ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ತನ್ನ ಸುಮಧುರ ಕಂಠದಿಂದ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಗಾಯಕ ವಿಜಯ್ ಪ್ರಕಾಶ್. ಸೆಲೆಬ್ರೇಷನ್ಸ್​ ಟೀ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೊಡ್ಮನೆ ರಾಜಕುಮಾರನನ್ನು ಸ್ಮರಿಸಿ ಗೌರವಿಸಲಾಯಿತು. ಇದೇ ವೇಳೆ ವಿಜಯ್‌ ಪ್ರಕಾಶ್, ಬೊಂಬೆ ಹೇಳುತೈತೆ ಹಾಡು ಹಾಡಿದರು.

 

 

ಕನ್ನಡ ಚಿತ್ರರಂಗದ ಹೆಸರಾಂತ ಗಾಯಕ ವಿಜಯ್ ಪ್ರಕಾಶ್‌ ಈ ವರ್ಷ ತಮ್ಮ ಹುಟ್ಟು ಹಬ್ಬವನ್ನು ಮಾಧ್ಯಮ ಸ್ನೇಹಿತರ ಜೊತೆ ಆಚರಿಸಿಕೊಂಡರು. ಇದೇ ವೇಳೆ ತಾವು ಟೀ ಬ್ರ್ಯಾಂಡ್‌ ಒಂದಕ್ಕೆ ರಾಯಭಾರಿ ಆಗಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಡಬಲ್ ಧಮಾಕ ಆಚರಿಸುತ್ತಿರುವ ವಿಜಯ್, ಡಾ.ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಹಾಡುಗಳನ್ನು ಹಾಡಿ ಮನೋರಂಜಿಸಿದ್ದಾರೆ. ಅದರಲ್ಲೂ ಗೊಂಬೆ ಹೇಳುತೈತೆ ಹಾಡು ಹಾಡುವುದಕ್ಕೆ ಭಯ ಆಗುತ್ತದೆ ಎಂದು ಹೇಳಿಕೊಂಡಿದ್ದಾರೆ.

 

 

ಅಪ್ಪು ಸರ್ ಹೋದ ಮೇಲೆ ನನಗೆ ಗೊಂಬೆ ಹೇಳುತೈತೆ ಹಾಡನ್ನು ಹಾಡುವುದಕ್ಕೆ ಭಯವಾಗುತ್ತಿತ್ತು. ಈ ಹಾಡನ್ನು ಹಾಡೋಕೆ ಸಾಧ್ಯವಾ ಅಂದುಕೊಂಡಿದ್ದೆ. ಇದನ್ನು ಹಾಡುವುದು ನನ್ನ ಕರ್ತವ್ಯ, ಕಳೆದ ಫೆಬ್ರವರಿ 19ರಂದು ದುಬೈನಲ್ಲಿ ನಾನು ಕಾರ್ಯಕ್ರಮ ನೀಡುವಾಗ ಅಲ್ಲಿದ್ದ ಸಮಸ್ತ ಕನ್ನಡಿಗರೂ ಮೂರು ಬಾರಿ ನನ್ನ ಹತ್ತಿರ ಈ ಹಾಡು ಹಾಡಿಸಿದ್ದರು. ಮೂರು ಸಲವೂ ಮೂರು ರೀತಿಯಲ್ಲಿ ಅಪ್ಪು ಸರ್‌ ಅವರನ್ನು ನೋಡಿದ್ದರು, ಅವರೆಲ್ಲರ ಕಣ್ಣುಗಳಲ್ಲಿ ನಾನು ಅಪ್ಪು ಸರ್‌ನ ಪ್ರೆಸೆನ್ಸ್ ಫೀಲ್ ಮಾಡಿಕೊಂಡೆ. ಇದು ಕೇವಲ ಒಂದು ಹಾಡಲ್ಲ ಒಬ್ಬ ಮಾಹನ್ ವ್ಯಕ್ತಿಯ ದೊಡ್ಡ ಪ್ರಯಾಣ ಇದು. ಕಡಿಮೆ ವಯಸ್ಸಿನಲ್ಲಿ ಅವರು ಮಾಡಿರುವ ದೊಡ್ಡ ಸಾಧನೆಗೆ ಈ ಹಾಡು.

 

 

ಅವತ್ತು ನಾನು ಅವರು ನಾನೇ ಈ ಹಾಡನ್ನು ಹಾಡಬೇಕೆಂದು ನೆನಪಿಸಿಕೊಂಡಿದ್ದಕ್ಕೆ ಧನ್ಯವಾದಗಳು,’ ಎಂದು ವಿಜಯ್ ಪ್ರಕಾಶ್ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನಾನು ಹುಟ್ಟಿ ಬೆಳೆದಿದ್ದು ಮೈಸೂರಿನಲ್ಲಿ, ಯೋಚನೆ, ಆಲೋಚನೆ ಯಾವ ಭಾಷೆಯಲ್ಲಿ ಮಾಡಿದ್ದರೂ ಅದನ್ನ ಹುಟ್ಟಿ ಹಾಕುವುದು ಕನ್ನಡವೇ. ಕನ್ನಡ ನನ್ನ ಶರೀರದಲ್ಲಿ ಬೆರೆತು ಹೋಗಿದೆ. ಮಾತಿರಲಿ, ಹಾಡಿರಲಿ, ಕನ್ನಡದಲ್ಲಿ ಆತ್ಮೀಯತೆ ತಾನಾಗಿಯೇ ಬರುತ್ತದೆ. ನನ್ನನ್ನು ಹುಟ್ಟಿಸಿ, ಸಮಾದಲ್ಲಿ ನಾನು ಒಬ್ಬ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದೀನಿ, ಅಂದ್ರೆ ಅದು ಕನ್ನಡ ಭಾಷೆಯಿಂದ,’ ಎಂದು ವಿಜಯ್ ಹೇಳಿದ್ದಾರೆ.

 

 

ಅಪ್ಪುವಿಗಾಗಿ ಹಾಡಿದ ‘ಬೊಂಬೆ ಹೇಳುತೈತೆ’ ವಿಶೇಷ ಹಾಡಿಗಾಗಿ ಸುಮಾರು 15ರಿಂದ 20 ದಿನಗಳ ಸಮಯ ತೆಗೆದುಕೊಂಡು ಈ ಹಾಡು ಹಾಡಿದ್ದಾಗಿ ವಿಜಯ ಪ್ರಕಾಶ್ ತಿಳಿಸಿದ್ದಾರೆ.

 

Leave a comment

Your email address will not be published.