿಮಾ ಇದಾಗಿದ್ದು ವೈಷ್ಣವ್ ತೇಜ್ ನಾಯಕನಾಗಿ ಅಭಿನಯಿಸಲಿದ್ದಾರೆ. ಪ್ರಡ್ಯೂಸರ್ಸ್‌ ಗಿಲ್ಡ್‌ ಜೊತೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಹೀರೋಯಿನ್‌ಗಳಿಗೆ ನೀಡಲಾಗುವ ಸಂಭಾವನೆಯಲ್ಲಿಯೇ ಅವರು ಉಳಿದುಕೊಳ್ಳುವ ವೆಚ್ಚವನ್ನು ಭರಿಸಬೇಕು. ಇಷ್ಟೆಲ್ಲಾ ಇದ್ದರೂ ನಿರ್ಮಾಪಕರು ಸ್ಪೆಷಲ್ ಟ್ರೀಟ್ಮೆಂಟ್ ಕೊಡುತ್ತಿರುವುದಕ್ಕೆ ಹಲವರು ವಾದ ಮಾಡುತ್ತಿದ್ದಾರೆ.

 

 

ನಾಯಕ ವೈಷ್ಣವ್ ತೇಜ್ ಹಿಟ್ ಸಿನಿಮಾಗಳನ್ನು ನೀಡಿಲ್ಲ ಆದರೂ ಅವರಿಗೆ 3 ರಿಂದ 4 ಕೋಟಿ ರೂಪಾಯಿ ಸಂಭಾನೆ ನೀಡಲಾಗುತ್ತಿದೆ ಹೀಗಿರುವಾಗ ಹಿಟ್ ಸಿನಿಮಾ , ಸ್ಟಾರ್ ನಟರ ಜೊತೆ ಅಭಿನಯಿಸಿರುವ ಲೀಲಾಗೆ 10 ಕೋಟಿ ಕೊಡುವುದರಲ್ಲಿ ತಪ್ಪೇನು ಎಂದು ಪ್ರಶ್ನೆ ಮಾಡಿದ್ದಾರೆ.

 

 

2019ರಲ್ಲಿ ಕಿಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಂದಿನಿ ಎಂದು ಪರಿಚಯವಾದ ಶ್ರೀಲೀಲಾ ಎರಡನೇ ಸಿನಿಮಾವೂ ಸೂಪರ್ ಹಿಟ್. ಭರಾಟೆ ಚಿತ್ರದಲ್ಲಿ ಶ್ರೀಮುರಳಿ ಜೊತೆ ನಟಿಸಿದ ನಂತರ ತೆಲುಗು ಸಿನಿಮಾ ಕೈ ಸೇರಿತ್ತು. ಪೆಲ್ಲಿ ಸಂದಡಾ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ವಿಫಲವಾಯ್ತು ಆದರೆ ಲೀಲಾ ಬುಟ್ಟಿಗೆ ಸ್ಟಾರ್ ಸಿನಿಮಾಗಳ ಕಥೆ ಬಂದು ಬಿತ್ತು. ಶ್ರೀಲೀಲಾ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರೂ ಸಿನಿಮಾ ಮ್ಯಾನೇಜ್ ಮಾಡಲು ಕಾರಣ ಅವರ ತಾಯಿ ಸ್ವರ್ಣಲತಾ.

 

 

ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಮೂಲತಃ ವೈದ್ಯೆ. ಅವರ ಕೈ ಗುಣ ಚೆನ್ನಾಗಿದೆ ಎಂದು ಸಾಮಾನ್ಯರು ಮಾತ್ರವಲ್ಲ ಸ್ಟಾರ್ ನಟಿಯರು ಚಿಕಿತ್ಸೆ ಪಡೆಯುತ್ತಾರೆ. ಹೀಗಾಗಿ ಲೀಲಾ ಕೂಡ ಡಾಕ್ಟರ್ ಆಗಬೇಕು ಅನ್ನೋದು ಅವರ ಫ್ಯಾಮಿಲಿ ಕನಸು. ಸಿನಿಮಾ ಪ್ಯಾಶನ್ ಆಗಿರುವ ಕಾರಣ ಎರಡನ್ನೂ ಸಮವಾಗಿ ನಿಭಾಯಿಸುತ್ತಿದ್ದಾರೆ. ಸಿನಿಮಾ ಆಯ್ಕೆ ಮಾಡುವುದರಿಂದ ಹಿಡಿದು ಪ್ರತಿಯೊಂದನ್ನು ಲೀಲಾ ತಾಯಿ ಸ್ವರ್ಣಲತಾ ಆಯ್ಕೆ ಮಾಡುವುದು. ಲೀಲಾ ಜೊತೆ ಏನೇ ಮಾತನಾಡಬೇಕಿದ್ದರೂ ತಾಯಿ ಮೂಲಕವೇ ನಡೆಯಬೇಕು.

Leave a comment

Your email address will not be published.