Categories: Entertainment

ನನ್ನ ಬಾಡಿ ಬಗ್ಗೆ ಕಾಮೆಂಟ್ ಮಾಡೋಕೆ ನೀವ್ಯಾರು? – ಪ್ರಿಯಾಂಕಾ ಉಪೇಂದ್ರ

ತೂಕ ಇಳಿಸಿಕೊಳ್ಳಲು ಸರ್ಜರಿ ಮಾಡಿಸಿಕೊಂಡು ನಿಧನರಾದ ಕಿರುತೆರೆ ನಟಿ ಚೇತನಾರಾಜ್ ಪರವಾಗಿ ಬಾಡಿ‌ಶೇಮಿಂಗ್ ಅನುಭವಿಸಿದ ಹಲವು ನಟಿಯರು ಇದರ ವಿರುದ್ಧ ಹರಿಹಾಯ್ದಿದ್ದಾರೆ..!!!

 

 

ಬಾಡಿ ಶೇಮಿಂಗ್ ಎಂದರೆ ಯಾರನ್ನಾದರೂ ಅವರ ದೈಹಿಕ ನೋಟಕ್ಕಾಗಿ ಅವಮಾನ ಮತ್ತು ಟೀಕೆಗೆ ಒಳಪಡಿಸುವ ಕ್ರಿಯೆ ಅಥವಾ ಅಭ್ಯಾಸ . ಬಾಡಿ ಶೇಮಿಂಗ್‌ನ ವ್ಯಾಪ್ತಿಯು ವಿಶಾಲವಾಗಿದೆ ಮತ್ತು ಕೊಬ್ಬು-ಶೇಮಿಂಗ್ , ತೆಳ್ಳಗೆ ಶೇಮಿಂಗ್, ಎತ್ತರ-ಶೇಮಿಂಗ್ , ಕೂದಲು (ಅಥವಾ ಅದರ ಕೊರತೆ), ಕೂದಲು-ಬಣ್ಣ , ದೇಹದ ಆಕಾರ , ಒಬ್ಬರ ಸ್ನಾಯುತ್ವಕ್ಕೆ ಸೀಮಿತವಾಗಿಲ್ಲದಿದ್ದರೂ ( ಅಥವಾ ಅದರ ಕೊರತೆ), ನೋಟ (ಮುಖದ ಲಕ್ಷಣಗಳು) ಮತ್ತು ಅದರ ವಿಶಾಲ ಅರ್ಥದಲ್ಲಿ ಟ್ಯಾಟೂಗಳು ಮತ್ತು ಚುಚ್ಚುವಿಕೆಗಳು ಅಥವಾ ಸೋರಿಯಾಸಿಸ್‌ನಂತಹ ದೈಹಿಕ ಗುರುತುಗಳನ್ನು ಬಿಡುವ ರೋಗಗಳ ಶೇಮಿಂಗ್ ಅನ್ನು ಸಹ ಒಳಗೊಂಡಿರಬಹುದು.

 

 

ಸಿನಿರಂಗದಲ್ಲಿ ಎಂಟ್ರಿ ಕೊಡುವ ಅನೇಕ ನಟಿಯರು ಬಾಡಿ ಶೇಮಿಂಗ್ ಅನುಭವಿಸಿದ್ದಾರೆ. ದೇಹದಲ್ಲಿ ಕೆಲ ಭಾಗಗಳ ಬಗ್ಗೆ ಬಾಡಿ ಶೇಮಿಂಗ್ ಸಮಸ್ಯೆ ಎದುರಿಸಿದ್ದು, ಇದರಿಂದ ಸಿನೆಮಾಗಳಿಂದ ವಂಚಿತರಾದ ಕೆಲ ಸನ್ನಿವೇಶಗಳೂ ಸಹ ನಡೆದಿದೆ ಎನ್ನಲಾಗಿದೆ.

 

 

ಚೇತನಾ ರಾಜ್ ಫ್ಯಾಟ್ ಸರ್ಜರಿ ವೇಳೆ ಮೃತಪಟ್ಟಾಗಿನಿಂದಲೂ ಅನೇಕ ತಾರೆಯರು ಬಾಡಿ ಶೇಮಿಂಗ್ ವಿರುದ್ಧ ಮಾತನಾಡ್ತಿದ್ದಾರೆ. ರಮ್ಯಾ, ಪ್ರಿಯಾಂಕಾ ಉಪೇಂದ್ರ, ರಾಕಿ ಸಾವಂತ್ ಹಲವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಚೇತನಾ ರಾಜ್ ಫ್ಯಾಟ್ ಸರ್ಜರಿ ವೇಳೆ ಮೃತಪಟ್ಟಾಗಿನಿಂದಲೂ ಅನೇಕ ತಾರೆಯರು ಬಾಡಿ ಶೇಮಿಂಗ್ ವಿರುದ್ಧ ಮಾತನಾಡ್ತಿದ್ದಾರೆ. ರಮ್ಯಾ, ಪ್ರಿಯಾಂಕಾ ಉಪೇಂದ್ರ, ರಾಕಿ ಸಾವಂತ್ ಅವರೆಲ್ಲಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

 

 

ಈಗಾಗಲೇ, ನಟಿ ರಮ್ಯಾ ಹಾಗೂ ಅಶ್ವಿತಿ ಶೆಟ್ಟಿ ಚಿತ್ರರಂಗದಲ್ಲಿರುವ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ. ಇದೀಗ ಪ್ರಿಯಾಂಕಾ ಉಪೇಂದ್ರ ಕೂಡ ತಮಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ನಾನು ಮಾಡೆಲಿಂಗ್‌ನಲ್ಲಿದ್ದೆ. ನಾನು ತುಂಬಾ ಹೈಟ್ ಇಲ್ಲ. ಅವಾಗ ಮಾಡೆಲಿಂಗ್‌ನಲ್ಲೂ ಅಭದ್ರತೆ ನನಗೆ ಕಾಡುತ್ತಿತ್ತು ಹೈಟ್ ಇಲ್ಲ ಅಂತ. ಭಾಷೆ ಬರಲ್ಲ ಅಂತಲೂ ಕೆಲವು ಆಫರ್ಸ್ ಕೈತಪ್ಪಿ ಹೋಯ್ತು. ಎಷ್ಟೋ ಆಡಿಷನ್‌ನಲ್ಲಿ ನನ್ನನ್ನ ಸೆಲೆಕ್ಟ್ ಮಾಡಲಿಲ್ಲ. ಆನಂತರ ನನಗೇನೋ ಒಳ್ಳೆ ಆಫರ್ಸ್ ಬಂತು. ಆದರೆ, ಅದಕ್ಕೂ ಮುನ್ನ ನಾನು ಕೂಡ ಎಲ್ಲವನ್ನೂ ಫೇಸ್ ಮಾಡಿದ್ದೇನೆ. ಆದರೆ, ನಾವು ಬೇಜಾರು ಮಾಡಿಕೊಳ್ಳಬಾರದು.

 

ಈಗಲೂ ನನಗೆ ಹೇಳ್ತಾರೆ.. ದಪ್ಪ ಆಗಿದ್ದೀರಾ, ಜಾಸ್ತಿ ಮೇಕಪ್ ಮಾಡ್ತೀರಾ ಅಂತೆಲ್ಲಾ ಮಾತಾಡ್ತಾರೆ. ಆದರೆ, ನಾವು ತಲೆ ಕೆಡಿಸಿಕೊಳ್ಳಬಾರದು. ನಮ್ಮನ್ನ ನಾವು ಪ್ರೀತಿಸಬೇಕು. ನಾವು ಆರೋಗ್ಯವಾಗಿ ಇರಬೇಕು. ಅದಕ್ಕಿಂತಲೂ ದೊಡ್ಡದು ಬೇರೇನೂ ಇಲ್ಲ. ಆರೋಗ್ಯವೇ ಇಲ್ಲ ಅಂದ್ರೆ ಬೇರೆ ಏನಿದ್ದು ಏನು ಪ್ರಯೋಜನ..?’’ ಎಂದು ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ.

 

karnataka

Recent Posts

ಸ್ಕೂಲ್ ನಲ್ಲಿ ಇಲ್ಲ ಕಾಲೇಜಿನಲ್ಲಿ ಇದ್ದ – ಬಾಯ್ ಫ್ರೆಂಡ್ ಗುಟ್ಟು ಬಿಚ್ಚಿಟ್ಟ ಕಮಲಿ ಖ್ಯಾತಿಯ ಅಮೂಲ್ಯ ಗೌಡ..!!!

ಕಿರುತೆರೆ ಲೋಕದ ಬಹು ನಿರೀಕ್ಷಿತ ಶೋ ಬಿಗ್ ಬಾಸ್. ಹೌದು ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ ಒಂಬತ್ತು ಆರಂಭಗೊಂಡಿದೆ.…

15 hours ago

೧೦೦ ಕೋಟಿ ಕ್ಲಬ್ ಸೇರುವ ಮುನ್ನವೇ, ೫ ನೇ ದಿನಕ್ಕೆ ಕಾಂತಾರ ಚಿತ್ರದ ರಿಷಬ್ ಗೆ ಭಾರೀ ಆಘಾತ..!!

ಸ್ನೇಹಿತರ ಕಾಂತಾರ ಚಿತ್ರಕ್ಕೆ ಆರಂಭದಿಂದ ದೊಡ್ಡ ಮಟ್ಟದ ಸ್ಪಂದನೆ ಸಿಗುತ್ತಿದ್ದು, ಅದು ಅತ್ಯಧಿಕ ಪರದೆಗಳಲ್ಲಿ ಚಿತ್ರ ಪ್ರದರ್ಶನಗಳುಗೊಳ್ಳುವುದು ಅಷ್ಟೇ ಅಲ್ಲದೆ…

15 hours ago

ಮದುವೆಯಾದ ಒಂದೇ ತಿಂಗಳಿಗೆ ಪತ್ನಿಯಿಂದ ದೂರಾಗುತ್ತಿರುವ ರವೀಂದರ್.!! ಕಾರಣವೇನು ಗೊತ್ತಾ

ಕಳೆದ ಒಂದು ತಿಂಗಳಿನಿಂದ ಟ್ರೆಂಡಿಂಗ್‌ನಲ್ಲಿದ್ದ ಸ್ಟಾರ್ ಜೋಡಿ ನಿರೂಪಕಿ ಮಹಾಲಕ್ಷ್ಮಿ ಹಾಗು ನಿರ್ಮಾಪಕ ರವಿತರ ಜೋಡಿಯ ಕುರಿತು ಇದೀಗ ಹೊಸ…

16 hours ago

ಹೊಸ ಮನೆಯಲ್ಲಿ ಮಕ್ಕಳ ಜೊತೆ ಆಯುಧ ಪೂಜೆಯಲ್ಲಿ ನಟ ಶರಣ್

ನಟ ಶರಣ್ ಇವರ ನಟನೆ ನನಗೆ ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತದೆ. ಚಂದನವನದ ಅದ್ಭುತ ನಟರಲ್ಲಿ ಶರಣ್ ಸಹ ಒಬ್ಬರು. ಶರಣ್…

16 hours ago

ತಮ್ಮ ಬೈಸಿಕಲ್ ಜೊತೆ ಯಶ್ ಐಷಾರಾಮಿ ಯಂತ್ರಗಳಿಗೆ ಪೂಜೆ ಸಲ್ಲಿಸಿದ ಮಗ ಯತರ್ವ್ ಯಶ್!

ನಟ ರಾಕಿಂಗ್ ಸ್ಟಾರ್ ತಮ್ಮ ಕಾರುಗಳಿಗೆ ಪೂಜೆ ಸಲ್ಲಿಸಿದ್ದಾರೆ. ನಟ ಯಶ್ ಅವರು ಮನೆಯಲ್ಲಿ ತಮ್ಮ ಎಲ್ಲಾ ಕಾರುಗಳನ್ನು ಸಮಾನವಾಗಿ…

1 day ago

ಗೀತಾ ಸೀರಿಯಲ್ ನಟಿ ಭವ್ಯ ಗೌಡ, ನಟ ಧನುಷ್ ಗೌಡ ಚಾಮುಂಡೇಶ್ವರಿ ಸನ್ನಿಧಿಯಲ್ಲಿ

ಭವ್ಯಾ ಗೌಡ ಮತ್ತು ಧನುಷ್ ಗೌಡ ನಡುವಿನ ವಯಸ್ಸಿನ ವ್ಯತ್ಯಾಸ ಗಮನಾರ್ಹವಾಗಿದೆ. ಭವ್ಯಾ ಗೌಡಗೆ ಕೇವಲ 23 ವರ್ಷ, ಧನುಷ್…

1 day ago