ಕ್ಯಾಡ್‌ಬರೀಸ್ ಚಾಕಲೇಟ್‌ನಲ್ಲಿ ಹುಳುಗಳು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಆ ಚಾಕಲೇಟನ್ನು ಖರೀದಿಸಿದ ಗ್ರಾಹಕರೊಬ್ಬರು 50 ಲಕ್ಷ ರೂಪಾಯಿ ಪರಿಹಾರ ಕೇಳಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಬೆಂಗಳೂರು HSR ಲೇ ಔಟ್ ನಿವಾಸಿ ಮುಖೇಶ್ ಕುಮಾರ್ ಕೆಡಿಯಾ ಅವರು 2016ರ ಅಕ್ಟೋಬರ್‌ನಲ್ಲಿ ಸೂಪರ್ ಮಾರ್ಕೆಟ್ ನಲ್ಲಿ 89/- ಮೌಲ್ಯದ ಕ್ಯಾಡ್‌ಬರೀಸ್ ಚಾಕಲೇಟ್ ಖರೀದಿಸಿದ್ದರು.

 

 

ಈ ಚಾಕಲೇಟ್ ನಲ್ಲಿ ಹುಳುಗಳು ಕಂಡುಬಂದಿತ್ತು. ಈ ಬಗ್ಗೆ ಮುಖೇಶ್ ಬೆಂಗಳೂರಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ಸಂಪರ್ಕಿಸಿ ಕ್ಯಾಡ್‌ಬರೀಸ್ ಕಂಪನಿ ಹಾಗೂ ಸೂಪರ್ ಮಾರ್ಕೆಟ್ ವಿರುದ್ಧ ದೂರು ದಾಖಲಿಸಿದ್ದರು.

ಮುಖೇಶ್ ತಮಗಾದ ಸಮಸ್ಯೆಗೆ 50 ಲಕ್ಷ ರೂ. ಪರಿಹಾರ ಕೋರಿದ್ದರು. ಆದರೆ, ಚಾಕಲೇಟ್ ನಲ್ಲಿ ಹುಳಗಳಿವೆ ಎಂದು ಒಪ್ಪಿಕೊಂಡಿರುವ ಕ್ಯಾಡ್‌ಬರೀಸ್ ಕಂಪನಿ ಇಷ್ಟೊಂದು ಮೊತ್ತದ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು.

 

 

ವಾದ-ಪ್ರತಿವಾದ ಆಲಿಸಿದ ಗ್ರಾಹಕ ನ್ಯಾಯಾಲಯ, 5 ಲಕ್ಷ ರೂ. ವರಗಿನ ಅರ್ಜಿಗಳ ವಿಚಾರಣೆಗೆ ಅನುಮತಿಸಲಾಗುತ್ತದೆ. ಒಂದು ಕೋಟಿ ತನಕದ ವ್ಯಾಜ್ಯಗಳನ್ನು ಪರಿಹರಿಸಲು ರಾಜ್ಯ ಗ್ರಾಹಕರ ನ್ಯಾಯಾಲಯದಲ್ಲಿ ದೂರು ಸಲ್ಲಿಸುವಂತೆ ಸೂಚಿಸಿದೆ. ಈ ಹೋರಾಟವನ್ನು ನಿಲ್ಲಿಸದೆ ರಾಜ್ಯ ಗ್ರಾಹಕ ನ್ಯಾಯಾಲಯದ ಮೊರೆ ಹೋಗಲು ಮುಖೇಶ್ ನಿರ್ಧರಿಸಿದ್ದಾರೆ.

Leave a comment

Your email address will not be published.