ಆನಂದ್‌ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಶನಿವಾರ ‘ಕಬ್ಜ’ ಟೀಸರ್‌ ರಿಲೀಸ್‌ ಆಗಿದ್ದು ಒಂದೇ ದಿನದಲ್ಲಿ 6 ಮಿಲಿಯನ್‌ಗೂ ಹೆಚ್ಚು ಮಂದಿ ಟೀಸರ್‌ ವೀಕ್ಷಿಸಿದ್ದಾರೆ. ಆದರೆ ಟೀಸರ್‌ ನೋಡಿದ ಹಲವರಿಗೆ ನಿರಾಶೆ ಉಂಟಾಗಿದೆ. 2:04 ಅವಧಿಯ ಈ ಟೀಸರ್‌ ನೋಡುತ್ತಿದ್ದರೆ ಕೆಜಿಎಫ್‌ ಸಿನಿಮಾ ನೋಡಿದಂತೆ ಆಗುತ್ತಿದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ಸ್ಯಾಂಡಲ್‌ವುಡ್‌ನ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ‘ಕಬ್ಜ’ ಟೀಸರ್‌ ಕೊನೆಗೂ ತೆರೆ ಕಂಡಿದೆ. ಕಳೆದ ವರ್ಷದಿಂದ ಉಪ್ಪಿ ಅಭಿಮಾನಿಗಳು ಕಾಯುತ್ತಿದ್ದ ಕ್ಷಣಕ್ಕೆ ನಿನ್ನೆ ಸಾಕ್ಷಿಯಾಗಿದೆ. ಇಂದು ಉಪೇಂದ್ರ ಹುಟ್ಟುಹಬ್ಬ, ಉಪ್ಪಿ ಬರ್ತ್‌ಡೇ ವಿಶೇಷವಾಗಿ ನಿನ್ನೆಯೇ ಕಬ್ಜ ಚಿತ್ರದ ಟೀಸರ್‌ ಬಿಡುಗಡೆ ಮಾಡಲಾಗಿದೆ. ಸಿನಿಮಾ 7 ಭಾಷೆಗಳಲ್ಲಿ ತೆರೆಗೆ ಬರುತ್ತಿದ್ದು ಟೀಸರ್‌ ಕೂಡಾ 7 ಭಾಷೆಗಳಲ್ಲಿ ಬಿಡುಗಡೆಯಾಗಿದೆ.

 

 

ಕಬ್ಜ ಸಿನಿಮಾ ಆರಂಭವಾಗುತ್ತಿದ್ದಂತೆ ಸಿನಿಮಾ ಭಾರೀ ಸುದ್ದಿಯಲ್ಲಿತ್ತು. ಇದು ಪ್ಯಾನ್‌ ಇಂಡಿಯಾ ಸಿನಿಮಾ, ಉಪೇಂದ್ರ ಹಾಗೂ ಸುದೀಪ್‌ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿದಾಗಿನಿಂದ ಅಭಿಮಾನಿಗಳು ಈ ಚಿತ್ರದ ಪ್ರತಿ ಅಪ್‌ಡೇಟ್‌ ತಿಳಿಯಲು ಕಾಯುತ್ತಿದ್ದರು. ಕಳೆದ ವರ್ಷವೇ ಟೀಸರ್‌ ಬಿಡುಗಡೆಯಾಗಬೇಕಿತ್ತು. ಆದರೆ ಪುನೀತ್‌ ನಿಧನ ಹಾಗೂ ಇನ್ನಿತರ ಕಾರಣಗಳಿಂದ ಟೀಸರ್‌ ಬಿಡುಗಡೆಯಾಗುವುದು ತಡವಾಯ್ತು. ಇದೀಗ ಟೀಸರ್‌ ರಿಲೀಸ್‌ ಆಗಿದೆ. ಟೀಸರ್‌ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಪರ ವಿರೋಧ ಪ್ರತಿಕ್ರಿಯೆ ಕೂಡಾ ವ್ಯಕ್ತವಾಗುತ್ತಿದೆ.

 

 

ಆನಂದ್‌ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಶನಿವಾರ ಕಬ್ಜ ಟೀಸರ್‌ ರಿಲೀಸ್‌ ಆಗಿದ್ದು ಒಂದೇ ದಿನದಲ್ಲಿ 6 ಮಿಲಿಯನ್‌ಗೂ ಹೆಚ್ಚು ಮಂದಿ ಟೀಸರ್‌ ವೀಕ್ಷಿಸಿದ್ದಾರೆ. ಆದರೆ ಟೀಸರ್‌ ನೋಡಿದ ಹಲವರಿಗೆ ನಿರಾಶೆ ಉಂಟಾಗಿದೆ. 2:04 ಅವಧಿಯ ಈ ಟೀಸರ್‌ ನೋಡುತ್ತಿದ್ದರೆ ಕೆಜಿಎಫ್‌ ಸಿನಿಮಾ ನೋಡಿದಂತೆ ಆಗುತ್ತಿದೆ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಬ್ಜ ಟೀಸರ್‌ ಕೂಡಾ ರೆಟ್ರೋ ಶೈಲಿಯಲ್ಲಿದ್ದು ಟೀಸರ್‌ ನೋಡುತ್ತಿದ್ದರೆ ಇನ್ನೊಮ್ಮೆ ಕೆಜಿಎಫ್‌ ಟೀಸರ್‌ ನೋಡುತ್ತಿರುವಂತೆ ಭಾಸವಾಗುತ್ತಿದೆ. ಹಿನ್ನೆಲೆ ಸಂಗೀತ, ಪಾತ್ರಧಾರಿಗಳು, ಸೆಟ್‌, ಗ್ರಾಫಿಕ್ಸ್‌, ಮೇಕಿಂಗ್‌ ಎಲ್ಲವೂ ಕೆಜಿಎಫ್‌ ಹೋಲುತ್ತಿದೆ. ಬಾಲ್ಯದಲ್ಲಿ ನೋವು ಕಂಡ ಬಾಲಕ ಭೂಗತ ಲೋಕಕ್ಕೆ ಅಧಿಪತಿಯಾಗುವ ಕಥೆ ಇರಬಹುದು ಎನ್ನಲಾಗುತ್ತಿದೆ. ಎಲ್ಲಾ ಪ್ರಶ್ನೆಗಳಿಗೂ ಸಿನಿಮಾ ಬಿಡುಗಡೆಯಾದಾಗ ಉತ್ತರ ದೊರೆಯಲಿದೆ.

 

 

ಇನ್ನು ಟೀಸರ್‌ ನೋಡಿ ಇನ್ನೂ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟೀಸರ್‌ ನೋಡುತ್ತಿದ್ದರೆ ಮೈ ರೋಮಾಂಚನವಾಗುತ್ತದೆ. ನಿಜಕ್ಕೂ ಈ ಸಿನಿಮಾ ಕೆಜಿಎಫ್‌ ಚಿತ್ರದಂತೆ ದೊಡ್ಡ ಮಟ್ಟಕ್ಕೆ ಹೆಸರಾಗುತ್ತದೆ. ಎಂದು ಹಾರೈಸುತ್ತಿದ್ದಾರೆ. ಇನ್ನು ಚಿತ್ರದ ನಿರ್ದೇಶಕ ಚಂದ್ರು ಕೂಡಾ ಟೀಸರ್‌ ಬಗ್ಗೆ ಪ್ರತಿಕ್ರಿಯಿಸಿ, ಮೊದಲು ಸಿನಿಮಾ ನೋಡಿ ಇಲ್ಲಿ ಯಾವ ಭಾಯ್ ಕೂಡಾ ಇರುವುದಿಲ್ಲ. ಸಿನಿಮಾ ನಿಮಗೆ ಬಹಳ ಇಷ್ಟವಾಗುತ್ತದೆ. ಇನ್ನೂ ಕೆಲವೊಂದು ಕೆಲಸಗಳು ಬಾಕಿ ಉಳಿದಿವೆ. ಅದೆಲ್ಲ ಮುಗಿದ ಕೂಡಲೇ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡುತ್ತೇನೆ ಎಂದು ಆರ್.‌ ಚಂದ್ರು ಹೇಳಿದ್ದಾರೆ.

 

 

‘ಕಬ್ಜ’ ಚಿತ್ರವನ್ನು ಶ್ರೀ ಸಿದ್ದೇಶ್ವರ ಎಂಟರ್​​​​​ಪ್ರೈಸಸ್ ಬ್ಯಾನರ್ ಅಡಿ ಆರ್. ಚಂದ್ರು ಅವರೇ ನಿರ್ಮಿಸಿದ್ದು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಕೂಡಾ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸರೂರು ಸಂಗೀತ ನೀಡಿದ್ದಾರೆ. ಪ್ರಕಾಶ್ ರೈ, ಶ್ರೀನಿವಾಸ್ ರಾವ್​​​​​​​​​​​​​​​​​​ ಕೋಟಾ, ಜಗಪತಿ ಬಾಬು, ಎಂ. ಕಾಮರಾಜ್, ಕಬೀರ್ ದುಹಾನ್ ಸಿಂಗ್, ಬೊಮನ್ ಇರಾನಿ ಹಾಗೂ ಇನ್ನಿತರರು ನಟಿಸಿದ್ದಾರೆ. ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಒರಿಯಾ ಹಾಗೂ ಮರಾಠಿ ಸೇರಿ 7 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಉಪೇಂದ್ರ, ಶ್ರಿಯಾ ಸರಣ್, ಸುದೀಪ್‌ ಹಾಗೂ ಇನ್ನಿತರರು ನಟಿಸಿದ್ದಾರೆ.

 

 

Leave a comment

Your email address will not be published.