ತೆರೆಮೇಲೆ ಪವರ್ ಸ್ಟಾರ್ ಆಗಿ ಮಿನುಗುತ್ತಿದ್ದ ಪುನೀತ್ ರಾಜ್‌ಕುಮಾರ್ ಈಗ ನೆನಪು ಮಾತ್ರ. ಪ್ರತಿನಿತ್ಯ ವರ್ಕೌಟ್ ಮಾಡುತ್ತಾ ಆರೋಗ್ಯವಾಗಿದ್ದ ಪುನೀತ್ ರಾಜ್‌ಕುಮಾರ್ ಹಠಾತ್ ನಿಧನರಾಗಿದ್ದು ಹಲವರಲ್ಲಿ ದಿಗ್ಭ್ರಮೆ ಮೂಡಿಸಿದೆ. ಪುನೀತ್ ರಾಜ್‌ಕುಮಾರ್ ಇನ್ನಿಲ್ಲ ಎಂಬ ವಾಸ್ತವವನ್ನು ಅರಗಿಸಿಕೊಳ್ಳುವುದೇ ಕಷ್ಟಕರವಾಗಿದೆ.

 

 

ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನವನ್ನ ಸುಮಾರು 20 ಲಕ್ಷಕ್ಕೂ ಅಧಿಕ ಮಂದಿ ಪಡೆದಿದ್ದರು ಎನ್ನಲಾಗಿತ್ತು. ಬಳಿಕ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಕುಟುಂಬಸ್ಥರು ಹಾಲು ತುಪ್ಪ ಕಾರ್ಯ ನೆರವೇರಿಸಿದ ಬಳಿಕ ಪುನೀತ್ ರಾಜ್‌ಕುಮಾರ್ ಅವರ ಪುಣ್ಯಭೂಮಿ ದರ್ಶನವನ್ನು ಪಡೆಯಲು ಸಾರ್ವಜನಿಕರಿಗೆ ಅವಕಾಶ ನೀಡಲಾಯಿತು.

 

 

ಅಂದಿನಿಂದ ಪ್ರತಿದಿನ ಸಾವಿರಾರು ಜನ ಪುನೀತ್ ರಾಜ್‌ಕುಮಾರ್ ಅವರ ಸಮಾಧಿಗೆ ನಮನ ಸಲ್ಲಿಸಲು ಕಂಠೀರವ ಸ್ಟುಡಿಯೋಗೆ ಆಗಮಿಸುತ್ತಿದ್ದಾರೆ. ಅಪ್ಪು ನಮ್ಮೊಂದಿಗೆ ಇಲ್ಲದಿದ್ದರೂ, ಜನರ ಹೃದಯದಲ್ಲಿ ಜೀವಂತವಾಗಿದ್ದಾರೆ ಎಂಬುದಕ್ಕೆ ಪ್ರತಿನಿತ್ಯ ಕಂಠೀರವ ಸ್ಟುಡಿಯೋಗೆ ಹರಿದುಬರುತ್ತಿರುವ ಜನಸಾಗರವೇ ಸಾಕ್ಷಿ.

 

 

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕಳೆದುಕೊಂಡಿರುವ ದುಃಖ ಇಂದಿಗೂ ಕೂಡ ಕಡಿಮೆಯಾಗಿಲ್ಲ. ಕೇವಲ ಇಂದಿಗೆ ಮಾತ್ರವಲ್ಲ ವರ್ಷಗಳೇ ಕಳೆದುಹೋದರೂ ಅವರ ಸ್ಥಾನವನ್ನು ಯಾರೂ ಕೂಡ ಭರಿಸಲು ಸಾಧ್ಯವಿಲ್ಲ ಅವರನ್ನು ಕಳೆದುಕೊಂಡಿರುವ ದುಃಖ ಯಾರು ಕೂಡ ಕಡಿಮೆ ಮಾಡಲು ಸಾಧ್ಯವಿಲ್ಲ.

 

 

ಅಪ್ಪು ಅವರು ಕನ್ನಡ ಚಿತ್ರರಂಗದಲ್ಲಿ ಅಜಾತಶತ್ರುವಾಗಿದ್ದರು ಯಾರ ವಿರೋಧವನ್ನು ಕೂಡ ಕಟ್ಟಿಕೊಂಡಿರಲಿಲ್ಲ. ಎಲ್ಲರಿಗೂ ಕೂಡ ಅಪ್ಪು ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು. ಅವರಿಗೆ ಹೀಗೆ ದಿಡೀರನೆ ಮರಣ ಸಂಭವಿಸಿದೆ ಎಂದರೆ ಯಾರಿಗೂ ಕೂಡ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಲ್ಲರೂ ದೇವರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪುಣ್ಯತಿಥಿ ಪ್ರಯುಕ್ತವಾಗಿ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ 40 ಸಾವಿರಕ್ಕೂ ಅಧಿಕ ಮಂದಿಗೆ ಅನ್ನಸಂತರ್ಪಣೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಸೇರಿದಂತೆ ರಾಘಣ್ಣ ಹಾಗೂ ಶಿವಣ್ಣ ಅಭಿಮಾನಿಗಳಿಗೆ ಊಟವನ್ನು ಬಡಿಸಿದ್ದಾರೆ. ಈ ಸಂದರ್ಭದಲ್ಲಿ ಮೇಘನಾ ಶೆಟ್ಟಿ ರವರು ಕೂಡ ಬಂದಿದ್ದಾರೆ.

 

 

ಅಪ್ಪು ಅವರ ಸಮಾಧಿಗೆ ಬಂದು ಮೇಘನಾ ರವರು ನಮಿಸಿ ಕಣ್ಣೀರು ಹಾಕಿದ್ದಾರೆ. ಕುಟುಂಬಕ್ಕೆ ಆತ್ಮೀಯರಾಗಿರುವ ಅಪ್ಪು ಅವರನ್ನು ಕಳೆದುಕೊಂಡಿರುವ ದುಃಖ ಇನ್ನಷ್ಟು ಮೇಘನಾ ರವರಿಗೆ ಕಾಡಿದೆ, ನಿಜಕ್ಕೂ ಈ ಎಲ್ಲರ ದೃಶ್ಯ ಗಳನ್ನು ನೋಡುತ್ತಿದ್ದರೇ ಎಂತವರು ಕೂಡ ಒಂದು ಕ್ಷಣ ಭಾವುಕರಾಗುತ್ತಾರೆ. ಅಪ್ಪು ಅವರು ಕೇವಲ ನಟನಾಗಿ ಮಾತ್ರವಲ್ಲದೆ ಒಬ್ಬ ವ್ಯಕ್ತಿಯಾಗಿ ಎಲ್ಲರಿಗೂ ಸಾಕಷ್ಟು ಇಷ್ಟವಾಗುತ್ತಾರೆ. ಇದಕ್ಕಾಗಿಯೇ ಅವರ ಅಗಲಿಕೆಯನ್ನು ತಮ್ಮ ಸ್ವಂತ ನಷ್ಟದಂತೆ ಎಲ್ಲರೂ ಭಾವಿಸುತ್ತಿದ್ದಾರೆ.

 

Leave a comment

Your email address will not be published.