ವಿಚ್ಛೇದನದ ನಂತರ ಸಿನಿಮಾಗಳಲ್ಲಿ ತನ್ನನ್ನು ತಾನು ಹೆಚ್ಚು ತೊಡಗಿಸಿಕೊಂಡಿರುವ ನಟಿ ಸಮಂತಾ ರುತ್ ಪ್ರಭು ತನ್ನ ಪಾತ್ರಕ್ಕೆ ಹೆಚ್ಚು ಸ್ಕೋಪ್ ಇರುವ ಚಿತ್ರಕತೆಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ನಾಗ ಚೈತನ್ಯ ಜತೆಗಿನ ವೈವಾಹಿಕ ಜೀವನದಿಂದ ಹೊರ ಬಂದ ನಂತರ ಪುಷ್ಪ ಚಿತ್ರದಲ್ಲಿ ಊ ಅಂಟಾವಾ ಮಾವ ಐಟಮ್ ಹಾಡಿನಲ್ಲಿ ಸೊಂಟ ಬಳುಕಿಸಿದ್ದ ಸಮಂತಾ ತಮಿಳಿನ ಕಾತುವಾಕುಲ ರಂಡು ಕಾದಲ್ ಎಂಬ ತಮಿಳು ಚಿತ್ರದಲ್ಲಿಯೂ ಹಾಟ್ ಖತೀಜಾ ಪಾತ್ರದಲ್ಲಿ ಅಭಿನಯಿಸಿದ್ದರು.

 

 

ಹೀಗೆ ವಿಚ್ಛೇದನದ ನಂತರದ ಈ ಎರಡೂ ಸಿನಿಮಾಗಳಲ್ಲಿಯೂ ಬೋಲ್ಡ್ ಅವತಾರಗಳಲ್ಲಿಯೇ ಕಾಣಿಸಿಕೊಂಡಿದ್ದ ನಟಿ ಸಮಂತಾ ಇದೀಗ ಯಶೋಧಾ ಎಂಬ ವಿಭಿನ್ನ ಚಿತ್ರದಲ್ಲಿ ನಟಿಸಿದ್ದಾರೆ. ಯಶೋಧಾ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಸಮಂತಾ ಈ ಚಿತ್ರದಲ್ಲಿ ಗರ್ಭಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಮೂಲತಃ ತೆಲುಗಿನ ಚಿತ್ರವಾಗಿದ್ದು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗೆ ಡಬ್ ಆಗಿ ಬಿಡುಗಡೆಯಾಗಲಿದೆ.

 

 

ಗಣೇಶ ಚತುರ್ಥಿಯಂದು ಚಿತ್ರದ ಬಗ್ಗೆ ಪೋಸ್ಟ್ ಮಾಡಿಕೊಂಡಿದ್ದ ಸಮಂತಾ ಟೀಸರ್ ಬಿಡುಗಡೆ ದಿನಾಂಕವನ್ನು ಹಂಚಿಕೊಂಡಿದ್ದರು. ಇದು ಸಮಂತಾ ಮುಖ್ಯಭೂಮಿಕೆಯ ಪರಿಪೂರ್ಣ ಚಿತ್ರವಾದ ಕಾರಣ ಅವರ ಅಭಿಮಾನಿಗಳು ಹಾಗೂ ಸಿನಿ ಪ್ರೇಕ್ಷಕರು ಟೀಸರ್‌ಗಾಗಿ ಕಾದಿದ್ದರು. ಇದೀಗ ಇಂದು ( ಸೆಪ್ಟೆಂಬರ್ 9 ) ಈ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರಶಂಸೆ ಪಡೆದುಕೊಳ್ಳುತ್ತಿದೆ. ಹಾಗೂ ಈ ಟೀಸರ್ ಮೂಲಕ ನಟಿ ಸಮಂತಾ ಚಿತ್ರದಲ್ಲಿ ಗರ್ಭಿಣಿಯ ಪಾತ್ರವನ್ನು ನಿಭಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

 

View this post on Instagram

 

A post shared by Samantha (@samantharuthprabhuoffl)

 

‘ಕಂಗ್ರಾಟ್ಸ್ ನೀವು ಪ್ರಗ್ನೆಂಟ್ ಆಗಿದ್ದೀರ’ ಎಂದು ವೈದ್ಯೆ ಸಮಂತಾಗೆ ಹೇಳುವ ಡೈಲಾಗ್ ಮೂಲಕ ಶುರುವಾಗುವ ಟೀಸರ್ ಇದೊಂದು ಸರ್ವೈವಲ್ ಥ್ರಿಲ್ಲರ್ ಎಂಬುದನ್ನು ತಿಳಿಸುತ್ತದೆ. ಯಾರೋ ಬೆನ್ನತ್ತಿ ಬರುವ ದೃಶ್ಯ, ಸಮಂತಾ ಯಾವುದೋ ಗುರಿಯನ್ನಿಟ್ಟುಕೊಂಡು ಸಾಗುವ ದೃಶ್ಯ ಹಾಗೂ ಸಮಂತಾ ತಾಲೀಮು ನಡೆಸುವ ದೃಶ್ಯಗಳನ್ನು ಗಮನಿಸಿದ ಸಿನಿ ಪ್ರೇಕ್ಷಕರು ಇದೊಂದು ಪಕ್ಕಾ ಥ್ರಿಲ್ಲರ್ ಕೆಟಗರಿಯ ಚಿತ್ರವಾಗಿದ್ದು, ಸಮಂತಾ ಅಭಿನಯಕ್ಕೆ ಈ ಸಿನಿಮಾ ಮೂಲಕ ದೊಡ್ಡ ಪ್ರಶಂಸೆ ಹಾಗೂ ಒಳ್ಳೆಯ ಪ್ರಶಸ್ತಿಗಳು ಸಿಗಲಿವೆ ಎನ್ನುತ್ತಿದ್ದಾರೆ.

 

 

ಈ ಚಿತ್ರವನ್ನು ಹರಿ ಹರೀಶ್ ನಿರ್ದೇಶಿಸಿದ್ದು ಶ್ರೀದೇವಿ ಮೂವೀಸ್ ಬಂಡವಾಳ ಹೂಡಿದೆ ಹಾಗೂ ಮಣಿ ಶರ್ಮಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಮಂತಾ ಯಶೋಧ ಪಾತ್ರದಲ್ಲಿ ಅಭಿನಯಿಸಿದ್ದರೆ, ಉನ್ನಿ ಮುಕುಂದನ್ ಅವರು ಗೌತಮ್ ಪಾತ್ರ ನಿರ್ವಹಿಸಿದ್ದಾರೆ. ಇನ್ನುಳಿದಂತೆ ವರಲಕ್ಷ್ಮಿ ಶರತ್‌ಕುಮಾರ್, ರಾವ್ ರಮೇಶ್, ಮುರಳಿ ಶರ್ಮಾ, ಸಂಪತ್ ರಾಜ್, ಶತ್ರು, ಮಧುರಿಮಾ, ಕಲ್ಪಿಕಾ ಗಣೇಶ್, ದಿವ್ಯಾ ಶ್ರೀಪಾದ ಮತ್ತು ಪ್ರಿಯಾಂಕಾ ಶರ್ಮಾ ಚಿತ್ರದಲ್ಲಿ ಅಭಿನಯಿಸಿದ್ದಾರೆ.

 

Leave a comment

Your email address will not be published.