Categories: Entertainment

ಬಿಗ್ ಬಾಸ್ ಕೃಷಿ ತಾಪಂಡ ಬ್ರೇಕ್ ಮಾಡಿಕೊಂಡ ಹುಡುಗ ಬೇರೆ ಯಾರು ಅಲ್ಲಾ..!!! ಕೃಷಿ ಲವರ್ ಯಾರು ಗೊತ್ತಾ?

ಬಿಗ್ ಬಾಸ್ ಸ್ಪರ್ಧಿ ಕೃಷಿ ತಾಪಂಡ ಯಾರಿಗೆ ಗೊತ್ತಿಲ್ಲ.? ತಮ್ಮ ನಗುವಿನಿಂದಲೇ ಬಿಗ್ ಬಾಸ್ ನಲ್ಲಿ ಸುದ್ಧಿಯಾಗಿದ್ದ ಈ ನಟಿ ಲವ್ ಬ್ರೇಕಪ್ ನಿಂದ ಸುದ್ಧಿಯಾಗಿದ್ದಾರೆ. ಕೃಷಿ ಬ್ರೇಕಪ್ ಮಾಡಿಕೊಂಡ ಹುಡುಗನು ಒಬ್ಬ ನಟ. ಈ ಸ್ಯಾಂಡಲ್ ವುಡ್ ನಟನೊಂದಿಗೆ ಲವ್ ನಲ್ಲಿ ಬಿದ್ದು ಈಗ ಆ ಲವ್ ಬ್ರೇಕಪ್ ಆಗಿದೆ. ತಾವೂ ಪ್ರೀತಿಸಿದ ಹುಡುಗನಿಂದ ದೂರವಾಗುವ ದುಗಡದಲ್ಲಿದ್ದಾರೆ. ಯೆಸ್, ಸದಾ ನಗು ಮುಖದಲ್ಲಿರುತ್ತಿದ್ದ ಕೃಷಿ ತಾಪಂಡ ಮೊದಲ ಬಾರಿಗೆ ಪ್ರೇಮ ವೇದನೆಯಲ್ಲಿದ್ದಾರೆ. ಕೃಷಿ ತಾಪಂಡ ಬ್ರೇಕ್ ಮಾಡಿಕೊಂಡ ಹುಡುಗ ಬೇರೆ ಯಾರು ಅಲ್ಲಾ ಆತನೇ ಸ್ಯಾಂಡಲ್ ವುಡ್ ಗೆ ನಾಯಕನಾಗಿ ಪರಿಚಯಗೊಳ್ಳುತ್ತಿರುವ ‘ವಿಜಯ್ ಜಗದಾಲ್’.

 

 

ಯೆಸ್, ಕೃಷಿ ತಾಪಂಡ ಬ್ರೇಕ್ ಅಪ್ ಮಾಡಿಕೊಂಡ ಆ ನಟ ವಿಜಯ್ ಜಗದಾಲ್. ನಿಜ ಜೀವನದಲ್ಲಿ ಪ್ರೀತಿ ಗೀತಿ ಇತ್ಯಾದಿಗಳ ಮೇಲೆ ಆಸಕ್ತಿ ತೋರದ ಈ ನಟಿ ಸಿನಿಮಾದಲ್ಲಿ ಮಾತ್ರ ಪ್ರೀತಿಯಲ್ಲಿ ಬಿದ್ದು ಬ್ರೇಕಪ್ ಮಾಡಿಕೊಳ್ಳುವ ಅವಕಾಶ ಬರುತ್ತಲೇ ಇರುತ್ತದೆ. ವಿಜಯ್ ಜಗದಾಲ್ ನಾಯಕ ನಟನಾಗಿ ನಟಿಸುತ್ತಿರುವ ‘ರೂಪಾಯಿ’ ಚಿತ್ರದ ‘ಕರೆಯದೆ..’ ಮೆಲೋಡಿ ವಿಡಿಯೋ ಹಾಡು ಆನಂದ್ ಆಡಿಯೋದಲ್ಲಿ ರಿಲೀಸ್ ಆಗಿದ್ದು ಎಲ್ಲರ ಮನ ಗೆದ್ದು ಮುನ್ನುಗುತ್ತಿದೆ. KGF ತಂದಾನಿತಾನೆ ಹಾಡಿನ ಖ್ಯಾತಿಯ ಅನನ್ಯ ಭಟ್ ಹಾಡಿರುವ ಈ ಹಾಡಿನಲ್ಲಿ ನಾಯಕನೊಂದಿಗೆ ಬ್ರೇಕಪ್ ಮಾಡಿಕೊಂಡು ಮತ್ತೆ ಅವನನ್ನು ಪಡೆಯಲು ಹಂಬಲಿಸುವ ನಾಯಕಿಯಾಗಿ ಕೃಷಿ ತಾಪಂಡ ನಟಿಸಿ ಎಲ್ಲರನ್ನೂ ಸೂರೆಗೊಂಡಿದ್ದಾರೆ.

 

 

ವಿಜಯ್ ಜಗದಾಲ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಆನಂದ್ ರಾಜಾವಿಕ್ರಮ್ ಸಂಗೀತ ಹಾಗೂ ಉತ್ಸವ್ ಗೊನ್ವಾರ್ ಸಾಹಿತ್ಯ ಇದೆ. ಮೊದಲ ನೋಟದಲ್ಲೆ ಸೆಳೆಯುವ ಈ ವಿಡಿಯೋ ಕೊನೆಯವರೆಗು ಕೇಳುವಂತೆ ನೋಡುವಂತೆ ಮಾಡುವುದು ಈ ಹಾಡಿನ ತಾಕತ್ತು. ತಮ್ಮ ಪ್ರೀತಿ ಬಿಟ್ಟು ಹೊರಡುವ ಸನ್ನಿವೇಶದಲ್ಲಿ ಕೃಷಿ ತಾಪಂಡ ಅದ್ಭುತವಾಗಿ ನಟಿಸಿದ್ದಾರೆ. ನಾಯಕ ನಟರಾದ ವಿಜಯ್ ಜಗದಾಲ್ ಹೊಸಬರಾದರೂ ಈಗಲೇ 5-6 ಸಿನಿಮಾಗಳಲ್ಲಿ ನಟಿಸಿದಂತ ನಟನೆಯೊಂದಿಗೆ ನಮ್ಮ ಮನ ಮುಟ್ಟುತ್ತಾರೆ. ಅದರಲ್ಲೂ ಕೃಷಿ ತಾಪಂಡ ಹಾಡಿನಲ್ಲಿ ನಾಯಕ ನಟ ಅಳುವುದನ್ನು ಕನ್ನಡಿಯಲ್ಲಿ‌ ನೋಡುವ ದೃಶ್ಯವಂತು ಒಮ್ಮೆ ಮೈಜುಮ್‌ ಎನಿಸುತ್ತದೆ. ಅದರಲ್ಲಿ ವಿಜಯ್ ಜಗದಾಲ್ ರವರ ನಟನೆ ಕಣ್ಣಲ್ಲಿ ನೀರು ತರಿಸುತ್ತದೆ.

 

 

ಉತ್ತರ ಕರ್ನಾಟಕದ ಪ್ರತಿಭೆಗೆ ಎಲ್ಲರ ಸಲಾಂ. ಅದ್ಭುತವಾದ ಹಾಡಿಗೆ ಸಾಹಿತ್ಯ ಬರೆದಿರುವುದು ನಮ್ಮ ರಾಯಚೂರಿ ಪ್ರತಿಭೆ ಉತ್ಸವ್ ಗೊನ್ವಾರ್. ‘ರೂಪಾಯಿ’ ಚಿತ್ರದ ಸಹ ನಿರ್ದೇಶಕರಾದ ಉತ್ಸವ್ ಗೊನ್ವಾರ್ ಅವರ ಸಾಹಿತ್ಯ ಆಸಕ್ತಿ‌ ಗಮನಿಸಿದ ನಿರ್ದೇಶಕರು ಹಾಡು ಬರೆಯಲು ಅವಕಾಶ ಕೊಟ್ಟಿದ್ದನ್ನು ಅದ್ಭುತವಾಗೆ ಬಳಿಸಿಕೊಂಡಿದ್ದಾರೆ. ‘ತಿರುಗಿಸುವೆ ಕೂಗದೆ ನನ್ನೆಸರೆ’ ‘ಕಾರ್ಮೋಡ ಕವಿದು ನಿನ ಸೇರಲು ತಡೆದು, ಇಟ್ಟಿದೆ ಮುಂದೆಜ್ಜೆ ನನ್ನ ಕಾಲಿಗೆ ಗರ ಬಡಿದು’ ‘ಮನದಲಿ ಅಳುಕು ಉಳಿದಿದೆ ಇನ್ನು ನಿನ್ನ ಜೊತೆ ಬರದೆ ಅಳುತಿದೆ ಕಣ್ಣು’ ಈ ರೀತಿಯ ಸಾಲುಗಳು ಕೇಳುಗನಿಗೆ ಮುದಕೊಡುತ್ತೆ. ಚಿತ್ರರಂಗಕ್ಕೆ ಮತ್ತೊಬ್ಬ ಸಾಹಿತ್ಯಗಾರ ಒಲಿದು ಬಂದಂತೆ ಭಾಸವಾಗುತ್ತದೆ.

 

 

ಆನಂದ್ ರಾಜವಿಕ್ರಮ್ ಸಂಗೀತ ನೀಡಿರುವ ಈ ‘ಕರೆಯದೆ’ ಹಾಡಿಗೆ ಯುವ ಗಾಯಕಿ ಅನನ್ಯ ಭಟ್ ಧ್ವನಿ ನೀಡಿದ್ದು ಈ ಹಾಡನ್ನು ಪದೇ ಪದೇ ಕೇಳುವಂತೆ ಮಾಡಿದೆ. ಮಹಿಳಾ ನೃತ್ಯ ನಿರ್ದೇಶಕಿ ಗೀತಾ ಸೈ ಕೊರಿಯೋಗ್ರಫಿ ಅದ್ಭುತವಾಗಿದೆ. ಪ್ರತಿಯೊಂದು ದೃಶ್ಯವನ್ನು ಕಣ್ಣಿಗೆ ಕಟ್ಟುವಂತೆ ಸಂಯೋಜಿಸಿರುವುದು ಇಷ್ಟವಾಗುತ್ತದೆ. ಈ ಹಾಡಿನ ನಂತರ ಸ್ಯಾಂಡಲ್ ವುಡ್ ನಲ್ಲಿ ಇನ್ನಷ್ಟು ಅವಕಾಶ ಪಡೆದುಕೊಳ್ಳುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಕೇಳಿದರೆ ಮತ್ತೆ ಮತ್ತೆ ಕೇಳುವಂತೆ ಮಾಡುವ ನೋಡುತ್ತಿದ್ದರೆ ಮತ್ತೆ ಮತ್ತೆ ನೋಡುವಂತೆ ಮಾಡುವ ಹಾಡು ಇದು. ಹಾಡಿನ ವಿಡಿಯೋ ಇನ್ನಷ್ಟು‌ ನಮ್ಮನ್ನು ಸೆಳೆದು ಕೃಷಿ ತಾಪಂಡ ಹಾಗೂ ವಿಜಯ್ ಜಗದಾಲ್ ಅವರ ಸಹಜ ನಟನೆ ಇಷ್ಟವಾಗುತ್ತದೆ. ಮಧ್ಯಮ ವರ್ಗದ ಪಾತ್ರಗಳಿಗೆ ಇಬ್ಬರೂ ಜೀವ ತುಂಬಿದಂತೆ ಭಾಸವಾಗುತ್ತದೆ. ಕನ್ನಡಿಗರು ಒಮ್ಮೆಯಾದರು ಕೇಳಬೇಕಾದ ಹಾಡು ಇದು ಎಂದು ಖಂಡಿತವಾಗಿಯೂ ಹೇಳಬಹುದು.

 

 

ಮಂಜುನಾಥ್ ಎಂ ಹಾಗೂ ಹರೀಶ್ ಬಿ ಕೆ ನಿರ್ಮಾಣದ ‘ರೂಪಾಯಿ’ ಚಿತ್ರಕ್ಕೆ 10 ವರ್ಷಗಳಿಂದ ಸಹ ಹಾಗು ಸಹಾಯಕ ನಿರ್ದೇಕರಾಗಿ ಕೆಲಸ ಮಾಡಿದ ನಾಯಕ ನಟ ವಿಜಯ್ ಜಗದಾಲ್ ರವರೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಆರ್ ಡಿ ನಾಗಾರ್ಜುನ್ ಛಾಯಗ್ರಹಣ, ಶಿವರಾಜ್ ಮೇಹು ರವರ ಸಂಕಲನ, ರಾಷ್ಟ್ರಪ್ರಶಸ್ತಿ ವಿಜೇತ ಸಾಹಸ ನಿರ್ದೇಶಕ ವಿಕ್ರಮ್ ಮೋರ್ ಅವರ ಸಾಹಸ ನಿರ್ದೇಶನವಿದೆ, ಸುನಿ ವಿನಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ತಾರಗಣದಲ್ಲಿ ವಿಜಯ್ ಜಗದಾಲ್, ಕೃಷಿ ತಾಪಂಡ, ಯಶ್ವಿಕ್, ಚಂದನ ರಾಘವೇಂದ್ರ, ರಾಮ್ ಚಂದನ್, ಪ್ರಮೋದ್ ಶೆಟ್ಟಿ, ಶಂಕರ್ ಮೂರ್ತಿ, ಅನಿಲ್ ಕುಮಾರ್ ಇದ್ದಾರೆ.

 

 

karnataka

Recent Posts

ಸ್ಕೂಲ್ ನಲ್ಲಿ ಇಲ್ಲ ಕಾಲೇಜಿನಲ್ಲಿ ಇದ್ದ – ಬಾಯ್ ಫ್ರೆಂಡ್ ಗುಟ್ಟು ಬಿಚ್ಚಿಟ್ಟ ಕಮಲಿ ಖ್ಯಾತಿಯ ಅಮೂಲ್ಯ ಗೌಡ..!!!

ಕಿರುತೆರೆ ಲೋಕದ ಬಹು ನಿರೀಕ್ಷಿತ ಶೋ ಬಿಗ್ ಬಾಸ್. ಹೌದು ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ ಒಂಬತ್ತು ಆರಂಭಗೊಂಡಿದೆ.…

2 hours ago

೧೦೦ ಕೋಟಿ ಕ್ಲಬ್ ಸೇರುವ ಮುನ್ನವೇ, ೫ ನೇ ದಿನಕ್ಕೆ ಕಾಂತಾರ ಚಿತ್ರದ ರಿಷಬ್ ಗೆ ಭಾರೀ ಆಘಾತ..!!

ಸ್ನೇಹಿತರ ಕಾಂತಾರ ಚಿತ್ರಕ್ಕೆ ಆರಂಭದಿಂದ ದೊಡ್ಡ ಮಟ್ಟದ ಸ್ಪಂದನೆ ಸಿಗುತ್ತಿದ್ದು, ಅದು ಅತ್ಯಧಿಕ ಪರದೆಗಳಲ್ಲಿ ಚಿತ್ರ ಪ್ರದರ್ಶನಗಳುಗೊಳ್ಳುವುದು ಅಷ್ಟೇ ಅಲ್ಲದೆ…

3 hours ago

ಮದುವೆಯಾದ ಒಂದೇ ತಿಂಗಳಿಗೆ ಪತ್ನಿಯಿಂದ ದೂರಾಗುತ್ತಿರುವ ರವೀಂದರ್.!! ಕಾರಣವೇನು ಗೊತ್ತಾ

ಕಳೆದ ಒಂದು ತಿಂಗಳಿನಿಂದ ಟ್ರೆಂಡಿಂಗ್‌ನಲ್ಲಿದ್ದ ಸ್ಟಾರ್ ಜೋಡಿ ನಿರೂಪಕಿ ಮಹಾಲಕ್ಷ್ಮಿ ಹಾಗು ನಿರ್ಮಾಪಕ ರವಿತರ ಜೋಡಿಯ ಕುರಿತು ಇದೀಗ ಹೊಸ…

3 hours ago

ಹೊಸ ಮನೆಯಲ್ಲಿ ಮಕ್ಕಳ ಜೊತೆ ಆಯುಧ ಪೂಜೆಯಲ್ಲಿ ನಟ ಶರಣ್

ನಟ ಶರಣ್ ಇವರ ನಟನೆ ನನಗೆ ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತದೆ. ಚಂದನವನದ ಅದ್ಭುತ ನಟರಲ್ಲಿ ಶರಣ್ ಸಹ ಒಬ್ಬರು. ಶರಣ್…

3 hours ago

ತಮ್ಮ ಬೈಸಿಕಲ್ ಜೊತೆ ಯಶ್ ಐಷಾರಾಮಿ ಯಂತ್ರಗಳಿಗೆ ಪೂಜೆ ಸಲ್ಲಿಸಿದ ಮಗ ಯತರ್ವ್ ಯಶ್!

ನಟ ರಾಕಿಂಗ್ ಸ್ಟಾರ್ ತಮ್ಮ ಕಾರುಗಳಿಗೆ ಪೂಜೆ ಸಲ್ಲಿಸಿದ್ದಾರೆ. ನಟ ಯಶ್ ಅವರು ಮನೆಯಲ್ಲಿ ತಮ್ಮ ಎಲ್ಲಾ ಕಾರುಗಳನ್ನು ಸಮಾನವಾಗಿ…

17 hours ago

ಗೀತಾ ಸೀರಿಯಲ್ ನಟಿ ಭವ್ಯ ಗೌಡ, ನಟ ಧನುಷ್ ಗೌಡ ಚಾಮುಂಡೇಶ್ವರಿ ಸನ್ನಿಧಿಯಲ್ಲಿ

ಭವ್ಯಾ ಗೌಡ ಮತ್ತು ಧನುಷ್ ಗೌಡ ನಡುವಿನ ವಯಸ್ಸಿನ ವ್ಯತ್ಯಾಸ ಗಮನಾರ್ಹವಾಗಿದೆ. ಭವ್ಯಾ ಗೌಡಗೆ ಕೇವಲ 23 ವರ್ಷ, ಧನುಷ್…

20 hours ago