ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಪರಿಚಯವಿರುವ ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. `ಅಗ್ನಿ ಸಾಕ್ಷಿ’ ಸೀರಿಯಲ್ ಮೂಲಕ ಮನೆ ಮಾತಾಗಿರುವ ವೈಷ್ಣವಿ ಹಲವು ಉತ್ಪನ್ನಗಳ ರಾಯಭಾರಿಯೂ ಹೌದು.

ಇವರು ಒಂದು ದಿನ ತಮ್ಮ ತಾಯಿಯೊಂದಿಗೆ ಮಂದಿರಕ್ಕೆ ಹೋದಾಗ ಸಹಾಯಕ ನಿರ್ದೇಶಕರೊಬ್ಬರು ನೋಡಿ ತಮ್ಮ ಸೀರಿಯಲ್‌ನಲ್ಲಿ ನಟಿಸಲು ಆಫರ್ ನೀಡಿದರು. ಜೀ ಕನ್ನಡದ `ದೇವಿ’ ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ’ದಲ್ಲಿ ನಟಿಸಿ `ಅಗ್ನಸಾಕ್ಷಿ’ ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದರು.

 

 

ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ ಇವರು ತಮ್ಮ ನಿರತ ನಟನೆಯಿಂದ ಪದವಿ ಅರ್ಧಕ್ಕೆ ಬಿಟ್ಟರು. ನಂತರ ಬೆಂಗಳೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣ ಮೂಲಕ ಪದವಿ ಪಡೆದರು.ಭರತನಾಟ್ಯಂ,ಕುಚಿಪುಡಿ ಮತ್ತು ಬೆಲ್ಲಿ ಡ್ಯಾನ್ಸಿಂಗ್‌ನಲ್ಲಿ ಪರಿಣಿತಿ ಇರುವ ಇವರು `ಗಿರಿಗಿಟ್ಲೆ’ ಮೂಲಕ ನಾಯಕಿಯಾಗಿ ಚಂದನವನ ಪ್ರವೇಶಿಸಿದ್ದಾರೆ. `ಭರ್ಜರಿ ಕಾಮಿಡಿ’ ಎಂಬ ರಿಯಾಲಿಟಿ ಶೋ ಅನ್ನು ನಿರೂಪಣೆ ಮಾಡಿದ್ದರು. `ಕುಣಿಯೋಣ ಬಾರ’ ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ಕೂಡ ಭಾಗವಹಿಸಿದ್ದರು. ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.

 

 

ಭಾರತ ಸಂಸ್ಕೃತಿಯಲ್ಲಿ ಬಹಳ ಮಹತ್ವವಿರುವ ಹಬ್ಬಗಳಲ್ಲಿ ಒಂದು ರಕ್ಷಾಬಂಧನ. ಒಡಹುಟ್ಟಿದವರ ನಡುವಿನ ಬಾಂಧವ್ಯವನ್ನು ಹೆಚ್ಚಿಸುವ ಹಬ್ಬ ಇದು. ರಕ್ಷಾಬಂಧನದ ದಿನ ಕಟ್ಟುವ ರಾಖಿ, ನಾನು ನಿನ್ನೊಡನೆ ಯಾವಾಗಲೂ ಇರುತ್ತೇನೆ. ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲೂ ಕಷ್ಟ ಸುಖದಲ್ಲೂ ನಾನು ನಿನ್ನ ಜೊತೆ ಇದ್ದು ನೋಡಿಕೊಳ್ಳುತ್ತೇನೆ ಎಂದು ಹೇಳುವ ಸಂಕೇತ ರಾಖಿ. ಈ ರಾಖಿ ಹಬ್ಬ ಎಲ್ಲರಿಗೂ ವಿಶೇಷ. ರಕ್ಷಾಬಂಧನದಂದು ಏನೇ ಕೆಲಸ ಕಾರ್ಯಗಳು ಇದ್ದರೂ ಸಹೋದರ ಸಹೋದರಿಯರು ಭೇಟಿಯಾಗಿ ರಾಖಿ ಕಟ್ಟಿ ಸಂಭ್ರಮಿಸುತ್ತಾರೆ.

 

 

ಈ ರಕ್ಷಾಬಂಧನ ಹಬ್ಬದ ವಿಶೇಷದ ದಿನ, ಅಗ್ನಿಸಾಕ್ಷಿ ಮತ್ತು ಬಿಗ್ ಬಾಸ್ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ತಮ್ಮ ಅಣ್ಣನಿಗೆ ರಾಖಿ ಕಟ್ಟಿ, ರಕ್ಷಾಬಂಧನ ಹಬ್ಬವನ್ನು ಆಚರಿಸಿದ್ದಾರೆ. ವೈಷ್ಣವಿ ಗೌಡ ಅವರ ಅಣ್ಣನ ಹೆಸರು ಸುನೀಲ್ ಬಿ ಕುಮಾರ್. ಇವರಿಗೆ ರಾಖಿ ಕಟ್ಟಿ, ಹಣೆಗೆ ತಿಲಕ ಇಟ್ಟು, ಪ್ರೀತಿಯಿಂದ ರಾಖಿ ಕಟ್ಟಿ, ಅಣ್ಣನ ಆಶೀರ್ವಾದ ಪಡೆದುಕೊಂಡಿದ್ದಾರೆ ವೈಷ್ಣವಿ. ಈ ಫೋಟೋಗಳನ್ನು ವೈಷ್ಣವಿ ಅವರ ಫ್ಯಾನ್ ಪೇಜ್ ಗಳು ಶೇರ್ ಮಾಡಿಕೊಂಡಿವೆ. ಇದೀಗ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿವೆ.

 

 

ಅಗ್ನಿಸಾಕ್ಷಿ ಧಾರವಾಹಿಯಿಂದ ಕರ್ನಾಟಕದ ಜನತೆಗೆ ಬಹಳ ಹತ್ತಿರವಾಗಿ, ಕರ್ನಾಟಕದ ಮನೆ ಮಗಳಂತೆ ಆಗಿರುವವರು ನಟಿ ವೈಷ್ಣವಿ. ಅಗ್ನಿಸಾಕ್ಷಿ ನಂತರ ಒಂದೆರಡು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡ ವೈಷ್ಣವಿ, ನಂತರ ‘ಬೆಕ್ಕು’ ಎಂಬ ಸಿನಿಮಾದಲ್ಲಿ ಸಹ ಹೀರೊಯಿನ್ ಆಗಿ ನಟಿಸಿದರು. ನಂತರ ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿಯಾಗಿ ಬಿಗ್ ಮನೆಯೊಳಗೆ ಕಾಲಿಟ್ಟರು ವೈಷ್ಣವಿ. ಪ್ರಸ್ತುತ ಬಿಗ್ ವಾಸ್ ಕನ್ನಡ ಸೀಸನ್ 8ರ ಫೈನಲಿಸ್ಟ್ ಗಳಲ್ಲಿ ಒಬ್ಬರಾಗಿದ್ದಾರು. ಈ ಸೀಸನ್ ನಲ್ಲಿ ವೈಷ್ಣವಿ ಅವರೇ ಗೆಲ್ಲಬೇಕು ಎಂಬುದು ಎಲ್ಲಾ ಅಭಿಮಾನಿಗಳ ಆಸೆಯಾಗಿತ್ತು.

 

 

ಆದರೆ ಟಾಪ್ ನಾಲ್ಕನೇ ಸ್ಪರ್ಧಿಯಾಗಿ ಹೊರಬಂದರು ನಟಿ ವೈಷ್ಣವಿ ಅವರು ಬಿಗ್ ಬಾಸ್ ಮನೆಯೊಳಗೆ ಸರಳ ವ್ಯಕ್ತಿತ್ವದ ಜೊತೆಗೆ ಇದ್ದದ್ದನ್ನು ಇದ್ದಹಾಗೆ ಹೇಳುವ ಸ್ವಭಾವದಿಂದಲೇ ಬಹಳ ಖ್ಯಾತಿ ಪಡೆದಿದ್ದರು. ವೈಷ್ಣವಿ ಅವರ ಅಡುಗೆ ಸಹ ಮನೆಯ ಎಲ್ಲರಿಗೂ ಬಹಳ ಇಷ್ಟವಾಗಿತ್ತು. ಇವರ ಮಾತುಗಳನ್ನು ಕಿಚ್ಚ ಸುದೀಪ್ ಅವರು ಸಹ ಇಷ್ಟಪಟ್ಟಿದ್ದರು. ಬಿಗ್ ಬಾಸ್ ಮನೆಯೊಳಗೆ ಇದ್ದಷ್ಟು ದಿನ ಎಲ್ಲರಿಗೂ ಗೌರವ ನೀಡುತ್ತಾ, ಯಾವ ವಿವಾದಗಳಿಗೂ ಸಿಲುಕಿಕೊಳ್ಳದೆ ಎಲ್ಲರಿಗೂ ಇಷ್ಟ ಆಗುವ ಹಾಗೆ ಇದ್ದರು ವೈಷ್ಣವಿ.

 

Leave a comment

Your email address will not be published.