‘ಬಿಗ್ ಬಾಸ್ ಕನ್ನಡ ಓಟಿಟಿ 1’ ಕಾರ್ಯಕ್ರಮ ಆರಂಭವಾಗಿ ಇನ್ನೂ ಒಂದು ವಾರ ಕಳೆದಿಲ್ಲ. ಅಷ್ಟು ಬೇಗ ‘ಬಿಗ್ ಬಾಸ್’ ಮನೆಯಲ್ಲಿ ಲವ್ ಸ್ಟೋರಿ ಶುರುವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಅತ್ತ ಸಾನ್ಯ ಅಯ್ಯರ್ ಮೇಲೆ ಅಟ್ರ್ಯಾಕ್ಷನ್ ಇದೆ ಅಂತ ರಾಕೇಶ್ ಅಡಿಗ ಹೇಳಿದ್ರೆ, ಇತ್ತ ರಾಕೇಶ್ ಅಡಿಗ ಮೇಲೆ ಫೀಲಿಂಗ್ಸ್ ಇದೆ ಎಂದು ಸೋನು ಶ್ರೀನಿವಾಸ್ ಗೌಡ ಮನೆಯ ಎಲ್ಲ ಸದಸ್ಯರ ಮುಂದೆ ಹೇಳಿಕೊಂಡಿದ್ದಾರೆ.

 

 

‘’ನನಗೆ ನಿಜವಾಗಿಯೂ ನಿನ್ನ ಮೇಲೆ ಫೀಲಿಂಗ್ಸ್ ಇದೆ. ನನ್ನ ಫೀಲಿಂಗ್ಸ್ ಜೊತೆ ಆಟ ಆಡಬೇಡ’’ ಎಂದು ರಾಕೇಶ್ ಅಡಿಗ ಬಳಿಯೇ ಸೋನು ಶ್ರೀನಿವಾಸ್ ಗೌಡ ಹೇಳಿದ್ದಾರೆ. ಆಗ ‘’ಇನ್ಮೇಲೆ ನಿನಗೆ ಬೇಜಾರು ಮಾಡುವುದಿಲ್ಲ’’ ಎಂದು ಸೋನು ಶ್ರೀನಿವಾಸ್ ಗೌಡ ಬಳಿ ರಾಕೇಶ್ ಅಡಿಗ ಭರವಸೆ ನೀಡಿದ್ದಾರೆ.

 

 

ಸೋನು ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸುದ್ದಿ ಆಗುತ್ತಿದ್ದಾರೆ. ಅವರು ಮನೆಯಲ್ಲಿ ಸಾಕಷ್ಟು ಬಾರಿ ಕಣ್ಣೀರು ಹಾಕಿದ್ದಾರೆ. ಈಗ ಅವರು ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಸೋನುಗೆ ರಾಕೇಶ್​ ಅಡಿಗ ಅವರ ಮೇಲೆ ಭಾವನೆಗಳು ಹುಟ್ಟಿಕೊಳ್ಳುತ್ತಿವೆ. ಅದನ್ನು, ಅವರು ಓಪನ್ ಆಗಿಯೇ ಹೇಳಿಕೊಂಡಿದ್ದಾರೆ. ಈ ವಿಚಾರ ಸಾಕಷ್ಟು ಹೈಲೈಟ್ ಆಗುತ್ತಿದೆ. ರಾಕೇಶ್ ಅವರು ಈ ವಿಚಾರದಲ್ಲಿ ತಟಸ್ಥವಾಗಿ ಪ್ರತಿಕ್ರಿಯಿಸಿದ್ದಾರೆ.

 

 

ಬಿಗ್ ಬಾಸ್ ಆರಂಭದಲ್ಲಿ ಸೋನು ಗೌಡ ತಮಗಾದ ಅವಮಾನದ ಬಗ್ಗೆ ಹೇಳಿಕೊಂಡಿದ್ದರು. ಈ ವೇಳೆ ಅತ್ತಿದ್ದರು. ಆ ಸಂದರ್ಭದಲ್ಲಿ ರಾಕೇಶ್ ಅಡಿಗ ಅವರು ಸೋನುಗೆ ಸಮಾಧಾನ ಮಾಡಿದ್ದರು. ನೀನು ಧೈರ್ಯವಾಗಿ ಮುನ್ನಡೆಯಬೇಕು ಎಂದು ಅವರಿಗೆ ಸ್ಫೂರ್ತಿ ತುಂಬಿದ್ದರು. ನಂತರ ಸೋನು ಹಾಗೂ ರಾಕೇಶ್ ಮಧ್ಯೆ ಸಾಕಷ್ಟು ಮಾತುಕತೆ ನಡೆದಿದೆ. ಈ ಕಾರಣದಿಂದ ಇಬ್ಬರ ನಡುವೆ ಆಪ್ತತೆ ಬೆಳೆದಿದೆ.

 

 

ರಾಕೇಶ್ ಅವರು ಎಲ್ಲರ ಜತೆಯೂ ಫ್ಲರ್ಟ್ ಮಾಡುತ್ತಿದ್ದಾರೆ. ಸ್ಫೂರ್ತಿ ಗೌಡ ಅವರ ಜತೆ ಅವರು ಕ್ಲೋಸ್ ಆಗಿದ್ದಾರೆ. ಈ ವಿಚಾರಕ್ಕೆ ಸೋನು ಗೌಡ ಅವರು ಸಖತ್ ಉರಿದುಕೊಳ್ಳುತ್ತಿದ್ದಾರೆ. ಇದನ್ನು ಸೋನು ಅವರು ಓಪನ್ ಆಗಿಯೇ ತೋರಿಸಿದ್ದಾರೆ.

 

 

ಬಿಗ್ ಬಾಸ್ ಮನೆಯಲ್ಲಿ 16 ಸ್ಪರ್ಧಿಗಳು ಇದ್ದಾರೆ. ಈ ವಾರಾಂತ್ಯಕ್ಕೆ ಓರ್ವ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗೋದು ಪಕ್ಕಾ ಆಗಿದೆ. ಅದು ಯಾರು ಎಂಬುದು ಸದ್ಯದ ಕುತೂಹಲ. ಈ ವಾರ ಸೋನು ಗೌಡ, ಆರ್ಯವರ್ಧನ್ ಮೊದಲಾದವರು ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ.

Leave a comment

Your email address will not be published.