ಸೋಶಿಯಲ್‌ ಮೀಡಿಯಾದಲ್ಲಿ ಟಿಕ್‌ ಟಾಕ್‌ ಮತ್ತು ರಿಲ್ಸ್‌ ಮೂಲಕವಾಗಿ ಪೇಮಸ್‌ ಆಗಿರುವ ಸೋನು ಶ್ರೀನಿವಾಸ್‌ ಗೌಡಾ ಅವರು ಬಿಗ್‌ಬಾಸ್‌ ಮನೆ ಸೇರಿದ್ದಾರೆ. ಸೋನು ಅವರು ತಮ್ಮದೇ ಆಗಿರುವ ವಿಭಿನ್ನ ಶೈಲಿ ಮೂಲಕವಾಗಿ ಜನಮನ್ನಣೆ ಪಡೆದುಕೊಂಡಿದ್ದಾರೆ. ಈಕೆಯನ್ನು ಪ್ರೀತಿಸುವ ಅಭಿಮಾನಿಗಳು ಹೆಚ್ಚಿದ್ದಾರೆ ಎನ್ನುವುದಕಿಂತ ಕಾಲೆಳೆಯುವ ಮಂದಿಯೆ ಹೆಚ್ಚಾಗಿದ್ದಾರೆ.

 

 

ಹೌದು ಸೋನು ಗೌಡಾ ಹೆಸರ ಕೇಳಿದ್ರೆ ಸಾಕು ನೆಟ್ಟಿಗರು ಮನಬಂದಂತೆ ಕಾಮೆಂಟ್‌ ಮಾಡುತ್ತಾರೆ. ಈ ಹಿಂದೆ ತಮ್ಮ ಖಾಸಗಿ ವೀಡಿಯೋ ಮೂಲಕವಾಗಿ ಸುದ್ದಿಯಾಗಿದ್ದರು. ಆದರೆ ಬಿಗ್‌ ಬಾಸ್‌ ಮನೆಯಲ್ಲಿ ಅವರ ಫೋನ್‌ ನಂಬರ್‌ ಹೇಳುವ ಮೂಲಕವಾಗಿ ಮತ್ತೆ ಸುದ್ದಿಯಾಗಿದ್ದಾರೆ. ಸೋನು ಗೌಡಾ ಅಭಿಮಾನಿಗಳಿಗೆ ಸಂತೋಷದ ಸುದ್ದಿಯೊಂದು ಸಿಕ್ಕಿದೆ.

 

 

ಬಿಗ್​ ಬಾಸ್ ಮನೆಯೊಳಗೂ ಸೋನು ಶ್ರೀನಿವಾಸ್​ ಗೌಡ ಮನಬಿಚ್ಚಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಈಗ ತಮ್ಮ ಫೋನ್​ ನಂಬರ್​ ಕೂಡ ಬಯಲು ಮಾಡಿದ್ದಾರೆ. ಆದರೆ ಅದರಲ್ಲಿ ಒಂದು ಟ್ವಿಸ್ಟ್​ ನೀಡಿದ್ದಾರೆ. ಇಂಥ ಹಲವು ಘಟನೆಗಳ ಮೂಲಕ ‘ಬಿಗ್​ ಬಾಸ್​ ಕನ್ನಡ ಒಟಿಟಿ ಶೋ ಸದ್ದು ಮಾಡುತ್ತಿದೆ.

 

 

ಸೋನು ಶ್ರೀನಿವಾಸ್​ ಗೌಡ ಅವರಿಗೆ ಫೋನ್ ನಂಬರ್​ ತಿಳಿದುಕೊಳ್ಳಬೇಕು ಎಂಬ ಹಂಬಲ ಅನೇಕರಿಗೆ ಇದೆ. ಆದರೆ ಅವರು ಅಷ್ಟು ಸುಲಭಕ್ಕೆ ಕಾಂಟ್ಯಾಕ್ಟ್​ ನಂಬರ್​ ಕೊಡುವವರಲ್ಲ. ಹಾಗಿದ್ದರೂ ಕೂಡ ಬಿಗ್​ ಬಾಸ್​ ಮನೆಯಲ್ಲಿ ಫೋನ್​ ನಂಬರ್​ ಶೇರ್​ ಮಾಡಿಕೊಂಡಿದ್ದಾರೆ. ಸೋನು ಗೌಡ ಅವರು ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದರು. ವಿಡಿಯೋ ಕಾಲ್​ ಮಾಡುವಾಗ ಸ್ವಲ್ಪ ಮಿತಿ ಮೀರಿ ನಡೆದುಕೊಂಡಿದ್ದರು. ಆ ವಿಡಿಯೋವನ್ನು ರೆಕಾರ್ಡ್​ ಮಾಡಿಕೊಂಡಿದ್ದ ಬಾಯ್​ ಫ್ರೆಂಡ್​ ನಂತರ ಬ್ಲಾಕ್​ ಮೇಲ್​ ಮಾಡಿದ ಹಾಗೂ ವಿಡಿಯೋ ವೈರಲ್​ ಮಾಡಿದ್ದನು. ಈ ವಿಚಾರವನ್ನು ಸೋನು ಗೌಡು ಬಿಗ್‌ಬಾಸ್‌ ಮನೆಯಲ್ಲಿ ಹೇಳಿಕೊಂಡಿದ್ದಾರೆ.

 

 

ಒಟ್ನಲ್ಲಿ ಒಂದಲ್ಲಾ ಒಂದು ವಿಚಾರವಾಗಿ ಸೌಂಡ್ ಮಾಡುತ್ತಲೇ ಇರುವ ಸೋನು ಶ್ರೀನಿವಾಸ್ ಗೌಡ ಇದೀಗ ಬಿಗ್‌ಬಾಸ್‌ ಮನೆಯಲ್ಲಿ ಅವರ ಫೋನ್‌ ನಂಬರ್‌ ಹೇಳಿಕೊಂಡಿದ್ದು ಮಾತ್ರ ಸಖತ್‌ ಸುದ್ದಿಯಾಗುತ್ತಿದೆ. ಸೋಶಿಯಲ್​ ಮೀಡಿಯಾಲ್ಲಿ ಸುಮಾರು 8 ಲಕ್ಷ ಫಾಲೋವರ್ಸ್ ಇದ್ದಾರೆ. ಅವರ ಖಾಸಗಿ ವಿಡಿಯೋ ವೈರಲ್​ ಆದ ಬಳಿಕ ಅವರನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡಲಾಗಿತ್ತು. ಅವುಗಳನ್ನೆಲ್ಲ ಎದುರಿಸಿ ಅವರು ಬಿಗ್​ ಬಾಸ್​ ಒಟಿಟಿಯಲ್ಲಿ ಶೈನ್​ ಆಗುತ್ತಿದ್ದಾರೆ.

 

 

ಬಿಗ್‌ಬಾಸ್‌ ಮನೆಯ ಸ್ಪರ್ಧಿಗಳು ಒಂದು ಕಡೆ ಮಾತನಾಡುತ್ತಾ ಕುಳಿತಿದ್ದರು. ಆಗ ಪೋನ್‌ ನಂಬರ್‌ ವಿಚಾರವಾಗಿ ಮಾತನಾಡಿದ್ದಾರೆ. ಬೇಗ ಫೋನ್​ ನಂಬರ್​ ಹೇಳಮ್ಮ ಡಯಲ್​ ಮಾಡುತ್ತೇನೆ ಎಂದು ಲೋಕೇಶ್​, ಸೋನುಗೆ ಕೇಳಿದರು. ಸೋನು ಗೌಡ 99876543210 ಎಂದರು. ಇದು ಸುಳ್ಳು ನಂಬರ್​ ಎಂದರು ಸ್ಫೂರ್ತಿ ಗೌಡ. ಅದನ್ನು ನಾನು ಉಲ್ಪಾ ಪಲ್ಟಾ ಹೇಳಿದ್ದೀನಿ. ಈ ನಂಬರ್​ ಯಾವುದೇ ಕಾರಣಕ್ಕೂ ಇರಲ್ಲ. ನಿಮ್ಮಂಥ ಜಾಣರು ಇರ್ತೀರಿ ಅಂತ ನಂಗೆ ಗೊತ್ತು ಎಂದಿದ್ದಾರೆ ಸೋನು ಗೌಡ.

 

 

ಸೋನು ಶ್ರೀನಿವಾಸ್​ ಗೌಡ ಬಿಗ್​ ಬಾಸ್ ಮನೆಗೆ ಎಂಟ್ರಿಕೊಟ್ಟು ೫ ದಿನ ಕಳೆದಿದೆ.​ ಈ ಮಧ್ಯೆ ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದ ಸೋನು ಗೌಡ ದೊಡ್ಮನೆಯಲ್ಲಿ ಸಹ ಹೈಲೈಟ್​ ಆಗುತ್ತಿದ್ದಾರೆ.

Leave a comment

Your email address will not be published.