Categories: Entertainment

ಪತ್ರಕರ್ತ ಸೋಮಣ್ಣ ಮಾಚಿಮಾಡ ತಮ್ಮ ಪತ್ನಿಯನ್ನು ತ್ಯಜಿಸಲು ಕಾರಣವೇನು ಗೊತ್ತಾ? ಬಿಗ್ ಬಾಸ್ ಒಟಿಟಿಯಲ್ಲಿ ಪತ್ನಿಯನ್ನು ನೆನೆದು ಕಣ್ಣೀರಿಟ್ಟ ಸೋಮಣ್ಣ..!!!

ಬಿಗ್ ಬಾಸ್ ಒಟಿಟಿ ದಿನೇ ದಿನೇ ರಂಗೇರಿ ಸುದ್ದಿ ಮಾಡುತ್ತಿರೋ ಜನಪ್ರಿಯ ಕನ್ನಡದ ರಿಯಾಲಿಟಿ ಶೋ. ಈ ಬಾರಿ ‘ಬಿಗ್ ಬಾಸ್’ ಮನೆಗೆ ಕಾಲಿಟ್ಟಿರುವ ಸ್ಪರ್ಧಿಗಳ ಆಯ್ಕೆ ಸರಿಯಿಲ್ಲವೆಂದು ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಅದರೆ ಈ ಶೋ ನೋಡದನ್ನು ಮಾತ್ರ ತಪ್ಪಿಸುತ್ತಿಲ್ಲ.

 

 

ದೊಡ್ಡ ಮನೆಯಲ್ಲಿ ನಿತ್ಯವೂ ಸಾಕಷ್ಟು ವಿಚಾರಗಳನ್ನು ಸ್ಪರ್ಧಿಗಳು ಹಂಚಿಕೊಳ್ಳುತ್ತಿದ್ದಾರೆ. ವೈಯಕ್ತಿಕ ವಿಚಾರಗಳಿಗೆ ಈ ಬಾರಿಯ ‘ಬಿಗ್ ಬಾಸ್’ ವೇದಿಕೆಯಾಗಿದ್ದೀಯಾ? ಅಂತಾ ಜನ ಮಾತನಾಡಿಕೊಳ್ಳುತ್ತಿದ್ದಾರೆ. 2ನೇ ಸ್ಪರ್ಧಿಯಾಗಿ ಎಂಟ್ರಿಕೊಟ್ಟ ಸೋನು ಶ್ರೀನಿವಾಸ ಗೌಡ ಈ ಶೋನಲ್ಲಿ ಇರಬಾರ್ದು ಅಂತಾ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

 

 

ಪ್ರತಿಯೊಬ್ಬ ಕಂಟೆಸ್ಟೆಂಟ್ ಕೂಡ ತಮ್ಮ ಜೀವನದ ನೋವನ್ನು ಶೋನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಪೈಕಿ ನಿರೂಪಕ ಸೋಮಣ್ಣ ಮಾಚಿಮಾಡ ತಮ್ಮ ಜೀವನದ ಕಹಿ ಸತ್ಯವನ್ನು ಹೊರಹಾಕಿದ್ದಾರೆ. ‘ಪ್ರತಿನಿತ್ಯ ಕೆಲಸಕ್ಕೆ ಹೆಚ್ಚು ಸಮಯ ಮೀಸಲಿಟ್ಟು ನಾನು ನನ್ನ ವಯಕ್ತಿಕ ಬದುಕನ್ನು ಹಾಳು ಮಾಡಿಕೊಂಡೆ. ನನ್ನ ಪತ್ನಿಯನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆಕೆ ನನ್ನನ್ನು ಬಿಟ್ಟು ಹೋದ ನೋವನ್ನು ಮರೆಯಲು ಸಾಧ್ಯವಿಲ್ಲ. ನನ್ನ ಪತ್ನಿಗೆ ನಾನು ಸಮಯವನ್ನೇ ಕೊಡಲಿಲ್ಲ. ಆ ನೋವು ನನಗೆ ನಿರಂತರವಾಗಿ ಕಾಡುತ್ತಿದೆ’ ಎಂದು ಹೇಳಿದ್ದಾರೆ.

 

 

ಬಿಗ್ ಬಾಸ್’ ಮನೆಗೆ ಬರೋವಾಗಲು ನಾನು ನನ್ನ ಪತ್ನಿ ಬಳಿ ಮಾತನಾಡಿ ಬಂದೆ. ಈಗ ನನಗೆ ನನ್ನ ಕೆಲಸ ಮಾತ್ರ ಉಳಿದುಕೊಂಡಿದೆ ಎಂದು ಸೋಮಣ್ಣ ಮಾಚಿಮಾಡ ಎಲ್ಲರ ಮುಂದೆ ಕಣ್ಣೀರು ಹಾಕಿದರು. ಈ ವೇಳೆ ಅವರಿಗೆ ಇನ್ನುಳಿದ ಸ್ಪರ್ಧಿಗಳು ಸಮಾಧಾನಪಡಿಸಿದರು. ಇದಲ್ಲದೇ ನಾವು ನಿಮ್ಮನ್ನು ಮತ್ತೇ ಒಂದು ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸೋಮಣ್ಣ ಮಾಚಿಮಾಡ ‘ದಯವಿಟ್ಟು.. ಅದು ಆಗ ಮಾತು’ ಅಂತಾ ಬೇಸರ ವ್ಯಕ್ತಪಡಿಸಿದರು.

 

 

ಪ್ರತಿಯೊಬ್ಬರ ಬಾಳಿನಲ್ಲೂ ಸಾವಿರ ನೋವಿರುತ್ತದೆ. ನೋವಿಲ್ಲದ ಮನುಷ್ಯ ಈ ಭೂಮಿ ಮೇಲೆ ಯಾರು ಇಲ್ಲ ಬಿಡಿ. ಹೀಗೆ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಸಾಕಷ್ಟು ವಿಚಾರಗಳನ್ನು ಎಲ್ಲಾ ಸ್ಪರ್ಧಿಗಳು ಮುಚ್ಚುಮರೆ ಇಲ್ಲದೆ ಹಂಚಿಕೊಂಡಿದ್ದಾರೆ. ಪ್ರತಿದಿನ ಹೊಸ ವಿಚಾರಗಳಿಂದ ಕುತೂಹಲ ಮೂಡಿಸುತ್ತಿರುವ ‘ಬಿಗ್ ಬಾಸ್’ ಬಗ್ಗೆ ಜನರ ಅಷ್ಟೇ ಕುತೂಹಲ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಏನೆಲ್ಲಾ ಬೆಳವಣಿಗೆ ಮತ್ತು ಬದಲಾವಣೆಗೆ ‘ಬಿಗ್ ಬಾಸ್’ ಸಾಕ್ಷಿಯಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

 

 

ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ ಓಟಿಟಿ ಸೀಸನ್ 1ರಲ್ಲಿ ಕನ್ನಡ ಜನಪ್ರಿಯ ಪತ್ರಕರ್ತ ಸೋಮಣ್ಣ ಮಾಚಿಮಾಡ ಕೂಡ ಸ್ಪರ್ಧಿಸುತ್ತಿದ್ದಾರೆ. ಇಷ್ಟು ದಿನ ಸೆಲೆಬ್ರಿಟಿಗಳ ಸಂದರ್ಶನ ಮಾಡುತ್ತಿದ್ದವರು ಈಗ ಅವರೇ ಸೆಲೆಬ್ರಿಟಿಯಾಗಿರುವುದನ್ನು ನೋಡುತ್ತಿರುವ ನೆಟ್ಟಿಗರು ಶಾಕ್ ಆಗಿದ್ದಾರೆ. ಮಾತಿನಲ್ಲಿ ನೇರ, ಮೃಧು ಸ್ವಭಾವದ ಸೋಮಣ್ಣ ಯಾರೊಂದಿಗೂ ತಮ್ಮ ಜೀವನದ ಪರ್ಸನಲ್ ವಿಚಾರವನ್ನು ಹಂಚಿಕೊಂಡಿರಲಿಲ್ಲ ಮೊದಲ ಬಾರಿಗೆ ಮದುವೆ, ಮಾಜಿ ಪತ್ನಿ ನೆನೆದು ಕಣ್ಣೀರಿಟ್ಟಿದ್ದಾರೆ.

 

 

 

ಬಿಗ್ ಬಾಸ್ ಮನೆ ಪ್ರವೇಶಿಸುವಾಗ ಸೋಮಣ್ಣ ನಾನು ಒಂಟಿ ಎಂದು ಹೇಳಿಕೊಂಡಿದ್ದರು. ಹೀಗಾಗಿ ಅವರ ಪರ್ಸನಲ್ ಲೈಫ್‌ ಬಗ್ಗೆ ಅನೇಕರಿಗೆ ಪ್ರಶ್ನೆ ಇತ್ತು. ಮದ್ವೆ ಆಗಿಲ್ವಾ, ಆಗಿದ್ರೂ ಪತ್ನಿ ಜೊತೆಗಿಲ್ವಾ? ಇಷ್ಟೊಂದು ಸಣ್ಣ ಯಾಕಾಗಿದ್ದಾರೆ? ಸೋಮಣ್ಣ ಅವರ ಚಾರ್ಮ್‌ ಕಡಿಮೆಯಾಗಿದೆ…ಹೀಗೆ ಪ್ರತಿಯೊಬ್ಬರೂ ಕೇಳುತ್ತಿದ್ದ ಒಂದೊಂದು ಪ್ರಶ್ನೆಗೂ ಉತ್ತರಿಸಿದ್ದಾರೆ.

 

 

 

ಲೈಫಲ್ಲಿ ನನಗೆ ಅವರನ್ನು ಮರೆತು ಬದುಕುವುದಕ್ಕೆ ಆಗುತ್ತಿಲ್ಲ ಅದು ಸಾಧ್ಯವೂ ಇಲ್ಲ. ಆಕೆನೇ ಫಸ್ಟ್‌ ಆಕೆನೇ ಲಾಸ್ಟ್‌. ಹೆಂಡ್ತಿನೇ ಲಾಸ್ಟ್‌ ನನ್ನ ಜೀವನದಲ್ಲಿ. ಅವಳ ರೀತಿ ನನಗೆ ಜೀವನದಲ್ಲಿ ಯಾರೂ ಸಿಗುವುದಿಲ್ಲ. ಜೀವನದಲ್ಲಿ ಆಕೆನ ತುಂಬಾನೇ ನೋವಿಸಿಬಿಟ್ಟೆ ಅನಿಸುತ್ತದೆ. ಕೆಲಸ ಕೆಲಸ ಕೆಲಸ ಅನ್ಕೊಂಡು ಅವಳನ್ನ ದೂರ ಮಾಡಿದೆ. ನನ್ನ ತಂದೆ Armyನಲ್ಲಿ ಕೆಲಸ ಮಾಡುತ್ತಿದ್ದರು, ನಾನು ಅಲ್ಲಿದ್ದರೆ ನೀನು ಒಬ್ಬಳೆ ಇರಬೇಕಾಗುತ್ತದೆ. ನನಗೆ ಮೀಡಿಯಾ ಮುಖ್ಯ ನನ್ನ ಕೆಲಸ ನನಗೆ ಮುಖ್ಯ ಜೀವನ ಚೆನ್ನಾಗಿರಬೇಕು ಅಂತ ಕಷ್ಟ ಪಟ್ಟು ಬಂದೆ ಅದರೆ ಆಕೆ ಜೊತೆಗಿಲ್ಲ’ ಎಂದಿದ್ದಾರೆ ಸೋಮಣ್ಣ.

 

 

‘ಬಿಗ್ ಬಾಸ್ ಮನೆ ಪ್ರವೇಶಿಸುವ ಮುನ್ನ ಫೋನ್ ಮಾಡಿದೆ ಈ ರೀತಿ ಸೆಲೆಕ್ಟ್‌ ಆಗಿರುವ ಹೋಗ್ತಿದ್ದೀನಿ ಅಂತ ಅವಳಿಗೆ ಹೇಳಿದ ಮೇಲೆ ನನಗೆ ಸಮಾಧಾನ. ಆಯ್ತು ಹೋಗಿ ಬಾ ನನ್ನ ಆಶೀರ್ವಾದ ಇರುತ್ತೆ ನೀನು ಹೋಗಿ ಬಾ ಚೆನ್ನಾಗಿ ಆಡು ನೀನು ಒಳ್ಳೆಯವನು ನನಗೆ ಗೊತ್ತು ಅಂತ ಆಕೆ ಹೇಳಿ ಕಳುಹಿಸಿದ್ದಳು ಆದರೆ ಇವತ್ತಿಗೂ ನನಗೆ ಆ ಒಂದು ಕೊರಗು ಇದೆ ಇದೆಲ್ಲಾ ಆದ್ಮೇಲೆ ಸ್ನೇಹಿತರು ನನ್ನನ್ನು ದೂರ ಮಾಡುತ್ತಾರೆ ಕುಟುಂಬಸ್ಥರು ದೂರ ಮಾಡುತ್ತಾರೆ ಈ ಸಮಯದಲ್ಲಿ ನನಗೆ ಉಳಿದಿದ್ದು ಕೆಲಸ ಮಾತ್ರ. ಬೆಂಗಳೂರಿನಲ್ಲಿ ನಾನೊಬ್ಬನೆ ಬದುಕುತ್ತಿರುವುದು. ಬಿಗ್ ಬಾಸ್ ಮನೆಗೆ ಬರಲು ಕಾರಣ ಏನೆಂದರೆ ಎಲ್ಲರ ಜೊತೆ ಬದುಕಬೇಕು ಅಂತ. ಎಲ್ಲಾ ಕಲರ್‌ಫುಲ್‌ ಜೀವನ ನೋಡಬೇಕು ನಾನು. ಚಿಕ್ಕ ವಯಸ್ಸಿನಿಂದಲೂ ನನಗೆ ಹಾಗೆನೇ, ಅಪ್ಪನ ಪ್ರೀತಿ ಸಿಗಲಿಲ್ಲ ಅಮ್ಮನ ಪ್ರೀತಿ ಸಿಗಲಿಲ್ಲ…ನಾವೆಲ್ಲಾ ಒಟ್ಟಿಗೆ ಊಟ ಮಾಡಿದ್ದು ನೆನಪಿಲ್ಲ. 20 ವರ್ಷದ ಜರ್ನಿಗೆ ನಾನು ರಿಸೈನ್ ಮಾಡಿ ಬಂದಿದ್ದು ಯಾಕೆ ಅಂದ್ರೆ ಇಲ್ಲಿ ಒಳ್ಳೆ ಜನ ಸಿಗ್ತಾರೆ ಜೀವನ ಇದೆ’ ಎಂದು ಸೋಮಣ್ಣ ಮಾತನಾಡಿದ್ದಾರೆ.

karnataka

Recent Posts

ಸ್ಕೂಲ್ ನಲ್ಲಿ ಇಲ್ಲ ಕಾಲೇಜಿನಲ್ಲಿ ಇದ್ದ – ಬಾಯ್ ಫ್ರೆಂಡ್ ಗುಟ್ಟು ಬಿಚ್ಚಿಟ್ಟ ಕಮಲಿ ಖ್ಯಾತಿಯ ಅಮೂಲ್ಯ ಗೌಡ..!!!

ಕಿರುತೆರೆ ಲೋಕದ ಬಹು ನಿರೀಕ್ಷಿತ ಶೋ ಬಿಗ್ ಬಾಸ್. ಹೌದು ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ ಒಂಬತ್ತು ಆರಂಭಗೊಂಡಿದೆ.…

6 hours ago

೧೦೦ ಕೋಟಿ ಕ್ಲಬ್ ಸೇರುವ ಮುನ್ನವೇ, ೫ ನೇ ದಿನಕ್ಕೆ ಕಾಂತಾರ ಚಿತ್ರದ ರಿಷಬ್ ಗೆ ಭಾರೀ ಆಘಾತ..!!

ಸ್ನೇಹಿತರ ಕಾಂತಾರ ಚಿತ್ರಕ್ಕೆ ಆರಂಭದಿಂದ ದೊಡ್ಡ ಮಟ್ಟದ ಸ್ಪಂದನೆ ಸಿಗುತ್ತಿದ್ದು, ಅದು ಅತ್ಯಧಿಕ ಪರದೆಗಳಲ್ಲಿ ಚಿತ್ರ ಪ್ರದರ್ಶನಗಳುಗೊಳ್ಳುವುದು ಅಷ್ಟೇ ಅಲ್ಲದೆ…

7 hours ago

ಮದುವೆಯಾದ ಒಂದೇ ತಿಂಗಳಿಗೆ ಪತ್ನಿಯಿಂದ ದೂರಾಗುತ್ತಿರುವ ರವೀಂದರ್.!! ಕಾರಣವೇನು ಗೊತ್ತಾ

ಕಳೆದ ಒಂದು ತಿಂಗಳಿನಿಂದ ಟ್ರೆಂಡಿಂಗ್‌ನಲ್ಲಿದ್ದ ಸ್ಟಾರ್ ಜೋಡಿ ನಿರೂಪಕಿ ಮಹಾಲಕ್ಷ್ಮಿ ಹಾಗು ನಿರ್ಮಾಪಕ ರವಿತರ ಜೋಡಿಯ ಕುರಿತು ಇದೀಗ ಹೊಸ…

7 hours ago

ಹೊಸ ಮನೆಯಲ್ಲಿ ಮಕ್ಕಳ ಜೊತೆ ಆಯುಧ ಪೂಜೆಯಲ್ಲಿ ನಟ ಶರಣ್

ನಟ ಶರಣ್ ಇವರ ನಟನೆ ನನಗೆ ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತದೆ. ಚಂದನವನದ ಅದ್ಭುತ ನಟರಲ್ಲಿ ಶರಣ್ ಸಹ ಒಬ್ಬರು. ಶರಣ್…

7 hours ago

ತಮ್ಮ ಬೈಸಿಕಲ್ ಜೊತೆ ಯಶ್ ಐಷಾರಾಮಿ ಯಂತ್ರಗಳಿಗೆ ಪೂಜೆ ಸಲ್ಲಿಸಿದ ಮಗ ಯತರ್ವ್ ಯಶ್!

ನಟ ರಾಕಿಂಗ್ ಸ್ಟಾರ್ ತಮ್ಮ ಕಾರುಗಳಿಗೆ ಪೂಜೆ ಸಲ್ಲಿಸಿದ್ದಾರೆ. ನಟ ಯಶ್ ಅವರು ಮನೆಯಲ್ಲಿ ತಮ್ಮ ಎಲ್ಲಾ ಕಾರುಗಳನ್ನು ಸಮಾನವಾಗಿ…

20 hours ago

ಗೀತಾ ಸೀರಿಯಲ್ ನಟಿ ಭವ್ಯ ಗೌಡ, ನಟ ಧನುಷ್ ಗೌಡ ಚಾಮುಂಡೇಶ್ವರಿ ಸನ್ನಿಧಿಯಲ್ಲಿ

ಭವ್ಯಾ ಗೌಡ ಮತ್ತು ಧನುಷ್ ಗೌಡ ನಡುವಿನ ವಯಸ್ಸಿನ ವ್ಯತ್ಯಾಸ ಗಮನಾರ್ಹವಾಗಿದೆ. ಭವ್ಯಾ ಗೌಡಗೆ ಕೇವಲ 23 ವರ್ಷ, ಧನುಷ್…

1 day ago