Categories: Entertainment

ಧೃವಸರ್ಜಾ ಅವರ ಪತ್ನಿ ಪ್ರೇರಣಾ ಅವರ ಅದ್ದೂರಿ, ಭರ್ಜರಿ ಸೀಮಂತ ಶಾಸ್ತ್ರ ಹೇಗಿತ್ತು ಗೊತ್ತಾ..? ವೈಭವದಿಂದ ನಡೆದಿದೆ ಸೀಮಂತ ಕಾರ್ಯಕ್ರಮ..!!!

ಆಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ಮತ್ತು ಪ್ರೇರಣಾ ಸೆಪ್ಟೆಂಬರ್ 3ರಂದು ತಂದ-ತಾಯಿಯಾಗುತ್ತಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

 

 

ಇದೇ ತಿಂಗಳು ಪುಟ್ಟ ಕಂದಮ್ಮನನ್ನು ಬರ ಮಾಡಿಕೊಳ್ಳುತ್ತಿರುವ ಧ್ರುವ ಸರ್ಜಾ ಕುಟುಂಬ ನಿನ್ನೆ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ.

 

 

ಬೆಂಗಳೂರಿನ ಐಷಾರಾಮಿ ಹೋಟೆಲ್ ಶೆರಾಟನ್‌ ಗ್ರ್ಯಾಂಡ್‌ನಲ್ಲಿ ಸೀಮಂತ ಶಾಸ್ತ್ರಿ ನಡೆದಿದೆ. ಕುಟುಂಬದಸ್ಥರು ಮತ್ತು ಚಿತ್ರರಂಗದ ಆಪ್ತರು ಭಾಗಿಯಾಗಿದ್ದರು.

 

 

ಹಸಿರು ಮತ್ತು ಕೆಂಪು ಕಾಂಬಿನೇಷನ್‌ ಸೀರಿಯಲ್ಲಿ ಪ್ರೇರಣಾ ಮಿಂಚುತ್ತಿದ್ದಾರೆ. ರೇಶ್ಮೆ ಶರ್ಟ್‌ ಮತ್ತು ಧೋತಿಯಲ್ಲಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗುತ್ತಿದೆ. ಸೀಮಂತ ಕಾರ್ಯಕ್ರಮಕ್ಕೆ ವೇದಿಕೆಯನ್ನು ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಶಕ್ತಿ ಪ್ರಸಾದ್ ಮತ್ತು ಚಿರಂಜೀವಿ ಸರ್ಜಾ ಫೋಟೋ ಕೂಡ ಇಡಲಾಗಿತ್ತು.

 

 

ಎ. ಪಿ ಅರ್ಜುನ್ ನಿರ್ದೇಶನದ ‘ಮಾರ್ಟಿನ್’ ಚಿತ್ರದಲ್ಲಿ ಧ್ರುವ ಸರ್ಜಾ ಬ್ಯುಸಿ ಆಗಿದ್ದಾರೆ. ಆದರೂ ಬಿಡುವು ಮಾಡಿಕೊಂಡು ಮಡದಿಗೆ ಸಾಕಷ್ಟು ಸಮಯ ಮೀಸಲಿಟ್ಟಿದ್ದಾರೆ. ಪ್ರೇರಣಾ ಆಸೆಯಂತೆ ಬಹಳ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ. ಚಿರಂಜೀವಿ ಸರ್ಜಾ ನಿಧನದ ನಂತರ ಮೇಘನಾ ರಾಜ್, ಪುತ್ರ ರಾಯನ್‌ ಸರ್ಜಾಗೆ ಜನ್ಮ ನೀಡಿದ್ದರು. ಇನ್ನು ಇತ್ತೀಚೆಗಷ್ಟೇ ಧ್ರುವ ಸರ್ಜಾ ಅಜ್ಜಿ ಲಕ್ಷ್ಮಿ ದೇವಮ್ಮ ಕೊನೆಯುಸಿರೆಳೆದಿದ್ದರು. ಈಗ ಮತ್ತೊಬ್ಬ ಅತಿಥಿ ಸರ್ಜಾ ಕುಟುಂಬಕ್ಕೆ ಬರುತ್ತಿರುವುದು ಕುಟುಂಬ ಸದಸ್ಯರಲ್ಲಿ ಸಂತಸ ತಂದಿದೆ.

 

 

ಸರ್ಜಾ ಕುಟುಂಬ ಮತ್ತೊಬ್ಬ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದೆ. ಇತ್ತೀಚೆಗಷ್ಟೆ ಪತ್ನಿ ಪ್ರೇರಣಾರವರ ಬೇಬಿ ಬಂಪ್ ಫೋಟೋಗಳನ್ನು ಶೇರ್ ಮಾಡಿ ಧ್ರುವ ಸರ್ಜಾ ಶೀಘ್ರದಲ್ಲೇ ತಂದೆಯಾಗುತ್ತಿರುವ ಸಿಹಿಸುದ್ದಿ ನೀಡಿದ್ದರು. ನಿನ್ನೆ(ಸೆಪ್ಟೆಂಬರ್ 7) ಖಾಸಗಿ ಹೋಟೆಲ್‌ನಲ್ಲಿ ಪ್ರೇರಣಾ ಸೀಮಂತ ಕಾರ್ಯ ನಡೆದಿದೆ. ಅರ್ಜುನ್ ಸರ್ಜಾ ಸೇರಿದಂತೆ ಕುಟುಂಬದ ಆಪ್ತರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

 

 

8 ತಿಂಗಳು ಪೂರೈಸಿ ಪ್ರೇರಣಾಗೆ 9 ತಿಂಗಳಾಗಿದೆ. ಇದೇ ಸಮಯದಲ್ಲಿ ಸೀಮಂತಾ ಕಾರ್ಯ ನೆರವೇರಿಸಲಾಗಿದ್ದು ಇದೇ ತಿಂಗಳು ಧ್ರುವ ಸರ್ಜಾ ಮಗ ಅಥವಾ ಮಗಳ ನಿರೀಕ್ಷೆಯಲ್ಲಿ ಇದ್ದಾರೆ. ಕಾರ್ಯಕ್ರಮದಲ್ಲಿ ಸರ್ಜಾ ಕುಟುಂಬದ ಜೊತೆಗೆ ಪ್ರೇರಣಾ ಕುಟುಂಬವೂ ಭಾಗಿಯಾಗಿದ್ದು ಬಹಳ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯಕ್ರಮ ನೆರವೇರಿದೆ. ಇದಕ್ಕೆ ಸಂಬಂಧಿಸಿದ ಕೆಲ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

 

ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಸೇರಿದಂತೆ ಸರ್ಜಾ ಕುಟುಂಬಕ್ಕೆ ಆಪ್ತರಾಗಿರುವ ಚಿತ್ರರಂಗದ ಗಣ್ಯಾತಿ ಗಣ್ಯರು ಶುಭ ಕಾರ್ಯಕ್ಕೆ ಬಂದು ಪ್ರೇರಣಾಗೆ ಆಶೀರ್ವದಿಸಿದ್ದಾರೆ. 4 ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಧ್ರುವ ಸರ್ಜಾ ‘ಮಾರ್ಟಿನ್’ ಆಗಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಲು ಮುಂದಾಗಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ಸಿನಿಮಾ ಶೂಟಿಂಗ್ ಮುಗಿಸಿ ಬಂದಿದೆ ಚಿತ್ರತಂಡ.

 

 

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸೆಪ್ಟೆಂಬರ್ 30ಕ್ಕೆ ‘ಮಾರ್ಟಿನ್’ ಸಿನಿಮಾ ರಿಲೀಸ್ ಅಗಬೇಕಿತ್ತು. ಬಹಳ ಅದ್ಧೂರಿ ಸಿನಿಮಾ ಆಗಿರುವುದರಿಂದ ಚಿತ್ರೀಕರಣ ತಡವಾಗ್ತಿದೆ. ಹಾಗಾಗಿ ರಿಲೀಸ್‌ ಡೇಟ್‌ ಪೋಸ್ಟ್‌ಪೋನ್ ಮಾಡಿತ್ತು ಚಿತ್ರತಂಡ.

 

karnataka

Recent Posts

ಸ್ಕೂಲ್ ನಲ್ಲಿ ಇಲ್ಲ ಕಾಲೇಜಿನಲ್ಲಿ ಇದ್ದ – ಬಾಯ್ ಫ್ರೆಂಡ್ ಗುಟ್ಟು ಬಿಚ್ಚಿಟ್ಟ ಕಮಲಿ ಖ್ಯಾತಿಯ ಅಮೂಲ್ಯ ಗೌಡ..!!!

ಕಿರುತೆರೆ ಲೋಕದ ಬಹು ನಿರೀಕ್ಷಿತ ಶೋ ಬಿಗ್ ಬಾಸ್. ಹೌದು ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ ಒಂಬತ್ತು ಆರಂಭಗೊಂಡಿದೆ.…

16 hours ago

೧೦೦ ಕೋಟಿ ಕ್ಲಬ್ ಸೇರುವ ಮುನ್ನವೇ, ೫ ನೇ ದಿನಕ್ಕೆ ಕಾಂತಾರ ಚಿತ್ರದ ರಿಷಬ್ ಗೆ ಭಾರೀ ಆಘಾತ..!!

ಸ್ನೇಹಿತರ ಕಾಂತಾರ ಚಿತ್ರಕ್ಕೆ ಆರಂಭದಿಂದ ದೊಡ್ಡ ಮಟ್ಟದ ಸ್ಪಂದನೆ ಸಿಗುತ್ತಿದ್ದು, ಅದು ಅತ್ಯಧಿಕ ಪರದೆಗಳಲ್ಲಿ ಚಿತ್ರ ಪ್ರದರ್ಶನಗಳುಗೊಳ್ಳುವುದು ಅಷ್ಟೇ ಅಲ್ಲದೆ…

17 hours ago

ಮದುವೆಯಾದ ಒಂದೇ ತಿಂಗಳಿಗೆ ಪತ್ನಿಯಿಂದ ದೂರಾಗುತ್ತಿರುವ ರವೀಂದರ್.!! ಕಾರಣವೇನು ಗೊತ್ತಾ

ಕಳೆದ ಒಂದು ತಿಂಗಳಿನಿಂದ ಟ್ರೆಂಡಿಂಗ್‌ನಲ್ಲಿದ್ದ ಸ್ಟಾರ್ ಜೋಡಿ ನಿರೂಪಕಿ ಮಹಾಲಕ್ಷ್ಮಿ ಹಾಗು ನಿರ್ಮಾಪಕ ರವಿತರ ಜೋಡಿಯ ಕುರಿತು ಇದೀಗ ಹೊಸ…

17 hours ago

ಹೊಸ ಮನೆಯಲ್ಲಿ ಮಕ್ಕಳ ಜೊತೆ ಆಯುಧ ಪೂಜೆಯಲ್ಲಿ ನಟ ಶರಣ್

ನಟ ಶರಣ್ ಇವರ ನಟನೆ ನನಗೆ ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತದೆ. ಚಂದನವನದ ಅದ್ಭುತ ನಟರಲ್ಲಿ ಶರಣ್ ಸಹ ಒಬ್ಬರು. ಶರಣ್…

17 hours ago

ತಮ್ಮ ಬೈಸಿಕಲ್ ಜೊತೆ ಯಶ್ ಐಷಾರಾಮಿ ಯಂತ್ರಗಳಿಗೆ ಪೂಜೆ ಸಲ್ಲಿಸಿದ ಮಗ ಯತರ್ವ್ ಯಶ್!

ನಟ ರಾಕಿಂಗ್ ಸ್ಟಾರ್ ತಮ್ಮ ಕಾರುಗಳಿಗೆ ಪೂಜೆ ಸಲ್ಲಿಸಿದ್ದಾರೆ. ನಟ ಯಶ್ ಅವರು ಮನೆಯಲ್ಲಿ ತಮ್ಮ ಎಲ್ಲಾ ಕಾರುಗಳನ್ನು ಸಮಾನವಾಗಿ…

1 day ago

ಗೀತಾ ಸೀರಿಯಲ್ ನಟಿ ಭವ್ಯ ಗೌಡ, ನಟ ಧನುಷ್ ಗೌಡ ಚಾಮುಂಡೇಶ್ವರಿ ಸನ್ನಿಧಿಯಲ್ಲಿ

ಭವ್ಯಾ ಗೌಡ ಮತ್ತು ಧನುಷ್ ಗೌಡ ನಡುವಿನ ವಯಸ್ಸಿನ ವ್ಯತ್ಯಾಸ ಗಮನಾರ್ಹವಾಗಿದೆ. ಭವ್ಯಾ ಗೌಡಗೆ ಕೇವಲ 23 ವರ್ಷ, ಧನುಷ್…

1 day ago