ಬಾಲಿವುಡ್‌ ನಟಿ, ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಬಾಲಿವುಡ್‌ ಅಂಗಳದಲ್ಲಿ ಬಹುದೊಡ್ಡ ಹೆಸರು ಮಾಡಿದ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗೆ ಕೆಲವು ವಿವಾದಗಳಿಗೆ ಗುರಿಯಾಗಿದ್ದರು. ಪತಿ ಬಂಧನ ಕುರಿತಾಗಿ ನೊಂಡಿದ್ದರು. ಆದರೆ ಇವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

 

 

ಹೌದು ನಟಿಯ ಈ ಕಷ್ಟವನ್ನು ಕೇಳಿದ್ರೆ ನೀವು ಕಂಡಿತವಾಗಿಯೂ ನಿಮ್ಮ ಕಣ್ಣಲ್ಲಿ ನೀರು ಬರುವುದು ಪಕ್ಕಾ ಹೌದು. ಅಂತದ್ದು ಶಿಲ್ಪಾ ಶೆಟ್ಟಿ ಅವರಿಗೆ ಏನಾಯ್ತು ಎಂದು ನಿಮಗೆ ಪ್ರಶ್ನೆ ಮೂಡುತ್ತಿರಬಹುದು. ಶಿಲ್ಪಾ ಶೆಟ್ಟಿ ಸೌಂದರ್ಯ, ಆರೋಗ್ಯ ಕುರಿತಾಗಿ ಹೆಚ್ಚು ಜಾಗೃತಿಯನ್ನು ವಹಿಸುತ್ತಾರೆ. ಈ ಒಂದು ವಿಚಾರದಲ್ಲಿ ಅವರು ಎಡವಟ್ಟು ಮಾಡಿಕೊಂಡ್ರಾ ಎನ್ನವ ಮಾತು ಕೇಳಿ ಬರುತ್ತಿದೆ.

 

 

ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಸಾಕಷ್ಟು ಎಚ್ಚರಿಕೆ ತೆಗೆದುಕೊಳ್ಳಲಾಗುತ್ತದೆ. ಆದಾಗ್ಯೂ ಕೆಲವೊಮ್ಮೆ ಅವಘಡಗಳು ಸಂಭವಿಸುತ್ತವೆ. ಈಗ ಶಿಲ್ಪಾ ಚಿತ್ರೀಕರಣದ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ನಿರ್ದೇಶಕರು ರೋಲ್​, ಕ್ಯಾಮೆರಾ, ಆ್ಯಕ್ಷನ್ ಎಂದರು. ನನ್ನ ಕಾಲು ಮುರಿಯಿತು. ಆರು ವಾರ ವಿಶ್ರಾಂತಿ ಪಡೆಯುತ್ತಿದ್ದೇನೆ. ನಂತರ ಮತ್ತೆ ಶೂಟಿಂಗ್​ಗೆ ಮರಳುತ್ತೇನೆಂದುಸ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ ಫೋಟೋಗೆ ಶಿಲ್ಪಾ ಶೆಟ್ಟಿ ಕ್ಯಾಪ್ಶನ್ ನೀಡಿದ್ದಾರೆ.

 

 

ರೋಹಿತ್ ಶೆಟ್ಟಿ ನಿರ್ದೇಶನದ ಇಂಡಿಯನ್ ಪೊಲೀಸ್ ಫೋರ್ಸ್​ವೆಬ್ ಸೀರಿಸ್​ನಲ್ಲಿ ಶಿಲ್ಪಾ ನಟಿಸುತ್ತಿದ್ದಾರೆ. ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಈ ವೆಬ್ ಸೀರಿಸ್ ಪ್ರಸಾರ ಕಾಣಲಿದೆ. ಈ ಶೂಟಿಂಗ್‌ ವೇಳೆ ಅವರ ಕಾಲು ಮುರಿದಿದೆ.

 

 

ನಟಿ ಶಿಲ್ಪಾ ಶೆಟ್ಟಿ ಅವರು ಸದ್ಯ ಕುಟುಂಬ ಹಾಗೂ ಕೆಲು ಬ್ಯಸಿನೇಸ್‌ಗಳಲ್ಲಿ ಬ್ಯುಸಿ ಆಗಿದ್ದು, ಆಗೊಂದು ಈಗೊಂದು ಸಿನಿಮಾ ಮಾಡುತ್ತಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ಅವರ ಕಾಲಿಗೆ ಪೆಟ್ಟಾಗಿದೆ. ಈ ಫೋಟೋವನ್ನು ಶಿಲ್ಪಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರೋಹಿತ್ ಶೆಟ್ಟಿ ಪ್ರಾಜೆಕ್ಟ್​ಗಳಲ್ಲಿ ಆ್ಯಕ್ಷನ್​ ಹೆಚ್ಚೇ ಇರುತ್ತದೆ. ಈ ಸರಣಿಯ ಶೂಟಿಂಗ್ ವೇಳೆ ಶಿಲ್ಪಾ ಕಾಲಿಗೆ ಪೆಟ್ಟಾಗಿದೆ ಎನ್ನಲಾಗುತ್ತಿದೆ.

 

 

ಶಿಲ್ಪಾ ಶೆಟ್ಟಿ ಅವರ ಆದಷ್ಟು ಬೇಗಾ ಹುಷಾರ್‌ ಆಗಿ ಬರಲಿ. ಅವರ ಕಾಲು ಸರಿ ಹೋಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಸೋಶಿಯಲ್‌ ಮೀಡಿಯಾ ಮೂಲಕವಾಗಿ ಕಾಮೆಂಟ್‌ ಮಾಡುತ್ತಾ, ಇನ್ನಾದರೂ ಇಂತಹ ಸಮಯದಲ್ಲಿ ಎಚ್ಚರಿಕೆ ವಹಿಸಿ ಎನ್ನುವ ಮೇಸೆಜ್‌ನ್ನು ನೆಟ್ಟಿಗರು ನೀಡುತ್ತಿದ್ದಾರೆ.

Leave a comment

Your email address will not be published.