ಈ ಬಾರಿ ಎಲ್ಲರೂ ಸಂಭ್ರಮದಿಂದ ಗಣೇಶ ಚತುರ್ಥಿ ಆಚರಿಸಿದ್ದಾರೆ. ಮನೆಗೆ ಗಣಪನನ್ನು ತಂದು, ನಾನಾ ರೀತಿಯ ಸಿಹಿ ತಿನಿಸುಗಳನ್ನು ಮಾಡಿ, ಗಣಪತಿಗೆ ನೈವೇದ್ಯ ಮಾಡಿ ಪೂಜೆ ಸಲ್ಲಿಸಿದ್ದಾರೆ. ಇದಕ್ಕೆ ಸೆಲೆಬ್ರಿಟಿಗಳೂ ಹೊರತಾಗಿಲ್ಲ. ಸುಮಲತಾ ಅವರೂ ಸಹ ತಮ್ಮ ರಾಜಕೀಯ ಕೆಲಸಗಳಿಂದ ಬಿಡುವು ಮಾಡಿಕೊಂಡು ಮನೆಯಲ್ಲಿ ಮಗ ಅಭಿಷೇಕ್ ಅಂಬರೀಷ್ ಜೊತೆ ಹಬ್ಬ ಆಚರಿಸಿದ್ದಾರೆ.

 

 

ಸುಮಲತಾ ಅಂಬರೀಷ್​ ಅವರು ರಾಜಕೀಯ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಮುಂದಿನ ಚುನಾವಣೆಗೂ ತಯಾರಿ ನಡೆಸಿರುವ ಸುಮಲತಾ ಅವರು ಮಂಡ್ಯದಲ್ಲೇ ಹೆಚ್ಚಾಗಿ ಕಾಲ ಕಳೆಯುತ್ತಿದ್ದಾರೆ. 3 ದಶಕಗಳಿಗೂ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ ಈ ನಟಿ. ಗೌರವಾನ್ವಿತ ಪಾತ್ರಗಳನ್ನೇ ಆರಿಸಿಕೊಂಡು, ನೈಜ ಅಭಿನೇತ್ರಿ ಎನಿಸಿಕೊಂಡವರು ಸುಮಲತಾ. ಪತಿ ಅಂಬರೀಶ್ ಅಗಲಿಕೆಯ ನಂತರ ಅಭಿಮಾನಿಗಳ ಮನವಿಯ ಮಣಿದು ಮಂಡ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ವಿಜಯ ಸಾಧಿಸಿದರು.

 

 

ಚುನಾವಣೆಯಲ್ಲಿ ಗೆದ್ದ ದಿನದಿಂದಲೂ ಸಹ ಜನರ ಕಷ್ಟ ಆಲಿಸುತ್ತಾ, ಮಂಡ್ಯದ ಜನತೆಗೆ ಒಳ್ಳೆಯದನ್ನೇ ಮಾಡುತ್ತಿದ್ದಾರೆ ಸುಮಲತಾ. ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದ ಕನ್ನಡದ ಮೊಟ್ಟ ಮೊದಲ ಮಹಿಳೆ ಎಂಬ ಖ್ಯಾತಿ ಪಡೆದರು. ತಮ್ಮ ಎಲ್ಲ ಕೆಲಸಗಳಿಂದ ಬಿಡುವು ಮಾಡಿಕೊಂಡ ಸುಮಲತಾ ಅವರು ಮನೆಯಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.

 

 

ತಮ್ಮ ಮನೆಯಲ್ಲಿ ಮಗ ಅಭಿಷೇಕ್​ ಜೊತೆ ಗಣೇಶನ ಪೂಜೆ ಮಾಡಿದ್ದು, ಪೂಜೆಯ ನಂತರ ಕೆಲವು ಚಿತ್ರಗಳನ್ನು ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಬ್ಬದಂದು ಅರಿಶಿನ ಹಾಗೂ ಗುಲಾಬಿ ಬಣ್ಣದ ರೇಷ್ಮೆ ಸೀರೆಯುಟ್ಟು ಸುಮಲತಾ ಅವರು ಲಕ್ಷ್ಮಿಯಂತೆ ಕಂಗೊಳಿಸಿದ್ದಾರೆ.

 

 

ಮಂಡ್ಯದಲ್ಲಿ ಬಾಡಿಗೆ ಮನೆಯಲ್ಲಿದ್ದ ಸುಮಲತಾ ಈಗ, ಅಲ್ಲಿ ಸ್ವಂತ ಮನೆ ಕಟ್ಟಲಾರಂಭಿಸಿದ್ದಾರೆ. ಅದಕ್ಕಾಗಿ ಜಾಗ ಸಹ ಖರೀದಿಸಿದ್ದು, ಇತ್ತೀಚೆಗಷ್ಟೆ ಸುದ್ದಿಯಾಗಿತ್ತು. ಸುಮಲತಾ ಅಂಬರೀಶ್, ಗಣೇಶನ‌ನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದ್ದಾರೆ. ಸುಮಲತಾಗೆ ಪುತ್ರ ಅಭಿಷೇಕ್ ಅಂಬರೀಶ್ ಪೂಜೆಗೆ ಸಾಥ್ ಕೊಟ್ಟಿದ್ದಾರೆ. ಮಂಗಳಮೂರ್ತಿ, ವಿಘ್ನವಿನಾಶಕನಾದ ಗಣೇಶನು ನಿಮ್ಮೆಲ್ಲರಿಗೂ ಆರೋಗ್ಯ, ಸುಖ ಶಾಂತಿ ನೆಮ್ಮದಿಯನ್ನು ದಯಪಾಲಿಸಲಿ ಎಂದು ಸುಮಲತಾ ಪ್ರಾರ್ಥಿಸಿದ್ದಾರೆ.

Leave a comment

Your email address will not be published.