ಕನ್ನಡ ನಟ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್ ದಂಪತಿ ಇದೀಗ ಸಂಭ್ರಮದಲ್ಲಿದ್ದಾರೆ. ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಪ್ರೇರಣಾ ತುಂಬು ಗರ್ಭಿಣಿಯಾಗಿದ್ದು, ಇತ್ತೀಚೆಗಷ್ಟೇ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು. ಪ್ರೇರಣಾ ಅವರ ಸೀಮಂತ ಶಾಸ್ತ್ರಕ್ಕೆ ಮೇಘನಾ ರಾಜ್, ಅರ್ಜುನ್ ಸರ್ಜಾ, ತಾರಾ ಅನುರಾಧಾ ಸೇರಿದಂತೆ ಅನೇಕ ತಾರೆಯರು ಪಾಲ್ಗೊಂಡಿದ್ದರು. ಪ್ರೇರಣಾಗೆ ಎಲ್ಲರೂ ಶುಭ ಹಾರೈಸಿದ್ದಾರೆ.

 

 

ವರ್ಷಗಳ ಕಾಲ ಪ್ರೀತಿಸಿ ಮದುವೆಯಾದವರು ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್. 2019 ರಲ್ಲಿ ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಇದೀಗ ತಂದೆ ತಾಯಿ ಆಗಿ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಬಡ್ತಿ ಪಡೆಯುತ್ತಿದ್ದಾರೆ.

 

 

ಎ. ಪಿ ಅರ್ಜುನ್ ನಿರ್ದೇಶನದ ‘ಮಾರ್ಟಿನ್’ ಚಿತ್ರದಲ್ಲಿ ಧ್ರುವ ಸರ್ಜಾ ಬ್ಯುಸಿ ಆಗಿದ್ದಾರೆ. ಆದರೂ ಬಿಡುವು ಮಾಡಿಕೊಂಡು ಮಡದಿಗೆ ಸಾಕಷ್ಟು ಸಮಯ ಮೀಸಲಿಟ್ಟಿದ್ದಾರೆ. ಪ್ರೇರಣಾ ಆಸೆಯಂತೆ ಬಹಳ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ. ಚಿರಂಜೀವಿ ಸರ್ಜಾ ನಿಧನದ ನಂತರ ಮೇಘನಾ ರಾಜ್, ಪುತ್ರ ರಾಯನ್‌ ಸರ್ಜಾಗೆ ಜನ್ಮ ನೀಡಿದ್ದರು. ಇನ್ನು ಇತ್ತೀಚೆಗಷ್ಟೇ ಧ್ರುವ ಸರ್ಜಾ ಅಜ್ಜಿ ಲಕ್ಷ್ಮಿ ದೇವಮ್ಮ ಕೊನೆಯುಸಿರೆಳೆದಿದ್ದರು. ಈಗ ಮತ್ತೊಬ್ಬ ಅತಿಥಿ ಸರ್ಜಾ ಕುಟುಂಬಕ್ಕೆ ಬರುತ್ತಿರುವುದು ಕುಟುಂಬ ಸದಸ್ಯರಲ್ಲಿ ಸಂತಸ ತಂದಿದೆ.

 

 

8 ತಿಂಗಳು ಪೂರೈಸಿ ಪ್ರೇರಣಾಗೆ 9 ತಿಂಗಳಾಗಿದೆ. ಇದೇ ಸಮಯದಲ್ಲಿ ಸೀಮಂತಾ ಕಾರ್ಯ ನೆರವೇರಿಸಲಾಗಿದ್ದು ಇದೇ ತಿಂಗಳು ಧ್ರುವ ಸರ್ಜಾ ಮಗ ಅಥವಾ ಮಗಳ ನಿರೀಕ್ಷೆಯಲ್ಲಿ ಇದ್ದಾರೆ. ಕಾರ್ಯಕ್ರಮದಲ್ಲಿ ಸರ್ಜಾ ಕುಟುಂಬದ ಜೊತೆಗೆ ಪ್ರೇರಣಾ ಕುಟುಂಬವೂ ಭಾಗಿಯಾಗಿದ್ದು ಬಹಳ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯಕ್ರಮ ನೆರವೇರಿದೆ. ಇದಕ್ಕೆ ಸಂಬಂಧಿಸಿದ ಕೆಲ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

 

ಸ್ಯಾಂಡಲ್​ವುಡ್​ ಖ್ಯಾತ ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ-ಪ್ರೇರಣಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತಂತೆ ಇತ್ತಿಚೆಗೆ ಧ್ರುವ ಸರ್ಜಾ ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ನಾವು ಜೀವನದ ಹೊಸ ಹಂತವನ್ನು ಪ್ರವೇಶಿಸುತ್ತಿದ್ದೇವೆ. ಶೀಘ್ರದಲ್ಲೇ ಬರಲಿರುವ ಪುಟ್ಟನನ್ನು ಆಶೀರ್ವದಿಸಿ. ಜೈ ಹನುಮಾನ್ ಎಂದು ಧ್ರುವ ಸರ್ಜಾ ಪತ್ನಿಯೊಂದಿಗೆ ಕಲರ್​​ಫುಲ್​ ಫೋಟೋಗಳನ್ನು ಹಂಚಿಕೊಂಡಿದ್ದರು.

 

 

View this post on Instagram

 

A post shared by Dhruva Sarja (@dhruva_sarjaa)

 

ಇದೀಗ ನಟ ಧ್ರುವ ಸರ್ಜಾ ಪತ್ನಿ ಪ್ರೇರಣಾರ ಸೀಮಂತ ಕಾರ್ಯಕ್ರಮವನ್ನು ಮಾಡಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್​​ವೊಂದರಲ್ಲಿ ಪತ್ನಿಯ ಸೀಮಂತ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​​ ಆಗುತ್ತಿವೆ.

 

 

ಈಗಾಗಲೇ ಸರ್ಜಾ ಕುಟುಂಬದಲ್ಲಿ ಚಿರು ಪುತ್ರ ರಾಯನ್ ಲವಲವಿಕೆಗೆ ತಂದಿದ್ದು, ಇದೀಗ ಧ್ರುವ ಸರ್ಜಾ ಮಗು ಕೂಡ ಜೊತೆಯಾಗಲಿದೆ. ಎರಡೂ ಕಂದಮ್ಮಗಳು ಚಿರುವಿನ ನೋವನ್ನು ಸರ್ಜಾ ಕುಟುಂಬಕ್ಕೆ ಮರೆಸಲಿವೆ. ಸೀಮಂತ ಕಾರ್ಯದಲ್ಲಿ ಸಿನಿಮಾ ಉದ್ಯಮದ ಆಪ್ತರು, ಮೇಘನಾ, ಪ್ರೇರಣಾ ಹಾಗೂ ಸರ್ಜಾ ಕುಟುಂಬ ಸದಸ್ಯರು ಹಾಜರಿದ್ದು, ಪ್ರೇರಣಾಗೆ ಹಾರೈಸಿದ್ದಾರೆ.

 

 

View this post on Instagram

 

A post shared by PRERANA (@prerana_fc)

 

ತವರಿನಿಂದ ಸೀಮಂತ ಕಾರ್ಯಕ್ರಮದಿಂದ ಹಿಂದಿರುಗಿರುವ ಪ್ರೇರಣಾಗೆ ಪತಿ ಧೃವ ಹಣೆಗೆ ಕುಂಕುಮ ಇಟ್ಟಿದ್ದಾರೆ ಇದೇ ಸಂಧರ್ಭದಲ್ಲಿ ಪ್ರೇರಣಾ ಭಾವುಕರಾಗಿದ್ದಾರೆ.

Leave a comment

Your email address will not be published.