Categories: Entertainment

ಮಹಿಳೆಯರ ಆಡಿಯೋ ರಿಲೀಸ್ – ಮನನೊಂದು ಸ್ವಾಮೀಜಿ ನೇಣು ಹಾಕಿಕೊಂಡು ಆತ್ಮಹತ್ಯೆ.!!! ಆಘಾತದಲ್ಲಿ ಭಕ್ತವೃಂದ..!!!

ರಾಜ್ಯದಲ್ಲಿ ಮುರುಘಾ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಪ್ರಕರಣ ದೊಡ್ಡ ಸದ್ದು ಮಾಡ್ತಿದೆ. ಸ್ವಾಮೀಜಿಗಳನ್ನು 3 ದಿನ ಪೊಲೀಸ್ ಕಸ್ಟಡಿ ಕೊಟ್ಟು ಈಗ 9 ದಿನ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಇದರ ನಡುವೆ ರಾಜ್ಯದಲ್ಲಿ ಮತ್ತೊಂದು ಘಟನೆ ನಡೆದೋಗಿದೆ. ಬೆಳಗಾವಿಯ ಬೈಲಹೊಂಗಲದ ನೇಗಿನಾಳ ಗ್ರಾಮದಲ್ಲಿ ಬಸವಸಿದ್ದಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 50 ವರ್ಷದ ಬಸವಸಿದ್ದಲಿಂಗ ಸ್ವಾಮೀಜಿ ಮಠದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್​​ನೋಟ್​​ ಬರೆದಿಟ್ಟಿರುವ ಸ್ವಾಮೀಜಿ, ಮಡಿವಾಳೇಶ್ವರ ಮಠದ ಮೇಲಿನ ಮಹಡಿಯ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಹಡೆದ ತಾಯಿ ನನ್ನ ಕ್ಷಮಿಸು, ಮಠದ ಭಕ್ತರು ನನ್ನನ್ನು ಕ್ಷಮಿಸಿ. ನನ್ನ ನಡೆ ಮಡಿವಾಳೇಶ್ವರ ಕಡೆಗೆ ಎಂದು ಡೆತ್​​​ನೋಟ್​ನಲ್ಲಿ ಬರೆದಿಟ್ಟಿದ್ದಾರೆ.

 

 

ಬೆಳಗಾವಿಯ ಬೈಲಹೊಂಗಲದ ಮಡಿವಾಳೇಶ್ವರ ಮಠದ ಬಸವಸಿದ್ದಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್ ಬರೆದಿಟ್ಟಿರುವ ಸ್ವಾಮೀಜಿಗಳು ನೇಣುಬಿಗಿದುಕೊಂಡು ಸೂಸೈಡ್ ಮಾಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಸಾವಿಗೆ ನಾನೇ ಕಾರಣ ಅಂತ ಲೆಟರ್ ಬರೆದಿಟ್ಟಿದ್ದಾರೆ.ಡೆತ್ ನೋಟ್​​​ನಲ್ಲಿ ಬಸವಸಿದ್ದಲಿಂಗ ಸ್ವಾಮೀಜಿಯವರು, ಯಾರನ್ನೂ ವಿಚಾರಣೆಗೆ ಒಳಪಡಿಸಬೇಡಿ ಎಂದು ಬರೆದಿದ್ದಾರೆ.

 

 

ಈ ಲೋಕದ ಗೊಡವೆ ಸಾಕು. ಮಠದ ಕಮಿಟಿ, ಭಕ್ತರು ಮಠವನ್ನು ಮುನ್ನಡೆಸಿಕೊಂಡು ಹೋಗಿ ಎಂದು ಉಲ್ಲೇಖಿಸಿದ್ದಾರೆ.ಬಸವಸಿದ್ದಲಿಂಗ ಸ್ವಾಮೀಜಿ ಸಾವಿಗೆ ಆಡಿಯೋನೇ ಕಾರಣ ಎನ್ನಲಾಗಿದೆ. ಇಬ್ಬರು ಮಹಿಳೆಯರು ಬಸವಸಿದ್ದಲಿಂಗ ಸ್ವಾಮೀಜಿ ಬಗ್ಗೆ ಮಾತನಾಡಿರುವ ಆಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಸ್ವಾಮೀಜಿ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ.

 

 

ಇಂದು ಬೆಳಗ್ಗೆ 9 ಗಂಟೆಗೆ ಗ್ರಾಮದಲ್ಲಿ ಶ್ರೀಗಳ ಪಾರ್ಥಿವ ಶರೀರರದ ಮೆರವಣಿಗೆ ನಡೆಯಲಿದೆ. ಬಳಿಕ ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ. ಈಗಾಗಲೇ ಬಸವಸಿದ್ದಲಿಂಗ ಸ್ವಾಮೀಜಿಯ ಅಂತಿಮ ದರ್ಶನ ಪಡೆಯಲು ಹಲವು ಮಠಾಧೀಶರು ಆಗಮಿಸ್ತಿದ್ದಾರೆ.

 

 

ಸ್ವಾಮೀಜಿಗಳು ಕಾಯಕ ಯೋಗಿ ಆಗಿದ್ದರು. ಆಡಿಯೋ ವೈರಲ್ ಬೆನ್ನಲ್ಲೇ ಮನನೊಂದು ಆತ್ಮಹತ್ಯೆ ಮಾಡಿದ್ದಾರೆ. ಆಡಿಯೋದಲ್ಲಿ ಮಾತನಾಡಿದ ಇಬ್ಬರು ಮಹಿಳೆಯರಿಗೆ ಶಿಕ್ಷೆ ಆಗಬೇಕು ಅಂತ ಗ್ರಾಮದ ಮುಖಂಡರು ಆಗ್ರಹಿಸಿದ್ದಾರೆ. ಮಹಿಳೆಯರಿಬ್ಬರು ಮಾತನಾಡಿದ ಆಡಿಯೋದಲ್ಲಿ ಸ್ವಾಮಿಜಿ ಹೆಸರು ಪ್ರಸ್ತಾಪವಾದ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಡಿಯೋದಲ್ಲಿ ಮಾತನಾಡಿದ ಮಹಿಳೆಯರ ಬಂಧನ ಆಗ್ಬೇಕು ಅಂತಾ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಬಂಧನವಾಗದ ಹೊರತು ಮರಣೋತ್ತರ ಪರೀಕ್ಷೆಗೆ ಅವಕಾಶ ಕೊಡಲ್ಲ ಎಂದು ಪಟ್ಟುಹಿಡಿದಿದ್ದರು. ಗ್ರಾಮಸ್ಥರು ಶ್ರೀಗಳ ಕೊಠಡಿ ಮುಂಭಾಗದಲ್ಲಿ ಮೌನ ಪ್ರತಿಭಟನೆ ನಡೆಸಿದರು.

 

 

ಆಡಿಯೋದಲ್ಲಿ ಮಾತನಾಡಿದ ಮಹಿಳೆ ಜೊತೆಗೆ ನಾನು ಮಾತನಾಡಿದ್ದೇನೆ. ನಿಮ್ಮಿಂದ ಶ್ರೀಗಳನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಶ್ರೀಗಳ ಸಾವಿಗೆ ವಿಡಿಯೋ ಕಾರಣ. ಇಬ್ಬರ ಮಹಿಳೆಯರನ್ನು ಬಂಧನ ಮಾಡಬೇಕು ಎಂದು ನೇಗಿನಾಳ ಗ್ರಾಮದಲ್ಲಿ ಲಿಂಗಾಯತ ಮುಖಂಡ ಶಂಕರ ಗುಡಸ್ ಹೇಳಿದ್ದಾರೆ.

 

 

ಆಡಿಯೋ ವೈರಲ್ ಬಳಿ ಸ್ವಾಮೀಜಿ ಮನನೊಂದಿದ್ದರು. ಕಠೋರವಾಗಿ ಬಸವ ತತ್ವ ಪಾಲಿಸುತ್ತಿದ್ದರು. ಮಠಾಧೀಶರಿಗೆ ಕಿರುಕುಳ ನಿಲ್ಲಬೇಕು. ಆಡಿಯೋದಲ್ಲಿ ಮಾತನಾಡಿದವರೇ ಸಾವಿಗೆ ಕಾರಣ. ಲಿಂಗಾಯತ ಮಠಗಳನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಶಂಕರ ಗುಡಸ್ ಹೇಳಿದ್ದಾರೆ.

 

karnataka

Recent Posts

ಸ್ಕೂಲ್ ನಲ್ಲಿ ಇಲ್ಲ ಕಾಲೇಜಿನಲ್ಲಿ ಇದ್ದ – ಬಾಯ್ ಫ್ರೆಂಡ್ ಗುಟ್ಟು ಬಿಚ್ಚಿಟ್ಟ ಕಮಲಿ ಖ್ಯಾತಿಯ ಅಮೂಲ್ಯ ಗೌಡ..!!!

ಕಿರುತೆರೆ ಲೋಕದ ಬಹು ನಿರೀಕ್ಷಿತ ಶೋ ಬಿಗ್ ಬಾಸ್. ಹೌದು ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ ಒಂಬತ್ತು ಆರಂಭಗೊಂಡಿದೆ.…

5 hours ago

೧೦೦ ಕೋಟಿ ಕ್ಲಬ್ ಸೇರುವ ಮುನ್ನವೇ, ೫ ನೇ ದಿನಕ್ಕೆ ಕಾಂತಾರ ಚಿತ್ರದ ರಿಷಬ್ ಗೆ ಭಾರೀ ಆಘಾತ..!!

ಸ್ನೇಹಿತರ ಕಾಂತಾರ ಚಿತ್ರಕ್ಕೆ ಆರಂಭದಿಂದ ದೊಡ್ಡ ಮಟ್ಟದ ಸ್ಪಂದನೆ ಸಿಗುತ್ತಿದ್ದು, ಅದು ಅತ್ಯಧಿಕ ಪರದೆಗಳಲ್ಲಿ ಚಿತ್ರ ಪ್ರದರ್ಶನಗಳುಗೊಳ್ಳುವುದು ಅಷ್ಟೇ ಅಲ್ಲದೆ…

6 hours ago

ಮದುವೆಯಾದ ಒಂದೇ ತಿಂಗಳಿಗೆ ಪತ್ನಿಯಿಂದ ದೂರಾಗುತ್ತಿರುವ ರವೀಂದರ್.!! ಕಾರಣವೇನು ಗೊತ್ತಾ

ಕಳೆದ ಒಂದು ತಿಂಗಳಿನಿಂದ ಟ್ರೆಂಡಿಂಗ್‌ನಲ್ಲಿದ್ದ ಸ್ಟಾರ್ ಜೋಡಿ ನಿರೂಪಕಿ ಮಹಾಲಕ್ಷ್ಮಿ ಹಾಗು ನಿರ್ಮಾಪಕ ರವಿತರ ಜೋಡಿಯ ಕುರಿತು ಇದೀಗ ಹೊಸ…

6 hours ago

ಹೊಸ ಮನೆಯಲ್ಲಿ ಮಕ್ಕಳ ಜೊತೆ ಆಯುಧ ಪೂಜೆಯಲ್ಲಿ ನಟ ಶರಣ್

ನಟ ಶರಣ್ ಇವರ ನಟನೆ ನನಗೆ ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತದೆ. ಚಂದನವನದ ಅದ್ಭುತ ನಟರಲ್ಲಿ ಶರಣ್ ಸಹ ಒಬ್ಬರು. ಶರಣ್…

6 hours ago

ತಮ್ಮ ಬೈಸಿಕಲ್ ಜೊತೆ ಯಶ್ ಐಷಾರಾಮಿ ಯಂತ್ರಗಳಿಗೆ ಪೂಜೆ ಸಲ್ಲಿಸಿದ ಮಗ ಯತರ್ವ್ ಯಶ್!

ನಟ ರಾಕಿಂಗ್ ಸ್ಟಾರ್ ತಮ್ಮ ಕಾರುಗಳಿಗೆ ಪೂಜೆ ಸಲ್ಲಿಸಿದ್ದಾರೆ. ನಟ ಯಶ್ ಅವರು ಮನೆಯಲ್ಲಿ ತಮ್ಮ ಎಲ್ಲಾ ಕಾರುಗಳನ್ನು ಸಮಾನವಾಗಿ…

20 hours ago

ಗೀತಾ ಸೀರಿಯಲ್ ನಟಿ ಭವ್ಯ ಗೌಡ, ನಟ ಧನುಷ್ ಗೌಡ ಚಾಮುಂಡೇಶ್ವರಿ ಸನ್ನಿಧಿಯಲ್ಲಿ

ಭವ್ಯಾ ಗೌಡ ಮತ್ತು ಧನುಷ್ ಗೌಡ ನಡುವಿನ ವಯಸ್ಸಿನ ವ್ಯತ್ಯಾಸ ಗಮನಾರ್ಹವಾಗಿದೆ. ಭವ್ಯಾ ಗೌಡಗೆ ಕೇವಲ 23 ವರ್ಷ, ಧನುಷ್…

23 hours ago