ಬಿಗ್​ ಬಾಸ್​ ಕನ್ನಡ ಒಟಿಟಿ ಶೋಗೆ ಗ್ರ್ಯಾಂಡ್ ತೆರೆ ಬಿದ್ದಿದೆ. ಶುಕ್ರವಾರ (ಸೆಪ್ಟಂಬರ್ 16) ಸಂಜೆ ಅದ್ದೂರಿಯಾಗಿ ನಡೆದ ಫಿನಾಲೆಯಲ್ಲಿ ರೂಪೇಶ್ ಶೆಟ್ಟಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. 42 ದಿನಗಳ ಕಾಲ ನಡೆದ ಬಿಗ್ ಬಾಸ್ ಶೋನಲ್ಲಿ ಒಟ್ಟು 16 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಫಿನಾಗೆ 4 ಮಂದಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಒಟಿಟಿಯಲ್ಲಿ ಎಲ್ಲರ ನಡುವೆ ಸಖತ್​ ಪೈಪೋಟಿ ಇತ್ತು. ಇವರಲ್ಲಿ ಕೊನೆಗೂ ನಾಲ್ಕು ಜನರು ಬಿಗ್​ ಬಾಸ್​ ಕನ್ನಡ ಸೀಸನ್​ 9ರಲ್ಲಿ ಸ್ಪರ್ಧಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

 

 

ಈ ನಾಲ್ವರಲ್ಲಿ ರೂಪೇಶ್​ ಶೆಟ್ಟಿ ಅವರು ಟಾಪರ್​ ಆಗಿದ್ದಾರೆ. ಟಾಪರ್ ಆದ ರೂಪೇಶ್ 5 ಲಕ್ಷ ರೂಪಾಯಿ ಗೆದ್ದಿದ್ದಾರೆ. ಕೊನೇ ವಾರದಲ್ಲಿ ವಿಶೇಷ ಟಾಸ್ಕ್​ಗಳನ್ನು ನೀಡಲಾಗಿತ್ತು. ಅವುಗಳಲ್ಲಿ ಬೆಸ್ಟ್​ ಪರ್ಫಾರ್ಮೆನ್ಸ್​ ನೀಡುವ ಮೂಲಕ ರೂಪೇಶ್​ ಶೆಟ್ಟಿ ಅವರು ಈ ಬಹುಮಾನದ ಮೊತ್ತ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ಅವರ ಜೊತೆಗೆ ರಾಕೇಶ್​ ಅಡಿಗ, ಸಾನ್ಯಾ ಐಯ್ಯರ್​ ಹಾಗೂ ಆರ್ಯವರ್ಧನ್​ ಗುರೂಜಿ ಕೂಡ ಟಿವಿ ಸೀಸನ್​ಗೆ ನೇರ ಟಿಕೆಟ್​ ಪಡೆದುಕೊಂಡಿದ್ದಾರೆ.

 

 

ಮೊದಲ ಬಿಗ್ ಬಾಸ್ OTT ಶೋನಲ್ಲಿ ಟಾಪರ್​ ಆದ ರೂಪೇಶ್​ ಶೆಟ್ಟಿ ರವರು 5 ಲಕ್ಷ ರೂಪಾಯಿ ನಗದು ಬಹುಮಾನ ಪಡೆದಿದ್ದಾರೆ. ಶುಕ್ರವಾರ (ಸೆ.16) ಅದ್ದೂರಿಯಾಗಿ ಫಿನಾಲೆ ನಡೆಯಿತು. 42 ದಿನಗಳ ಕಾಲ ಎಲ್ಲರ ನಡುವೆ ಸಖತ್​ ಪೈಪೋಟಿ ಇತ್ತು. ಕಡೆಗೂ ನಾಲ್ಕು ಜನರು ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರಲ್ಲಿ ಸ್ಪರ್ಧಿಸುವ ಚಾನ್ಸ್​ ಪಡೆದಿದ್ದಾರೆ.

 

 

ಆ ಪೈಕಿ ರೂಪೇಶ್​ ಶೆಟ್ಟಿ ಅವರು ಟಾಪರ್​ ಆಗಿದ್ದಾರೆ. ಅವರಿಗೆ ಫಿನಾಲೆ ವೇದಿಕೆಯಲ್ಲಿ 5 ಲಕ್ಷ ರೂಪಾಯಿ ಬಹುಮಾನ ನೀಡಲಾಯಿತು. ಕೊನೇ ವಾರದಲ್ಲಿ ವಿಶೇಷ ಟಾಸ್ಕ್​ಗಳನ್ನು ನೀಡಲಾಗಿತ್ತು. ಅವುಗಳಲ್ಲಿ ಬೆಸ್ಟ್​ ಪರ್ಫಾರ್ಮೆನ್ಸ್​ ನೀಡುವ ಮೂಲಕ ರೂಪೇಶ್​ ಶೆಟ್ಟಿ ಅವರು ಈ ಬಹುಮಾನದ ಮೊತ್ತ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ.

 

 

ತಮ್ಮದೇ ರೀತಿಯಲ್ಲಿ ರೂಪೇಶ್​ ಶೆಟ್ಟಿ ಅವರು ಗುರುತಿಸಿಕೊಂಡಿದ್ದರು. ಸಾನ್ಯಾ ಐಯ್ಯರ್​ ಜೊತೆಗೆ ಅವರು ಹೆಚ್ಚು ಸಮಯ ಕಳೆದಿದ್ದರು. ದೊಡ್ಮನೆಯಲ್ಲಿ ಅವರು ಕಿರಿಕ್​ ಮಾಡಿಕೊಂಡಿದ್ದು ಕಡಿಮೆ. ಸಾಧ್ಯವಾದಷ್ಟು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಗುಣ ಅವರದ್ದಾಗಿತ್ತು. ಈ ಎಲ್ಲ ಕಾರಣದಿಂದಾಗಿ ಅವರು ಜನಮನ ಗೆಲ್ಲುವುದರ ಮೂಲಕ 5 ಲಕ್ಷವನ್ನು ತಮ್ಮ ಪಾಲಾಗಿಸಿಕೊಂಡರು.

 

 

ನಟನಾಗಿ, ಆರ್​ಜೆ ಆಗಿ ರೂಪೇಶ್​ ಶೆಟ್ಟಿ ಫೇಮಸ್​. ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋಗೆ ಬಂದ ಬಳಿಕ ಅವರಿಗೆ ಇನ್ನಷ್ಟು ಜನಪ್ರಿಯತೆ ಸಿಕ್ಕಿತು. ಈಗ ಅವರು 5 ಲಕ್ಷ ರೂಪಾಯಿ ಬಹುಮಾನ ಮೊತ್ತ ಪಡೆದು ಬೀಗಿದ್ದಾರೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

 

 

ಸದ್ಯ ಬಿಗ್ ಬಾಸ್ ಒಟಿಟಿ ಶೋ ಮುಕ್ತಾಯವಾಗಿದೆ. ಬೆನ್ನಲ್ಲೇ ಟಿವಿ ಬಿಗ್ ಪ್ರಾರಂಭವಾಗುತ್ತಿದೆ. ಹೌದು, ಬಿಗ್​ ಬಾಸ್​ ಕನ್ನಡ ಸೀಸನ್​ 9 ಶೋ ಸೆಪ್ಟೆಂಬರ್​ 24ರಿಂದ ಆರಂಭ ಆಗಲಿದೆ. ಅದನ್ನು ಕೂಡ ಕಿಚ್ಚ ಸುದೀಪ್​ ಅವರೇ ನಡೆಸಿಕೊಡಲಿದ್ದಾರೆ. ಬಿಗ್​ ಬಾಸ್​ ಕನ್ನಡ ಒಟಿಟಿ ಫಿನಾಲೆಯಲ್ಲಿ ಗೆದ್ದ ರೂಪೇಶ್​ ಶೆಟ್ಟಿ, ಸಾನ್ಯಾ ಐಯ್ಯರ್​, ಆರ್ಯವರ್ಧನ್​ ಗುರೂಜಿ ಹಾಗೂ ರಾಕೇಶ್​ ಅಡಿಗ ಜೊತೆಯಲ್ಲಿ ಹಳೇ ಸೀಸನ್​ನ 5 ಸ್ಪರ್ಧಿಗಳು ಕೂಡ 9ನೇ ಸೀಸನ್​ಗೆ ಎಂಟ್ರಿ ನೀಡಲಿದ್ದಾರೆ. ಅವರ ಜೊತೆ 9 ಹೊಸ ಸ್ಪರ್ಧಿಗಳಿಗೆ ಅವಕಾಶ ಸಿಗುತ್ತಿದೆ. ಅವರೆಲ್ಲರ ನಡುವೆ ರೂಪೇಶ್​ ಶೆಟ್ಟಿ ಅವರು ಯಾವ ರೀತಿ ಗುರುತಿಸಿಕೊಳ್ಳಲಿದ್ದಾರೆ ಎಂಬ ಕೌತುಕ ಮೂಡಿದೆ.

Leave a comment

Your email address will not be published.