ಚಂದನವನದ ಮುದ್ದು ಚೆಲುವೆ ನಟಿ ಅಮೂಲ್ಯ ಅವರು ಅವಳಿ ಮಕ್ಕಳಿಗೆ ತಾಯಿಯಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಹಾಗಾಗಿ ಅಮೂಲ್ಯ ಅವರಿಗೆ ಪತಿ ಜಗದೀಶ್ ಅವರು ಮಕ್ಕಳೊಂದಿಗೆ ಅದ್ದೂರಿಯಾಗಿ ಇತ್ತೀಚೆಗೆ ತಾನೇ ಪೋಟೋಶೂಟ್ ನಡೆಸಿದ್ದರು. ಈ ಹಿಂದೆ ನಡೆದ ಸೀಮಂತ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ಅನೇಕ ಸ್ಟಾರ್ ನಟ-ನಟಿಯರು ಆಗಮಿಸಿ ಅಮೂಲ್ಯ ಅವರ ಕುಶಲೋಪರಿ ವಿಚಾರಿಸಿ ಶುಭ ಹಾರೈಸಿದ್ದಾರೆ.

 

 

View this post on Instagram

 

A post shared by Amulya (@nimmaamulya)

 

ನಟಿ ಅಮೂಲ್ಯ ಈಗ ಅವಳಿ ಮಕ್ಕಳ ತಾಯಿಯಾಗಿದ್ದಾರೆ. ತಮ್ಮ ಮನೆಗೆ ಹೊಸದೊಂದು ಜೀವ ಬರಲಿರುವ ದಿನ ಸನಿಹವಾಗುತ್ತಿದ್ದಂತೆ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿತ್ತು. ಅಂತೆಯೇ ನಟಿ ಅಮೂಲ್ಯ ಮತ್ತು ಅವರ ಪತಿ ಜಗದೀಶ್ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಅನೇಕ ಕಲಾವಿದರು ಆಪ್ತ ಸ್ನೇಹಿತರಿದ್ದಾರೆ.

 

 

ಅಷ್ಟೇ ಅಲ್ಲದೆ ಜಗದೀಶ್ ಅವರು ರಾಜಕೀಯ ಹಿನ್ನೆಲೆಯವರಾದ ಕಾರಣ ತಮ್ಮ ಪತ್ನಿ ಅಮೂಲ್ಯ ಅವರ ಸೀಮಂತ ಕಾರ್ಯಕ್ರಮದಲ್ಲಿ ರಾಜಕೀಯ ಗಣ್ಯರು ಭಾಗವಹಿಸಿ ಅಮೂಲ್ಯ ಅವರಿಗೆ ಶುಭ ಹಾರೈಸಿದರು. ನಟಿ ಅಮೂಲ್ಯ ಕನ್ನಡ ಸಿನಿಮಾ ರಂಗದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದರು. ಅಮೂಲ್ಯ ಗೋಲ್ಡನ್ ಸ್ಟಾರ್ ಗಣೀಶ್ ಅವರ ಜೋಡಿ ಚಂದನವನದ ಸೂಪರ್ ಹಿಟ್ ಜೋಡಿಯಾಗಿತ್ತು.

 

 

ಇವರಿಬ್ಬರ ಜೋಡಿಯಾಗಿ ನಟಿಸಿದ ಎಲ್ಲಾ ಸಿನಿಮಾಗಳು ಕೂಡ ಯಶಸ್ವಿಯಾಗಿವೆ. ಹಾಗಾಗಿಯೇ ಗಣೇಶ್ ಮತ್ತು ಅಮೂಲ್ಯ ಅವರು ಒಟ್ಟಾಗಿ ಹ್ಯಾಟ್ರಿಕ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ನಟಿ ಅಮೂಲ್ಯ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಬಾಲ ನಟಿಯಾಗಿ. ನಟಿ ಅಮೂಲ್ಯ ಅವರು ಚಾಲೇಂಜಿಂಗ್ ಸ್ಟಾರ್ ದರ್ಶನ್ ಅವರ ಲಾಲಿಹಾಡು ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದರು.

 

 

 

ಅದಾಗಿನಿಂದ ದರ್ಶನ್ ಅವರಿಗೆ ಅಮೂಲ್ಯ ಅವರನ್ನ ಕಂಡರೆ ತಂಗಿಯಂತೆ ಕಾಣುತ್ತಾರಂತೆ. ಇತ್ತೀಚೆಗೆ ಎಲೆಕ್ಷನ್ ಪ್ರಚಾರದಲ್ಲಿಯೂ ಕೂಡ ಜೊತೆಯಾಗಿಯೇ ಪ್ರಚಾರ ಮಾಡಿ ತಮಾಷೆಯಿಂದ ದರ್ಶನ್ ಅವರು ಅಮೂಲ್ಯ ಅವರಿಗೆ ಕಾಲು ಎಳೆಯುತ್ತಿದ್ದರು. ಅಮೂಲ್ಯ ಅವರನ್ನ ತಮ್ಮ ಮನೆಯ ಹುಡುಗಿಯಂತೆ ಕಾಣುವ ದರ್ಶನ್ ಅವರು ಅಮೂಲ್ಯ ಅವರ ಸೀಮಂತ ಕಾರ್ಯಕ್ರಮಕ್ಕೆ ದಂಪತಿಗಳ ಸಮೇತ ಆಗಮಿಸಿ ಶುಭ ಹಾರೈಸಿದ್ದರು.

 

 

ಅಷ್ಟೇ ಅಲ್ಲ ದರ್ಶನ್ ಅವರು ಅಮೂಲ್ಯ ಅವರಿಗೆ ಬೆಳ್ಳಿ ತೊಟ್ಟಲನ್ನು ಉಡುಗೊರೆಯಾಗಿ ನೀಡಿದ್ದಾರಂತೆ, ಮತ್ತು ಇದೀಗ ಅವಳಿ ಮಕ್ಕಳಿಗೆ ಚಿನ್ನದ ಸರವನ್ನು ಕೊಟ್ಟಿದ್ದಾರಂತೆ. ಇದರಿಂದ ಅಮೂಲ್ಯ ಮತ್ತು ಜಗದೀಶ್ ದಂಪತಿಗಳು ತುಂಬ ಭಾವುಕರಾಗಿದ್ದಾರಂತೆ. ನಟಿ ಅಮೂಲ್ಯ ಅವರು ಕಿಚ್ಚ ಸದೀಪ್ ಅವರ ಚಂದು ಚಿತ್ರದಲ್ಲಿಯೂ ಕೂಡ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಅಮೂಲ್ಯ ಅವರ ಮನೆಗೆ ಬಂದು ಮಕ್ಕಳ ಕಾರ್ಯಕ್ರಮದಲ್ಲಿ ನಟ ಗಣೇಶ್ ಮತ್ತು ಅವರ ಪತ್ನಿ ಶಿಲ್ಪ ಅವರೊಟ್ಟಿಗೆ ಆಗಮಿಸಿ ಶುಭ ಹಾರೈಸಿದ್ದಾರೆ.

 

Leave a comment

Your email address will not be published.