ಸ್ಯಾಂಡಲ್‌ವುಡ್‌ ಕ್ರೇಜಿ ಕ್ವೀನ್‌ ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರೇಮ್‌ ಶಾಕ್‌ ಕೊಟ್ಟಿದ್ದರು. ಇವರು ನೀಡಿದ ಶಕ್‌ಗೆ ಕ್ರೀಜಿ ಕ್ವೀನ್‌ ಏನ್‌ ಮಾಡಿದ್ರು ಅಂತಾ ಗೊತ್ತಾದರೆ ಖಂಡಿತವಾಗಿಯೂ ನೀವು ಆಶ್ಚರ್ಯ ಪಡುತ್ತೀರ.

 

 

ಹೌದು ರಕ್ಷಿತಾ ಕಲಾವಿದ ಕುಟುಂಬದಿಂದಲೇ ಬಂದವರು. ತಂದೆ ಗೌರಿಶಂಕರ್ ಖ್ಯಾತ ಛಾಯಾಗ್ರಾಹಕರಾಗಿದ್ದರೆ, ತಾಯಿ ಮಮತಾ ರಾವ್ ಹಿರಿಯ ನಟಿ. ರಾಜ್ ಕುಮಾರ್ ಸೇರಿದಂತೆ ಅನೇಕರ ಜೊತೆ ಮಮತಾ ರಾವ್ ನಟಿಸಿದ್ದಾರೆ. ಇವರ ಮುದ್ದಿನ ಮಗಳೇ ಶ್ವೇತಾ ಅಲಿಯಾಸ್ ರಕ್ಷಿತಾ. ಇವರು ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಂತೆ ಹೆಸರು ಕೂಡಾ ಬದಲಾಯಿಸಿಕೊಂಡರು. ನಂತರ ಇವರ ಲಕ್‌ ಬದಲಾಗಿ ಹೋಯ್ತು.

 

 

ರಕ್ಷಿತಾ ಎನ್ನುವ ಹೆಸರು ಬಂದಿದ್ದು ಯಾವಾಗ..?: ಶ್ವೇತಾ ಆಗಿದ್ದವರು ರಕ್ಷಿತಾ ಆಗಿದ್ದು ಅಪ್ಪು ಸಿನಿಮಾ ಮೂಲಕ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ ಮೊದಲ ಸಿನಿಮಾದಲ್ಲಿ ನಾಯಕಿಯಾಗಿದ್ದು ರಕ್ಷಿತಾ. 2002, ಏಪ್ರಿಲ್ 26ರಂದು ತೆರೆಗೆ ಬಂದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿತು. ಅಲ್ಲಿಂದ ಮುಂದೆ ರಕ್ಷಿತಾ ಕನ್ನಡದ ಜನಪ್ರಿಯತೆ ಪಡೆದುಕೊಂಡರು. ಇಂದು ರಕ್ಷಿತಾ ಅವರು ಅಭಿಮಾನಿಗಳಿಗೆ ಕ್ರೇಜಿ ಕ್ವಿನ್‌ ಆಗಿದ್ದಾರೆ.

 

 

ಅಪ್ಪು, ಧಮ್, ವಿಜಯಸಿಂಹ, ಕಲಾಸಿಪಾಳ್ಯ, ಮಂಡ್ಯ, ತನನಂ ತನನಂ ಮುಂತಾದ ಸಿನಿಮಾಗಳಲ್ಲಿ ರಕ್ಷಿತಾ ನಟಿಸಿದ್ದಾರೆ. ಕನ್ನಡ ಅಷ್ಟೇ ಅಲ್ಲದೇ ತಮಿಳು ಹಾಗೂ ತೆಲುಗಿನಲ್ಲೂ ರಕ್ಷಿತಾ ತಮ್ಮ ಛಾಪು ಮೂಡಿಸಿದ್ದಾರೆ. ಜ್ಯೂನಿಯರ್ ಎನ್‌ಟಿಆರ್‌, ರವಿತೇಜಾ ಸೇರಿದಂತೆ ಅನೇಕ ನಟರ ಜೊತೆಗೆ ನಟಿಸಿದ್ದಾರೆ. ಆದೆ ದರ್ಶನ್‌, ರಕ್ಷಿತಾ ಜೋಡಿ ತೆರೆ ಮೇಲೆ ಮೋಡಿಯನ್ನು ಮಾಡಿತ್ತು. ಅಭಿಮಾನಿಗಳು ಇಂದು ಕೂಡಾ ಈ ಜೋಡಿ ಕುರಿತಾಗಿ ಮಾತನಾಡುತ್ತಿರುತ್ತಾರೆ.

 

 

15 ವರ್ಷಗಳ ಹಿಂದೆ ನಟಿ ರಕ್ಷಿತಾ ನಿರ್ದೇಶಕ ಪ್ರೇಮ್ ಅವರನ್ನು ವಿವಾಹವಾದರು. ಪ್ರೀತಿಸಿ ವಿವಾಹವಾದರು. ಬಳಿಕ ಅಭಿನಯಕ್ಕೆ ಗುಡ್‌ ಬಾಯ್ ಹೇಳಿದರು. ಇದಾದ ಮೇಲೆ ಕಿರುತೆರೆಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ರಕ್ಷಿತಾ, ಪ್ರೇಮ್ ಸ್ಟಾರ್ ಕಪಲ್ ಜೋಡಿಯಲ್ಲಿ ಒಬ್ಬರು. ದಂಪತಿ ಇಬ್ಬರು ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರೇಮ್ ಸಿನಿಮಾ ನಿರ್ದೇಶನ ಮಾಡಿದ್ರೆ ರಕ್ಷಿತಾ ಬಂಡವಾಳ ಹೂಡಿ ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಿನಿ ಕ್ಷೇತ್ರದಲ್ಲಿ ಸಖತ್ ಆಕ್ಟಿವ್ ಅಗಿ ಇರುತ್ತಾರೆ. ಆದ್ರೆ ಕ್ಯಾಮೆರಾ ಮುಂದೆ ಮಾತ್ರ ಕಾಣಿಸಿ ಕೊಳ್ಳಲ್ಲ ರಕ್ಷಿತಾ. ಮದುವೆ ನಂತರ ಯಾವುದೇ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ಇದ್ಕೆ ಕಾರಣ ಏನು ಎಂಬುದು ಇಲ್ಲಿವರೆಗೂ ತಿಳಿದು ಬಂದಿಲ್ಲ.

 

 

View this post on Instagram

 

A post shared by Prem❣️s (@directorprems)

 

ದಂಪತಿ ಸಿನಿಮಾ ಕೆಲ್ಸದಲ್ಲಿ ಒಟ್ಟಿಗೆ ಇರುತ್ತಾರೆ. ಆದರೆ ಯಾಕೆ ತೆರೆ ಮೇಲೆ ಕಾಣಿಸಿ ಕೊಳಲ್ಲ ಎನ್ನುವುದು ನೆಟ್ಟಿರು ಪ್ರಶ್ನೆ ಮಾಡುತ್ತಲೇ ಬಂದಿದ್ದಾದರೆ. ಆದ್ರೆ ಇದು ವರೆಗೂ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ರಕ್ಷಿತಾ ಅವರು ತಮ್ಮದೇ ಸಹೋದರ ರಾಣಾ ಅವರನ್ನು ತಮ್ಮದೇ ಬ್ಯಾನರ್‌ನಲ್ಲಿ ಹೀರೋವನ್ನಾಗಿ ಪರಿಚಯಿಸಿದ್ದಾರೆ. ಪ್ರೇಮಿಗಳ ದಿನದಂದು ಇವರ ನಿರ್ಮಾಣದ ಏಕ್ ಲವ್‌ ಯಾ ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ಸೂಪರ್ ಹಿಟ್ ಎನ್ನುವಷ್ಟು ಸೌಂಡ್ ಮಾಡದ್ದೆ ಇದ್ದದ್ರೂ ಸಾಂಗ್‌ಗಳು ಮಾತ್ರ ಎಲ್ಲರು ಗುನುಗುವಂತೆ ಮಾಡಿದ್ದು ನಿಜ.

 

 

View this post on Instagram

 

A post shared by Prem❣️s (@directorprems)

 

ರಕ್ಷಿತಾ ಹುಟ್ಟುಹಬ್ಬದ ಸಂಭ್ರಮದಂದು ಪ್ರೇಮ್‌ ಅವರು ಸರ್‌ಪ್ರೈಜ್‌ ಕೊಟ್ಟಿದ್ದಾರೆ. ಅವರೆ ಹೋಮ್‌ ಮೇಡ್‌ ಕೇಕ್‌ ತಯಾರಿಸಿ, ಬರ್ತಡೆ ಡೆಕೋರೇಶನ್‌ ಮಾಡಿ ರಕ್ಷಿತಾ ಅವರಿಗೆ ವಿಶ್‌ ಮಾಡಿದ್ದರು. ರಕ್ಷಿತಾ ಅವರು ಪ್ರೇಮ್‌ ಅವರಿಗೆ ಪ್ರೀತಿಯಿಂದ ಧನ್ಯವಾದವನ್ನು ಹೇಳಿ ಸಖತ್‌ ಖುಷಿ ಪಟ್ಟಿದ್ದರು. ಪತಿ ಸರ್‌ಪ್ರೈಜ್‌ಗೆ ಕ್ರೇಜಿ ಕ್ವೀನ್‌ ನಗುತ್ತಾ ಕೊಟ್ಟ ರಿಯಾಕ್ಷನ್‌ ಅಭಿಮಾನಿಗಳಿಗೆ ಸಖತ್‌ ಇಷ್ಟವಾಗಿತ್ತು. ಈ ವೀಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಪತಿ ಪ್ರೇಮ್ ಸೇರಿದಂತೆ ಕುಟುಂಬಸ್ಥರು, ಸ್ನೇಹಿತರು, ಚಿತ್ರರಂಗದ ಗಣ್ಯರು ರಕ್ಷಿತಾಗೆ ಸೋಶಿಯಲ್‌ ಮೀಡಿಯಾ ಮೂಲಕವಾಗಿ ಶುಭ ಕೋರಿದ್ದರು.

Leave a comment

Your email address will not be published.