ಯಶ್‌ ಎಂದರೆ ಸಾಕು ಅಭಿಮಾನಿಗಳು ಕಿವಿ ನಿಮಿರುತ್ತೆ. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಭಿಮಾನಿಗಳ ಬಳಗವಿದೆ. ಯಶ್‌ಗೆ ಪೊಗರು ಜಾಸ್ತಿ ಎಂದು ಕಮೆಂಟ್‌ ಮಾಡುವ ಹಲವು ಮಂದಿಗೆ ಯಶ್‌ ಏನು ಎನ್ನುವುದು ಅರ್ಥವಾಗಿದೆ.

ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಯುವಜನ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೈಸೂರು ನಮ್ಮೂರು. ಇಲ್ಲಿನ ಪಡುವಾರಹಳ್ಳಿ, ಕಾಳಿದಾಸ ರಸ್ತೆ ಹಾಗೂ ಗಂಗೋತ್ರಿಯಲ್ಲಿ ಓಡಾಡಿದ್ದೇನೆ ಎಂದು ಕಾಲೇಜ್‌ ದಿನ ನೆನಪು ಮಾಡಿಕೊಂಡಿದ್ದಾರೆ.

 

 

ನಮ್ಮೂರಿನಲ್ಲಿ ದೇಶದ ಹೆಮ್ಮೆಯ ಧ್ವಜ ಹಿಡಿಯುವ ಕಾರ್ಯಕ್ರಮ ಆಯೋಜಿಸಿರುವುದರಿಂದ ಬಹಳ ಹೆಮ್ಮೆಯಿಂದ ಬಂದಿದ್ದೇನೆ ಎಂದು ಹೇಳುತ್ತಿರುವಾಗ ಯಶ್‌ ಮುಖದ ಮೇಲಿನ ನಗು ಸಾಧಿಸಿದ್ದೇನೆ, ಜೀವನವನ್ನು ಗೆದ್ದಿದ್ದೇನೆ ಎನ್ನುವ ನಂಬಿಕೆ ಬೀರಿದ್ದಾರೆ.

 

 

ಯಶ್‌ ಹೆತ್ತವರು ಏನು ಅಂದುಕೊಂಡಿದ್ದೇನು.?: ಒಂದು ಸಣ್ಣ ಬದಲಾವಣೆ ಜೀವನದಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ. ನಾನೇನು ಹೆಚ್ಚು ಬದಲಾಗಿಲ್ಲ. ಮೊದಲು ಹೇಗಿದ್ದೆನೋ ಈಗಲೂ ಅದೇ ರೀತಿ ಇದ್ದೇನೆ. ವಿದ್ಯಾರ್ಥಿ ದಿಸೆಯಲ್ಲಿ ನಾನು ತಂದೆ ತಾಯಿ ಖುಷಿಯಾಗುವಂತೆ ಇರಲಿಲ್ಲ ಎಂದು ಹಳೆಯ ನೆನಪು ಮಾಡಿಕೊಂಡಿದ್ದಾರೆ.

 

 

ನಾವು ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಆಚರಣೆ ಮಾಡುತ್ತಿದ್ದೇವೆ. ಪ್ರತಿಯೊಬ್ಬರೂ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸದುಪಯೋಗ ಮಾಡಿಕೊಳ್ಳಬೇಕು ಕಾರ್ಯಕ್ರಮದಲ್ಲಿ ಕಿವಿಮಾತು ಹೇಳಿದ್ದಾರೆ. ಪ್ರತಿಯೊಬ್ಬರೂ ಜೀವನದಲ್ಲಿ ತಮಾಷೆ ಮಾಡ್ತಾ ಇರಿ, ಮಜಾ ಮಾಡ್ಕೊಂಡಿರಿ, ನಗು ನಗುತ್ತಾ ಇರಿ. ಸಂತಸದ ಯಾವುದೇ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು.

 

 

ಆತ್ಮ ವಿಶ್ವಾಸ ಇರಬೇಕು. ಕನ್ನಡ ಚಿತ್ರರಂಗ ದೊಡ್ಡದಾಗಿ ಬೆಳೆಯುತ್ತಾ ಅಂತ ಯಾರಾದರೂ ಊಹೆ ಮಾಡಿದ್ರಾ? ನೀವು ಒಳ್ಳೆಯದನ್ನ ಮಾತಾಡ್ತಾ, ಯೋಚನೆ ‌ಮಾಡ್ತಾ ಹೋಗಿ. ತಂತಾನೆ ಅದು‌ ಒಳ್ಳೆಯದಾಗುತ್ತದೆ ಎಂದರು. ಒಂದು ಸಣ್ಣ ಘಟನೆ ಜೀವನದಲ್ಲಿ ಸಾಕಷ್ಟು ಬದಲಾವಣೆ ತರುತ್ತದೆ. ಆತ್ಮವಿಶ್ವಾಸವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಯಶ್‌ ಉತ್ತರವಾಗಿದ್ದಾರೆ. ಪ್ರತಿಯೊಬ್ಬರಿಗೂ ಒಂದು ಸಮಯ ಎಂದು ಬರುತ್ತದೆ. ಆ ಸಮಯಕ್ಕೆ ನಾವು ಯಾಕಬೇಕು. ಪ್ರಯತ್ನವೊಂದಿದ್ದರೆ ಸಾಧನೆ ಹಾದಿ ಸುಲಭ ಎನ್ನುವ ಮಾತು ಯಶ್‌ ನೋಡಿದರೆ ತಿಳಿಯುತ್ತದೆ.

 

Leave a comment

Your email address will not be published.