ನಟಿ ಅದಿತಿ ಪ್ರಭುದೇವ ಕನ್ನಡದ ಟಾಪ್‌ ನಟಿಯರಲ್ಲಿ ಒಬ್ಬರು. ಅದಿತಿ ಎಲ್ಲರಂತೆ ಅಲ್ಲ, ಆಕೆ ಕೊಂಚ ಡಿಫ್ರೆಂಟ್. ಇದು ಆಕೆಯ ನಿಜ ಜೀವನ ಮತ್ತು ಚಿತ್ರದಲ್ಲಿನ ಪಾತ್ರಗಳ ಮೂಲಕ ಅದು ಸಾಬೀತಾಗಿದೆ. ಸದಾ ಸಿನಿಮಾ, ಪಾತ್ರಗಳ ಮೂಲಕ ಸುದ್ದಿಯಲ್ಲಿ ಇರುತ್ತಿದ್ದ ಅದಿತಿ ಪ್ರಭುದೇವ ಈಗ ತಮ್ಮ ವೈಯಕ್ತಿಕ ಬದುಕಿನ ಮೂಲಕ ಸುದ್ದಿ ಆಗಿದ್ದಾರೆ.

 

 

ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ, ಕೆಲ ದಿನಗಳ ಹಿಂದೆ ನಿಶ್ಚಿತಾರ್ಥವಾಗಿರುವ ವಿಚಾರವನ್ನು ರಿವೀಲ್ ಮಾಡಿದ್ದರು. ಅವರನ್ನು ಮದುವೆಯಾಗುತ್ತಿರುವ ಹುಡುಗ ಯಾರು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಈಗ ಅದಿತಿ ಪ್ರಭುದೇವ ಮದುವೆಯಾಗುತ್ತಿರುವ ಹುಡುಗ ಯಾರು ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ..

 

 

ಅದಿತಿ ಪ್ರಭುದೇವ ಅವರ ಭಾವಿ ಪತಿ ಹೆಸರು ಯಶಸ್, ಇವರು ಕಾಫಿ ಎಸ್ಟೇಟ್‌ನ ಮಾಲೀಕ ಹಾಗೂ ಬ್ಯುಸಿನೆಸ್‌ಮ್ಯಾನ್ ಆಗಿದ್ದಾರೆ. ಕಳೆದ ವರ್ಷ ಡಿ.26ರಂದು ಅದಿತಿ ಪ್ರಭುದೇವ ಯಶಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

 

 

ನಾನು ನಿಶ್ಚಿತಾರ್ಥ ಮಾಡಿಕೊಂಡಿದ್ದು ಎಲ್ಲರಿಗೂ ಆಶ್ಚರ್ಯವಾಗಿದೆ. ಆದರೆ ನಿಶ್ಚಿತಾರ್ಥ ಸಡನ್ ನಿರ್ಧಾರವಾಗಿದೆ. ನನ್ನ ಪೋಷಕರು ನನ್ನನ್ನು ಮದುವೆಯಾಗು ಎಂದು ಒತ್ತಾಯ ಮಾಡುತ್ತಿದ್ದರು. ವರನಿಗಾಗಿ ಹುಡುಕಾಟ ಮಾಡಲು ಪ್ರಾರಂಭಿಸಿದ್ದರು. ಅವರು ತೋರಿಸಿರುವ ಹುಡುಗ ಯಶಸ್ ನನಗೂ ಇಷ್ಟವಾದರು. ನಂತರ ಹಾಸನದಲ್ಲಿ ನಿಶ್ಚಿತಾರ್ಥ ಮಾಡಿಕೊಂಡೆವು ಎಂದು ಸಂತೋಷದಿಂದ ಹೇಳಿಕೊಂಡಿದ್ದಾರೆ.

 

 

ಭಾವಿ ಪತಿಯ ಜೊತೆಗಿರುವ ಫೋಟೊವನ್ನು ನಟಿ ಅದಿತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಕೆಂಪು ಬಣ್ಣದ ಉಡುಪಿನಲ್ಲಿ ಕಂಗೊಳಿಸಿದ್ದಾರೆ. ಅದಿತಿ ಇನ್‌ಸ್ಟಾಗ್ರಾಮ್‌ನಲ್ಲಿ ಹುಡುಗನ ಜೊತೆಗೆ ಇರುವ ಫೋಟೊ ಹಾಕಿ ‘ ಕನಸಿನಂತೆಯೇ ಕನಸು ನಿಜವಾಗಿದೆ’ ಎಂದು ಬರೆದುಕೊಂಡಿದ್ದಾರೆ. ಅದಿತಿ ಕೊಟ್ಟಿರು ಈ ಕ್ಯಾಪ್ಷನ್‌ ಅವರು ಆಕೆಯ ಬಾಳ ಸಂಗಾತಿ ಆಗುವವರು ಇವರು ಎನ್ನುವುದನ್ನು ಹೇಳುತ್ತದೆ. ಹಾಗಾಗಿ ಸಾಕಷ್ಟು ಮಂದಿ ಈ ಜೋಡಿಗೆ ಕಮೆಂಟ್‌ ಮಾಡುವ ಮೂಲಕ ಶುಭ ಕೋರಿದ್ದರು.

 

 

View this post on Instagram

 

A post shared by ADITI PRABHUDEVA (@aditiprabhudeva)

 

ಅದಿತಿ ಇತ್ತೀಚೆಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ್ದರು ಜೊತೆಯಲ್ಲಿ ಭಾವಿ ಪತಿ ಕೂಡ ಉಪಸ್ಥಿತರಿದ್ದರು. ನಿರೂಪಕರು ಅವರ ಹೆಸರನ್ನು ಕರೆದ ಕೂಡಲೇ ಅದಿತಿ‌ ನಾಚಿ‌ ನೀರಾಗಿದ್ದಾರೆ.

 

Leave a comment

Your email address will not be published.