ಟಿ20 ವಿಶ್ವಕಪ್‌ಗೂ ಮುನ್ನ ಕ್ರಿಕೆಟ್ ಲೋಕದ ದಿಗ್ಗಜ ಕ್ರಿಕೆಟಿಗರೊಬ್ಬರು ನಿವೃತ್ತಿ ಘೋಷಿಸಿದ್ದಾರೆ. ಜೊತೆಗೆ ತಮ್ಮ ಕೊನೆಯ ಪಂದ್ಯ ಆಡುವ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ.

ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಹಾಗೂ ನಾಯಕ ಆರೋನ್​ ಫಿಂಚ್ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಅವರ ಈ ದಿಢೀರ್ ನಿರ್ಧಾರ ಕ್ರಿಕೆಟ್ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದೆ. ಅವರು ನ್ಯೂಜಿಲೆಂಡ್ ವಿರುದ್ಧ ತಮ್ಮ 146ನೇ ಮತ್ತು ಅಂತಿಮ ODI ಪಂದ್ಯವನ್ನು ಆಡಿದ ನಂತರ ನಿವೃತ್ತಿ ಆಗುವುದಾಗಿ ತಿಳಿಸಿದ್ದಾರೆ. ಆದರೆ ಒಂದು ಸಮತಸದ ವಿಚಾರವೆಂದರೆ ಅವರು ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ ನಾಯಕತ್ವ ವಹಿಸುವುದಾಗಿಯೂ ಘೋಷಿಸಿದ್ದಾರೆ.

 

 

ಆಸೀಸ್​ನ ದಿಗ್ಗಜ ಆಟಗಾರನಾದ ಆರೋನ್ ಪಿಂಚ್​ ಇದೀಗ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಈ ಮೂಲಕ ಆಸೀಸ್​ ತಂಡಕ್ಕೆ ದೊಡ್ಡ ಆಘಾತವಾಗಿದೆ ಎಂದರೂ ತಪ್ಪಾಗಲಾರದು. ಈ ಕುರಿತು ಮಾತನಾಡಿರುವ ಅವರು, ‘ಇದುವರೆಗಿನ ಪ್ರಯಾಣ ಸುಂದರವಾಗಿದೆ. ಏಕದಿನ ತಂಡದ ಭಾಗವಾಗಲು ನಾನು ಅದೃಷ್ಟಶಾಲಿಯಾಗಿದ್ದೆ. ನಾನು ಯಾರೊಂದಿಗೆ ಕ್ರಿಕೆಟ್ ಆಡಿದ್ದೇನೆಯೋ ಅವರ ಶುಭ ಹಾರೈಕೆಗಳು ಮತ್ತು ಆಶೀರ್ವಾದಗಳನ್ನು ನಾನು ಪಡೆದಿದ್ದೇನೆ‘ ಎಂದು ಪಿಂಚ್​ ಹೇಳಿಕೊಂಡಿದ್ದಾರೆ.

 

 

ಕಳೆದ ಕೆಲ ದಿನಗಳಿಂದ ಪಿಂಚ್​ ತಮ್ಮ ಕಳಪೆ ಫಾರ್ಮ್​ ನಿಂದ ಬಳಲುತ್ತಿದ್ದರು. ಅಲ್ಲದೇ ಪಿಂಚ್‌ ಕೊನೆಯ 7 ಏಕದಿನ ಪಂದ್ಯಗಳಲ್ಲಿ ಕೇವಲ 26 ರನ್ ಮಾತ್ರ ಗಳಿಸಿದ್ದರು. ಇದಲ್ಲದೇ ಅದರಲ್ಲಿ ಮೂರು ಬಾರಿ ಡಕ್‌ಔಟ್‌ ಸಹ ಆಗುವ ಮೂಲಕ ನಿರಾಸೆ ಮೂಡಿಸಿದ್ದರು. ಕೊನೆಯ 12 ಇನ್ನಿಂಗ್ಸ್‌ಗಳಲ್ಲಿ 5 ಡಕ್ ಆಗಿದ್ದರು. ಈ ಎಲ್ಲಾ ಕಾರಣದಿಂದ ಅವರು ಇದೀಗ ಏಕದಿನ ಕ್ರಿಕೆಟ್​ ಜೀವನಕ್ಕೆ ವಿದಾಯ ಹೇಳಿದ್ದಾರೆ.

 

 

ಆರೋನ್ ಪಿಂಚ್​ ಅವರು ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗೆ ಕಣಕ್ಕಿಳಿಯುವ ಮುನ್ನವೇ ವಿದಾಯ ಹೇಳಿದ್ದು, ಆಸೀಸ್​ ಅಭಿಮಾನಿಗಳಿಗೆ ದೊಡ್ಡ ಶಾಕ್​ ನೀಡಿದಂತಾಗಿದೆ. ಆದರೆ ಅವರು ಕಳೆದ ಕೆಲ ದಿನಗಳಿಂದ ಮೊಣಕಾಲು ನೋವಿನಿಂದಾಗಿ ಕಳಪೆ ಫಾರ್ಮ್​ ನಿಂದ ಬಳಲುತ್ತಿದ್ದರು. ಇದರಿಂದಾಗಿ ತಮ್ಮ ಸ್ಥಾಣಕ್ಕೆ ಮತ್ತೊಮ್ಮ ಒಳ್ಳೆಯ ಆಟಗಾರ ವಿಶ್ವಕಪ್​ನಲ್ಲಿ ಆಡಲಿದ್ದಾರೆ. ಯುವ ಆಟಗಾರರಿಗೆ ಇದು ಉತ್ತಮ ಸಮಯ ಅಲ್ಲದೇ ಇನ್ನು ವಿಶ್ವಕಪ್​ಗೆ ಸಮಯ ಇರುವುದರಿಂದ ನನ್ನ ಸ್ಥಾನಕ್ಕೆ ಉತ್ತಮ ಆಟಗಾರರನ್ನು ಆಯ್ಕೆ ಮಾಡಬಹುದು ಎಂದು ಹೇಳಿದ್ದಾರೆ. ಆದರೆ ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ ಪಿಂಚ್​ ಇರಲಿದ್ದು, ನಾಯಕನಾಗಿಯೇ ಮುಂದುವರೆಯಲಿದ್ದಾರೆ.

 

 

ಪರ ಫಿಂಚ್​ ಆಸೀಸ್​ ಪರ ಈವರೆಗ ಒಟ್ಟು 145 ಏಕದಿನ ಪಂದ್ಯಗಳನ್ನಾಡಿದ್ದಾರೆ. ಆ ಮೂಲಕ 17 ಶತಕ ಸೇರಿ 5401 ರನ್​​​ ಗಳಿಸಿದ್ದಾರೆ. ಅಲ್ಲದೇ ಕಳೆದ 2020ರ ಏಕದಿನ ಕ್ರಿಕೆಟ್​​ನ ಪ್ಲೇಯರ್​ ಆಫ್​ ದಿ ಇಯರ್​ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 2015ರ ಆಸ್ಟ್ರೇಲಿಯಾ ವಿಶ್ವಕಪ್​ ವಿಜೇತ ತಂಡದ ಸದ್ಯರಾಗಿದ್ದ ಪಿಂಚ್​ 2013ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಇದೀಗ ನ್ಯೂಜಿಲ್ಯಾಂಡ್​ ವಿರುದ್ಗದ ನಾಳೆ ನಡೆಯಲಿರುವ ಅಂತಿಮ ಏಕದಿನ ಪಂದ್ಯದ ನಂತರ ವಿದಾಯ ಹೇಳಲಿದ್ದಾರೆ.

Leave a comment

Your email address will not be published.