ಸ್ಯಾಂಡಲ್​ವುಡ್​ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್​ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆಶಿಕಾ ತಮ್ಮ 26ನೇ ವಸಂತಕ್ಕೆ ಕಾಲಿಟ್ಟಿದ್ದು ಸ್ಯಾಂಡಲ್​ವುಡ್​ನಲ್ಲಿ ಭರವಸೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸ್ಯಾಂಡಲ್​ವುಡ್​ನ ಮಿಲ್ಕ್ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಆಶಿಕಾ ರಂಗನಾಥ ಚಂದನವನದ ಭರವಸೆಯ ನಟಿ. ಇಂದು ಆಶಿಕಾ ರಂಗನಾಥ್​ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರು ತಮ್ಮ 26ನೇ ವಸಂತಕ್ಕೆ ಕಾಲಿಟ್ಟಿದ್ದು, ಚಿಕ್ಕ ವಯಸ್ಸಿನಲ್ಲಲಿಯೇ ಸ್ಯಾಂಡಲ್​ವುಡ್​ನಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದಾರೆ.

 

 

ರಂಗನಾಥ್ ಮತ್ತು ಸುಧಾ ದಂಪತಿಗಳ ಮಗಳಾಗಿ ಆಶಿಕಾ ರಂಗನಾಥ್ 1996,ಅಗಸ್ಟ್ 5 ರಂದು ಹಾಸನದಲ್ಲಿ ಜನಿಸಿದರು. ತುಮಕೂರಿನಲ್ಲಿ ಬೆಳೆದ ಇವರು ಪಿಯುಸಿ ಶಿಕ್ಷಣಕ್ಕೆ ಬೆಂಗಳೂರಿಗೆ ಆಗಮಿಸಿದರು. ಬಳಿಕ ಬೆಂಗಳೂರಿನ ಜ್ಯೋತಿ ನಿವಾಸ ಕಾಲೇಜಿನಲ್ಲಿ ಪಿಯು ಮುಗಿಸಿ MES ಕಾಲೇಜಿನಿಂದ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದಾರೆ.

 

 

2014ರಲ್ಲಿ ಕ್ಲೀನ್ ಆಂಡ್ ಕ್ಲಿಯರ್ ಫ್ರೇಶ್ ಪೇಸ್ ಸ್ಪರ್ಧೆಯಲ್ಲಿ ಭಾಗವಹಿಸಿ ರನ್ನರ್-ಅಪ್ ಅಗಿದ್ದರು. ಇಲ್ಲಿಂದ ಅವರ ಕೆರಿಯರ್ ಬದಲಾಯಿತು ಎಂದರೂ ತಪ್ಪಾಗಲಾರದು. ಹೌದು, ಈ ವೇಳೆ ನಿರ್ದೇಶಕ ಮಹೇಶ್ ಬಾಬು ಅವರು ಆಶಿಕಾ ಅವರನ್ನು ಗಮನಿಸಿ ಸ್ಟಾಮಡಲ್​ವುಡ್​ಗೆ ಕರೆತಂದರು.

 

 

ನಂತರ 2016ರಲ್ಲಿ ಬಿಡುಗಡೆ ಆದ ಮಹೇಶ್ ಬಾಬು ನಿರ್ದೇಶನದ ಕ್ರೇಜಿ ಬಾಯ್ ಚಿತ್ರದ ಮೂಲಕ ತಮ್ಮ ಸಿನಿ ಪ್ರಯಣವನ್ನು ಆರಂಭಿಸಿದರು. ನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಆಶಿಕಾ ಸದ್ಯ ಸ್ಯಾಂಡಲ್​ವುಡ್​ನ ಬ್ಯುಸಿ ನಟಿಯರಲ್ಲಿ ಒಬ್ಬರು.

 

 

ಆದರೆ `ಕ್ರೇಜ್ ಬಾಯ್’ ಚಿತ್ರಕ್ಕೆ ಕ್ರೇಜಿ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಈ ಸುಂದರಿಗೆ ಗೋಲ್ಡನ್ ಸ್ಟಾರ್ ಅಭಿನಯದ ಹಾಗೂ ಯೋಗರಾಜ್ ಭಟ್ ನಿರ್ದೇಶನದ ಮುಗುಳು ನಗೆ ಸಿನಿಮಾ ಹೆಸರು ತಂದುಕೊಟ್ಟಿತು. ಆಶಿಕಾ ಸ್ಯಾಂಡಲ್​ವುಡ್​ನಲ್ಲಿ ಚುಟು ಚುಟು ಬೆಡಗಿ ಎಂದೇ ಫೇಮಸ್​. ಅಲ್ಲದೇ ಇವರನ್ನು ಕನ್ನಡ ಚಿತ್ರರಂಗದಲ್ಲಿ ಮಿಲ್ಕಿ ಬ್ಯೂಟಿ ಎಂದೇ ಕರೆಯುತ್ತಾರೆ. ಸಿನಿಮಾ, ಫೋಟೋಶೂಟ್​ ಎಂದೆಲ್ಲಾ ಬ್ಯುಸಿ ಇರುವ ಸುಂದರಿ ಅವತಾರ ಪುರುಷ ಸಿನಿಮಾ ಮುಗಿಸಿದ್ದಾರೆ. ಚುಟು ಚುಟು ಬೆಡಗಿಯ ಹೊಸ ಅವತಾರ ಫ್ಯಾನ್ಸ್ ಗೆ ಇಷ್ಟವಾಗಿದೆ.

 

 

ಕನ್ನಡ ಚಿತ್ರರಂಗದಲ್ಲಿ ನಟನೆ ಹಾಗೂ ಸೌಂದರ್ಯ ಎರಡರಲ್ಲೂ ಕೂಡ ಎಲ್ಲಾ ವರ್ಗದ ಪ್ರೇಕ್ಷಕರನ್ನ ಗೆದ್ದಿರುವ ನಟಿಯರಲ್ಲಿ ಆಶಿಕಾ ರಂಗನಾಥ್ ರವರು ಕೂಡ ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಕೇವಲ ಖ್ಯಾತನಾಮರ ಜೊತೆಗೆ ಮಾತ್ರವಲ್ಲದೆ ಹೊಸಬರ ಜೊತೆಗೂ ಕೂಡ ನಟಿಸಲು ಆಶಿಕ ರಂಗನಾಥ್ ರವರು ಯಾವತ್ತೂ ಕೂಡ ಹಿಂದೇಟು ಹಾಕುವುದಿಲ್ಲ. ಅದರಲ್ಲೂ ಆಶಿಕಾ ರಂಗನಾಥ್ ರವರ ಮುದ್ದು ಮುದ್ದಾದ ನಟನೆ ಎನ್ನುವುದು ಇಂದು ಅವರನ್ನು ಕರ್ನಾಟಕದ ಕೃಶ್ ಅನ್ನಾಗಿ ಮಾಡಿದೆ.

 

 

ಇನ್ನು ಆಶಿಕಾ ರಂಗನಾಥ್ ರವರು ಆಗಸ್ಟ್ 5ರಂದು ವರಮಹಾಲಕ್ಷ್ಮಿ ಹಬ್ಬದ ಶುಭ ದಿನದಂದು ಜನ್ಮದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ. ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸ್ನೇಹಿತರೆಲ್ಲರೂ ಆಶಿಕಾಗೆ ಸರ್ಪೈಸ್ ಆಗಿ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ಆಶಿಕಾ ರಂಗನಾಥ್ ಅವರ ಹುಟ್ಟುಹಬ್ಬದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಹುಟ್ಟುಹಬ್ಬದ ಅಂಗವಾಗಿ ಆಶಿಕಾ ಅಭಿನಯದ ಹೊಸ ಸಿನಿಮಾಗಳಿಂದ ಪೋಸ್ಟರ್​ಗಳನ್ನು ಉಡುಗೊರೆಯಾಗಿ ರಿಲೀಸ್​ ಮಾಡಲಾಗಿದೆ.

 

 

View this post on Instagram

 

A post shared by Ashika Ranganath (@ashika_rangnath)

 

ಸ್ಯಾಂಡಲ್​ವುಡ್​ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್​ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆಶಿಕಾ ಸ್ಯಾಂಡಲ್​​ವುಡ್​ನ ಬ್ಯುಸಿ ನಟಿಯರಲ್ಲಿ ಒಬ್ಬರು. ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ ಸದ್ಯಕ್ಕೆ ಅವರ ಮುಂದಿನ ಸಿನಿಮಾ ಯಾವುದು ಎಂಬುದರ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದರ ನಡುವೆ ಗತವೈಭವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಸಿಂಪಲ್ ಸುನಿ ನಿರ್ದೇಶನ ಮಾಡುತ್ತಿದ್ದಾರೆ.

 

Leave a comment

Your email address will not be published.