Categories: Entertainment

ಉಪ್ಪಿ ಬೇಡ ಅಂದ್ರು ಮಲ್ಲ ಸಿನಿಮಾದಲ್ಲಿ ಪ್ರಿಯಾಂಕಾ ನಟಿಸಿದ್ಯಾಕೆ? ಮಲ್ಲ ನೋಡಿ ಮಂಕಾಗಿದ್ದ ಉಪ್ಪಿ

ರಿಯಲ್ ಸ್ಟಾರ್ ಉಪೇಂದ್ರ ವಿರೋಧಿಸಿದರೂ, ಧಿಕ್ಕರಿಸಿ ಪ್ರಿಯಾಂಕ ದ್ವಿವೇದಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರೊಂದಿಗೆ ಮಲ್ಲ ಚಿತ್ರದಲ್ಲಿ ಅಭಿನಯಿಸಲು ಕಾರಣವೇನು ಗೊತ್ತಾ..?

 

 

ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾದ ಅಂತಹ ಚಿತ್ರಗಳ ಕುರಿತಂತೆ ನಮಗೆ ಗೊತ್ತಿರುತ್ತದೆ ಏಕೆಂದರೆ ಅವುಗಳು ಬಿಡುಗಡೆಯಾಗಿ ಹೆಚ್ಚು ವರ್ಷಗಳು ಕೂಡ ಆಗಿಲ್ಲ ಹಾಗೂ ಅವುಗಳನ್ನು ನಾವು ಇತ್ತೀಚಿನ ದಿನಗಳಲ್ಲಿ ನೋಡಿರುತ್ತೇವೆ ಕೂಡ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಕುರಿತಂತೆ ಸ್ನೇಹಿತರ ಬದಲಾಗಿ ಹಲವಾರು ವರ್ಷಗಳ ಹಿಂದೆ ಬಿಡುಗಡೆಯಾದ ಅಂತಹ ಸಿನಿಮಾದ ಕುರಿತಂತೆ.

 

 

ನಾವು ಮಾತನಾಡಲು ಹೊರಟಿರುವುದು ಕರೆದು ಸ್ಟಾರ್ ರವಿಚಂದ್ರನ್ ನಟನೆ ಹಾಗೂ ನಿರ್ದೇಶನ ಮಾಡಿರುವ ಮಲ್ಲ ಚಿತ್ರದ ಕುರಿತಂತೆ. ಹೌದು ಸ್ನೇಹಿತರೆ ಮಲ್ಲ ಚಿತ್ರ ಕನ್ನಡ ಚಿತ್ರರಂಗದ ಎವರ್ಗ್ರೀನ್ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾಗಿದೆ. ಮಲ್ಲ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರವರ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ನೀವೆಲ್ಲ ನೋಡಿರುತ್ತೀರಿ. ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್ ರವರು ಈ ಚಿತ್ರದಲ್ಲಿ ನಾಯಕನಟನಾಗಿ ನಟಿಸುವುದು ಮಾತ್ರವಲ್ಲದೆ ನಿರ್ದೇಶನವನ್ನು ಕೂಡ ಮಾಡಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಎಂದಮೇಲೆ ಕೇಳಬೇಕಾ ಸ್ನೇಹಿತರೆ ಅವರು ನಿರ್ದೇಶನ ಮಾಡುತ್ತಿದ್ದಾರೆ ಎಂದರೆ ಖಂಡಿತವಾಗಿಯೂ ಚಿತ್ರ ಕೂಡ ಭರ್ಜರಿಯಾಗಿ ಮೂಡಿಬರುತ್ತದೆ.

 

 

ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಕೋಟಿ ರಾಮು ರವರು. ಏನು ಮಲ್ಲ ಚಿತ್ರದಲ್ಲಿ ನಾಯಕ ನಟಿಯಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ರವರಿಗೆ ಜೋಡಿಯಾಗಿದ್ದ ಪ್ರಿಯಾಂಕ ಉಪೇಂದ್ರ ರವರು. ಹೌದು ಸ್ನೇಹಿತರೆ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ಸಾಕಷ್ಟು ಗ್ಲಾಮರಸ್ ಪಾತ್ರವನ್ನು ನಿರ್ವಹಿಸಿದ್ದರು. ಇನ್ನು ಇಂದಿಗೂ ಕೂಡ ಈ ಚಿತ್ರ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಸಿನಿ ಜೀವನದಲ್ಲಿ ಬಹಳಷ್ಟು ಮಹತ್ವದ ಸಿನಿಮಾವಾಗಿ ಗೋಚರಿಸುತ್ತದೆ.

 

 

ಕ್ರೇಜಿಸ್ಟಾರ್ ರವಿಚಂದ್ರನ್ ರವರ ವಿಭಿನ್ನವಾದ ನಿರ್ದೇಶನ ಶೈಲಿ ಹಾಗೂ ಅವರ ಪಾತ್ರದ ವೈಶಿಷ್ಟತೆ ಕಾರಣ ಮಲ್ಲ ಚಿತ್ರ ಇಂದಿಗೂ ಕೂಡ ಪ್ರೇಕ್ಷಕರಲ್ಲಿ ವಿಶಿಷ್ಟವಾದ ಸ್ಥಾನವನ್ನು ಹೊಂದಿದೆ. ಇನ್ನು ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಎಷ್ಟು ಗಳಿಕೆ ಮಾಡಿತ್ತು ಗೊತ್ತ ಸ್ನೇಹಿತರೆ. ಬನ್ನಿ ನಿಮಗೆ ವಿವರವಾಗಿ ಹೇಳುತ್ತೇನೆ. ಹೌದು ಸ್ನೇಹಿತರೆ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿ ನಿರ್ದೇಶಿಸಿರುವ ಮಲ್ಲ ಚಿತ್ರ 2004 ರಲ್ಲಿ ಬಿಡುಗಡೆಯಾಗಿ ಬಾಕ್ಸಾಫೀಸಿನಲ್ಲಿ ಅಂದಿನ ಕಾಲಕ್ಕೆ ಬರೋಬ್ಬರಿ 8 ಕೋಟಿ ರೂಪಾಯಿ ಯನ್ನು ಗಳಿಸಿತ್ತು.

 

 

ಸಾಮಾನ್ಯವಾಗಿ ಯಾವುದೇ ಚಿತ್ರ ನಟ ಅಥವಾ ನಟಿ ಮದುವೆ ಆದಮೇಲೆ ತಮ್ಮ ಗಂಡ ಅಥವಾ ಹೆಂಡತಿ ಹಸಿ ಬಿಸಿ ದೃಶ್ಯಗಳಲ್ಲಿ, ರೋಮ್ಯಾಂಟಿಕ್ ಸೀನ್ ಗಳಲ್ಲಿ ನಟಿಸುವುದನ್ನು ಇಷ್ಟ ಪಡುವುದಿಲ್ಲ. ಅದೇ ರೀತಿ ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ಅವರು ಕೂಡ ತಮ್ಮ ಪತ್ನಿ ಪ್ರಿಯಾಂಕ ಅವರು ನಟಿಸಿದ್ದ ಮಲ್ಲ ಚಿತ್ರದಿಂದ ತೀರಾ ಕುಗ್ಗಿ ಹೋಗಿದ್ದರು. ಮಲ್ಲ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಲ್ಲ ಸಿನಿಮಾ ಕೇವಲ ಒಂದಲ್ಲ ಬರೋಬ್ಬರಿ ಐದು ವರ್ಷಗಳ ಕಾಲ ಒಂದೇ ಥಿಯೇಟರ್ ನಲ್ಲಿ ಚಾಲನೆ ಕಂಡ ಚಿತ್ರ.

 

 

ಈ ಸಿನಿಮಾದಿಂದ ಉಪೇಂದ್ರ ಅವರ ಜೀವನದಲ್ಲಿ ದೊಡ್ಡ ಸಮಸ್ಯೆಯೇ ಆಗಿತ್ತು. ಉಪೇಂದ್ರ ಅವರಿಗೆ ಬೆಂಗಾಲಿ ಮೂಲದ ಪ್ರಿಯಾಂಕ ಅವರ ಪರಿಚಯ ತೆಲುಗಿನ ರಾ ಸಿನಿಮಾದಿಂದ ಆಗಿತ್ತು. ಅಲ್ಲಿಂದಲೇ ಅವರ ಪ್ರೇಮ ಚಿಗುರೊಡೆದಿತ್ತು. ನಂತರ ಪ್ರಿಯಾಂಕ ಅವರು ಕನ್ನಡದ ಕೋಟಿಗೊಬ್ಬ ಸಿನಿಮಾದಲ್ಲಿ ಅಭಿನಯಿಸಿದ್ದರು. ಅದಾಗಿ ಉಪೇಂದ್ರ ಜೊತೆ ಪ್ರಿಯಾಂಕ ಅವರು ಹೆಚ್ 2ಒ ಸಿನಿಮಾದಲ್ಲಿ ನಟಿಸಿದ್ದರು.

 

 

ಉಪೇಂದ್ರ ಹಾಗೂ ಪ್ರಿಯಾಂಕ ಭಾಂದವ್ಯ ಗಟ್ಟಿಯಾಗಿ, ಮದುವೆ ಯೋಚನೆ ಮಾಡಿದ್ದರು. ಆದರೆ ಇಬ್ಬರ ಸಂಪ್ರದಾಯವೂ ಬೇರೆ ಬೇರೆ, ಪ್ರಿಯಾಂಕ ಅಪ್ಪಟ ಬೆಂಗಾಲಿ ಬೆಡಗಿ ಇಲ್ಲಿನ ಶಾಸ್ತ್ರ ಸಂಪ್ರದಾಯ ಯಾವುದೂ ಅವರಿಗೆ ಗೊತ್ತಿರಲಿಲ್ಲ, ಆದರೂ ಇವರಿಬ್ಬರ ಪ್ರೀತಿ ಗಟ್ಟಿಯಾಗಿದ್ದ ಕಾರಣ ಎರಡು ಮನೆಯವರು ಇವರ ಪ್ರೀತಿಗೆ ಸಮ್ಮತಿ ಸೂಚಿಸಿದ್ದರು. ಆದರೆ ಆಗ ಉಪೇಂದ್ರ ಅವರು ಸ್ಟಾರ್ ನಟರಾಗಿದ್ದರು, ಸಾಲು ಸಾಲು ಸಿನಿಮಾಗಳು ಅವರ ಕೈಯಲ್ಲಿತ್ತು.

 

 

ಹಾಗಾಗಿ ಮದುವೆಯನ್ನು ಮುಂದೂಡಿದ್ದರು. ಇದೇ ಸಂದರ್ಭದಲ್ಲಿ ಪ್ರಿಯಾಂಕ ಅವರಿಗೆ ಮಲ್ಲ ಸಿನಿಮಾ ಆಫರ್ ಬರುತ್ತದೆ. ಇದನ್ನು ಪ್ರಿಯಾಂಕ ಅವರು ಉಪೇಂದ್ರರಿಗೆ ತಿಳಿಸಿದಾಗ, ಇದಕ್ಕೆ ಉಪೇಂದ್ರ ಅವರು ಸುತಾರಾಂ ಒಪ್ಪುವುದಿಲ್ಲ. ಕಾರಣ ರವಿಚಂದ್ರನ್ ಸಿನಿಮಾದಲ್ಲಿ ಹೀರೋಯಿನ್ ಗಳನ್ನು ಗ್ಲಾಮರಸ್ ಆಗಿ ತೋರಿಸಲಾಗುತ್ತದೆ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಹಠಕ್ಕೆ ಬಿದ್ದ ಪ್ರಿಯಾಂಕ ಮಾತ್ರ ಸಹಿ ಮಾಡಿ ಸಿನಿಮಾದಲ್ಲಿ ನಟಿಸುತ್ತಾರೆ. ಈ ಸಿನಿಮಾದ ಹಾಡು ರಿಲೀಸ್ ಆಗುವ ಮುನ್ನ ಡಿಸೆಂಬರ್ ತಿಂಗಳಲ್ಲಿ ಇವರಿಬ್ಬರ ಮದುವೆ ಆಗುತ್ತದೆ.

 

 

ಅದಾಗಿ ಎರಡೇ ತಿಂಗಳಲ್ಲಿ ಅಂದರೆ ಫೆಬ್ರವರಿ 2004 ರಲ್ಲಿ ಮಲ್ಲ ಸಿನಿಮಾದ ಹಾಡುಗಳು ರಿಲೀಸ್ ಆದಾಗ, ಅದರಲ್ಲಿ ಪ್ರಿಯಾಂಕ ಅವರ ಹಸಿ ಬಿಸಿ ಹಾಗೂ ರೋಮ್ಯಾಂಟಿಕ್ ಸೀನ್ ನೋಡಿ ಉಪೇಂದ್ರ ಅವರು ತೀರಾ ಡಿಸ್ಟರ್ಬ್ ಆಗಿದ್ದರು. ಮದುವೆ ನಂತರ ಈ ಸಿನಿಮಾ ರಿಲೀಸ್ ಆಗಿರುವ ಕಾರಣ ತನ್ನ ಪತ್ನಿಯ ಬಗ್ಗೆ ಹಲವಾರು ಜನರು ಕೆಟ್ಟದಾಗಿ ಮಾತನಾಡುವುದನ್ನು ಕೇಳಲಾಗದೆ ಉಪೇಂದ್ರ ಅವರು ತೀರಾ ಕುಗ್ಗಿ ಹೋಗಿದ್ರು. ಆದ್ರೆ ಕ್ರಮೇಣ ಆ ವಿವಾದ, ಕಿರಿಕ್’ಗಳು ತಣ್ಣಗಾಗಿ, ಇದೀಗ ಉಪೇಂದ್ರ ಅವರದ್ದು ಒಂದು ಸುಂದರ ಕುಟುಂಬವಾಗಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

 

karnataka

Recent Posts

ಸ್ಕೂಲ್ ನಲ್ಲಿ ಇಲ್ಲ ಕಾಲೇಜಿನಲ್ಲಿ ಇದ್ದ – ಬಾಯ್ ಫ್ರೆಂಡ್ ಗುಟ್ಟು ಬಿಚ್ಚಿಟ್ಟ ಕಮಲಿ ಖ್ಯಾತಿಯ ಅಮೂಲ್ಯ ಗೌಡ..!!!

ಕಿರುತೆರೆ ಲೋಕದ ಬಹು ನಿರೀಕ್ಷಿತ ಶೋ ಬಿಗ್ ಬಾಸ್. ಹೌದು ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ ಒಂಬತ್ತು ಆರಂಭಗೊಂಡಿದೆ.…

9 hours ago

೧೦೦ ಕೋಟಿ ಕ್ಲಬ್ ಸೇರುವ ಮುನ್ನವೇ, ೫ ನೇ ದಿನಕ್ಕೆ ಕಾಂತಾರ ಚಿತ್ರದ ರಿಷಬ್ ಗೆ ಭಾರೀ ಆಘಾತ..!!

ಸ್ನೇಹಿತರ ಕಾಂತಾರ ಚಿತ್ರಕ್ಕೆ ಆರಂಭದಿಂದ ದೊಡ್ಡ ಮಟ್ಟದ ಸ್ಪಂದನೆ ಸಿಗುತ್ತಿದ್ದು, ಅದು ಅತ್ಯಧಿಕ ಪರದೆಗಳಲ್ಲಿ ಚಿತ್ರ ಪ್ರದರ್ಶನಗಳುಗೊಳ್ಳುವುದು ಅಷ್ಟೇ ಅಲ್ಲದೆ…

9 hours ago

ಮದುವೆಯಾದ ಒಂದೇ ತಿಂಗಳಿಗೆ ಪತ್ನಿಯಿಂದ ದೂರಾಗುತ್ತಿರುವ ರವೀಂದರ್.!! ಕಾರಣವೇನು ಗೊತ್ತಾ

ಕಳೆದ ಒಂದು ತಿಂಗಳಿನಿಂದ ಟ್ರೆಂಡಿಂಗ್‌ನಲ್ಲಿದ್ದ ಸ್ಟಾರ್ ಜೋಡಿ ನಿರೂಪಕಿ ಮಹಾಲಕ್ಷ್ಮಿ ಹಾಗು ನಿರ್ಮಾಪಕ ರವಿತರ ಜೋಡಿಯ ಕುರಿತು ಇದೀಗ ಹೊಸ…

10 hours ago

ಹೊಸ ಮನೆಯಲ್ಲಿ ಮಕ್ಕಳ ಜೊತೆ ಆಯುಧ ಪೂಜೆಯಲ್ಲಿ ನಟ ಶರಣ್

ನಟ ಶರಣ್ ಇವರ ನಟನೆ ನನಗೆ ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತದೆ. ಚಂದನವನದ ಅದ್ಭುತ ನಟರಲ್ಲಿ ಶರಣ್ ಸಹ ಒಬ್ಬರು. ಶರಣ್…

10 hours ago

ತಮ್ಮ ಬೈಸಿಕಲ್ ಜೊತೆ ಯಶ್ ಐಷಾರಾಮಿ ಯಂತ್ರಗಳಿಗೆ ಪೂಜೆ ಸಲ್ಲಿಸಿದ ಮಗ ಯತರ್ವ್ ಯಶ್!

ನಟ ರಾಕಿಂಗ್ ಸ್ಟಾರ್ ತಮ್ಮ ಕಾರುಗಳಿಗೆ ಪೂಜೆ ಸಲ್ಲಿಸಿದ್ದಾರೆ. ನಟ ಯಶ್ ಅವರು ಮನೆಯಲ್ಲಿ ತಮ್ಮ ಎಲ್ಲಾ ಕಾರುಗಳನ್ನು ಸಮಾನವಾಗಿ…

23 hours ago

ಗೀತಾ ಸೀರಿಯಲ್ ನಟಿ ಭವ್ಯ ಗೌಡ, ನಟ ಧನುಷ್ ಗೌಡ ಚಾಮುಂಡೇಶ್ವರಿ ಸನ್ನಿಧಿಯಲ್ಲಿ

ಭವ್ಯಾ ಗೌಡ ಮತ್ತು ಧನುಷ್ ಗೌಡ ನಡುವಿನ ವಯಸ್ಸಿನ ವ್ಯತ್ಯಾಸ ಗಮನಾರ್ಹವಾಗಿದೆ. ಭವ್ಯಾ ಗೌಡಗೆ ಕೇವಲ 23 ವರ್ಷ, ಧನುಷ್…

1 day ago