ಪ್ರಿಯಾಂಕಾ ಎಸ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಇವರು ಅಗ್ನಿಸಾಕ್ಷಿ ಧಾರಾವಾಹಿಯ ಚಂದ್ರಿಕಾ ಪಾತ್ರದಿಂದ ಪ್ರಸಿದ್ಧಿ ಪಡೆದರು. `ಮನೋರೂಪ’ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ತಮ್ಮ ತಾಯಿಯ ಜೊತೆ ವಾಸವಾಗಿದ್ದಾರೆಪಿಯು ಮತ್ತು ಕಾಲೇಜು ಶಿಕ್ಷಣ ಮುಗಿಸಿದ್ದು ಮೂಡಬಿದಿರೆಯ ಆಳ್ವಾಸ್ ಸಂಸ್ಥೆಯಲ್ಲಿ. ನಂತರ ಮಂಗಳೂರಿನ ಎಸ್.ಡಿ.ಎಂ. ಕಾಲೇಜಿನಲ್ಲಿ ಪದವಿ ಪಡೆದರು..

 

 

ಕನ್ನಡ ಕಿರುತೆರೆಯಲ್ಲಿ ಅಗ್ನಿ ಸಾಕ್ಷಿ ಧಾರಾವಾಹಿ ತುಂಬಾನೇ ಪ್ರಸಿದ್ಧ. ಇದರಲ್ಲಿನ ಪ್ರಮುಖ ಪಾತ್ರ ಚಂದ್ರಿಕಾ ಕೆಲವು ಕಾರಣಗಳಿಂದ ತೊರೆದಾಗ ಈ ಪಾತ್ರಕ್ಕೆ ಚಂದ್ರಿಕಾ ಬಂದರು. ಹಳೆ ಚಂದ್ರಿಕಾ ಪಾತ್ರಕ್ಕೆ ಇವರನ್ನು ಹೋಲಿಸಿ ಕೆಲವರು ಟ್ರೋಲ್ ಮಾಡಿದ್ದುಂಟು. ಆದರೆ ಕೆಲವು ದಿನಗಳಲ್ಲಿ ಇವರು ತಮ್ಮ ಅಭಿನಯದಿಂದ ಆ ಪಾತ್ರಕ್ಕಾಗಿ ಅಪಾರ ಮೆಚ್ಚುಗೆ ಪಡೆದರು.

 

 

ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದರು. ಇವರನ್ನು ಬಿಗ್ ಬಾಸ್ ಮನೆಯೊಳೆಗೆ ಕಳುಹಿಸಿ ಕೊಡುವ ಕಾರ್ಯಕ್ರಮದಲ್ಲಿ ಅಗ್ನಿ ಸಾಕ್ಷಿ ಧಾರಾವಾಹಿಯ ಸನ್ನಿಧಿ ಪಾತ್ರಧಾರಿ ವೈಷ್ಣವಿ ನೃತ್ಯ ಪ್ರದರ್ಶನ ನೀಡಿದರು.ಸುಮಾರು 105 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿಯಿದ್ದು ಜನಮನ ಸೆಳೆದ ಪ್ರಿಯಾಂಕಾ, ಫಿನಾಲೆ ಹಿಂದಿನ ವಾರ ಹೊರಬಂದರು.

 

 

‘ಅಗ್ನಿಸಾಕ್ಷಿ’ ಯಂಥಾ ಜನಪ್ರಿಯ ಸೀರಿಯಲ್‌ಗಳಲ್ಲಿ ನಟಿಸಿರುವ, ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ಪ್ರಿಯಾಂಕಾ ಶಿವಣ್ಣ ಚಂದ್ರಿಕಾ ಪಾತ್ರದಿಂದಲೇ ಖ್ಯಾತಿ ಪಡೆದವರು. ಇದೀಗ ‘ಸತ್ಯ’ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳು ಬಂದು ಸ್ವಲ್ಪ ದಿನದ ಮಟ್ಟಿಗೆ ಸದ್ದು ಮಾಡಿ ನಂತರ ಅದರ ಛಾಪು ಕಳೆದುಕೊಳ್ಳುತ್ತದೆ. ಆದರೆ ,ಕಲರ್ಸ್ ಕನ್ನಡ ದಲ್ಲಿ ಪ್ರಸಾರವಾದ ಅಗ್ನಿಸಾಕ್ಷಿ ಎಂಬ ಧಾರವಾಹಿಯು ಲಾಂಚ್ ಅದ ದಿನದಿಂದ ಸತತ ಐದು ವರ್ಷಗಳನ್ನು ಪೂರೈಸಿದರು ತನ್ನ ಜನಪ್ರಿಯತೆಯನ್ನು ಕಾಪಾಡಿಕೊಂಡು ಬಂದಿತ್ತು.ಇದು ಎಲ್ಲಾ ಧಾರಾವಾಹಿಗಳಿಗಿಂತ ದೊಡ್ಡ ಜನಪ್ರಿಯತೆ ಪಡೆದಂತಹ ಸೀರಿಯಲ್ ಆಗಿತ್ತು.

 

 

ಈ ಸೀರಿಯಲ್ ನಲ್ಲಿ ನಾಯಕ, ನಾಯಕಿಯ ಪಾತ್ರದಷ್ಟೇ ಜನಪ್ರಿಯತೆಯನ್ನು ಪಡೆದುಕೊಂಡ ಪಾತ್ರ ಎಂದರೆ ಚಂದ್ರಿಕಾ ಪಾತ್ರ ಅದುವೇ ವಿಲನ್ ಪಾತ್ರ . ಅಗ್ನಿ ಸಾಕ್ಷಿ ಸೀರಿಯಲ್ ನೋಡಿದವರಿಗೆ ಆ ಸೀರಿಯಲ್ ನಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ “ಪ್ರಿಯಾಂಕ “ಅವರ ಕುರಿತಾಗಿ ಪ್ರತ್ಯೇಕವಾಗಿ ಹೇಳುವ ಅಗತ್ಯ ಖಂಡಿತ ಇಲ್ಲ.‌ ಪ್ರಿಯಾಂಕ ಅವರು ಆ ಪಾತ್ರದಲ್ಲಿ ಎಷ್ಟು ಖದರ್ ಆಗಿ ನಟಿಸಿದ್ದರು ಎಂದರೆ ಅಗ್ನಿ ಸಾಕ್ಷಿ ಚಂದ್ರಿಕಾ ಎಂದರೆ ಅದು ಪ್ರಿಯಾಂಕ ಎನ್ನುವಷ್ಟರ ಮಟ್ಟಿಗೆ ಆ ಪಾತ್ರ ಜನಪ್ರಿಯತೆಯನ್ನು ಪಡೆದುಕೊಂಡಿದೆ.

 

 

ಹಲವಾರು ನೆಗೆಟಿವ್ ಪಾತ್ರಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನಸ್ಸನ್ನು ಸೆಳೆಯುತ್ತಿರುವ ಪ್ರಿಯಾಂಕ “ತೆಲುಗು” ಕಿರುತೆರೆಯಲ್ಲಿ ಸಹಾ ಖಳ ನಾಯಕಿ ಪಾತ್ರಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಸದ್ಯಕ್ಕೆ ಪ್ರಿಯಾಂಕ ಅವರು ಕನ್ನಡದ ಬಹು ಜನಪ್ರಿಯ ಸೀರಿಯಲ್ ನಲ್ಲಿ ಕೂಡಾ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಮದ್ಯೆಯಲ್ಲಿಯೂ ಬೆಳ್ಳಿ ತೆರೆ ಯಲ್ಲಿಯೂ ಅವಕಾಶವನ್ನು ಗಿಟ್ಟಿಸಿಕೊಂಡು. “ಫ್ಯಾಂಟಸಿ” ಹೆಸರಿನ ಸಿನಿಮಾದ ಮೂಲಕ ಬೆಳ್ಳಿ ತೆರೆಯ ಮೇಲೆ ಮಿಂಚಲು ಸಿದ್ಧವಾಗಿದ್ದಾರೆ.

 

 

ವೈಯಕ್ತಿಕ ಜೀವನದಲ್ಲಿ ಸದಾಕಾಲ ಸುದ್ದಿಯಲ್ಲಿ ಇರುವ ಪ್ರಿಯಾಂಕ ಅವರು ಯಾವಾಗ ಮದುವೆ ಆಗುತ್ತಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಇದೆ. ಆದರೆ ಈ ರೀತಿಯಾಗಿ ಮದುವೆ ಎಂಬ ಪ್ರಶ್ನೆ ಕೇಳಿದ್ರೆ ಸಾಕು ಪ್ರಿಯಾಂಕ ಈ ಪ್ರಶ್ನೆಯಿಂದ ದೂರ ಉಳಿಯುವುದಕ್ಕೆ ಪ್ರಯತ್ನ ಮಾಡುತ್ತಾರೆ. ಸದ್ಯ ಪ್ರಿಯಾಂಕ ಅವರ ವಯಸ್ಸು 30 ದಾಟಿದರೂ ಕೂಡ ಇನ್ನು ಮದುವೆ ಬಗ್ಗೆ ಯೋಚನೆ ಮಾಡುತ್ತಿಲ್ಲ. ಜೀವನದಲ್ಲಿ ಇನ್ನು ಸಾಧನೆ ಮಾಡಬೇಕು ಎಂದು ಅಂದು ಕೊಂಡಿರುವ ಅವರು ಸಾಧನೆ ಮಾಡಿಯೇ ಮದುವೆ ಆಗುತ್ತೇನೆ‌ ಎಂದಿದ್ದಾರೆ. ಅಷ್ಟೇ ಅಲ್ಲದೆ ತನ್ನ ಮನೆಯ ಜವಾಬ್ದಾರಿ, ತಮ್ಮನ ಜೀವನವನ್ನು ಮೊದಲು ಸರಿ ಮಾಡಬೇಕು ಎಂದು ಪಣ ತೊಟ್ಟಿದ್ದು ಈ ಎಲ್ಲಾ ಕಾರಣಗಳಿಂದ ಪ್ರಿಯಾಂಕ ಸದ್ಯಕ್ಕೆ ಮದುವೆ ವಿಚಾರದ ಬಗ್ಗೆ ನೋ ಅಂತ ಹೇಳಿದ್ದಾರೆ.

Leave a comment

Your email address will not be published.