ಸ್ಯಾಂಡಲ್ವುಡ್ ನ ಯುವರಾಜ ಸಧ್ಯ ಸಿನಿಮಾ ರಾಜಕೀಯ ಎಲ್ಲದರಲ್ಲೂ ಬ್ಯುಸಿಯಾಗಿದ್ದು ಇದೆಲ್ಲದರ ನಡುವೆಯೂ ಸಧ್ಯ ತಮ್ಮ ಕುಟುಂಬಕ್ಕೆ ಮಗನ ಆಗಮನದ ಸಂತೋಷದಲ್ಲಿರುವ ದೊಡ್ಡ ಗೌಡರ ಮನೆಯ ಯುವರಾಜ ಇದೀಗ ಬಹಳಷ್ಟು ದಿನಗಳ ಬಳಿಕ ತಮ್ಮ ಪತ್ನಿ ಜೊತೆಗೆ ಡ್ಯಾನ್ಸ್ ಮಾಡುವ ಮೂಲಕ ಮತ್ತೊಂದು ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.

 

 

ನಿಖಿಲ್ ಕುಮಾರ್ ಹಾಗೂ ರೇವತಿ ವಿವಾಹದ ಬಳಿಕ ಗಂಡು ಮಗುವಿನ ತಂದೆಯಾದರು. ಇಬ್ಬರೂ ಜೊತೆಗೆ ನಿಂತಿದ್ದ ಕೆಲವು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಹಬ್ಬದ ಸಂಭ್ರಮದಲ್ಲಿ, ತೋಟಕ್ಕೆ ಭೇಟಿ ಕೊಟ್ಟ ವೇಳೆ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಅದು ಬಿಟ್ಟರೆ, ಸಂದರ್ಶನದಲ್ಲಾಗಲಿ, ಸಿನಿಮಾ ಪ್ರಚಾರದಲ್ಲಾಗಲಿ ರೇವತಿ ನಿಖಿಲ್ ಕುಮಾರ್ ಕಾಣಿಸಿಕೊಂಡಿರಲಿಲ್ಲ. ಪತಿಯ ಸಿನಿಮಾದ ಬಗ್ಗೆನೂ ಅಭಿಪ್ರಾಯವನ್ನೂ ಹಂಚಿಕೊಂಡಿಲ್ಲ. ಆದರೆ, ಇದೇ ಮೊದಲ ಬಾರಿಗೆ ನಿಖಿಲ್ ಪತ್ನಿ ರೇವತಿಯವರೊಂದಿಗೆ ‘ರೈಡರ್’ ಸಿನಿಮಾದ ಡವಾ ಡವಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 

 

ಸ್ಯಾಂಡಲ್ವುಡ್ ನ ಯುವರಾಜ ಸಧ್ಯ ಸಿನಿಮಾ ರಾಜಕೀಯ ಎಲ್ಲದರಲ್ಲೂ ಬ್ಯುಸಿಯಾಗಿದ್ದು ಇದೆಲ್ಲದರ ನಡುವೆಯೂ ಸಧ್ಯ ತಮ್ಮ ಕುಟುಂಬಕ್ಕೆ ಮಗನ ಆಗಮನದ ಸಂತೋಷದಲ್ಲಿರುವ ದೊಡ್ಡ ಗೌಡರ ಮನೆಯ ಯುವರಾಜ ಇದೀಗ ಬಹಳಷ್ಟು ದಿನಗಳ ಬಳಿಕ ತಮ್ಮ ಪತ್ನಿ ಜೊತೆಗೆ ಡ್ಯಾನ್ಸ್ ಮಾಡುವ ಮೂಲಕ ಮತ್ತೊಂದು ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.

 

 

ರೈಡರ್ ಚಿತ್ರದ ಡವ ಡವ…ಡವ..ಡವ ಹಾಡು ಟ್ರೆಂಡ್ ಹುಟ್ಟುಹಾಕಿತ್ತು. ಸೋಷಿಯಲ್ ‌ಮಿಡಿಯಾ‌ದಲ್ಲಿ ಹಾಡು ಭಾರಿ ಹವಾ ಕ್ರಿಯೆಟ್ ಮಾಡಿತ್ತು. ಆರಂಭದಲ್ಲಿ ಖುದ್ದು ನಿಖಿಲ್ ಅವ್ರೇ ಈ ಹಾಡಿಗೆ ರೀಲ್ಸ್ ಮಾಡುವ ಮೂಲಕ ಸಿನಿಮಾ ಪ್ರಚಾರ ಆರಂಭಿಸಿದರು. ಈಗ ಚಿತ್ರ ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಪತ್ನಿ ಜೊತೆ ಡವ ಡವ ಡವ ಡವಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

 

 

ನಿಖಿಲ್ ಹಾಗೂ ರೇವತಿಯ ಮೊದಲ ರೀಲ್ಸ್ ಆಗಿದ್ದು ಅಭಿಮಾನಿಗಳು ನಿಖಿಲ್ ಮತ್ತು ರೇವತಿ ಡ್ಯಾನ್ಸ್ ಗೆ ಫಿದಾ ಆಗಿದ್ದಾರೆ…ರೇವತಿ ಹಾಡಿನಲ್ಲಿ ಒಂದೇ ಸೀನ್ ನಲ್ಲಿ ಬಂದರು ನೆಟ್ಟಿಗರು ಮಾತ್ರ ವಿಡಿಯೋವನ್ನ ಪದೇ ಪದೇ ನೋಡಿ ಎಂಜಾಯ್ ಮಾಡ್ತಿದ್ದಾರೆ.

 

 

ಕಳೆದ ಸೆಪ್ಟೆಂಬರ್ ಇಪ್ಪತ್ತನಾಲ್ಕರಂದು ರೇವತಿ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು ಕುಮಾರಸ್ವಾಮಿ ಅವರ ಕುಟುಂಬಕ್ಕೆ ವಾರಸ್ದಾರನ ಆಗಮನವಾಗಿತ್ತು.. ಇನ್ನು ತಂದೆಯಾದ ಸಂಭ್ರಮದಲ್ಲಿದ್ದ ನಿಖಿಲ್ ಅವರು ಇತ್ತ ನನ್ನ ಮಗ ಸಾಮಾನ್ಯನಾಗಿ ಬೆಳಿಬೇಕು.. ಹೊರಗೆ ಆತನನ್ನು ಆತನ ವಿಚಾರಗಳನ್ನು ತೋರಿಸಿಕೊಳ್ಳೋದು ಇಷ್ಟವಿಲ್ಲವೆಂದಿದ್ದರು.. ಹೌದು ನಾವುಗಳೆಲ್ಲಾ ಮಧ್ಯಮ ವರ್ಗದ ಕುಟುಂಬದ ಮಕ್ಕಳ ಜೊತೆಯೇ ಬೆಳೆದಿದ್ದು.. ಸಾಮಾನ್ಯರಾಗಿಯೇ ಬೆಳೆದಾಗ ಎಲ್ಲಾ ಕಷ್ಟ ಸುಖಗಳು ಅರ್ಥವಾಗೋದು.. ಆಗ ಮಾತ್ರವೇ ನಿಜವಾದ ಜೀವನದ ಅರ್ಥ ತಿಳಿಯೋದು ನನ್ನ ಮಗನೂ ಸಹ ಹಾಗೆಯೇ ಬೆಳಿಬೇಕು ಎಂದಿದ್ದರು..

 

 

ಮಗುವಿನ ಹೆಸರಿನ ಬಗ್ಗೆಯೂ ಮಾತನಾಡಿ ಅವನು ಯಾವ ಯುವರಾಜನೂ ಅಲ್ಲ.. ನಾನು ಯಾವ ಯುವರಾಜನೂ ಅಲ್ಲ.. ನಾವು ಸಾಮಾನ್ಯರಷ್ಟೇ.. ಮನೆಯಲ್ಲಿ ಎಲ್ಲರೂ ಒಂದೊಂದು ಹೆಸರನ್ನು ಹೇಳುತ್ತಿದ್ದಾರೆ.. ಒಂಭತ್ತನೇ ತಿಂಗಳಿನಲ್ಲಿ ಯಾವುದಾದರೂ ಒಂದು ಹೆಸರನ್ನು ಆಯ್ಕೆ ಮಾಡಿ ನಾಮಕರಣ ಮಾಡುವೆವು ಎಂದಿದ್ದರು.. ಇನ್ನು ನನ್ನ ಮಗ ದೇವರು ನನಗೆ ಕೊಟ್ಟ ಅತಿ ದೊಡ್ಡ ಉಡುಗೊರೆ ಎಂದಿದ್ದರು.. ಇನ್ನು ಮದುವೆಯಾದ ಹೊಸತರಲ್ಲಿ ಪತ್ನಿಯೊಟ್ಟಿಗೆ ಸಾಕಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದ ನಿಖಿಲ್ ಮಡದಿಗಾಗಿ ಕವಿಯೂ ಸಹ ಆಗಿಬಿಟ್ಟಿದ್ದರು.. ಆದರೆ ಮಗುವಾದ ನಂತರ ಪತ್ನಿ ಜೊತೆಗಿನ ಯಾವುದೇ ಫೋಟೋ ಹಂಚಿಕೊಳ್ಳದ ನಿಖಿಲ್ ಸಧ್ಯ ರೇವತಿಯವರೊಟ್ಟಿಗೆ ಡ್ಯಾನ್ಸ್ ಮಾಡುವ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಹೊಸದೊಂದು ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

Leave a comment

Your email address will not be published.