ಅಣ್ಣಾವ್ರ ಮುದ್ದಿನ ಮಗ.. ದೊಡ್ಮನೆಯ ರಾಜಕುಮಾರ.. ಪುನೀತ್ ರಾಜ್ಕುಮಾರ್ ಇನ್ನಿಲ್ಲ ಅನ್ನೋ ಮಾತನ್ನು ಇಂದಿಗೂ ಅರಗಿಸಿಕೊಳ್ಳುದು ಕಷ್ಟ. ಆದರೆ ಅವರಿಲ್ಲ ಅನ್ನೋ ಕೊರಗನ್ನು ಅಭಿಮಾನಿ ದೇವರುಗಳು ಎಂದಿಗೂ ತೋರಿಸಿಕೊಂಡಿಲ್ಲ. ಸಾಕ್ಷಾತ್ ಪರಮಾತ್ಮನಂತೆ ಅವರನ್ನು ಇಂದಿಗೂ ಆರಾಧಿಸುತ್ತಲೇ ಬಂದಿದ್ದಾರೆ. ಇದೀಗ ಅದೇ ಪರಮಾತ್ಮನ ದರ್ಶನವಾಗಿದೆ. ಅದೂ ‘ಲಕ್ಕಿ ಮ್ಯಾನ್’ ಸಿನಿಮಾ ಮೂಲಕ ಅಪ್ಪು ಅಭಿಮಾನಿಗಳ ಮುಂದೆ ಬಂದಿದ್ದಾರೆ.

 

 

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ ಈ ಸಿನಿಮಾ ಇದ್ದಾರೆ ಅನ್ನೋ ಕಾರಣಕ್ಕೆ ಈ ಮಟ್ಟಿಗೆ ಕ್ರೇಜ್ ಸೃಷ್ಟಿಸಿದೆ. ಯಾಕಂದ್ರೆ, ಇದು ದೇವರ ಪುತ್ರ, ಅಭಿಮಾನಿಗಳ ಪರಮಾತ್ಮ ಅಪ್ಪು ಕೊನೆಯಾಗಿ ಕಾಣಿಸಿಕೊಂಡಿರೊ ಕಮರ್ಷಿಯಲ್ ಸಿನಿಮಾ. ಇದು ಕಾಕತಾಳೀಯವೋ ಏನೋ ಸಿನಿಮಾದಲ್ಲಿ ಅಪ್ಪು ದೇವರಾಗಿಯೇ ದರ್ಶನ ಕೊಟ್ಟಿದ್ದಾರೆ. ಇದು ತಮಿಳಿನ ಸೂಪರ್‌ ಹಿಟ್ ಸಿನಿಮಾ ‘ಓ ಮೈ ಕಡವುಲೆ’ ರಿಮೇಕ್ ಅನ್ನೋದು ಈಗಾಗಲೇ ಗೊತ್ತಿದೆ. ಇಂತಹ ಸೂಪರ್ ಹಿಟ್ ಸಿನಿಮಾ ಕನ್ನಡಕ್ಕೆ ಬಂದಾಗ ನಿರೀಕ್ಷೆಗಳು ಸಹಜ. ಅದರಲ್ಲೂ ಅಪ್ಪು ಕೊನೆಯ ಕಮರ್ಷಿಯಲ್ ಸಿನಿಮಾ ಅಂದಾಗ ಆ ನಿರೀಕ್ಷೆ ದುಪ್ಪಟ್ಟಾಗೋದು ಸಹಜ.

 

 

‘ಲಕ್ಕಿ ಮ್ಯಾನ್’ ಸಿನಿಮಾದಲ್ಲಿ ಅಪ್ಪುನ ನೋಡ್ತಾ ನೋಡ್ತಾನೆ ಕಣ್ಣ ಹನಿಗಳು ಕೆನ್ನೆಯೊಂದಿಗೆ ಮಾತಿಗಿಳಿದು ಬಿಡ್ತಾವೆ. ಆ ಕ್ರೂರ ವಿಧಿ ಮೇಲೆ ಹಿಡಿ ಶಾಪ ಹಾಕದೆ ಇರಲು ಸಾಧ್ಯವೇ ಇಲ್ಲ. ಆ ದೇವರೇ ಸಿನಿಮಾದಲ್ಲಿ ನಾಯಕನಿಗೆ ಎರಡನೇ ಚಾನ್ಸ್ ಕೊಟ್ಟಂತೆ, ಅಪ್ಪುಗೂ ಎರಡನೇ ಚಾನ್ಸ್ ಕೊಡಬಾರದಿತ್ತಾ ಅನ್ನೋ ನೋವು ಕಾಡುತ್ತೆ. ಇಡೀ ಸಿನಿಮಾದ ಹೈಲೈಟ್ ಪುನೀತ್ ರಾಜ್‌ಕುಮಾರ್. ನಿಜಕ್ಕೂ ದೇವರು ಅಂತ ಅನಿಸಿಬಿಡುತ್ತಾರೆ.

 

 

‘ಚಿತ್ರ’ ಸಿನಿಮಾ ಖ್ಯಾತಿಯ ನಟ ನಾಗೇಂದ್ರ ಪ್ರಸಾದ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ‘ಲಕ್ಕಿಮ್ಯಾನ್’ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ದೇವರ ರೂಪದಲ್ಲಿ ಕಾಣಸಿಕೊಂಡಿದ್ದು, ಇದು ಅತಿಥಿ ಪಾತ್ರವಾಗಿದೆ. ‘ಲಕ್ಕಿ ಮ್ಯಾನ್’ ಸಿನಿಮಾದ ಟೀಸರ್ ಅನ್ನು ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ರಿಲೀಸ್ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.

 

 

ಇದೀಗ ‘ಲಕ್ಕಿಮ್ಯಾನ್’ ಚಿತ್ರವನ್ನು ಅಶ್ವಿನಿ ನೋಡುವುದಿಲ್ಲವೆಂದಿದ್ದಾರೆ. ಅವರು ದೇವರ ಹಾಗೆ ದೇವರ ರೀತಿಯೇ ಉಳಿಯಲಿ. ಅವರನ್ನು ನಾನು ನೋಡಿ ಸಂಕಟ ಪಡುವುದು ಬೇಡ ಎಂದು ಭಾವನಾತ್ಮಕವಾಗಿ ಮಾತನಾಡಿದ್ದಾರೆ.

 

Leave a comment

Your email address will not be published.