Categories: Entertainment

ಸೋನು ಶ್ರೀನಿವಾಸ್ ಗೌಡ ಖಾಸಗಿ ವೀಡಿಯೋ ಲೀಕ್ ಮಾಡಿದ ಬಾಯ್ ಫ್ರೆಂಡ್ ಅರೆಸ್ಟ್..!!! ವಿಚಾರಣೆ ನಡೆಸುತ್ತಿರುವ ಸೈಬರ್ ಪೊಲೀಸ್..!!!

ಬಿಗ್​ ಬಾಸ್​ ಮನೆಯೊಳಗೆ ಕಾಲಿಟ್ಟಿರುವ ಸ್ಪರ್ಧಿಗಳ ಪೈಕಿ ಸೋನು ಶ್ರೀನಿವಾಸ್​ ಗೌಡ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಅವರನ್ನು ಈ ಶೋಗೆ ಆಯ್ಕೆ ಮಾಡಿದ್ದು ಸರಿಯಲ್ಲ ಎಂದು ಬಹುತೇಕರು ಆರೋಪಿಸುತ್ತಿದ್ದಾರೆ. ಅದಕ್ಕೆ ಕಾರಣ ಕೆಲವೇ ತಿಂಗಳ ಹಿಂದೆ ಸೋನು ಗೌಡ ಅವರ ಖಾಸಗಿ ವಿಡಿಯೋ ಲೀಕ್​ ಆಗಿತ್ತು. ಅವರನ್ನು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗಿತ್ತು. ಖಾಸಗಿ ಅಂಗಗಳನ್ನು ಪ್ರದರ್ಶನ ಮಾಡಿದ ಇಂಥವರಿಗೆಲ್ಲ ‘ಬಿಗ್​​ ಬಾಸ್​ ಕನ್ನಡ ಒಟಿಟಿ’ ವೇದಿಕೆಯಲ್ಲಿ ಅವಕಾಶ ನೀಡಿದ್ದು ಸರಿಯಲ್ಲ ಎಂದು ಕಮೆಂಟ್​ಗಳ ಮೂಲಕ ಜನರು ಅಸಮಾಧಾನ ಹೊರಹಾಕುತ್ತಿದ್ದಾರೆ.

 

 

ಒಬ್ಬ ಹುಡುಗನನ್ನು ಸೋನು ಶ್ರೀನಿವಾಸ್​ ಗೌಡ ಲವ್​ ಮಾಡುತ್ತಿದ್ದರು. ಇಬ್ಬರ ನಡುವಿನ ವಿಡಿಯೋ ಕಾಲ್​ ರೆಕಾರ್ಡ್​ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಈ ರೀತಿ ಆಗಿದ್ದಕ್ಕೆ ಬಾಯ್​ ಫ್ರೆಂಡ್​ ಕಾರಣ ಎಂದು ಹೇಳಿದ್ದಾರೆ ಸೋನು. ಹಳೇ ಘಟನೆಯನ್ನು ನೆನಪಿಸಿಕೊಂಡು ದುಃಖ ಹೊರಹಾಕಿದ ಅವರನ್ನು ದೊಡ್ಮೆನೆಯೊಳಗೆ ಎಲ್ಲರೂ ಸಂತೈಸಿದ್ದಾರೆ. ಅವರನ್ನು ತಬ್ಬಿಕೊಂಡು ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ ನಟ ರಾಕೇಶ್​ ಅಡಿಗ.

 

 

ನನ್ನ ಪರಿಚಯದ ವ್ಯಕ್ತಿಯೊಬ್ಬ ನನ್ನ ಜೊತೆ ಮೂರು ವರ್ಷ ಇದ್ದ. ಅವನು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋದ ನಂತರ ಪ್ರಪೋಸ್ ಮಾಡಿದ. ನಾನೂ ಒಪ್ಪಿಕೊಂಡೆ. ನಂತರ ನಮ್ಮ ಪ್ರೀತಿ ನಿಜವಾಗಿದ್ದರೆ ವಿಡಿಯೋ ಕಾಲ್ ಮಾಡು ಅಂದ. ನಾನು ನೇರವಾಗಿ ವಿಡಿಯೋ ಕಾಲ್ ಮಾಡಿದೆ.ಆದರೆ ಅವನು ಅದನ್ನೆಲ್ಲ ರೆಕಾರ್ಡ್ ಮಾಡಿಕೊಂಡ ಎಂದು ಸೋನು ಗೌಡ ಹೇಳಿದ್ದಾರೆ. ನೀನು ನನ್ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆ ಆಗೋಕೆ ಆಗಲ್ಲ ಅಂತ ಆತ ಬ್ಲಾಕ್ ಮೇಲ್ ಮಾಡಲು ಶುರುಮಾಡಿದ. ಒಂದೇ ಕ್ಷಣದಲ್ಲಿ ನಾನು ನಮ್ಮ ಮನೆಯ ಮಾನ ಮರ್ಯಾದೆ ತೆಗೆದುಹಾಕಿಬಿಟ್ಟೆ. ಹುಡುಗಿಯಾಗಿ ಹುಟ್ಟಿದ್ದೇ ತಪ್ಪಾಯ್ತು ಅಂತ ಅಳಲು ಶುರುಮಾಡಿದೆ. ಕುಟುಂಬದವರು ಮತ್ತು ಸಂಬಂಧಿಕರೆಲ್ಲ ನನಗೆ ಬೈಯ್ದರು ಎಂದು ಆ ಕಹಿ ಘಟನೆಯನ್ನು ನೆನಪು ಮಾಡಿಕೊಂಡು ಸೋನು ಕಣ್ಣೀರು ಹಾಕಿದ್ದಾರೆ.

 

 

ಒಂದು ವಿಡಿಯೋ ಲೀಕ್ ಮಾಡಿದ್ದಾನೆ. ಅವನ ಹತ್ತಿರ ಇನ್ನೊಂದು ವಿಡಿಯೋ ಇದೆ. ಅದನ್ನು ಯಾವಾಗ ಬಿಡುತ್ತಾನೋ ನನಗೆ ನಿಜವಾಗಿ ಗೊತ್ತಿಲ್ಲ. ನನಗೆ ಆದಂತೆ ಬೇರೆ ಯಾವ ಹುಡುಗಿಯರಿಗೂ ಆಗಬಾರದು ಎಂದು ಸೋನು ಗೌಡ ಹೇಳಿದ್ದಾರೆ.

ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ, ಸಿಕ್ಕಾಪಟ್ಟೆ ಫಾಲೋವಾರ್ಸ್ ಹೊಂದಿದ್ದ ಸೋನು ಶ್ರೀನಿವಾಸ ಗೌಡ ಅವರ ಖಾಸಗಿ ವಿಡಿಯೋ ಲೀಕ್​ ಆಗಿತ್ತು. ಅಂದು ವೈರಲ್ ಆಗಿದ್ದ ಆ “ಅರುಣ್ ಆರ್ ಯು ದೇರ್” ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆಯಲ್ಲಿತ್ತು. ತದನಂತರ ಈ ವಿಡಿಯೋ ವಿಚಾರವಾಗಿ ಒಮ್ಮೆ ತಣ್ಣಗಿತ್ತು. ಇದೀಗ ಮತ್ತೆ ಬೂದಿ ಮುಚ್ಚಿದ ಕೆಂಡ ಓಪನ್ ಆದಂತಿದೆ. ಹೌದು, ಈ ವಿಡಿಯೋ ವಿಚಾರವಾಗಿ ಸ್ವತಃ ಸೋನು ಶ್ರೀನಿವಾಸ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಮಾತನಾಡಿದ್ದು, ಸತ್ಯ ಸತ್ಯತೆಗಳ ಬಗ್ಗೆ ಸೋನು ವಿವರಣೆ ಕೊಟ್ಟಿದ್ದಾರೆ.

 

 

ಈ ವಿಡಿಯೋ ವಿಚಾರವಾಗಿ ಸೋನು ಶ್ರೀನಿವಾಸ ಗೌಡ ಬಿಗ್ ಬಾಸ್ ಮನೆಯಲ್ಲಿ ಕೊಟ್ಟ ಹೇಳಿಕೆಯ ಆಧಾರದ ಮೇಲೆ ಮಹಿಳಾ ಸಂಘಟನೆಗಳು ಸೋನು ಗೌಡ ಬಾಯ್ ಫ್ರೆಂಡ್ ಅರುಣ್ ಮೇಲೆ ದೂರು ದಾಖಲಿಸಿದ್ದಾರೆ. ಸೋನು ಶ್ರೀನಿವಾಸ್ ಗೌಡ ಬಾಯ್ ಫ್ರೆಂಡ್ ಅರುಣ್ ಸ್ವತಃ ಸೋನು ಗೌಡರ ಖಾಸಗಿ ವಿಡಿಯೋ ಲೀಕ್​ ಮಾಡಿರೋದಾಗಿ ಸೋನು ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಅರುಣ್ ನನ್ನನ್ನು ಪ್ರೀತಿಸಿ, ನಂಬಿಸಿ, ಬ್ಲಾಕ್ ಮೇಲ್ ಮಾಡಿರೋ ಆರೋಪ ಹಿನ್ನಲೆ ಇದೀಗ ಮಹಿಳಾ ಸಂಘಟನೆಗೆ ಅರುಣ್ ವಿರುದ್ಧ ದೂರು ನೀಡಲಾಗಿದ್ದು, ಸದ್ಯ ಇದೀಗ ಅರುಣ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎನ್ನಲಾಗುತ್ತಿದೆ.

karnataka

Recent Posts

ಸ್ಕೂಲ್ ನಲ್ಲಿ ಇಲ್ಲ ಕಾಲೇಜಿನಲ್ಲಿ ಇದ್ದ – ಬಾಯ್ ಫ್ರೆಂಡ್ ಗುಟ್ಟು ಬಿಚ್ಚಿಟ್ಟ ಕಮಲಿ ಖ್ಯಾತಿಯ ಅಮೂಲ್ಯ ಗೌಡ..!!!

ಕಿರುತೆರೆ ಲೋಕದ ಬಹು ನಿರೀಕ್ಷಿತ ಶೋ ಬಿಗ್ ಬಾಸ್. ಹೌದು ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ ಒಂಬತ್ತು ಆರಂಭಗೊಂಡಿದೆ.…

17 hours ago

೧೦೦ ಕೋಟಿ ಕ್ಲಬ್ ಸೇರುವ ಮುನ್ನವೇ, ೫ ನೇ ದಿನಕ್ಕೆ ಕಾಂತಾರ ಚಿತ್ರದ ರಿಷಬ್ ಗೆ ಭಾರೀ ಆಘಾತ..!!

ಸ್ನೇಹಿತರ ಕಾಂತಾರ ಚಿತ್ರಕ್ಕೆ ಆರಂಭದಿಂದ ದೊಡ್ಡ ಮಟ್ಟದ ಸ್ಪಂದನೆ ಸಿಗುತ್ತಿದ್ದು, ಅದು ಅತ್ಯಧಿಕ ಪರದೆಗಳಲ್ಲಿ ಚಿತ್ರ ಪ್ರದರ್ಶನಗಳುಗೊಳ್ಳುವುದು ಅಷ್ಟೇ ಅಲ್ಲದೆ…

17 hours ago

ಮದುವೆಯಾದ ಒಂದೇ ತಿಂಗಳಿಗೆ ಪತ್ನಿಯಿಂದ ದೂರಾಗುತ್ತಿರುವ ರವೀಂದರ್.!! ಕಾರಣವೇನು ಗೊತ್ತಾ

ಕಳೆದ ಒಂದು ತಿಂಗಳಿನಿಂದ ಟ್ರೆಂಡಿಂಗ್‌ನಲ್ಲಿದ್ದ ಸ್ಟಾರ್ ಜೋಡಿ ನಿರೂಪಕಿ ಮಹಾಲಕ್ಷ್ಮಿ ಹಾಗು ನಿರ್ಮಾಪಕ ರವಿತರ ಜೋಡಿಯ ಕುರಿತು ಇದೀಗ ಹೊಸ…

18 hours ago

ಹೊಸ ಮನೆಯಲ್ಲಿ ಮಕ್ಕಳ ಜೊತೆ ಆಯುಧ ಪೂಜೆಯಲ್ಲಿ ನಟ ಶರಣ್

ನಟ ಶರಣ್ ಇವರ ನಟನೆ ನನಗೆ ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತದೆ. ಚಂದನವನದ ಅದ್ಭುತ ನಟರಲ್ಲಿ ಶರಣ್ ಸಹ ಒಬ್ಬರು. ಶರಣ್…

18 hours ago

ತಮ್ಮ ಬೈಸಿಕಲ್ ಜೊತೆ ಯಶ್ ಐಷಾರಾಮಿ ಯಂತ್ರಗಳಿಗೆ ಪೂಜೆ ಸಲ್ಲಿಸಿದ ಮಗ ಯತರ್ವ್ ಯಶ್!

ನಟ ರಾಕಿಂಗ್ ಸ್ಟಾರ್ ತಮ್ಮ ಕಾರುಗಳಿಗೆ ಪೂಜೆ ಸಲ್ಲಿಸಿದ್ದಾರೆ. ನಟ ಯಶ್ ಅವರು ಮನೆಯಲ್ಲಿ ತಮ್ಮ ಎಲ್ಲಾ ಕಾರುಗಳನ್ನು ಸಮಾನವಾಗಿ…

1 day ago

ಗೀತಾ ಸೀರಿಯಲ್ ನಟಿ ಭವ್ಯ ಗೌಡ, ನಟ ಧನುಷ್ ಗೌಡ ಚಾಮುಂಡೇಶ್ವರಿ ಸನ್ನಿಧಿಯಲ್ಲಿ

ಭವ್ಯಾ ಗೌಡ ಮತ್ತು ಧನುಷ್ ಗೌಡ ನಡುವಿನ ವಯಸ್ಸಿನ ವ್ಯತ್ಯಾಸ ಗಮನಾರ್ಹವಾಗಿದೆ. ಭವ್ಯಾ ಗೌಡಗೆ ಕೇವಲ 23 ವರ್ಷ, ಧನುಷ್…

1 day ago