ಕಳೆದ ವರ್ಷ ಡಿಸೆಂಬರ್ 25 ಅಂದರೆ ಕ್ರಿಸ್ಮಸ್ ಹಬ್ಬದ ದಿನದಂದು ಗೋಲ್ಡನ್ ಸ್ಟಾರ್ ಗಣೇಶ್ ಅವರು ತಮ್ಮ ಮಗನಿಗೆ ಒಂದು ಸರ್ಪ್ರೈಸ್ ಗಿಫ್ಟ್ ಅನ್ನು ನೀಡಿದ್ದರು.ಇನ್ನೂ ಈ ಸರ್ಪ್ರೈಸ್ ಅನ್ನು ನೋಡಿದ ಗಣೇಶ್ ಅವರ ಮಗ ವಿಹಾನ್ ಗಣೇಶ್ ಕೊಟ್ಟ ರಿಯಾಕ್ಷನ್ ಅನ್ನು ಇಲ್ಲಿರುವ ವೀಡಿಯೋ ಮುಖಾಂತರ ನೋಡಬಹುದು. ಇನ್ನು ಈ ವಿಡಿಯೋವನ್ನು ಗಣೇಶ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೋಸ್ಕರ ಹಂಚಿಕೊಂಡಿದ್ದಾರೆ.

 

 

View this post on Instagram

 

A post shared by Ganesh (@goldenstar_ganesh)

 

ಇನ್ನೂ ಗೋಲ್ಡನ್ ಸ್ಟಾರ್ ಗಣೇಶ್ ಅವರು ಸಿನಿಮಾ ರಂಗಕ್ಕೆ ಬರುವ ಮುನ್ನ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಮತ್ತು ತುಂಬಾ ಕಷ್ಟಗಳನ್ನು ನೋಡಿ ಬಂದಿದ್ದಾರೆ. ಇನ್ನೂ ಇವರು ಮೊದಲು ಉದಯ ಟಿವಿ ವಾಹಿನಿಯಲ್ಲಿ ಪ್ರಸಾರವಾಗಿದ್ದ ಕಾಮಿಡಿ ಟೈಮ್ ಗಣೇಶ್ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿದ್ದರು. ಈ ಶೋ ಮುಖಾಂತರ ಇವರು ಸಖತ್ ಫೇಮಸ್ ಆದರು.

 

 

ಇದಾದ ಮೇಲೆ ಇವರನ್ನು ಗುರುತಿಸಿ ಸಿನಿಮಾಗಳಲ್ಲಿ ಸಹಾಯಕ ಪಾತ್ರಗಳಲ್ಲಿ ಅಭಿನಯಿಸುವುದಕ್ಕೆ ಅವಕಾಶಗಳನ್ನು ಕೊಟ್ಟರು. ಇದಾದ ಮೇಲೆ ಗಣೇಶ್ ಅವರು ಹೀರೋ ಆಗಿ ತೆರೆಮೇಲೆ ಕಾಣಿಸಿದರು. ಹೌದು ಗಣೇಶ್ ಅವರು 2006 ರಲ್ಲಿ ರೇಖಾ ಅವರ ಜೊತೆಗೆ ಚೆಲ್ಲಾಟ ಚಿತ್ರದ ಮೂಲಕ ಮೊದಲನೆಯದಾಗಿ ಹೀರೋ ಆಗಿ ಎಂಟ್ರಿ ನೀಡಿದರು. ಇದಾದ ಮೇಲೆ ಬಂದ ಮುಂಗಾರು ಮಳೆ ಚಿತ್ರದ ಮೂಲಕ ಗಣೇಶ್ ಅವರು ಮತ್ತಷ್ಟು ಜನಪ್ರಿಯತೆಯನ್ನು ಹೊಂದಿದರು.

 

 

ತದನಂತರ ಗಣೇಶ್ ಅವರು ಸಾಕಷ್ಟು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಇವರು ಸೂಪರ್ ಮಿನಿಟ್ ಎನ್ನುವ ಕಾರ್ಯಕ್ರಮವನ್ನು 4 ಸೀಸನ್ ಗಳನ್ನು ನಿರೂಪಣೆ ಮಾಡಿದ್ದಾರೆ. ಹಾಗೆಯೇ ಜ಼ೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮವನ್ನು ಕೂಡ ಹೌಸ್ ಮಾಡುತ್ತಿದ್ದಾರೆ. ಹಾಗೆಯೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರುತ್ತಿರುವ ಇಸ್ಮಾರ್ಟ್ ಜೋಡಿ ಕಾರ್ಯಕ್ರಮದಲ್ಲೂ ಕೂಡ ನಿರೂಪಣೆ ಮಾಡುತ್ತಿದ್ದಾರೆ.

 

 

ಗಣೇಶ್ ಅವರು ಶಿಲ್ಪಾ ಅವರನ್ನು 2009 ರಲ್ಲಿ ಗಣೇಶ್ ಶಿಲ್ಪಾ ಅವರನ್ನು ವಿವಾಹವಾಗಿದ್ದರು. ಇವರಿಗೆ ಚಾರಿತ್ರ್ಯ ಗಣೇಶ್ ಮತ್ತು ವಿಹಾನ್ ಗಣೇಶ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಇನ್ನೂ ಇವರ ಮಗ ವಿಹಾನ್ ಗಣೇಶ್ ಎಷ್ಟು ಚೆನ್ನಾಗಿ ಪಿಯಾನೋ ನುಡಿಸುತ್ತಾನೆ ಗೊತ್ತಾ. ಅದರ ವೀಡಿಯೋವನ್ನು ಇಲ್ಲಿ ನೀವು ನೋಡಬಹುದು.

 

 

View this post on Instagram

 

A post shared by Ganesh (@goldenstar_ganesh)

 

ವಿಹಾನ್ ಗಣೇಶ್ ಕೂಡ ಗಣೇಶ್ ಅವರ ಗೀತಾ ಚಿತ್ರದಲ್ಲಿ ಒಂದು ಚಿಕ್ಕ ಪಾತ್ರದಲ್ಲಿ ಕಾಣಿಸಿದ್ದಾರೆ. ಇನ್ನು ಗಣೇಶ್ ಅವರ ಮಗಳು ಚಾರಿತ್ರ್ಯ ಗಣೇಶ್ ಅವರು ತಮ್ಮ ತಂದೆಯ ಸಿನಿಮಾ ಆಗಿರುವ ಚಮಕ್ ಚಿತ್ರದ ಕೊನೆಯ ಕ್ಲೈಮಾಕ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.

 

 

ಇತ್ತೀಚೆಗೆ ತೆರೆಕಂಡ ಗೋಲ್ಡನ್ ಸ್ಟಾರ್ ಗಣೇಶ್‌ ಮತ್ತು ಯೋಗರಾಜ್‌ ಭಟ್‌ ಕಾಂಬಿನೇಷನ್‌ನ ‘ಗಾಳಿಪಟ 2’ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಸಖತ್​ ಸುದ್ದು ಮಾಡುತ್ತಿದೆ. 14 ವರ್ಷಗಳ ಹಿಂದೆ ತೆರೆಕಂಡಿದ್ದ ಗಾಳಿಪಟ ಚಿತ್ರದ ಮುಂದುವರಿದ ಭಾಗವೇ ಗಾಳಿಪಟ 2 ಚಿತ್ರವಾಗಿದ್ದು ಮೊದಲ ಭಾಗಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ. ಮುಂಗಾರು ಮಳೆ ಚಿತ್ರದ ಮ್ಯಾಜಿಕ್​ ಜೋಡಿ ಅಂತಾ ಬಿರುದಾಂಕಿತರಾಗಿರುವ ನಟ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಈ ಚಿತ್ರದ ಮೂಲಕ ಮತ್ತೊಂದು ಮೈಲಿಗಲ್ಲು ನೆಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

Leave a comment

Your email address will not be published.