ಕನ್ನಡದ ಜನಪ್ರಿಯ ಗಾಯಕ ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜ್ಞಾನ್ ಅವರು 13 ಮೇ 1980 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆಯ ಹೆಸರು ಅಶ್ವಥ್ ಕುಮಾರ್ ಮತ್ತು ತಾಯಿಯ ಹೆಸರು ಅನಸೂಯಾ. ಅರ್ಜುನ್ ಜ್ಞಾನ್ ಈ ಹಿಂದೆ ಬಿ ಮನೋಹರ್ ಮತ್ತು ಕೆ ಕಲ್ಯಾಣ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

 

 

ಇದಲ್ಲದೇ ಸುಮಾರು 30 ಚಿತ್ರಗಳಲ್ಲಿ ಕೀಬೋರ್ಡ್ ನುಡಿಸಿದ್ದಾರೆ. ನಂತರ ದಿಲೀಪ್ ರಾಜ್ ಮತ್ತು ಸಂಜನಾ ಅಭಿನಯದ ಆಟೋಗ್ರಾಫ್ ಚಿತ್ರಕ್ಕೆ ಸಂಗೀತ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದರು. ಈ ಮೂಲಕ ಅವರು ಉತ್ತಮ ಖ್ಯಾತಿಯನ್ನು ಗಳಿಸಿದರು ಎಂದು ಹೇಳಬಹುದು.

 

 

ಇದಲ್ಲದೆ ಸ್ಲಂಬಳ, ಬಿರುಗಾಳಿ, ರಾಜಧಾನಿ, ಕೆಂಪೇಗೌಡ, ದಂಡುಪಾಳ್ಯ, ಅಲೆಮಾರಿ, ಭಜರಂಗಿ, ವರದನಾಯಕ್, ತಿರುಪತಿ ತಿಮ್ಮಪ್ಪ, ಪಟಾಕಿ, ರಾಜ್, ವಿಷ್ಣು, ತಾರಕ್, ರಾಂಬೋ- 2, ಮುಂಗಾರು ಮಳೆ-2, ಗಾಳಿಪಟ-2 ಮುಂತಾದ ಹಲವು ಹಿಟ್ ಸಿನಿಮಾಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ.

 

 

ಗಾಯಕರಾಗಿಯೂ ಕೆಲವು ಹಾಡುಗಳನ್ನು ಹಾಡಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 2012 ರ ರೋಮಿಯೋ ಚಿತ್ರದ ಬೆಳಗೆದ್ದು ಕಾಫಿಕುಡಿ ಹೋಗಿ ಹಾಡನ್ನು ಅರ್ಜುನ್ ಜನ್ಯ ಮೊದಲು ಹಾಡಿದ್ದು.

 

 

ಇದಲ್ಲದೇ ನೋಡೆ ನೋಡೆ ನನ್ನೆ ನೋಡೆ, ರೋಮಿಯೋ ರೋಮಿಯೋ, ಗೌರಮ್ಮ ಬಾರಮ್ಮ, ನಾನ್ ಏನ್ ಮಾಡ್ಲಿ ಸ್ವಾಮಿ, ನೀರಿಗೆ ಬಾರೆ ಚೆನ್ನಿ, ಬೈಟೆ ಬೈಟೆ ದೋ ಬಾತ್, ರಾಜಸ್ತಾನಿ ಪುಂಗಿ ಉದಲೇ ಇನ್ನೂ ಹತ್ತು ಹಲವು ಹಾಡುಗಳನ್ನು ಹಾಡಿದ್ದಾರೆ.

 

 

ಅರ್ಜುನ್ ಜನ್ಯಾ ಅವರು ಕೆಲವು ಗಾಯನ ರಿಯಾಲಿಟಿ ಶೋಗಳ ತೀರ್ಪುಗಾರರಾಗಿದ್ದರು. ಈಗ ಅರ್ಜುನ್ ಜನ್ಯಾ ಗೀತಾ ಅವರನ್ನು ಮದುವೆಯಾಗಿದ್ದಾರೆ. ಅವರಿಗೆ ಒಬ್ಬ ಮಗಳೂ ಇದ್ದಾಳೆ. ಅರ್ಜುನ್ ಅವರು ತಮ್ಮ ಅಭಿರುಚಿಗೆ ತಕ್ಕಂತೆ ಕಟ್ಟಿಸಿರುವ ಮನೆ ಹೇಗಿದೆ ಗೊತ್ತಾ? ಬೆಂಗಳೂರಿನ ಯಲಹಂಕ ಹೆಬ್ಬಾಳ ರಸ್ತೆಯಲ್ಲಿರುವ ಇದು ಜನ್ಯಾ ಅವರ ಸುಂದರವಾದ ಮನೆ.

 

 

ಮನೆಯ ಮುಂಭಾಗದ ನೋಟ. ವಿಶಾಲವಾದ ಹಾಲ್ ಹೊಂದಿದೆ. ಅಧುನಿಕ ಶೈಲಿಯ ಕಿಚನ್. ಇನ್ನೂ ಮನೆಯ ಹೊರಾಂಗಣ ಹಚ್ಚ ಹಸುರಿನಂತೆ ಇದೆ. ಅರ್ಜುನ್ ತಮ್ಮ ಮನೆಯನ್ನು ತುಂಬಾ ವಿಶಾಲವಾಗಿ ಕಟ್ಟಿಸಿದ್ದು ಮನೆಯ ಒಳಗೆ ಮತ್ತು ಹೊರಗೆ ಎರಡು ಕಡೆಯೂ ವಿಶಾಲವಾದ ಸಿಟಿಂಗ್ ಕ್ಯಾಬಿನೇಟ್ ಅನ್ನು ಮಾಡಿಕೊಂಡಿದ್ದಾರೆ. ಸಿನಿಮಾದ ಯಾವುದೇ ವಿಚಾರವಿದ್ರೂ ಸಹ ಇಲ್ಲಿಯೇ ಕೂತು ಮಾತುಕತೆ ನಡೆಸುತ್ತಾರೆ.

 

 

ಜಮಾಲಿಗುಡ್ಡ, ವೇದ, ರೇಮೊ, ರಾಜಮಾರ್ತಾಂಡ, ದಿಲ್ ಪಸಂದ್, ತ್ರಿಶೂಲಂ, ಪದವಿ ಪೂರ್ವ, ಮೈ ನೇಮ್ ಇಜ್ ಕಿರಾತಕ ಇನ್ನೂ ಹಲವಾರು ಚಿತ್ರಗಳಿಗೆ ಸಂಗೀತ ಒದಗಿಸಲಿದ್ದಾರೆ.

 

Leave a comment

Your email address will not be published.