ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ ಎಲ್ಲರ ಮನಸ್ಸಲ್ಲಿ ಅಳಿಯದ ಧ್ರುವತಾರೆಯಾಗಿ ಉಳಿದುಬಿಟ್ಟಿದ್ದಾರೆ. ಅಪ್ಪು ಎಂದರೆ ಪ್ರೀತಿಯಿಂದ ಸದಾ ಅಪ್ಪಿಕೊಳ್ಳುವಷ್ಟು ಸವಿ ನೆನಪುಗಳನ್ನೇ ಕೊಟ್ಟು ಹೋಗದ್ದಾರೆ ಪುನೀತ್ ರಾಜ್‌ಕುಮಾರ್. ಪುನೀತ್ ರಾಜ್‌ಕುಮಾರ್ ಅವರಿಗೆ ಹಲವು ಆಸಕ್ತಿಗಳಿದ್ದವು.

 

 

ಅದರಲ್ಲಿ ಅಪ್ಪುಗೆ ಕಾರ್ ಮತ್ತು ಬೈಕ್ ಕ್ರೇಜ್ ಕೂಡ ಇತ್ತು. ಹಾಗಾಗಿ ಹಲವು ಬಗೆಯ ದುಬಾರಿ ಕಾರು ಮತ್ತು ಬೈಕ್‌ಗಳು ಪುನೀತ್‌ ರಾಜ್‌ಕುಮಾರ್ ಅವರ ಬಳಿ ಇದ್ದವು. ಅದರಲ್ಲಿ ಅಪ್ಪುಗೆ ಲ್ಯಾಂಬೋರ್ಗಿನಿ ಕಾರು ಎಂದರೆ ಅಚ್ಚು ಮೆಚ್ಚು. ಆದರೆ ಅಪ್ಪು ಬಳಿಕ ಆ ಕಾರು ಅವರ ಮನೆಯಲ್ಲಿ ಇಲ್ಲ.

 

 

ನಟ ಪುನೀತ್ ರಾಜ್‌ಕುಮಾರ್ ಮನೆಗೆ ಈ ಲ್ಯಾಂಬೋರ್ಗಿನಿ ಬಂದಿದ್ದು 2019ರಲ್ಲಿ. ಈ ಕಾರನ್ನು ಪುನೀತ್ ರಾಜ್‌ಕುಮಾರ್ ತಮಗಾಗಿ ತೆಗೆದುಕೊಂಡಿದ್ದಲ್ಲ. ಬದಲಿಗೆ ತಮ್ಮ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಉಡುಗೊರೆಯಾಗಿ ಕೊಟ್ಟಿದ್ದರು. ಅದರಲ್ಲೂ ಈ ಕಾರನ್ನು ಮಹಿಳಾ ದಿನಾಚರಣೆಯ ಅಂಗವಾಗಿ ಅಪ್ಪು, ಅಶ್ವಿನಿ ಅವರಿಗೆ ಗಿಫ್ಟ್ ಮಾಡಿದ್ದರು.

 

 

ಈ ನೀಲಿ ಬಣ್ಣ ಲ್ಯಾಂಬೋರ್ಗಿನಿ ಕಾರಿನ ಬೆಲೆ ಸುಮಾರು 4 ಕೋಟಿ ರೂ. ಈ ಕಾರನ್ನು ಅಪ್ಪು ಪತ್ನಿಗಾಗಿ ಕೊಟ್ಟಿದ್ದರು. ಆದರೆ ಇದನ್ನು ಹೆಚ್ಚಾಗಿ ಅಪ್ಪು ಬಳಕೆ ಮಾಡುತ್ತಿದ್ದರು. ಈ ಕಾರಿನಲ್ಲಿ ರೈಡ್ ಹೋಗುವುದು ಎಂದರೆ ಅಪ್ಪುಗೆ ಅಚ್ಚು ಮೆಚ್ಚು. ಸ್ಯಾಂಡಲ್‌ವುಡ್‌ನಲ್ಲಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಕೆಲವರ ಬಳಿ ಮಾತ್ರವೇ ಈ ಕಾರು ಇದೆ.

 

 

ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಲ್ಯಾಂಬೋರ್ಗಿನಿ ಕಾರನ್ನು ಯಾರು ಬಳಕೆ ಮಾಡುತ್ತಿರಲಿಲ್ಲವಂತೆ. ಈಗ ಈ ಕಾರು ಪುನೀತ್ ರಾಜ್‌ಕುಮಾರ್ ನಿವಾಸದಲ್ಲಿ ಇಲ್ಲ. ದುಬೈನಲ್ಲಿ ಇದೆ ಎನ್ನಲಾಗಿದೆ. ಈ ಕಾರನ್ನು ಪುನೀತ್ ಧರ್ಮಪತ್ನಿ ಅಶ್ವಿನಿ ಅವರ ಸೋದರನ ಬಳಿ ಇದೆ ಎನ್ನಲಾಗಿದೆ. ಅಪ್ಪು ಬಳಿಕ ಅಶ್ವಿನಿ ಅವರು ಕೂಡ ಈ ಕಾರನ್ನು ಬಳಸುತ್ತಿಲ್ಲ.

 

 

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಕಾರ್ ಕ್ರೇಜ್ ಬಾಲ್ಯದಿಂದನೂ ಇತ್ತು. ಅಪ್ಪು ಸಾಕಷ್ಟು ಐಶಾರಾಮಿ ಕಾರುಗಳ ಒಡೆಯನಾಗಿದ್ದರು. ಅವರ ಬಳಿ ಆಡಿ, ರೇಂಜ್ ರೋವರ್ ಸೇರಿದಂತೆ ಅನೇಕ ಕಾರುಗಳಿದ್ದವು. ಅಷ್ಟೆಯಲ್ಲ ದುಬಾರಿ ಬೈಕ್‌ಗಳು ಸಹ ಪುನೀತ್ ಬಳಿ ಇದ್ದವು. ಈ ಲಿಸ್ಟ್‌ಗೆ ಲ್ಯಾಂಬೋರ್ಗಿನಿ ಕೂಡ ಸೇರಿಕೊಂಡಿತ್ತು.

Leave a comment

Your email address will not be published.