ಪ್ರಣಿತಾ ಸುಭಾಷ್ ಕನ್ನಡ ಚಿತ್ರರಂಗ ಖ್ಯಾತ ನಟಿಯರಲ್ಲಿ ಒಬ್ಬರು. ಕನ್ನಡ ಮತ್ತು ಕೆಲವು ತೆಲುಗು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಪ್ರಣಿತಾ ಸುಭಾಷ್ ಅವರು ಮದುವೆಯ ನಂತರ ಚಿತ್ರರಂಗದಿಂದ ದೂರವಾದರು. ಕನ್ನಡದ ಖ್ಯಾತ ನಟರಾದ ದರ್ಶನ್, ಪ್ರಜ್ವಲ್ ದೇವರಾಜ್, ಚಿರಂಜೀವಿ ಸರ್ಜಾ ಸೇರಿದಂತೆ ಕೆಲವು ನಾಯಕರ ಜೊತೆ ನಟನೆಯನ್ನ ಮಾಡಿರುವ ನಟಿ ಪ್ರಣೀತಾ ಸುಭಾಷ್ ಅವರು ಕರ್ನಾಟಕದಲ್ಲಿ ಸಾಕಷ್ಟು ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

 

 

ಕನ್ನಡಕ್ಕೆ ಸೂಪರ್ ಹಿಟ್ ಚಿತ್ರಗಳನ್ನ ನೀಡಿದ್ದ ನಟಿ ಪ್ರಣಿತಾ ಸುಭಾಷ್ ಅವರು ತಲುಗಿನ ಕೆಲವು ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡರು. ಚಿತ್ರರಂಗದಲ್ಲಿ ಸಾಧನೆಯನ್ನ ಮಾಡುತ್ತಿದ್ದ ಸಮಯದಲ್ಲೇ ಮದುವೆಯನ್ನ ಮಾಡಿಕೊಂಡ ನಟಿ ಪ್ರಣಿತಾ ಸುಭಾಷ್ ಅವರು ಚಿತ್ರರಂಗದಿಂದ ದೂರವಾದರು.

 

 

ಮದುವೆಯ ನಂತರ ಸಂಸಾರ ಸಾಗರದಲ್ಲಿ ಬಹಳ ಬ್ಯುಸಿ ಆದ ನಟಿ ಪ್ರಣಿತಾ ಸುಭಾಷ್ ಅವರು ಆಗ ತಮ್ಮ ಫೋಟೋಗಳನ್ನ ತಮ್ಮ ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಳ್ಳುವುದರ ಮೂಲಕ ಸಾಕಷ್ಟು ಸುದ್ದಿಯಾಗುತ್ತಿದ್ದರು. ಇನ್ನು ಕಳೆದ ತಿಂಗಳು ಮುದ್ದಾದ ಹೆಣ್ಣು ಮಗುವಿನ ಜನ್ಮವನ್ನ ನೀಡಿದ್ದ ನಟಿ ಪ್ರಣಿತಾ ಸುಭಾಷ್ ಅವರು ತಮ್ಮ ತಾಯ್ತನದ ಖುಷಿಯ ವಿಷಯವನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.

 

 

ಪ್ರಣಿತಾ ಸುಭಾಷ್ ಅವರ ತಾಯೀನೇ ನಟಿ ಪ್ರಣಿತಾ ಸುಭಾಷ್ ಅವರಿಗೆ ಹೆರಿಗೆಯನ್ನ ಮಾಡಿಸಿದ್ದು ತಾಯಿಯಿಂದ ಹೆರಿಗೆ ಮಾಡಿಸಿಕೊಂಡ ಖುಷಿಯನ್ನ ನಟಿ ಪ್ರಣಿತಾ ಸುಭಾಷ್ ಅವರು ತಮ್ಮ ಅಭಿಮಾನಿಗಳ ಜೊತೆ ಹೇಳಿಕೊಂಡರು. ಸದ್ಯ ಮಗಳ ಅದ್ದೂರಿ ನಾಮಕರಣವನ್ನ ನಟಿ ಪ್ರಣಿತಾ ಸುಭಾಷ್ ಅವರು ಮಾಡಿದ್ದು ಮಗಳಿಗೆ ಮುದ್ದಾದ ಹೆಸರನ್ನ ಇಟ್ಟಿದ್ದಾರೆ. ಹೌದು ಫೋಟೋ ಶೂಟ್ ಮಾಡಿಸುವುದರ ಮೂಲಕ ಮಗಳ ನಾಮಕರಣವನ್ನ ಮಾಡಿದ ನಟಿ ಪ್ರಣಿತಾ ಸುಭಾಷ್ ಅವರು ಮಗಳನ್ನ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ ಎಂದು ಹೇಳಬಹುದು.

 

 

ಮಗಳ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರ ಜೊತೆಗೆ ಮಗಳ ಹೆಸರನ್ನ ಕೂಡ ಹೇಳಿದ್ದಾರೆ ನಟಿ ಪ್ರಣೀತಾ ಸುಭಾಷ್.ಬಹುಭಾಷಾ ನಟಿ ಪ್ರಣೀತಾ ಸದ್ಯ ಮುದ್ದಾದ ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡತಿ ಪ್ರಣಿತಾ ಇದುವರೆಗೂ ಮಗಳ ಮುಖವನ್ನು ರಿವೀಲ್ ಮಾಡಿರಲಿಲ್ಲ. ಇದೀಗ ಮೊದಲ ಬಾರಿಗೆ ಪ್ರಣಿತಾ ಫೋಟೋವನ್ನು ಹಂಚಿಕೊಂಡಿದ್ದಾರೆ.

 

 

View this post on Instagram

 

A post shared by Amrita Samant (@mommyshotsbyamrita)

 

ಮಗಳ ಜೊತೆಗಿರುವ ಫೋಟೋವನ್ನು ಶೇರ್ ಮಾಡಿದರು ಸಹ ಮುಖವನ್ನು ತೋರಿಸಿರಲಿಲ್ಲ. ಆದರೀಗ ಮೊದಲ ಬಾರಿಗೆ ಮಗಳ ಜೊತೆ ಮುದ್ದಾದ ಫೋಟೋಶೂಟ್ ಮಾಡಿಸಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಗಳಿಗೆ ಮುತ್ತಿಡುತ್ತಿರುವ ಫೋಟೋವನ್ನು ಶೇರ್ ಮಾಡಿ ‘ಆರ್ನಾ’ ಎಂದು ಪರಿಚಯ ಮಾಡಿಕೊಟ್ಟಿದ್ದಾರೆ. ಹೌದು ಮಗಳಿಗೆ ಆರ್ನಾ ಎಂದು ನಾಮಕರಣ ಮಾಡಿದ್ದಾರೆ. ಪ್ರಣಿತಾ ಮಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

 

 

ಪೋರ್ಕಿ ಚಿತ್ರದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟ ನಟಿ ಪ್ರಣಿತಾ ಸುಭಾಷ್ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಮಿಂಚಿದರು. ಸ್ಟಾರ್‌ಗಳ ಜೊತೆ ತೆರೆಹಂಚಿಕೊಂಡರು. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮತ್ತು ಬಾಲಿವುಡ್‌ನಲ್ಲಿಯೂ ನಟಿಸಿ ಸೈ ಎನಿಸಿಕೊಂಡರು. ಚಿತ್ರರಂಗದಲ್ಲಿ ಡಿಮ್ಯಾಂಡ್ ಇರುವಾಗಲೇ 2021ರಲ್ಲಿ ಲಾಕ್‌ಡೌನ್‌ನಲ್ಲಿ ಉದ್ಯಮಿ ನಿತಿನ್ ರಾಜ್ ಜೊತೆ ಹಸೆಮಣೆ ಏರಿದ್ದರು.

 

 

ಪ್ರಣೀತಾ ಸಿನಿಮಾ ವಿಚಾರಕ್ಕೆ ಬರುವುದಾದರೆ ಕೊನೆಯದಾಗಿ ಹಂಗಾಮ-2, ಭುಜ್ ದಿ ಪ್ರೈಡ್ ಆಫ್ ಇಂಡಿಯಾ, ಸಿನಿಮಾದಲ್ಲಿ ಮಿಂಚಿದ್ದರು. ಈ ಸಿನಿಮಾದಲ್ಲಿ ಅಜಯ್ ದೇವಗನ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಕೊನೆಯದಾಗಿ ಮಾಸ್ ಲೀಡರ್ ಸಿನಿಮಾದಲ್ಲಿ ಮಿಂಚಿದ್ದರು. ಸದ್ಯ ರಾಮನ ಅವತಾರ ಸಿನಿಮಾ ತರೆ ಕಾಣಬೇಕಾಗಿದೆ.

Leave a comment

Your email address will not be published.