ಕನ್ನಡ ನಟ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್ ದಂಪತಿ ಇದೀಗ ಸಂಭ್ರಮದಲ್ಲಿದ್ದಾರೆ. ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪ್ರೇರಣಾ ತುಂಬು ಗರ್ಭಿಣಿಯಾಗಿದ್ದು, ಇತ್ತೀಚೆಗಷ್ಟೇ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು. ಪ್ರೇರಣಾ ಅವರ ಸೀಮಂತ ಶಾಸ್ತ್ರಕ್ಕೆ ಮೇಘನಾ ರಾಜ್, ಅರ್ಜುನ್ ಸರ್ಜಾ, ತಾರಾ ಅನುರಾಧಾ ಸೇರಿದಂತೆ ಅನೇಕ ತಾರೆಯರು ಪಾಲ್ಗೊಂಡಿದ್ದರು. ಪ್ರೇರಣಾಗೆ ಎಲ್ಲರೂ ಶುಭ ಹಾರೈಸಿದ್ದಾರೆ.

 

 

ವರ್ಷಗಳ ಕಾಲ ಪ್ರೀತಿಸಿ ಮದುವೆಯಾದವರು ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್. 2019 ರಲ್ಲಿ ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇದೀಗ ತಂದೆ ತಾಯಿ ಆಗಿ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಬಡ್ತಿ ಪಡೆಯುತ್ತಿದ್ದಾರೆ.

 

 

ಚಿರಂಜೀವಿ ಸರ್ಜಾ ಅವರ ನಿಧನದಿಂದ ಸರ್ಜಾ ಕುಟುಂಬದಲ್ಲಿ ಕತ್ತಲು ಆವರಿಸಿತ್ತು. ಆ ಬಳಿಕ ರಾಯನ್ ಜನಿಸಿದ. ಈಗ ಸರ್ಜಾ ಕುಟುಂಬಕ್ಕೆ ಮತ್ತೊಂದು ಸದಸ್ಯನ ಆಗಮನ ಆಗುತ್ತಿದೆ. ಕೆಲ ದಿನಗಳ ಹಿಂದೆ ತಂದೆ ಆಗುತ್ತಿರುವ ಬಗ್ಗೆ ಇತ್ತೀಚೆಗೆ ಧ್ರುವ ಸರ್ಜಾ ಘೋಷಣೆ ಮಾಡಿದ್ದರು. ಫೋಟೋಶೂಟ್ ಮೂಲಕ ಧ್ರುವ ಸರ್ಜಾ ಖುಷಿ ವಿಚಾರ ಹಂಚಿಕೊಂಡಿದ್ದರು.

 

 

ಬೆಂಗಳೂರಿನ ಐಷಾರಾಮಿ ಹೋಟೆಲ್ ಶೆರಾಟನ್‌ ಗ್ರ್ಯಾಂಡ್‌ನಲ್ಲಿ ಸೀಮಂತ ಶಾಸ್ತ್ರಿ ನಡೆದಿದೆ. ಕುಟುಂಬದಸ್ಥರು ಮತ್ತು ಚಿತ್ರರಂಗದ ಆಪ್ತರು ಭಾಗಿಯಾಗಿದ್ದರು.

 

 

8 ತಿಂಗಳು ಪೂರೈಸಿ ಪ್ರೇರಣಾಗೆ 9 ತಿಂಗಳಾಗಿದೆ. ಇದೇ ಸಮಯದಲ್ಲಿ ಸೀಮಂತಾ ಕಾರ್ಯ ನೆರವೇರಿಸಲಾಗಿದ್ದು ಇದೇ ತಿಂಗಳು ಧ್ರುವ ಸರ್ಜಾ ಮಗ ಅಥವಾ ಮಗಳ ನಿರೀಕ್ಷೆಯಲ್ಲಿ ಇದ್ದಾರೆ. ಕಾರ್ಯಕ್ರಮದಲ್ಲಿ ಸರ್ಜಾ ಕುಟುಂಬದ ಜೊತೆಗೆ ಪ್ರೇರಣಾ ಕುಟುಂಬವೂ ಭಾಗಿಯಾಗಿದ್ದು ಬಹಳ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯಕ್ರಮ ನೆರವೇರಿದೆ. ಇದಕ್ಕೆ ಸಂಬಂಧಿಸಿದ ಕೆಲ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

 

ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಸೇರಿದಂತೆ ಸರ್ಜಾ ಕುಟುಂಬಕ್ಕೆ ಆಪ್ತರಾಗಿರುವ ಚಿತ್ರರಂಗದ ಗಣ್ಯಾತಿ ಗಣ್ಯರು ಶುಭ ಕಾರ್ಯಕ್ಕೆ ಬಂದು ಪ್ರೇರಣಾಗೆ ಆಶೀರ್ವದಿಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಥಮ್ ಪ್ರೇರಣಾ ಅವರಿಗೆ ದೊಡ್ಡ ಬಾರ್ಬಿ ಡಾಲ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಧೃವ ಹಾಗೂ ಪ್ರೇರಣಾರಿಗೆ ಶುಭಹಾರೈಸಿದ್ದಾರೆ.

Leave a comment

Your email address will not be published.